“ನರ್ಸ್ ಗಳ ಸಮವಸ್ತ್ರದಿಂದ ಗೌರವ ಬರುವುದಿಲ್ಲ ಬದಲಾಗಿ ಅವರಿಗಿರುವ ತಾಳ್ಮೆ ಹಾಗೂ ಸೇವಾ ಗುಣಗಳಿಂದ ಅವರಿಗೆ ಗೌರವ ಬರುತ್ತದೆ “- ಎಂ ಕೆ ಸೋಮಶೇಖರ್. : heggaddesamachar.com

ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು
“ನರ್ಸ್ ಗಳ ಸಮವಸ್ತ್ರದಿಂದ ಗೌರವ ಬರುವುದಿಲ್ಲ ಬದಲಾಗಿ ಅವರಿಗಿರುವ ತಾಳ್ಮೆ ಹಾಗೂ ಸೇವಾ ಗುಣಗಳಿಂದ ಅವರಿಗೆ ಗೌರವ ಬರುತ್ತದೆ ” ಎಂದು ಫ್ಲಾರೇನ್ಸ್ ನೈಟಿಂಗೆಲ್ ಅವರ ಧ್ಯೇಯವನ್ನು ಎಂ ಕೆ ಸೋಮಶೇಖರ್ ರವರು ಪುನರುಚ್ಛರಿಸಿದರು. ಕೃಷ್ಣರಾಜೇಂದ್ರ ಆಸ್ಪತ್ರೆ,ಚೆಲುವಾಂಬ ಆಸ್ಪತ್ರೆಗೆ ಬರುವ ರೋಗಿಗಳು ಬಹುಪಾಲು ಕಡುಬಡವರೂ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವಂತವರು ಆಗಾಗೀ ನೀವೂ ಕೊಡುವ ಸೇವೆಯನ್ನು ದೇವರ ಸೇವೆ ಎಂದು ನಂಬಿ ಬರುತ್ತಾರೆ. ಅನುಭವವುಳ್ಳ ದಾದಿಯರನ್ನೇ ವೈದ್ಯರಂತೆಯೇ ಕಾಣುತ್ತಾರೆ. ಎಷ್ಟೇ ದೊಡ್ಡ ರೋಗಗಿಂದ ಬಳಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಶುಶ್ರೂಷಕಿಯರು ಮಾತನಾಡುವ, ಉಪಚರಿಸುವ ರೀತಿಯಿಂದಲೇ ಅರ್ಧ ಗುಣಮುಖರಾಗುತ್ತಾರೆ. ಆಗಾಗಿ ಶುಶ್ರೂಷಕಿಯರಿಗೆ ಸಮಾಜದಲ್ಲಿ ದೊಡ್ಡ ಸ್ಥಾನಮಾನಗಳನ್ನು ಗೌರವವನ್ನು ನೀಡುತ್ತಾರೆ ಎಂದು ಶುಶ್ರೂಷಕಿಯರ ಸೇವೆಯನ್ನು ಶ್ಲಾಘಿಸಿದರು.
ಈ ಸಂಧರ್ಭದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ನಂಜುಂಡಸ್ವಾಮಿ, ಡಿ.ಕೆ.ಲೀಲಾವತಿ ಶುಶ್ರೂಷಕ ಅಧೀಕ್ಷಕರು, ದರ್ಜೆ -1, ಶುಶ್ರೂಷಕ ಅಧಿಕಾರಿಗಳಾದ ಅಲಕಾನಂದ,ಟಿಜಿ ನಿರ್ಮಲ, ಎಂ ಪಿ ಮೀನಾಕ್ಷಿ, ತುಳುಜಾಬಾಯಿ, ಹೀಲ್ಡಾ ಡಿಸೋಜಾ, ಪಿ.ಸರಸ್ವತಿ, ಈರಪ್ಪ ಮಚ್ಕಂಡಿ, ರವಿ ಮಲಕಶೆಟ್ಟಿ, ಎಂ ಧನಲಕ್ಷ್ಮಿ, ಪುಷ್ಪಾವತಿ, ಹಾಗೂ ಕಿರಿಯ ಶುಶ್ರೂಷಕಿಯರಿಗೆ ಫಲ ತಾಂಬುಲ, ಹಾರು,ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಐಟಿ ಸೆಲ್ ನಿರಾಲ್,ವಿಶ್ವ,ಗುಣಶೇಖರ್, ಮಹೇಂದ್ರ, ನಾಗಮಹದೇವ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.