ನಿನ್ನ ಸನಿಹಕೆ ಎನ್ನುತಾ ಬಂದೇ ಬಿಟ್ಟಳು ನೋಡಿ ದೊಡ್ಮನೆ ಮಗಳು: Heggaddesamachar

Spread the love

ನಿನ್ನ ಸನಿಹಕೆ ಎನ್ನುತಾ ಬಂದೇ ಬಿಟ್ಟಳು ನೋಡಿ ದೊಡ್ಮನೆ ಮಗಳು

ಡಾ. ರಾಜ್​ಕುಮಾರ್​​ ಮೊಮ್ಮಕ್ಕಳಾದ ಧೀರೇನ್​ ರಾಮ್​ ಕುಮಾರ್​ ಮತ್ತು ಧನ್ಯಾ ರಾಮ್​ಕುಮಾರ್​ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿರೋದು ನಿಮಗೆ ಗೊತ್ತಿರಬಹುದು. ಮೊದಲು ಧೀರೇನ್​ ನಟಿಸೋ ಸಿನಿಮಾ ಶುರುವಾಗಿತ್ತು. ಆದರೆ ಸಹೋದರಿ ಧನ್ಯಾ ನಟಿಸ್ತಿರೋ ಸಿನಿಮಾನೇ ಮೊದ್ಲು ರಿಲೀಸ್​ ಆಗ್ತಿದೆ ಎನ್ನೋದು ಇದೀಗ ಗೊತ್ತಾಗಿದೆ. ಆ ಚಿತ್ರವೇ ನಿನ್ನ ಸನಿಹಕೆ… ಎಸ್ ಡಾ. ರಾಜ್​ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್​ಕುಮಾರ್ ದಂಪತಿಯ ಮಗಳು ಧನ್ಯಾ ಅಭಿನಯದ ಚೊಚ್ಚಲ ಸಿನಿಮಾ ಇದು.

ದೊಡ್ಮನೆಯಿಂದ ಚಿತ್ರರಂಗಕ್ಕೆ ಬರ್ತಿರೋ ಮೊದಲ ನಟಿ ಧನ್ಯಾ ರಾಮ್​ಕುಮಾರ್. ಈಗಾಗಲೇ ಬಿಡುಗಡೆಯಾದ ಮೇಕಿಂಗ್​ ಝಲಕ್​ ನಿಂದ ರೊಮ್ಯಾಂಟಿಕ್​ ಲವ್​ ಸ್ಟೋರಿ ಎನ್ನುವ ಸತ್ಯಾಂಶ ಬಿಟ್ಟು ಕೊಟ್ಟಿದ್ದ ಚಿತ್ರತಂಡ ಇಂದು ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಳಿಸಿದೆ…

ಮದುವೆಯ ಮಮತೆಯ ಕರೆಯೋಲೆ ಮತ್ತು ಸಿಲಿಕಾನ್​ ಸಿಟಿ ಸಿನಿಮಾದಲ್ಲಿ ನಟಿಸಿದ್ದ ಸೂರಜ್ ಗೌಡ ನಿನ್ನ ಸನಿಹಕೆ ಚಿತ್ರದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದು ಸೈಲೆಂಟ್, ವೈಲೆಂಟ್, ರೋಮ್ಯಾಂಟಿಕ್ ಎಲ್ಲವೂ ಆಗಿ ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ದೊರಕುತ್ತಾರೆ ಎನ್ನುವುದನ್ನ ಒಂದೇ ಮಾತಲ್ಲಿ ಹೇಳಬಹುದು.

ನಿನ್ನ ಸನಿಹಕೆ ಈ ಟೈಟಲ್ಲೇ ಹೇಳುತ್ತೆ ಇದೊಂದು ಹುಡುಗ-ಹುಡುಗಿಯ ಪ್ರಣಯ ಪ್ರಸಂಗ ವಿವರಿಸಬಹುದಾದ ಕಥೆಯಿರಬಹುದೇನೋ ಅಂತ… ಅದರಂತೆ ಇವತ್ತು ಬಿಡುಗಡೆಯಾದ ಟ್ರೈಲರ್ ನೋಡಿ ಇಲ್ಲಿ ಪ್ರೀತಿ ಪ್ರೇಮ ಪ್ರಣಯದ ಜೊತೆಗೆ ಯುವಕ ಯುವತಿಯರ ಅತಿಯಾದ ಮುದ್ದು ಪೆದ್ದು ತನವೇ ಹಿಂಸಾತ್ಮಕ ಸ್ವರೂಪ ಪಡೆಯಲು ಪ್ರಚೋದನೆ ಹಾಗೂ ಪ್ರೀತಿಸುವ ಹೃದಯಗಳು ದೂರಾಗಲು , ಪರದಾಡಲು ರೋಧನೆ ಎನ್ನುವ ಅಂಶ ಸಾರುವಂತಹ ಪ್ರಸಂಗ ಈ ಟ್ರೈಲರ್ ಕಣ್ಮುಂದೆ ತಂದಿತು ಎನ್ನಬಹುದು. ಲಾಕ್ ಡೌನ್ ಬಳಿಕ ಚಿತ್ರಮಂದಿರಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಿದ್ದು, ಇದೇ ಸಂದರ್ಭದಲ್ಲೇ ‘ನಿನ್ನ ಸನಿಹಕೆ’ ಚಿತ್ರ ಥಿಯೇಟರ್‌ಗೆ ಬರಲು ಸಜ್ಜಾಗಿದೆ.

ರಘು ದೀಕ್ಷಿತ್‌ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವಾಸುಕಿ ವೈಭವ್ ಬರೆದ ಸಾಹಿತ್ಯವಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಾಕಷ್ಟು ಖ್ಯಾತಿಗಳಿಸಿವೆ. ವಿಶೇಷವೆಂದರೆ ಲಾಕ್‌ ಡೌನ್‌ ಸಮಯದಲ್ಲಿ ಕವರ್‌ ಸಾಂಗ್ಸ್‌ ಮೂಲಕ ಈ ಚಿತ್ರದ ‘ನೀ ಪರಿಚಯ’ ಎಂಬ ಹಾಡು ಸುದ್ದಿಯಾಗಿದ್ದು ಮಿಲಿಯನ್ಸ್ ಗಟ್ಟಲೇ ವೀವ್ ಕೂಡ ಬಂದಿದೆ.

ಚಿತ್ರತಂಡ ಹೊಸಬರಾದರೂ ಹೊಸಬರಲ್ಲ, ಸಿನಿಮಾ ಟ್ರೈಲರ್ ನೋಡಿ ಪಕ್ಕಾ ಇದೇ ಎಂತ ಹೇಳೋಕಾಗಲ್ಲ ಯಾಕೆಂದರೆ ಸುಮಾರು 3 ನಿಮಿಷ 14 ಸೆಕೆಂಡ್ಸ್ ಇರುವ ಟ್ರೈಲರ್ ನಲ್ಲಿ ಇಡೀ ಸಿನಿಮಾದ ಎಲ್ಲಾ ಎಳೆಯನ್ನ ತೋರಿಸುವ ಪ್ರಯತ್ನ ನಡೆದರೂ ಇನ್ನೂ ಕಥೆಯಲ್ಲಿ ಬೇರೆಯದೇ ನೈಜ ಬಣ್ಣದ ಟ್ವಿಸ್ಟ್ ಗಳು ಇವೆಯೇನೋ ಅನಿಸುತ್ತಿದೆ. ಇಂದಿನ ಕಾಲದ ಫ್ಯಾಷನ್ ಪ್ರಪಂಚ, ರಿಲೇಷನ್ ಶಿಪ್ ಗಳ ಮಜಾ, ಅಹಿತಕರವಾದ ಸಂಬಂಧ ಇವುಗಳ ಮೇಲೆ ಕಥೆ ಹೊರಳಿದೆ ಅನಿಸಿದರೂ, ಕೊನೆಯಲ್ಲಿ ಒಂದೊಳ್ಳೆ ಸಾರವನ್ನ ಈ ಚಿತ್ರ ಸಾರುತ್ತದೆ ಎನ್ನುವ ನಂಬಿಕೆ ಟ್ರೈಲರ್ ನಲ್ಲೇ ಸಿಕ್ಕಿತು.

ಸಿನಿಮಾಗೆ ಸಂಗೀತ, ಡಿ.ಓ.ಪಿ ಇವೆರಡೂ ಪ್ಲಸ್ ಆಗಿ ತೋರುತ್ತಿದೆ. ಜೊತೆಗೆ ಸೂರಜ್ ಅವರದ್ದೆ ಕಥೆ ನಿರ್ದೇಶನ ಇರುವುದೂ ಕೂಡ ಒಂಥರ ಕುತೂಹಲ ಬೀರೋಕೆ ಕಾರಣವಾಗಿದೆ. ಟೋಟಲ್ಲಿ ಕಲರ್ ಫುಲ್ ಇದೆ. ಕಾಮಿಡಿಯೂ ಇದ್ದ ಹಾಗಿದೆ… ನೀವಿನ್ನೂ ಟ್ರೈಲರ್‌ ನೋಡಿಲ್ಲ ಅಂದ್ರೆ ಈ ಕೂಡಲೇ ನೋಡಿ…

– ಹೆಗ್ಗದ್ದೆ ಸಮಾಚಾರ್.ಕಾಮ್ ಬೆಂಗಳೂರು

Leave a Reply

Your email address will not be published. Required fields are marked *