ನಮ್ಮ ವರದಿ ವೈರಲ್ – ಹೆಗ್ಗದ್ದೆ ಸಮಾಚಾರ್.ಕಾಮ್ ಗೆ ಸಿಹಿ ಗರಿಮೆ – ಕೃತಕ ಕಾಲಿನಿಂದ ಯಕ್ಷ ಹೆಜ್ಜೆ ಹಾಕಿದವನಿಗೆ ಸಿಕ್ತು ಪ್ರಶಂಸೆ ಸಹಕಾರದ ಸುರಿಮಳೆ : heggaddesamachar.com

ಕೃತಕ ಕಾಲಿನಿಂದ ಯಕ್ಷ ಹೆಜ್ಜೆ ಹಾಕಿದ ಕಲಾವಿದರು ಯಾರು, ಗೊತ್ತಾಯಿತಾ!?,
ಅದೇ ಮೊನ್ನೆ ಸ್ಟೇಟಸ್ಗಳಲ್ಲಿ ಫೆಸ್ಬುಕ್ ನಲ್ಲಿ ಇದ್ರಲ್ವಾ ಅವರು!!, ಎಲ್ಲರ ಮನ ಹಾಗೂ ಮನೆಯಲ್ಲೂ ಅವರು ಮನೋಜ್ ಕುಮಾರ್ ವೇಣೂರ್ ಅಂತೇ…!!? ವಾವ್ ಮೆಚ್ಚಲೇ ಬೇಕಲ್ವಾ ?! ಅವರ ಧೈರ್ಯ ಹಾಗೂ ದಿಟ್ಟ ಹೆಜ್ಜೆ ಎಂಬುದು ಈಗ ಎಲ್ಲರ ಮನದಮಾತು ಅಂದರೆ ತಪ್ಪಾಗಲಾರದು ಅಲ್ವಾ!!!
ಮೊದಲು ವಾಟ್ಸಪ್ ಸ್ಟೇಟಸ್ ನಲ್ಲಿ ವಿಡಿಯೋ ನೋಡಿದಾಗ ಹೆಗ್ಗದ್ದೆ ಸಮಾಚಾರ್.ಕಾಮ್ ಹೊರಟಿದ್ದು ಸಂಪರ್ಕಕೊಂಡಿಯನ್ನು ಹುಡುಕುವ ಸಲುವಾಗಿ, ಫೇಸ್ಬುಕ್ ನಲ್ಲಿ ಹುಡುಕಿದ್ದಾಯಿತು ಹೆಸರು ಗೊತ್ತಾಗಿಲ್ಲ, ಅಲ್ಲಿಗೆ ಪ್ರಯತ್ನ ನಿಂತಿಲ್ಲ ಹುಡುಕಿದೆವು ಹೇಗೋ ಕೊನೆಗೆ ಹೆಸರೊಂದು ಸಿಕ್ಕಿತ್ತು, ಮತ್ತೆ ಮುಂದಿನ ನಿಲ್ದಾಣ ಸಂಪರ್ಕ ಪಡೆಯುವುದು ಹೇಗೆ ಎಂದು; ಅವಾಗ ಒಂದಷ್ಟು ಕಾಡಿದ್ದಾಯಿತು ಬೇಡಿದ್ದಾಯಿತು
ಹಿತೈಷಿಯೊಬ್ಬರ ಮೂಲಕ ಅವರ ಸಂಪರ್ಕವು ಸಿಕ್ಕಂತಾಯಿತು.
ತಡಮಾಡದೆ ಅವರಿಗೆ ಕರೆ ಮಾಡಿ ಒಂದಷ್ಟು ವಿಚಾರಗಳನ್ನು ಪಡೆದುಕೊಂಡು ಅವರಿಗೆ ಸಾಂತ್ವನ ಹೇಳುವಷ್ಟು ಮಾತುಗಳು ಹೊರಡುವ ಬದಲು ಮೌನವೇ ಉತ್ತರವಾಗಿತ್ತು, ಯಾಕಂದ್ರೆ ಅವರ ಕಥೆಯ ಹಿಂದೆ ಹೆಜ್ಜೆ ಹಾಕಿದಾಗ ಮೂಕಪ್ರೇಕ್ಷಕರಾಗಿ ಅಷ್ಟೇ ಕೇಳಬೇಕಾಗಿತ್ತು.
ಮಧ್ಯಾಹ್ನ ನೋಡಿದ ವಾಟ್ಸಾಪ್ ಸ್ಟೇಟಸ್ ರಾತ್ರಿ ಆಗುವ ಹೊತ್ತಲ್ಲಿ, ಕಲಾವಿದರಾದ ಮನೋಜ್ ಅವರ ಪುಟ್ಟ ಲೇಖನವೇ ಮೂಡಿಬರುತ್ತದೆ ಎಂದು ಕನಸಿನಲ್ಲೂ ನೆನೆಯದ ಕಾರ್ಯ ಕೈಗೂಡಿದ್ದು ಎಂದರೆ ಅದು ನಮ್ಮ ಹೆಗ್ಗದೆಯ ಹೆಮ್ಮೆ.
ಮೊಟ್ಟಮೊದಲಾಗಿ ಲೇಖನ ರೂಪದಲ್ಲಿ ನಮ್ಮ ಹೆಗ್ಗದ್ದೆ ಸಮಾಚಾರ್.ಕಾಮ್ ವೆಬ್ ಸೈಟಿನಲ್ಲಿ ಅನಾವರಣಗೊಂಡ ಮನೋಜ್ ಅವರ ಸಾಧನೆಯ ಹಾದಿ ನಂತರದ ದಿನಗಳಲ್ಲಿ ಕನ್ನಡ ಪತ್ರಿಕೆ, ಇಂಗ್ಲೀಷ್ ಪತ್ರಿಕೆ ಫೆಸ್ಬುಕ್ ನಲ್ಲಿ ಹೆಚ್ಚು ಹೆಚ್ಚು ಪ್ರಸಾರಗೊಂಡಾಗ ತುಂಬಾ ಖುಷಿಯಾಯಿತು.
ಅವರ ಹೆಸರನ್ನು ಮೊದಲಾಗಿ ಲೇಖನದ ಮೂಲಕ ಸಾಮಾಜಿಕ ವೆಬ್ ಸೈಟ್ನಲ್ಲಿ ಫೆಸ್ಬುಕಿನಲ್ಲಿ ಅಚ್ಚೊತ್ತಿದ್ದು ನಮ್ಮ ಅಂರ್ತಜಾಲ ತಾಣ ಎನ್ನುವುದು ನಮಗೆ ಖುಷಿಯ ವಿಚಾರ.
ಈಗಾಗಲೇ ಎಲ್ಲಾ ಕಡೆ ಬಿತ್ತರವಾದ ಲೇಖನಗಳಿಂದ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ, ಭವಿಷ್ಯ ಉಜ್ವಲವಾಗಲಿ…
ಯಕ್ಷರಂಗದಲ್ಲಿ ಹೆಸರಾಂತ ಕಲಾವಿದರಾಗಿ ಶ್ರೇಯಸ್ಸು ಹಾಗೂ ಸಾಧನೆ ಮನೋಜ್ ಅವರ ಮಡಿಲು ಸೇರಿ ಹೆಮ್ಮೆಯ ಗರಿಮೆಯು ಅವರ ಪಾಲಿನದ್ದಾದರೆ ಪ್ರೋತ್ಸಾಹಕರವಾಗಿ ಅವರ ಪರವಾಗಿ, ಪ್ರೇಕ್ಷಕರಾಗಿ ನಿಂತು ಚಪ್ಪಾಳೆ ನೀಡುವುದನ್ನು ಮರೆಯದಿರೋಣ.
ಕತ್ತಲೆಯಿಂದ ಬಂದ ದಾರಿ ಬೆಳಕಿನತ್ತ ಮುಖ ಮಾಡಿದ್ದು, ಸದಾ ಬೆಳಗುತಿರಲಿ…