Literature (ಸಾಹಿತ್ಯ)

“ನಿಸರ್ಗದ ಸೋಜಿಗ ಈ ಅಣಬೆಗಳು” : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಮಳೆಯೆಂದರೆ ಏನೋ ಪುಳಕ, ವರುಣನ ಆರ್ಭಟಕ್ಕೆ ಭೂರಮೆ ಹಸಿರುಗೊಂಡು ನಲಿವ ಸಂತಸದ ಕಾಲದಲ್ಲಿ ಮುಂಗಾರು ಆಗಮನದೊಂದಿಗೆ ಇಡಿ ವಾತಾವರಣ ತೇವಾಂಶದಿಂದ ಕೂಡಿದ್ದು ಕಾಡಂಚಿನ ಹಳ್ಳಿಯ ತಂಪಾದ ವಾತಾವರಣದಲ್ಲಿ ಸಾಧಾರಣ ಸಿಡಿಲು ‌ಮಳೆಯ ಹಿನ್ನೆಲೆಯೊಂದಿಗೆ ಅಬ್ಬರಿಸುವ ಗುಡುಗಿಗೆ‌ ಬೆಚ್ಚಿ ಬಿದ್ದು ಎದ್ದು ಬರುವಂತೆ ಮಳೆಗಾಲದ ಅಪರೂಪದ ಅತಿಥಿ ಅಣಬೆ. ಅಣಬೆ ಫಸಲು ಬರುವುದಕ್ಕೂ ಮಳೆಗಾಲಕ್ಕೂ ಅವಿನಾಭಾವ ನಂಟು. ನಿಸರ್ಗದ ಸೋಜಿಗ ತಾನೆ ಈ ಅಣಬೆ‌ಗಳು ನಾನಾ ಗಾತ್ರ ವಿವಿಧ ರೂಪದಲ್ಲಿ ಉದ್ಬವಿಸುವ ಅಣಬೆ ದುಂಡಗೆ, ತೆಳಗೆ ,ಛತ್ರಿ ಹಾಗೂ ಟೋಪಿಯಾಕಾರದಲ್ಲಿ ಹಲವು ಪದರಗಳ ಗುಚ್ಚ ದಂತೆವಿವಿಧ ಆಕಾರದಲ್ಲಿ ಬೆಳವಣಿಗೆ ಹೊಂದುತ್ತದೆ. ಪ್ರಕೃತಿಯ ಈ ವೈಚಿತ್ರ್ಯಕ್ಕೆ ಬೆರಗುಗೊಳ್ಳಲೆ‌ಬೇಕು. ಸೃಷ್ಟಿ ಸೌಂದರ್ಯ ಕ್ಕೂ ಸೈ ಬಾಯಿ ರುಚಿಗೂ ಸೈ ಎನ್ನಬಹುದಾದ ಅಣಬೆ ಕಡಿಮೆ‌ ಅವಧಿಯಲ್ಲಿ ನಾಶ ವಾಗುವುದಾದರು ಜನಮೆಚ್ಚುಗೆ ಗಳಿಸಿದೆ.

ಪುಟ್ಟ ‌ಹಳ್ಳಿಯಲ್ಲಿ ಹುಟ್ಟಿ ಬೆಳೆದು ‌ನಗರಗಳತ್ತಾ ಬಂದಾಗ ನಮ್ಮೂರಿನ ತಿನಿಸು ಗಳು ಆಯಾಕಾಲಕ್ಕೆ ನೆನಪಾಗುವುದು ಸಹಜ. ಬಾಲ್ಯ ದಲ್ಲಿ ತಮ್ಮ ತಂಗಿಯರೊಂದಿಗೆ ಅಣಬೆ ಆರಿಸಲು‌ ಹೋಗಿದ್ದ‌ ನೆನಪು ಮರುಕಳಿಸಿ ಮಳೆಗಾಲದಲ್ಲಿ ಊರಲ್ಲಿದ್ದ‌ ಕಾರಣ ಕಲ್ಲಣಬೆಗಳ ದರ್ಶನಭಾಗ್ಯ‌ದೊರೆಯಿತು. ಚಿಕ್ಕಂದಿನಲ್ಲಿ ಅಣಬೆ‌ ಹೆಕ್ಕಿ ತಂದು‌ ಅಭ್ಯಾಸವಿದ್ದ ಕಾರಣ ಎಲ್ಲೆಲ್ಲಿ ಅಣಬೆ‌ ಮೂಡಿರ‌ ಬಹುದೆಂಬ ಅರಿವು‌ ನನಗಿತ್ತು. ಇತ್ತೀಚೆಗೆ ‌ ಗುಡ್ಡ ಕಾಡು ಕಡಿಮೆಯಾಗಿ ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿ ನಾಶದಿಂದಲೋ ಅಣಬೆ ಕಣ್ಣಿಗೆ ಸಿಗುವುದು ಬಲು ಅಪರೂಪವಾಗಿದೆ. ಹಿಂದೆ ಹೇರಳವಾಗಿ ಕಾಣಸಿಗುತ್ತಿದ್ದ ಅಣಬೆಗಳು ಇತ್ತೀಚಿನ ದಿನಗಳಲ್ಲಿ ತೀರಾ ಕಡಿಮೆಯಾಗಿದೆ.

ಹಳ್ಳಿಯ ಹಿರಿಯ ಅನುಭವಿಗಳಿಗೆ ಎಷ್ಟು ‌ಮಳೆಬಂದರೆ ಯಾವ ಅಣಬೆ ಹುಟ್ಟಿ ಕೊಳ್ಳುತ್ತದೆ ಎಂಬ‌ ಅನುಭವು ಇರುತ್ತದೆ. ಹಾಗಾಗಿ ಮಳೆಪ್ರಾರಂಬವಾದ ದಿನದಿಂದಲೆ ಲೆಕ್ಕ‌ಹಾಕಿ ವಾತಾವರಣವನ್ನು ಅನುಸರಿಸಿಕೊಂಡು ಅಣಬೆ ಆರಿಸಲು ಕಾಡು, ಗುಡ್ಡ, ಬಯಲಿನಲ್ಲಿ ಅಣಬೆಗಾಗಿ ಅಲೆಯುತ್ತಾರೆ.ಮಳೆಯಿಂದ ಕೊಳೆಯುತ್ತಿರುವ ಬಿದ್ದ ಮರ ಮುಟ್ಟುಗಳಲ್ಲಿ, ಒದ್ದೆ ಆದ ಒಣ ಹುಲ್ಲು ಗಳಲ್ಲಿ, ಗೊಬ್ಬರದ ಗುಂಡಿಯಲ್ಲಿ ತೋಟದ ಬದಿಯಲ್ಲಿ ಸಿಗುವ ನೈಸರ್ಗಿಕ ಅಣಬೆ ಗಳನ್ನು ಹಳ್ಳಿ ಗರು ಹೆಚ್ಚು ಬಳಕೆ ಮಾಡುತ್ತಾರೆ. ತಿನ್ನಲು ಸಾಧ್ಯಾವಾಗದ ವಿಷಕಾರಿ ಅಣಬೆ ಗಳು ಬಹಳಷ್ಟು ಬೆಳೆಯುತ್ತದೆ. ಇದು ಕಾಡಿನ ಹಾವು, ಹೆಗ್ಗಣ, ಕ್ರಿಮಿ ಕೀಟ ಗಳಿಗೆ ಆಹಾರ ವಾಗುತ್ತದೆ.

ಅಣಬೆಗಳಲ್ಲಿ ಹಲವು‌ ವಿಧಗಳಿವೆ. ನುಚ್ಯಣಬೆ, ಜಾಲಣಬೆ, ಹುತ್ತದ ಅಣಬೆ, ಮರದ ದಿಮ್ಮಿ ಗಳಲ್ಲಿ ಬೆಳೆಯುವ ಅಣಬೆ, ಕಲ್ಲಣಬೆ, ಹೆಗ್ಗಲು ಅಣಬೆ ಇನ್ನೂ ‌ಅನೇಕಾನೇಕ ಸ್ವತ್ರಂತ್ರವಾಗಿ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ಪತ್ರಹರಿತ್ತನ್ನು ಹೊಂದಿಲ್ಲದ ಸಸ್ಯ ವರ್ಗಕ್ಕೆ ಸೇರಿದ ಅಣಬೆ ಅತ್ಯುತ್ತಮ ಪೌಷ್ಟಿಕಾಂಶ ಗಳನ್ನು ಒಳಗೊಂಡ ಪ್ರೋಟೀನ್ ಯುಕ್ತ ನೈಸರ್ಗಿಕ ಸಸ್ಯ ಆಹಾರ. ಅಣಬೆಯನ್ನು ಹೆಚ್ಚಿನ ವರು ಮಾಂಸ ಹಾರ ಎಂಬ ಕಾರಣಕ್ಕೆ ಸಸ್ಯ ಹಾರಿಗಳು‌ ಸೇವಿಸುವುದಿಲ್ಲ. ಅಣಬೆ ಸಸ್ಯ ಆಹಾರವೊ ಮಾಂಸ ಆ‌ಹಾರವೊ‌ ಎಂಬ ಜಿಜ್ಞಾಸೆ ಇಂದಿಗೂ ‌ಇದೆ. ಅಮೇರಿಕಾ ಸರ್ಕಾರದ ಕೃಷಿ ಇಲಾಖೆ ಅಣಬೆ ಸಸ್ಯ ವೆಂದು ಘೋಷಿಸಿದೆ. ಆದರೂ ಕೆಲವರು ಮಾಂಸ ‌ಹಾರ ವೆಂದು‌ ಮೂಗು ಮುರಿಯುತ್ತಾರೆ.

ಕಲ್ಲಣಬೆ : ಮುಂಗಾರು ‌ಮಳೆ ಬೀಳುತ್ತಿದಂತೆ ನಮ್ಮೂರಿನ ಏರು ಪ್ರದೇಶದ ಗಳಲ್ಲಿ ವಿವಿಧ ಅಣಬೆ ಗಳು ಏಳುತ್ತವೆ. ಸಾಮಾನ್ಯವಾಗಿ ಕಾಡಿನ ಜೌಗುಪ್ರದೇಶಗಳಲ್ಲಿ ಗುಡುಗು – ಮಿಂಚಿನ ರಭಸಕ್ಕೆ ಕಲ್ಲಣಬೆ ಮರಳು ಮಿಶ್ರಿತ ಪ್ರದೇಶ ಗಳಲ್ಲಿ ಮೂಡಿಬರುತ್ತದೆ. ಮನೆಯ ಹಿರಿಯರು ಗುಡುಗು ಶಬ್ದಗಳನ್ನು ಆಲಿಸಿಯೇ ಹೇಳುತ್ತಾರೆ.ಈ ಗುಡುಗಿನ ಶಬ್ದಕ್ಕೆ ಕಲ್ಲಣಬೆ ಮೂಡಿ ಸಿಡಿಲು,ಗುಡುಗು, ಬಂದಾಗ ಭೂಮಿ ಅಡಿಯಿಂದ ಮೇಲೆ ಬರುತ್ತದೆ ಎನ್ನುತ್ತಾರೆ. ಕಲ್ಲಣಬೆಗಳು ಗೋಲಾಕಾರದಲ್ಲಿ ಇದ್ದು ಹೊರಗೆ ಕವಚ ಒಳಗೆ ಮೃದುವಾಗಿದ್ದು. ಬಹಳ ರುಚಿಕರವಾದ ಖಾದ್ಯ ತಯಾರಿಸ ಬಹುದಾದ ‌ಈ ಅಣಬೆ ಭೂಮಿ ಯಿಂದ ಹೊರ ಬಂದು‌ 4‌ ದಿನಗಳ ಒಳಗೆ ತಿನ್ನ ಬೇಕು ನಂತರ‌ ಇದರ ಒಳಭಾಗ ಕಪ್ಪಾಗಿ‌ ಅಂದರೆ ಹಾಳಾಗುತ್ತದೆ ಅದು ತಿನ್ನಲು‌‌ ಯೋಗ್ಯವಲ್ಲ.

ಸರಿ ಸಾಟಿ ಇಲ್ಲದ ರುಚಿಗೆ ಹೆಸರು ವಾಸಿ ನೈಸರ್ಗಿಕ ಕಲ್ಲಣಬೆ ಹುಡುಕಾಟಕ್ಕೆ ತೊಡಗಿ 2 ಗಂಟೆಯೊಳಗೆ‌ ನೀರಿಕ್ಷೆಯಂತೆ‌ ಅಣಬೆ‌ ಸಂಗ್ರಹಿಸಿದ್ದೆ. ಅಜ್ಞಾತವಾಗಿರುವ ಅಣಬೆ ಗಳನ್ನು ಬಗ್ಗಿ ಹುಡುಕಬೇಕು. ಕಲ್ಲು ಮಿಶ್ರಿತ ಮಣಿ ನಲ್ಲಿ ಅಡಗಿರುವ ಅಣಬೆಗಳನ್ನು ಹಾಳಾಗದಂತೆ ಭೂಮಿ ಯಿಂದ ತೆಗೆಯ ಬೇಕು ಸಣ್ಣ ಗಾತ್ರ ಹೊಂದಿರುವ ಕಲ್ಲಣಬೆ ಕಲ್ಲಿನಂತೆ ಕಾಣುವುದರಿಂದ ಹುಡುಕಲು ‌ಸೂಕ್ಷ್ಮತೆ ಬೇಕು. ಅಣಬೆ ಇರುವ ಸುತ್ತಲಿನ ಮಣ್ಣು ಮೃದುವಾಗಿರುವುದು‌ ಗಮನಿಸ‌ಬೇಕಾದ‌ ವಿಚಾರ .ಜೊತೆ ಜೊತೆಯಾಗಿ ‌ಒಟ್ಟೊಟಿಗೆ‌ ಒಂದಿಷ್ಟು ಕಲ್ಲಣಬೆ ಹುಟ್ಟುತ್ತವೆ. ಮುಂಗಾರು ವಿಳಂಬವಾದರೆ ಕಲ್ಲಣಬೆ ಕೂಡ ತಡವಾಗಿ‌ಹುಟ್ಟುತ್ತದೆ.ಹೆಚ್ಚಾದ ಪರಿಸರ ನಾಶ,ಅರಣ್ಯ ‌ವಿನಾಶಗಳಿಂದ ಮುಂದಿನ ಪೀಳಿಗೆಗೆ ನೈಸರ್ಗಿಕ ಅಣಬೆಗಳು ‌ನೋಡ ಸಿಗುತ್ತದೊ ಇಲ್ಲವೊ. ಕಲ್ಲಣಬೆ ಮಳೆಗಾಲದಲ್ಲಿ ಒಮ್ಮೆ ಯಾದರು ತಿನ್ನಬೇಕೆನ್ನುವಾಶೆ ಇದ್ದವರು ಒಂದೊ ಪರಿಸರದಲ್ಲಿ ಹುಡುಕಾಡಿ ಅಥವಾ ಮಾರುಕಟ್ಟೆಯಲ್ಲಿ ಕಲ್ಲಣಬೆ ಕೆ.ಜಿ ಗೆ 350 ರಿಂದ 450 ರೂಪಾಯಿಮೌಲ್ಯ ವಿದ್ದರು ಖರೀದಿಸಿ ಇದರ ರುಚಿ ಸವಿಯುತ್ತಾರೆ.

ವಾಡಿಕೆಯಂತೆ ಸಿಡಿಲು ಸಹಿತ ಮಳೆ ಆರಂಭ ವಾಗಿ ತರಲೆಗಳು ಕೊಳೆಯವ ಸಿತ್ಥಿ ತಲುಪುತಿದ್ದಂತೆ ಈ ಅಣಬೆಗಳು ಹುಟ್ಟಿ ಕೊಳ್ಳುತ್ತವೆ. ಗ್ರಾಮಿಣಪ್ರದೇಶಗಳಲ್ಲಿ ಸಿಗುವ ಕಲ್ಲಣಬೆ ಗೆ ಸಾಕಷ್ಟು ಬೇಡಿಕೆ ಇದೆ. ಮುಂಗಾರು ವಿಳಂಬ ಹಾಗೂ ತಾಪಮಾನ ವೈಪರೀತ್ಯ ದಿಂದಾಗಿ ನಿರೀಕ್ಷೆ ಯಷ್ಟು ‌ಕಲ್ಲಣಬೆ ಇತ್ತೀಚೆಗೆ ಮೂಡಿಬಂದಿಲ್ಲವಾದರು ಅಪರೂಪದ ಕಲ್ಲಣಬೆ ‌ಸುಕ್ಕ,ಮತ್ತು ಗಸಿಯೊಂದಿಗೆ ನೀರು ದೊಸೆ, ಪುಂಡಿ ಬಾಯಿ ಚಪ್ಪರಿಸಿಕೊಂಡು ತಿನ್ನಲು ಒಳ್ಳೆಯ ಕಾಂಬಿನೇಷನ್.

ಹೆಗ್ಗಲುಅಣಬೆ :: ತಿನ್ನಲು ರುಚಿಕರವಾದ ಹೆಗ್ಗಲು ಅಣಬೆ ನಂಜು ತಂಪು ಮಿಶ್ರಿತ. ಹೆಗ್ಗಲು ಅಂದರೆ ಕಾಲು ಉದ್ದವಾಗಿರುವ ಎಂದರ್ಥ. ಈ ಅಣಬೆ‌ ಬೇರು ಆಳ ನೆಲದಲ್ಲಿ ಹುದುಗಿರುತ್ತದೆ.ಒಂದೇ ‌ಸ್ಥಳದಲ್ಲಿ ಅತೀ‌ ಹೆಚ್ಚಿನ‌ ಸಂಖ್ಯೆಯಲ್ಲಿ‌ ಬೆಳೆಯವ ಈ ಅಣಬೆ ಹೆಚ್ಚಾಗಿ ‌ಹುತ್ತದ ಅದಿಬದಿಯಲ್ಲಿ ಬೆಳೆಯುತ್ತದೆ. ಹೆಗ್ಗಲು ಆಣಬೆ‌ ಬೆಳೆಯುವ ಪ್ರದೇಶದಲ್ಲಿ ನಾಗರ ಹಾವು ಹರಿದಾಡುತ್ತಿರುತ್ತವೆ. ಅದಕ್ಕಾಗಿ ‌ಹೆಗ್ಗಲು ಅಣಬೆ ಕೀಳಲು ಒಬ್ಬರೆ ಹೋಗ ಬಾರದು ಅನ್ನು ತ್ತಾರೆ. ಹೆಗ್ಗಲು ಅಣಬೆ ಎದ್ದಿದ್ದರೆ ೪ ಜನರನ್ನು ಕರೆದು ತೋರಿಸಿಕೊಳ್ಳಬೇಕಂತೆ. ಅಷ್ಟೇ ಅಲ್ಲದೇ ಈ ಅಣಬೆ ಗಳು‌ ಏಳುವ ತಳಭಾಗದಲ್ಲಿ ಧನಕನಕ ಅಂದರೆ ಕೊಪ್ಪರಿಗೆ ಕಾಯುತ್ತಾನೆ ನಾಗ ಎಂಬ ಪ್ರತೀತಿಯು ಇದೆ. ವ್ಯೆಜ್ಞೌನಿಕವಾಗಿ ‌ಹೇಳುವುದಾದರೆ ಹೆಗ್ಗಲು ಅಣಬೆಯ ವಿಶೇಷ ಪರಿಮಳ ಮತ್ತು ರುಚಿ ನಾಗರ‌ಹಾವಿಗೆ ಪ್ರಿಯ.‌ಮಳೆಯಿಂದ ಭೂಮಿ ‌ಸರಿಯಾಗಿ‌ ತೇವ ಗೊಂಡು‌ಮಣ್ಣಿನಲ್ಲಿ‌ನೀರಿನ ಪಸೆ ಏಳುವ ಸಮಯದಲ್ಲಿ ಅಂದರೆ ಅರ್ಧಮಳೆಗಾಲ‌ ಮುಗಿದ‌ ನಂತರ ಅತ್ತ‌ ಜೋರು‌ ಅಲ್ಲ ‌ ಇತ್ತ‌ ಕಡಿಮೆ‌ ಆಗದ ರೀತಿಯಲ್ಲಿ ಸುರಿವ ಮಳೆಯ ನಡುವೆ ಹೆಗ್ಗಲು ಅಣಬೆ ಹುಟ್ಟು ತ್ತದೆ.

ಕೃತಕ ಅಣಬೆ : ಅಣಬೆಯನ್ನು ವಾಣಿಜ್ಯ ಬೆಳೆಯಾಗಿ‌ ಬೆಳೆಯಲಾಗುತ್ತದೆ. ಭಾರತದ ದಲ್ಲಿ ಅಣಬೆ ‌ಕೃಷಿ ಪ್ರಥಮ ಬಾರಿಗೆ ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ಪ್ರಾರಂಬಿಸಲಾಗಿದ್ದು. 1980 ರವರೆಗೆ ಅಣಬೆ ಕೃಷಿ ಜಮ್ಮೂಕಾಶ್ಮೀರ ಹಿಮ ಪ್ರದೇಶ ಗಳಿಗೆ ಮಾತ್ರ ಸೀಮಿತವಾಗಿದ್ದು ನಂತರ ಪಶ್ಚಿಮ ಬಂಗಾಲ ,ಉತ್ತರ ‌ಪ್ರದೇಶ, ಪಂಜಾಬ,‌ಹರ್ಯಾಣ,‌ಮಹಾರಾಷ್ಟ್ರ, ಆಂಧ್ರಪ್ರದೇಶ,ಕರ್ನಾಟಕ ‌ರಾಜ್ಯಗಳಲ್ಲಿ ಅಣಬೆ ವೈವಿಧ್ಯಮಯ ತಂತ್ರಜ್ಞಾನದ ಬೆಳವಣೆಗೆಯಿಂದ‌ ವರ್ಷ ವಿಡಿ‌ ಬೆಳೆಯಲಾಗುತ್ತದೆ.

ಕೃತಕ‌ಅಣಬೆಗಳನ್ನು ಸಾಮಾನ್ಯವಾಗಿ ಅದಕ್ಕಾಗಿಯೇ ತಯಾರಿಸಿದ ‌ಮನೆಗಳಲ್ಲಿ ಭತ್ತದಹುಲ್ಲು, ಮೆಕ್ಕೆಜೋಳ ದಂಟು,ಕಬ್ಬಿನದಂಟು ಮತ್ತು ಅಡಿಕೆ ಎಲೆಗಳನ್ನು 3-4 ಅಂಗುಲ ತುಂಡಾಗಿರಿಸಿ‌ ಕತ್ತರಿಸಿದ‌ ಹುಲ್ಲನ್ನು ‌ನೀರಿನಲ್ಲಿ‌ ಒಂದು ‌ರಾತ್ರಿ ನೆನಸಿ ಮರುದಿನ ಕುದಿಯುವ‌‌ ನೀರಿನಲ್ಲಿ ಅರ್ಧ‌ಗಂಟೆ ನೆನೆಹಾಕಿ ಕತ್ತರಿಸಿದ ಭತ್ತದ‌ ಹುಲ್ಲನ್ನು ತುಂಬಿ ಪಾಲಿಥೀನ್ ‌ಕವರ್ ಸುತ್ತಿ ಚಿಕ್ಕ ‌ರಂದ್ರಗಳನ್ನು‌ ಮಾಡಿ ಮೊದಲ ಪದರ ಭತ್ತದ ‌ಹುಲ್ಲನ್ನು ತುಂಬಿ ಮತ್ತೊಂದು ಪದರ‌ ಅಣಬೆ ಬೀಜ ‌ಬಿತ್ತಿ ಹೀಗೆ ಪಾಲಿತಿನ ಕವರಿನ ಬಾಯಿಯನ್ನು ಬಿಗಿಯಾಗಿ ಕಟ್ಟಿ ಅಣಬೆಯನ್ನು ಕೃತಕ ವಾಗಿ ಬೆಳೆಸ‌ಬಹುದು. ಬಿದಿರಿನ ‌ಅಟ್ಟಣಿಗೆ‌ಯಲ್ಲು‌ಇದನ್ನು‌ ಇರಿಸ‌ ಬಹುದು.

ನಗರ ಪ್ರದೇಶದ ಲ್ಲಿ ಅಣಬೆ ಬೆಳೆದು ಸ್ವದ್ಯೋಗ ಮಾಡುವವರ ಸಂಖ್ಯೆ ದಿನೆ ದಿನೆ ಹೆಚ್ಚು ತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಅಣಬೆ ಬೇಡಿಕೆ‌ಇದ್ದರು‌ ಉತ್ಪಾದನೆ ಮಾತ್ರ ‌ತೀರಾ‌ಕಡಿಮೆ‌ ಎನ್ನಬಹುದು. ಬೆಂಗಳೂರಿನ ‌ಹೆಸರ ಘಟ್ಟದ‌ ಭಾರತೀಯ ತೋಟಗಾರಿಕಾ ಸಂಶೊಧನಾ‌ಕೇಂದ್ರ ದಲ್ಲಿ ಅಣಬೆ ತರಬೇತಿ ನೀಡಲಾಗುತ್ತಿದೆ. ಅಣಬೆ ಕೃಷಿ ಯ ಏಳು‌ ಬೀಳುಗಳನ್ನು ದಾಟಿ ಹೇಗೆ ಲಾಭಗಳಿಸ‌ಬಹುದು ಎಂಬುದನ್ನು ಹಾಗೂ ಅಣಬೆ ಉದ್ಯಮ ಆರಂಬಿಸುವವರಿಗೆ ತರಬೇತಿ, ಸಾಲ ಸೌಲಭ್ಯವನ್ನು ‌ಸರಕಾರ ಒದಗಿಸುತ್ತದೆ. ಕಳೆದ ವರ್ಷ ಅಣಬೆ ‌ಬೀಜ ತಯಾರಿಕೆಗಾಗಿಯೆ ವಿಶೇಷ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ.ಅಣಬೆ‌ ಕೃಷಿ ಯಲ್ಲಿ ಮಾರುಕಟ್ಟೆ ಯ ಗಟ್ಟಿ ಮಾಹಿತಿ ಇರಲೇಬೇಕು. ಅಣಬೆ ‌ಹೊರತೆಗೆದು ೨ ದಿನಗಳಿಗಿಂತ ಹೆಚ್ಚು ಇಡುವಂತಿಲ್ಲ.‌ ಹೀಗಿರುವಾಗ ಬೆಳೆದ ಅಣಬೆ ಸರಿಯಾದ ಸಮಯದಲ್ಲಿ ಮಾರುಕಟ್ಟೆಗೆ ರವಾನೆ ಆಗಲೆಬೇಕು. ಬೀಜೋತ್ಪಾದನೆ, ತಳಿ ಆಧಾರಿತ ಬೇಸಾಯ, ಸಂಸ್ಕರಣೆ ಅಣಬೆ ‌ಉತ್ಪಾದನೆಯ‌ ಹಂತಗಳ ಮಾಹಿತಿಯೊಂದಿಗೆ ಭಾರತಿಯ ಮಾರುಕಟ್ಟೆ ಯಲ್ಲಿ ಆಯಿಸ್ಟರ್ ಅಣಬೆ ಬಟನ್ ಹಾಗೂ ಮಿಲ್ಲಿಅಣಬೆ ಯಥೇಚ್ಛವಾಗಿ ಮಾರಾಟವಾಗುವ ಸ್ಥಳ ದ ಅರಿವು ಇರಬೇಕು.

ಅಣಬೆ ರಾಜಕೀಯ ವಲಯದಲ್ಲೂ ಗದ್ದಲ ಎಬ್ಬಿಸಿದ್ದು ಇದೆ. ಗುಜರಾತಿನ ಅಲ್ಪೇಶ್ ಠಾಕೂರ್ ನರೇಂದ್ರ ಮೋದಿಯವರು ಪ್ರತಿ ದಿನ ಪ್ರಪಂಚದ ಅತ್ಯಂತ ದುಬಾರಿ ಅಣಬೆ ಯಾದ ಯುರೋಪಿಯನ್ ವೈಟ್ ಟ್ರು ಫೆಲ್ ಜೌತಿಯ ಅಣಬೆ ತಿನ್ನುತ್ತಾರೆ ಎಂದು ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾಡಿದ ಆರೋಪ ಸಾಕಷ್ಟು ಚರ್ಚೆ ಆಗಿತ್ತು. ಬಿಬಿಸಿ ವರದಿ‌ ಪ್ರಕಾರ ಈ ಅಣಬೆ ಕೆ.ಜಿ ಗೆ ಸುಮಾರು 1 ಲಕ್ಷ ರೂಪಾಯಿ ‌ಬೆಲೆಇದೆ. ಯುರೋಪ್ ಮತ್ತು ‌ಮಧ್ಯಪ್ರಾಚದ ಸಹಜ‌ಪರಿಸರದಲ್ಲಿ‌ ಭೂಮಿಯೊಳಗೆ ಮರದ‌ ಬೇರಿಗೆ ಅಂಟಿಕೊಂಡು ಬೆಳೆಯುವ ಈ ಪರಾವಲಂಬಿ ಅಣಬೆ ಹುಡುಕಲು ಸ್ನಿಪ್ಟರ್‌ನಾಯಿಗಳನ್ನು‌ ಬಳಸಲಾಗುತ್ತದೆ. ಮೋದಿ ಅವರು ಅಣಬೆ ತಿನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿ‌ಕೊಂಡಿದ್ದಾರೆ. ಆದರೆ ‌ತಾನು‌ ತಿನ್ನುವುದು ಸಾಧಾರಣ ಅಣಬೆ ಯುರೋಪಿಯನ್ ಅಣಬೆ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಮಳೆಗಾಲದಲ್ಲಂತೂ ಅಣಬೆ ಯಿಂದ ರುಚಿ ರುಚಿ ಕರವಾದ ಅಣಬೆರಸ, ಸೂಫ್,ಪುಲವ್,ಪಕೊಡಾಉಪ್ಪಿನ ಕಾಯಿ,ಪಲ್ಯ, ಮಂಚೂರಿ, ಸಾಂಬರ್,ಅಣಬೆ ಚಟ್ನಿ, ರಸಂಪುಡಿ, ಇನ್ನೂ ಅನೇಕ ಆಹಾರ ಪದಾರ್ಥ ಅಣಬೆ ಯಿಂದ ತಯಾರಿಸಿಬಹುದು . ಅಣಬೆ ಯಿಂದ ತಯಾರಿಸಿದ ಆಹಾರವನ್ನು ‌ಅದೇ ದಿನ ಸೇವಿಸುವುದು ಉತ್ತಮ .ಇದರಲ್ಲಿ ಪ್ರೋಟೀನ್ ಹಾಗೂ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಮರು ದಿನ ಬಿಸಿ ಮಾಡಿ ತಿಂದಾಗ ಜಿರ್ಣಕ್ರಿಯೆಗೆ ತೊಂದರೆ ಯಾಗಬಹುದು.

ಒಟ್ಟಿನಲ್ಲಿ ಗುಡ್ಡ ಗಾಡು ಪ್ರದೇಶದಲ್ಲಿ ತಡಕಾಡಿ ಅಣಬೆ ಸಂಗ್ರಹಿಸಿದ್ದ ಹಳೆಯ ನೆನಪು ‌ಮರುಕಳಿಸಿ ಲೇಖನಕ್ಕೆ ವಸ್ತು ವಾಯಿತು. ಬಾಯಿ ಚಪ್ಪರಿಸಿಕೊಂಡು ತಿನ್ನಬಹುದಾದ ಅಣಬೆಯ ಹೀಗೊಂದು ಅಣಬೆ ಪುರಾಣ ಓದುಗರಿಗಾಗಿ…

Leave a Reply

Your email address will not be published. Required fields are marked *