Cinema (ಸಿನಿಮಾ)

ನಿರ್ದೇಶಕರೇ ಕನ್ನಡಕ್ಕೊಬ್ಬ ಖಡಕ್ ವಿಲನ್ ಇಲ್ಲಿದ್ದಾನೆ ನೋಡಿ – ಸತ್ಯ ರೆಡಿ ಟು ಆ್ಯಕ್ಟ್

Spread the love

ಹೆಸರು: ಸತ್ಯ
ದೂರವಾಣಿ ಸಂಖ್ಯೆ: +91 99166 89847

ಪ್ರತಿ ಒಂದು ಸಿನಿಮಾದಲ್ಲಿ ನಾಯಕನ ಪಾತ್ರ ಎಷ್ಟು ಮುಖ್ಯವೋ ಹಾಗೇ ಖಳನಾಯಕನ ಪಾತ್ರವೂ ಅಷ್ಟೇ ಮುಖ್ಯ ಖಳನಾಯಕ ಎಷ್ಟು ವಿಜೃಂಭಿಸುತ್ತಾನೊ ಅಷ್ಟೇ ದುಪ್ಪಟ್ಟು ನಾಯಕ ತೆರೆ ಮೇಲೆ ವಿಜೃಂಭಿಸುತ್ತಾನೆ… ಒಂದು ರೀತಿಯಲ್ಲಿ ನೋಡಿದರೆ ಖಳನಾಯಕನಿಲ್ಲದೆ ನಾಯಕನಿಲ್ಲ… ಇದು ನಟ ಭಯಂಕರ ವಜ್ರಮುನಿ ಕಾಲದಿಂದಲೂ ಈಗಿನ ಕಾಲಘಟ್ಟದ ನಟ ರಾಕ್ಷಸ ಡಾಲಿ ವರೆಗೂ ಪ್ರಚಲಿತದಲ್ಲಿ ಇರುವುದು. ಅದು ನೀವು ಕಾಲಕಾಲಕ್ಕೂ ನೋಡಿಕೊಂಡೇ ಬಂದಿದ್ದೀರಾ…

ಇದೇ ನಿಟ್ಟಿನಲ್ಲಿ ಕನ್ನಡ ಚಿತ್ರ ರಂಗದಲ್ಲಿ ತನ್ನ ಛಾಪು ಮೂಡಿಸಲು ಉತ್ತರ ಕರ್ನಾಟಕದಿಂದ ಇದೀಗ ಖಡಕ್ ಆ್ಯಂಗ್ರಿ ಯಂಗ್ ವಿಲನ್ ಒಬ್ಬ ಬಂದಿದ್ದಾನೆ. ಹೆಸರು ಸತ್ಯ …

ಈ ಯುವ ಪ್ರತಿಭೆ ಚಿತ್ರರಂಗಕ್ಕೆ ಬರುವ ಮುನ್ನ ನಟನೆಗೆ ಬೇಕಾದ ಎಲ್ಲ ತಾಲೀಮುಗಳನ್ನು ಕಲಿತು ಬಂದಿದ್ದಾನೆ. ಸತ್ಯರವರು ಮಾಡೆಲಿಂಗ್ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿದ್ದು, ಹಲವಾರು ರ್ಯಾಂಪ್ ಶೋಗಳನ್ನು ಕೂಡ ಕೊಟ್ಟಿದ್ದು ಮಾತ್ರವಲ್ಲ ಅಲ್ಲೂ ಕೂಡ ಅವರು ಸೈ ಎನಿಸಿಕೊಂಡಿದ್ದಾರೆ.

ಈಗಾಗಲೇ ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸಿರುವ ಸತ್ಯ ಲೂಸಿಯಾ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾವನ್ನು ಎದುರಿಸಿದ ಹುಡುಗ.

ಆ ನಂತರ ನಮಕ್ ಹರಾಮ್, ಲವ್ ಈಸ್ ಪಾಯ್ಸನ್ ಇನ್ನೂ ಮುಂತಾದ ಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ ಹಾಗೆಯೇ ಕೆಲವು ಸೀರಿಯಲ್ಗಳಲ್ಲೂ ಕೂಡ ಅಭಿನಯಿಸಿದ್ದಾರೆ.. ರೋಬೋ ಫ್ಯಾಮಿಲಿ.. ಪಾರ್ವತಿ ಪರಮೇಶ್ವರ, ಸಿಐಡಿ ಕರ್ನಾಟಕ, ಮಿಲನ ಮುಂತಾದವು….

ಚಿತ್ರರಂಗ ಎಂಬುದೇ ಒಂದು ದೊಡ್ಡ ಸಮುದ್ರ ಈ ಸಮುದ್ರದಲ್ಲಿ ಈಜಬೇಕಾದರೆ ದೊಡ್ಡ ಶಕ್ತಿ ಬೇಕು ಆ ಶಕ್ತಿಯೇ ತಾಳ್ಮೆ…ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಹ ಸತ್ಯನಿಗೆ ಪಾತ್ರಗಳ ಅವಕಾಶ ಅತಿ ವಿರಳವಾಗಿ ದೊರಕಿದೆ ಎನ್ನಬಹುದು. ಆದರೆ ತಾಳ್ಮೆ ಮತ್ತು ಛಲ ಬಿಡದ ಸತ್ಯ ಅವರು ಅವಕಾಶಕ್ಕಾಗಿ ಹುಡುಕಾಟ ಮಾಡಿ ಗೆಲುವಿಗೆ ಹತ್ತಿರವಿದ್ದಾರೆ ಎನ್ನಬಹುದು.

ಈಗ ಅವರ ಕೈಯಲ್ಲಿ ಹಲವಾರು ಸಿನಿಮಾಗಳಿವೆ.. ಕೆಲವು ಸಿನಿಮಾಗಳು ಇನ್ನೇನು ಸೆಟ್ಟೇರಲಿದೆ… ಇನ್ನು ಕೆಲವು ಚಿತ್ರೀಕರಣ ಕೂಡ ಪೂರ್ಣಗೊಳಿಸಿದೆ…ಸತ್ಯ ಅವರು ಅವಕಾಶ ಸಿಗದೇ ಇದ್ದಾಗ ಸುಮ್ಮನೆ ಕೂರದೆ ಚಿತ್ರರಂಗದಲ್ಲಿ ತಮ್ಮನ್ನು ತಾವು ಹಲವು ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೂಡ ತೊಡಗಿಸಿಕೊಂಡಿದ್ದಾರೆ.

ಗೋಲಿ ಸೋಡಾ, ಮಿಸ್ಸಿಂಗ್ ಬಾಯ್, “ಪರಂವ” ಚಿತ್ರಕ್ಕೆ ಇವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ ಹಾಗೆಯೇ ಪರಂವ ಚಿತ್ರದಲ್ಲಿ ಒಂದು ಪಾತ್ರ ಕೂಡ ನಿರ್ವಹಿಸಿದ್ದಾರೆ.

ಅದು ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ…ಅವಕಾಶಕ್ಕಾಗಿ ಹುಡುಕುತ್ತಿರುವ ಯುವ ಪ್ರತಿಭೆಗಳಿಗೆ ನಮ್ಮ ನಿರ್ಮಾಪಕರು, ನಿರ್ದೇಶಕರು ಅವಕಾಶ ಕೊಡಲಿ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಸತ್ಯ ಅವರಿಗೆ ನಮ್ಮ ಈ ವಾಹಿನಿಯಿಂದ ಶುಭಾಶಯ ಹಾಗೂ ಅನೇಕ ಹೊಸ ಹೊಸ ಅವಕಾಶಗಳು ಅವರನ್ನ ಅರಸಿ ಬರಲಿ ಎನ್ನುವ ಹಾರೈಕೆ ನಮ್ಮದು…

www.heggaddesamachar.com

Leave a Reply

Your email address will not be published. Required fields are marked *