ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ : heggaddesamachar

Spread the love

ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ .

ಐಶ್ವರ್ಯ ಮತ್ತು ಅಮರ್ತ್ಯ ಹೆಗಡೆ ಇವರ ನಿಶ್ಚಿತಾರ್ಥ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೊಟೇಲ್-ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಾಳೆ ಅಂದರೆ ಗುರುವಾರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿಗೂ ಹಾಗೂ ಎಸ್ ಎಂ ಕೃಷ್ಣ ಮೊಮ್ಮಗರಾಗಿರುವ, ಕಾಫಿ ಡೇ ಮಾಲೀಕ ದಿ|ಸಿದ್ದಾರ್ಥ್ ಅವರ ಪುತ್ರನೊಂದಿಗೆ ನಿಶ್ಚಿತಾರ್ಥ ನೆರವೇರಲಿದೆ.

ಕುಟುಂಬಿಕರೆಲ್ಲ ಒಂದಾಗಿ ಸರಳವಾಗಿ ನಿಶ್ಚಿತಾರ್ಥ ನಡೆಸಲು ನಿರ್ಧರಿಸಿದ್ದು , ಎರಡು ಕುಟುಂಬದ ಪ್ರಮುಖರು ಮತ್ತು ಅತ್ಮೀಯರು ಈ ಶುಭ ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ.

ರಿ: ಹೆಗ್ಗದ್ದೆ ಸಮಾಚಾರ್

Leave a Reply

Your email address will not be published. Required fields are marked *