ನಿಂತಲ್ಲಿ ಕುಂತಲ್ಲಿ ಹೋದಲೆಲ್ಲಾ ಕೋರೋನಾ?? : heggaddesamachar.com

ನಿಮ್ಮ ಮನೆಯಲ್ಲಿ ಕೊರೋನಾ ಪೀಡಿತರು ಯಾರು ಇಲ್ಲ ಅದಕ್ಕಾಗಿ ಆಗಿರಬಹುದೇನೋ…!!!
ನಿಮ್ಮ ಹತ್ತಿರದಲ್ಲೂ ಕೊರೋನಾ ಕಾಣ್ತಾ ಇಲ್ಲ ಅಂತ ಹೇಳ್ತಿದ್ದೀರಾ…!!!
ನಮ್ಮೂರಲ್ಲೂ ಕೊರೋನಾ ಬಂದಿಲ್ಲ ಅನ್ನೋ ಖುಷಿ ಅಲ್ವಾ..!!!
ನಮ್ಮ ಸಂಬಂಧಿಕರಿಗೂ ಯಾವ ತೊಂದರೆ ಇಲ್ಲ,
ನಮ್ಮ ಮನೆಗೂ ಯಾರನ್ನೂ ಸೇರಿಸ್ತಾ ಇಲ್ಲ,
ನಾವು ನಮ್ಮವರೊಂದಿಗೆ ಹುಷಾರಾಗಿ ಸೇಫ್ ಆಗಿದ್ದೀವಿ ಅಂತ ಯೋಚನೆ ಮಾಡ್ತಿದ್ದೀರಾ!?! ಅದಕ್ಕಾಗಿ ಕೊರೋನಾ ದ ಭಯ ಅಷ್ಟು ಕಾಡ್ತಾ ಇಲ್ಲ ಅಲ್ವಾ…
ಸರಿ ಹಾಗಿದ್ರೆ ನಿಮ್ಮ ಮನೆಯಿಂದ ಅಥವಾ ನಿಮ್ಮೂರಿನ ಪರಿಸರದಿಂದ, ಅಸ್ಪತ್ರೆಗಳಿಗೆ ಕರ್ತವ್ಯ ಪಾಲಕರಾಗಿ ಯಾರು ಹೋಗ್ತಾ ಇಲ್ವಾ??
ತಮ್ಮ ತಮ್ಮ ಕೆಲಸದ ನಿಮಿತ್ತ ಹೊರ ಹೋಗಿ ಬರುವವರು ಯಾರು ಇಲ್ವಾ???
ಹೊರಗಡೆಯಿಂದ ತಂದ ಯಾವುದೇ ವಸ್ತುಗಳನ್ನು ಅಥವಾ ಹೊರಗಡೆಯಿಂದ ಯಾರ ಸ್ಪರ್ಶಕ್ಕೂ ಸಿಗದೆ
ಅಂತರ ಕಾಯ್ದು ಕೊಂಡು ಯಾವುದಾದರೂ ವಸ್ತು ಅಥವಾ ಏನೇ ಅಗತ್ಯತೆಗಳು ನಿಮ್ಮ ಬಳಿಗೆ ಅದಾಗಿಯೇ ಬಂತಾ??
ನಿಮ್ಮ ಮನೆಯಲ್ಲಿ , ನಿಮ್ಮ ಸುತ್ತಮುತ್ತಲು, ನಿಮ್ಮ ಊರಿನಲ್ಲಿ ಕೊರೋನಾ ಇಲ್ಲದಿರಬಹುದು.
ಅದರೆ ಮಾನವ ಚಲನಾಶೀಲ ಜೀವಿ ಒಂದೆಡೆಯಿಂದ ಇನ್ನೊಂದೆಡೆ ಸಾಗಲೇ ಬೇಕು ತನ್ನ ಜೀವ ಮತ್ತು ಜೀವನ ಸಾಗಬೇಕಾದರೆ; ಇದ್ದಲ್ಲೇ ಇರೋದ್ ಕೂಡ ಕಷ್ಟ
ಹಾಗಾಗಿ ಒಬ್ಬ ವ್ಯಕ್ತಿ ಎಲ್ಲಿಗೂ ಹೋಗಿ ಬರಬಹುದು ಅಥವಾ ಆತ ನೀಡಿದ ವಸ್ತುಗಳು ಸಾವಿರ ಜನರ ಕೈಯಲ್ಲಿದ್ದು , ಕೊನೆಗೆ ನಿಮ್ಮ ಕೈಯನ್ನು ಸೇರಬಹುದು ಅಲ್ವಾ…
ಈಗ ಹೇಳಿ ಕೊರೋನಾ ಬರೋಕೆ ಸಾಧ್ಯನೇ ಇಲ್ವಾ???
ನಿಮ್ಮ ಊರು ಒಂದು ಜಿಲ್ಲೆಯೊಳಗಡೆ ಇದೆ, ಆ ಜಿಲ್ಲೆ ಒಂದು ರಾಜ್ಯದೊಳಗೆ ಇದೆ, ಆ ರಾಜ್ಯ ಒಂದು ದೇಶದೊಳಗಡೆ ಇದೆ, ದೇಶ ವಿಶ್ವದ ಒಂದು ಭಾಗವಾಗಿದೆ.
ನಿಮ್ಮ ದೇಶದೊಳಗಡೆ ಇದೆ! ಅಂದ ಮೇಲೆ ನೀವು ಅದರಿಂದ ತುಂಬಾ ದೂರ ಎಲ್ಲೂ ಇಲ್ಲ…
ನಿಮ್ಮ ಸಮೀಪಕ್ಕೆ ಬಂದು, ನಿಮ್ಮ ಸಾವು ನಿಮ್ಮ ಬೆನ್ನ ಹಿಂದೆಯೇ ಇದೆ ಅನ್ನೋದನ್ನು ತಕ್ಷಣ ಹೇಳಿದರೆ!!! ಮುಂದೆ ಯಾವ ಆಯ್ಕೆಯೂ ನಿಮಗೆ ಇರುವುದಿಲ್ಲ, ಸಾವು ಸಮೀಪವಾಗುವ ಮುನ್ನ ಎಚ್ಚೇತು ನೀವು ನಿಮ್ಮವರು ಅಂತ ಅಲ್ಲ, ನಾವು ನಮ್ಮವರು ಎಲ್ಲರೂ ಒಗ್ಗಟ್ಟಾಗಿ ಕೊರೋನಾ ಭಾದಿಸಿದಂತೆ, ಒಂದು ಸಣ್ಣ ಪ್ರಯತ್ನ ಮಾಡೋಣ… ಅಲ್ವಾ!!!