ನಿಮ್ಮ ಫೋಟೋ ಮತ್ತು ಮಾಹಿತಿಯನ್ನ ಕದಿಯುತ್ತಿವೆ ಈ ಆ್ಯಪ್ ಗಳು- ಅವ್ಯಾವುದು ಗೊತ್ತಾ!! ಹುಷಾರಾಗಿರಿ: heggaddesamachar

ತಾಂತ್ರಿಕತೆ ತಂತ್ರಜ್ಞಾನ ಮುಂದುವರೆದಂತೆ ಸೌಂದರ್ಯಕ್ಕೂ ಅತಿ ಹೆಚ್ಚಿನ ಒತ್ತು ನೀಡುವ ಯುವಜನತೆ, ಮೊಬೈಲ್ ಮೂಲಕ ಕ್ಲಿಕ್ಕಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಧವಿಧವಾಗಿ ಹಂಚಿಕೊಂಡು ಕಮೆಂಟ್ಸ್ ಗಳ ಮೂಲಕ ಹೆಸರು ಪಡೆಯುವ ಯುವಕರು ಎಚ್ಚೆತ್ತುಕೊಳ್ಳಬೇಕಿದೆ.
ತೆಗೆದ ಫೋಟೋಗಳು ಒಟ್ಟು ಮಾಡಿ ಒಂದಷ್ಟು ಫಿಲ್ಟರ್ ಗಳನ್ನು ನೀಡಿ ಅದರ ಸ್ವರೂಪವನ್ನೇ ಬದಲಾಯಿಸಿ, ಏನೋ ತಮಗಿಷ್ಟಬಂದಂತೆ ಕಾರ್ಟೂನ್ ಎಫೆಕ್ಟ್ಗಳನ್ನೆಲ್ಲಾ ನೀಡಿ ರೂಪ ಬದಲಾಯಿಸುವ ಆಪ್ ಗಳು ಎಷ್ಟು ಸೇಫ್ ಮತ್ತು ಎಷ್ಟರ ಮಟ್ಟಕ್ಕೆ ಉತ್ತಮತೆಯಲ್ಲಿದೆ ತಿಳಿದಿದೆಯಾ…
ನೀವು ನಂಬಲಸಾಧ್ಯವಾದರೂ ಪ್ಲೇ ಸ್ಟೋರ್ ನವರು ಒಂದು ವಿಷಯವನ್ನು ಬಿತ್ತರ ಮಾಡುತ್ತಾರೆ.
ಕೆಲವೊಂದು ಫೋಟೋ ಎಡಿಟರ್ ಆಪ್ ಗಳನ್ನು ಗೂಗಲ್ ಬಳಕೆದಾರರು ಅದರ ಮಾಹಿತಿಯ ಸಂಪೂರ್ಣ ವಿವರ ಪಡೆದುಕೊಂಡು, ಅದರಲ್ಲಿ ತಾವು ಹಾಕಿರುವಂತಹ ಫೋಟೋಗಳನ್ನು ಸೇವ್ ಮಾಡಿಕೊಂಡು, ತಮಗೆ ಬೇಕಾದಂತೆ ಅಶ್ಲೀಲ ರೂಪಗಳನ್ನು ನೀಡುತ್ತಿದ್ದಾರೆ.
ಕೆಲವೊಮ್ಮೆ ಪ್ಲೇ ಸ್ಟೋರ್ ನಲ್ಲಿ ನಕಲಿ ಆಪ್ ಗಳು ಹರಿದಾಡುತ್ತವೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುವ ಅವುಗಳು ಎಷ್ಟು ಸುರಕ್ಷಿತ ಅಲ್ಲದೇ ಸ್ಮಾರ್ಟ್ ಫೋನ್ ಬಳಕೆದಾರರು ಆಗಿ ಆಪ್ ಗಳನ್ನು ಬಳಸಿಕೊಂಡು ಸೂಕ್ತವಲ್ಲದ ಕೆಲವು ಆಪ್ ಹೆಸರುಗಳು ಇಂತಿವೆ.
ಪ್ರಿಸ್ಮಾ ಫೋಟೋ ಎಫೆಕ್ಟ್, ಫೋಟೋ ಎಡಿಟರ್, ಸೆಲ್ಫಿ ಕ್ಯಾಮೆರಾ ಪ್ರೊ, ಫೋಟೋ ಹಾರ್ಟ್ ಎಫೆಕ್ಟ್, ಪ್ರೋ ಕ್ಯಾಮೆರಾ ಬ್ಯೂಟಿ, ಫೋಟೋ ಅರ್ಟ್ ಎಫೆಕ್ಟ್, ಕಾರ್ಟೂನ್ ಎಫೆಕ್ಟ್, ಕಾರ್ಟೂನ್ ಫೋಟೋ ಫಿಲ್ಟರ್ ಕಾರ್ಟೂನ್ ಆರ್ಟ್ ಫೋಟೋಸ್, ಕಾರ್ಟೂನ್ ಫೋಟೋಸ್, ಆರ್ಟ್ ಫ್ಲಿಪ್ ಫೋಟೋ ಎಡಿಟಿಂಗ್, ಫೋಟೋ ಫಿಲ್ಟರ್, ಅರ್ಟ್ಸನ್ ಕಾರ್ಟೂನ್ ಆರ್ಟ್ ಹೀಗೆ ಇಂತಹ ಆಪ್ ಗಳು ಫೋಟೋ ನಕಲಿಸಿ ಅಶ್ಲೀಲವಾಗಿ ಬಳಸಿಕೊಂಡಿರುವುದು ಪ್ಲೆ ಸ್ಟೋರ್ ಗಮನಕ್ಕೆ ಬಂದಿದೆ.
ಇನ್ನಾದರೂ ಅವರವರು ಫೋಟೋ ಹಾಕುವ ಮುನ್ನ ಎಡಿಟ್ ಮಾಡುವ ಮುನ್ನ ಒಂದು ಮುಂದಾಲೋಚನೆ ಇರಲಿ.