News (ಸುದ್ದಿ)
ನಮ್ಮ ವರದಿಯ ಫಲಶ್ರುತಿ: heggaddesamachar

ಯೋಗೀಶ್ ಕುಮಾರ್ ಸಾಗರ ಅಪ್ಪಟ ಯಕ್ಷಗಾನ ಅಭಿರುಚಿಯಲ್ಲೇ ಜೀವನವನ್ನ ಕಂಡುಕೊಂಡಿದ್ದವರು… ಒಮ್ಮೆ ವೇಷ ಮುಗಿಸಿ ಮನೆಗೆ ಬರುವ ಹೊತ್ತಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದು ಕಾಲಿನ ಸಮೇತ ನಡೆಯಲೇ ಆಗದ ಪರಿಸ್ಥಿತಿಗೆ ಶರಣಾದರು.

ಅನಂತರ ನಡೆದಿದ್ದೆಲ್ಲಾ… ಹಾಸ್ಪೆಟಲ್, ಮನೆ, ಔಷಧಿ ಇತ್ಯಾದಿ, ಇತ್ಯಾದಿ…
ಕಳೆದ ಅನೇಕ ವರ್ಷಗಳಿಂದಲೂ ತಮ್ಮ ಅಂಗ ವೈಕಲ್ಯತೆಯಿಂದಾಗಿ ನಿರೋದ್ಯೋಗಿಯಾದ ಯಕ್ಷ ಕಲಾವಿದನ ಬಾಳು ಹಣಕಾಸಿನ ತೊಂದರೆಗೂ ಸಿಕ್ಕಾಕಿಕೊಂಡಿತ್ತು…
ಈ ಬಗ್ಗೆ ಅರಿತ ನಮ್ಮ ಹೆಗ್ಗದ್ದೆ ತಂಡ ಅವರ ಮನೆಗೆ ಭೇಟಿ ನೀಡಿ, ಅವರದೊಂದು ಸಂದರ್ಶನವನ್ನ ಭಿತ್ತರಿಸಿತ್ತು. ಇದೀಗ ಸಂದರ್ಶನ ನೋಡಿ ಉದ್ಯಮಿ “ವಿಜಯಾ ಗಣೇಶ್” ಎನ್ನುವ ದಂಪತಿಗಳು, ಯೋಗೀಶ್ ಫ್ಯಾಮಿಲಿಗೆ ಸಹಕಾರವಿತ್ತಿದೆ…

ಈ ಮೂಲಕ ವರದಿಯೊಂದು ಫಲಶ್ರುತಿಯಾಗಿರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದರ ಜೊತೆಗೆ ದಂಪತಿ “ವಿಜಯಾ ಗಣೇಶ್” ಅವರನ್ನೂ ಕೂಡ ನಮ್ಮ ಹೆಗ್ಗದ್ದೆ ಸಂಸ್ಥೆ ಅಭಿನಂದಿಸುತ್ತದೆ…
Interview Video Link:
ನಮ್ಮ ಕಾರ್ಯಕ್ರಮ ವೀಕ್ಷಿಸುವ, ಹರಸುವ, ಆನಂದಿಸುವ ಪ್ರತಿಯೊಬ್ಬರಿಗೂ ವಂದನೆಗಳು…?