Literature (ಸಾಹಿತ್ಯ)

ನಂಬಿಕೆ ಹಾಗೂ ಭಕ್ತಿಯ ಪ್ರತೀಕವಾಗಿ ಮುದ್ದುಮನೆಯಲ್ಲಿ 12 ದಿನಗಳ ಪಾಣಾರ ಆಟ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ಶ್ರೀ ಕ್ಷೇತ್ರ ಮಂದರ್ತಿಯಿಂದ ಪೂರ್ವದಿಕ್ಕಿಗಿರುವ ಪ್ರಕೃತಿಯ ಮಡಿಲಿನ ಸುಂದರ ತಾಣ ಶಿರೂರು ಮುದ್ದುಮನೆ. ಪ್ರಾಕೃತಿಕ ಗುಡ್ಡ, ಬೆಟ್ಟಗಳು, ಗಗನಚುಂಬಿ ಅರಣ್ಯ , ಮುರುವು ರಸ್ತೆ, ದೃಷ್ಟಿ ಹರಿಯುವಷ್ಟು ಉದ್ದಕ್ಕೂ ಹಸಿರು ‌ತುಂಬಿದ‌ ಬಯಲು ಗದ್ದೆ, ಕಾಡು,  ಗಿಡ, ಮರ  ಈ ಊರಿನ ಅಂದ ಹೆಚ್ಚಿಸಿವೆ. ಊರನ್ನು ‌ಹಸಿರಾಗಿಸಿ, ತಂಪಾಗಿರಿಸಿ ಊರಿಗೆ ಜೀವ ತುಂಬಿದ ಬಯಲು ಭೂಮಿ ಫಲವತ್ತಾಗಿರಲು ಬೆಳೆಗಳಿಗೆ ನಿರುಣಿಸಿ ರಮಣಿಯವಾಗಿ ಝಳು ಝಳು ಹರಿಯುವ ಸೀತಾನದಿ ಊರಿನ ಪೂರ್ವ ದಿಕ್ಕಿಗೆ ಇದ್ದು ಊರಿನ ಅದ್ಬುತ ದೃಶ್ಯಾವಳಿಯ ಚಲುವನ್ನು ಇಮ್ಮಡಿಗೊಳಿಸಿದೆ. ಹಳ್ಳಿಯ ಸೊಬಗನ್ನು  ಇನ್ನೂ ಹಾಗೆ ಉಳಿಸಿಕೊಂಡಿರುವ ಆಧನಿಕ ಜಗತ್ತಿನ ಚಿತ್ರಣದಿಂದ ತನ್ನನ್ನು ದೂರ ಉಳಿಸಿಕೊಂಡ ಊರಿದು. ಮುಂಗಾರು ಆರಂಭವಾಗುತ್ತಿದ್ದಂತೆ ಹಸಿರು ಸೀರೆಯುಟ್ಟು ನಿಂತ ಬೆಡಗಿಯಂತೆ ಕಂಗೊಳಿಸುವ ಈ ಊರಿನ ಗ್ರಾಮ ದೇವರು ಶ್ರೀ ಮುದ್ದುಸ್ವಾಮಿ.

      ಎಲ್ಲವನ್ನು ವಿವರಿಸಲಾಗದಷ್ಟು ನಿಗೂಢ ರಹಸ್ಯದ ಭಿನ್ನವೈವಿಧ್ಯತೆಗಳನ್ನು ಹೊಂದಿರುವ ಕಾರಣಿಕ, ಧಾರ್ಮಿಕ ಕ್ಷೇತ್ರ ಮುದುಸ್ವಾಮಿ ದೇವಸ್ಥಾನ. ಎರಡು ವರ್ಷ ಗಳಿಗೊಮ್ಮೆ ಹನ್ನೆರಡು ದಿನಗಳು ನಿರಂತರವಾಗಿ ನಡೆಯುವ ಇಲ್ಲಿನ ಕೋಲಕ್ಕೆ ವಿಶೇಷವಾದ ಮಾನ್ಯತೆ ಯಿದೆ.  ನ್ಯೆಸರ್ಗಿಕವಾದ  ಸಹಜ ಹುತ್ತಕ್ಕೆ ಪೂಜಾವಿಧಿ ಗಳನ್ನು ನಡೆಸುವವರು ಬಂಟ ಅರ್ಚಕರು ಎನ್ನುವುದು ವಿಶೇಷ. ಸಂಕ್ರಮಣದಂದು ವಿಶೇಷ ಪೂಜೆ, ಹೂವಿನ ಪೂಜೆ, ಸೋಣೆತಿಂಗಳಲ್ಲಿ ಸೋಣೆ ಆರತಿ, ನವರಾತ್ರಿ ಪೂಜೆಗಳು ಕ್ರಮವಾಗಿ‌ ಬಂಟ ಅರ್ಚಕರಿಂದಲೇ ನಡೆಯುವುದು. ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ ಇದೇ 2021 ರ ಜನವರಿ 2 ರಿಂದ 14 ಮಕರಸಂಕ್ರಾಂತಿಯ ತನಕ ಹನ್ನೆರಡು  ರಾತ್ರಿ ನಡೆಯುವ ಕೋಲ ವೀಕ್ಷಿಸುವುದು ಧಾರ್ಮಿಕ ಆಸ್ತಕರಿಗೆ ಇನ್ನಿಲ್ಲದ ‌ನೆಮ್ಮದಿ.ಹನ್ನೆರಡು ದಿನದ ಕೋಲವನ್ನು ಪಾಣಾರಾಟ ಎಂದು ಕರೆಯುವುದು ಇಲ್ಲಿನ ರೂಢಿ. ಸಂಪ್ರದಾಯ ಬದ್ಧ ಶಿಷ್ಟಾಚಾರದದೊಂದಿಗೆ ಹಿರಿಯರಿಂದ ನಡೆದು ಬಂದ ಕಟ್ಟು ಪಾಡಿನಂತೆ ಪೂರ್ವ ನಿರ್ಧರಿತ ನೀತಿಯೊಂದಿಗೆ ಪಾಣಾರು ಭಕ್ತಿ ಭರಿತ ಕರ್ತವ್ಯವನ್ನು ಜವಾಬ್ದಾರಿಯುತ ವಾಗಿ ನಿರ್ವಹಿಸುತ್ತಾರೆ.ಆದ್ದರಿಂದ ಇಲ್ಲಿನ ದೇವರ ಸೇವೆ ಸುಗಮವಾಗಿ ನೆರವೇರುತ್ತದೆ.

      ಪ್ರತಿದಿನ ಕೋಲ ಪ್ರಾರಂಭಕ್ಕೆ ‌ಮೊದಲು ಪಾಣಾರು ಮಹಿಳೆಯರಿಂದ  ಅರ್ಥಗರ್ಭಿತ ಸುಮಧುರ ಪಾಡ್ದನ ‌ ಇಂಪಾಗಿ  ಭಕ್ತಿಪೂರಕವಾಗಿ ‌ಹಾಡುತ್ತಾರೆ. ಪಾಡ್ದನ ಕಟ್ಟಿಹಾಡುವ ಕಲೆ ಪರಂಪರೆಯಿಂದ ಬಂದಿರುತ್ತದೆ. ಹಿರಿಯರು ಹಾಡುವ ಪಾಡ್ದನದ ದಾಟಿಯನ್ನು ಕಥಾ ಹಂದರವನ್ನು, ಸನ್ನಿವೇಶದ ವರ್ಣನೆ‌ಯೊಂದಿಗೆ ನಿಯತವಾದ‌ ಲಯ, ವಿಶಿಷ್ಟವಾದ ದಾಟಿಯ ಪಾಡ್ದನಗಳಲ್ಲಿ ಭಾಷಾ ಶೈಲಿ ಹಾಗೂ ಒಂದು ತರಹದ ರಾಗ ಸಂಯೋಜನೆಯಿರುತ್ತದೆ. 

     ಶ್ರೀ ಮುದ್ದುಸ್ವಾಮಿ ದೇವಸ್ಥಾನದಲ್ಲಿ 12 ದಿನಗಳು ನಿರಂತರ  ನಡೆಯುವ ಪಾಣಾರಾಟದಲ್ಲಿ ಮೊದಲ ದಿನದ  ಸೇವೆ ನನ್ನ ತಂದೆ ಮತ್ತು ಗಂಡನ ಮನೆಯಾದ ಜಂಬೆಟ್ಟು ಮೇಲು ಮನೆಯವರ ಕೋಲ. ಇದರಲ್ಲಿ ಜಟ್ಟಿಗನಕೋಲ, ಧಕ್ಕೆಕೋಲ, ಹುಲಿಕೋಲ ಮತ್ತು ವಾಜನೂರು, ಅಕ್ಷಲಾಡಿ, ಅಂಬರಕಲ್ಲು, ಹೆಮ್ಮಣಿಕೆ, ದೊಡ್ಡಕಲ್ಲು ಇವರ 5 ಒಂಟಿ ಬೊಬ್ಬರ್ಯ ಹಾಗೂ ಜೋಡಿ ಬೊಬ್ಬರ್ಯ ಕೋಲ ನಡೆಯುತ್ತದೆ. ಸ್ವಾಮಿ ಹುಲಿಕೋಲ ಹಾಗೂ ಬೊಬ್ಬರ್ಯ ಕೋಲ ಹನ್ನೆರಡು ದಿನವು ಬೇರೆ ಬೇರೆ ಮನೆಯವರ ಹರಕೆ ಸೇವೆಸಲ್ಲುತ್ತದೆ.

          ಎರಡನೇ ದಿನ ಹೊಳೆ ಬಾಗಿಲು ಮತ್ತು ಅಂತರ್ಸರ ಮನೆಯವರ ನಂದಿ,ಹುಲಿಚೌಂಡಿ, ಜಟ್ಟಿಗ, ಪಂಜುರ್ಲಿ ಕೋಲ.ಮೂರನೇ ದಿನ ಕಲ್ಲುಬೆಟ್ಟು, ಮೆಕ್ಕೆ ಮನೆ, ಹೆಗ್ಗೆರಿ ತೋಟದ ಮನೆ, ಆರ್ಡಿಯರ ಮನೆ ಕೊಂಚಬೆಟ್ಟು ಮನೆಯವರ‌ ಕ್ಷೇತ್ರಪಾಲ  ಹುಲಿ ಪಂಜುರ್ಲಿ ಕೋಲ, ಕ್ಷೇತ್ರ ಪಾಲನ ಕೋಲ ಸೇವೆ‌ನಿಗದಿತ‌ ಕಾಲ ಮತ್ತು ಸಮಯದಲ್ಲಿ ಚಾಚುತಪ್ಪದೆ ನಡೆಯುವ ಕೋಲಚಾರಣೆಗಳು ಇಲ್ಲಿನ ಪ್ರಧಾನ ‌ದೇವರು ಮುದ್ದುಸ್ವಾಮಿ ಭಕ್ತರ ಧುರಿತಗಳನ್ನು ನಿವಾರಿಸುವ ದೇವರು ಎಂಬ ಬಲವಾದ ನಂಬಿಕೆ ಹೊತ್ತ ಭಕ್ತರು ಸನ್ನಿದಿಗೆ‌ ಆಗಮಿಸಿ  ಶ್ರದ್ಧೆ  ಭಕ್ತಿಯಿಂದ ಅವರವರ ಶಕ್ತಿ ಗನುಸಾರವಾಗಿ‌ಹರಕೆ ಅರ್ಪಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ನಾಲ್ಕನೇ ದಿನ ಪಡುಬೆಟ್ಟು ಮನೆಯವ ರ ಸ್ವಾಮಿ‌ ಬೊಬ್ಬರ್ಯ ಕೋಲ ಹಾಗೂ ಹಂದಿಕೋಲದ‌ ಹರಕೆ ಸಲ್ಲುತ್ತದೆ. ಐದನೇ ದಿನ ಕೋಲ ಸೇವಾನಿರತ ಪಾಣರು ಎಲ್ಲಾ ದೇವರಿಗೆ ಧಕ್ಕೆಕೋಲರೂಪದಲ್ಲಿ‌ ಸೇವೇ ಸಲ್ಲಿಸುತ್ತಾರೆ.
   ಶ್ರೀ ಮುದ್ದುಸ್ವಾಮಿ ದೇವಸ್ಥಾನ  ಮೂಡಿ ಬಂದ‌ ಕಥೆಯು ಕುತೂಹಲ ಕಾರಿಯಾಗಿದೆ.‌ಮುದ್ದುಸ್ವಾಮಿ ಎಂಬ  ಮಹಾಜ್ಞಾನಿ ದೇವರ ಜ್ಞಾನದಲ್ಲಿ ಐಹಿಕ ಸುಖ ಭೋಗಗಳನ್ನು ತ್ಯಜಿಸಿ ತಪಸಿಗೆ  ಕುಳಿತು ವರ್ಷಗಳು ‌‌ಉರುಳಿಹೋಗುತ್ತದೆ.ಆಗ ಸ್ವಾಮಿಕುಳಿತ್ತಲ್ಲೆ ಹುತ್ತ ಬೆಳೆಯಲಾರಂಭಿಸಿ ಮುನಿಯುನ್ನು ಆವರಿಸಿಕೊಳ್ಳುತ್ತಾ ವಲ್ಮೀಕ ಮಾತ್ರ ‌ಜನರಿಗೆ ಕಾಣಿಸುತ್ತಿದ್ದು ಅದೃಶ್ಯವಾದ‌ ಮುನಿ ಅಡಗಿರುವ ಹುತ್ತಕ್ಕೆ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಮಹಾನ್ ಶಕ್ತಿ ಬಂದಿರುವುದು ಗ್ರಾಮಸ್ಥರ ಅರಿವಿಗೆ ಬಂದಾಗ ಶಿರೂರಿನಲ್ಲಿ ಮುದ್ದುಸ್ವಾಮಿಗೆ ಆಲಯ ಕಟ್ಟಿ ಪೂಜೆಗೆ ಪ್ರಾರಂಭಿಸಲಾಯಿತು. ಮುದ್ದುಸ್ವಾಮಿ ತಪಸ್ಸಿಗೆ ‌ಕುಳಿತ ಈ ಸ್ಥಳ ಸುರಗಿಯ ವನವಾಗಿತ್ತು.ಅದಕ್ಕಾಗಿ ದೇವಸ್ಥಾನದ‌ ವಠಾರದಲ್ಲಿ ಇಂದಿಗೂ ಸುರಗಿ ಹೂವಿನ‌ಘಮ ಘಮ ಭಕ್ತರನ್ನು ಸ್ವಾಗತಿಸುತ್ತದೆ. ಇಲ್ಲಿನ ಪುರಾತನ ಅಶ್ವತ್ಥ ವೃಕ್ಷಗಳು ದೇವರ ನೆಲೆಬೀಡು ಎನ್ನುವುದನ್ನು ಪರಿಚಯಿಸುತ್ತದೆ. ಇಂತಹ ಮುದ್ದುಸ್ವಾಮಿಯನ್ನು ಗ್ರಾಮದವರೆಲ್ಲ‌ ಸೇರಿ  ಹನ್ನೆರಡು ದಿನಗಳು‌ ಸೇವಾಕೋಲ ನೀಡುವ ಪರಂಪರೆ ಯೊಂದಿಗೆ, ಆರನೇ‌ ದಿನ ಚ್ವಾಂಡಾಲ್ ಮನೆ ಹಾಗೂ ತೆಂಕುಬೆಟ್ಟು ಮನೆಯವರ ಸೇವೆ ಬೆಮ್ಮಣ್ಣನ ಕೋಲ, ಯಕ್ಕಸ್ತ್ರಿ‌ಕೋಲ, ಹುಲಿಚೌಂಡಿಕೋಲ‌ ನಡೆದರೆ ಏಳನೇಯ ದಿನ ಕಲ್ಲುಮನೆ ಯವರ ಧಕ್ಕೆಕೋಲ, ದಾಸರಕೋಲ ಹುಲಿ ಹಂದಿ ಕೋಲಗಳು ಸಲ್ಲುತ್ತದೆ. ಈ ಎಲ್ಲಾ ಕೋಲ ಸೇವೆಯಲ್ಲಿ ಪಾಣರು ದೈವ ದೇವರುಗಳ ವೇಷಧರಿಸಿ, ಅದೇ ದೇವರ ಪರಿಚಯ, ಸ್ಥಳ ಮಹಾ ತ್ಮೆ‌ದೈವ ದೇವರುಗಳು ಭಕ್ತರನ್ನು ಕಾಪಾಡುವ ಪರಿಯ ವಿವರಣೆ ಆಡಿತೋರಿಸುತ್ತಾರೆ. 

    ಅಪರೂಪದ ಧಾರ್ಮಿಕ ಶ್ರದ್ದಾ ಕೇಂದ್ರ ಹಾಗೂ ಆರಾಧನಾ ಕ್ಷೇತ್ರವಾಗಿರುವ ಮುದ್ದುಸ್ವಾಮಿ ದೇವಸ್ಥಾನ ವೂ ಪುರಾತನ ಶಕ್ತಿ ಹಾಗೂ ಮನೋಕಾರ್ಯವನ್ನು ಸಫಲಗೊಳಿಸುವ ದೇವರು ಎಂಬ ನಂಬಿಕೆಯಿಂದ ಇಷ್ಟಾರ್ಥ ಸಿದ್ದಿ ಕೋಲ ಮತ್ತು ಮಕ್ಕಳಾಗದವರು ಬಸುರಿ‌ ಕೋಲವನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಬಸುರಿ ಕೋಲದಲ್ಲಿ ಪಾಣರು ಸೀಮಂತ ಶಾಸ್ತ್ರವನ್ನು ಬಸುರಿ ಯಂತೆ ಶೃಂಗರಿಸಿಕೊಂಡು ಹಿಟ್ಟು ಬಡಿಸಿ ಆರತಿ ಎತ್ತಿ ಭಕ್ತಾದಿಗಳ ಹರಕೆ ಪೂರ್ತಿಗೊಳಿಸುತ್ತಾರೆ. ಹರಕೆ ಹೊತ್ತ ಭಕ್ತರು ವೀಳ್ಯದೆಲೆ, ಅಡಿಕೆ, ಶೃಂಗಾರ ಹೂ, ತೆಂಗಿನ ಎಣ್ಣೆ ಮತ್ತು ಬಸುರಿಗೆ ಬಡಿಸಲು ಒಂಬತ್ತು ಬಗೆಯ ಹಿಟ್ಟು ಗಳನ್ನು ಪಾಣಾರಿಗೆನೀಡಬೇಕು.

     ಎಂಟನೇ ದಿನದ ಕೋಲ ನನ್ನ ತಾಯಿಮನೆಯಾದ ಬ್ಯೆಲುಮನೆಯವರ‌  ಕೋಲ. ಇವರು ಈ ದೇವ ಸ್ಥಾನದ  ಸ್ಥಳಮನೆಯವರು ಮತ್ತು ಅನುವಂಶೀಯ ಆಡಳಿತ ಮುಕ್ತೇಸರರು. ಎಲ್ಲಾ ದಿನಗಳಂತೆ ಹುಲಿ, ಜಟ್ಟಿಗ, ಬೊಬ್ಬರ್ಯ ಕೋಲದೊಂದಿಗೆ ಕಾಡ್ತಿಯಮ್ಮನಕೋಲ ಮತ್ತು ಕ್ಷೇತ್ರ ಪಾಲನ‌ಕೋಲ ಹಾಗೂ ಬೈಲುಮನೆಯಲ್ಲಿ ಪ್ರತಿ ವರ್ಷ ಕಂಬಳ ನಡೆಯುವುದರಿಂದ ಕಂಬಳ ಕೋಲ ಎಲ್ಲರ ಮನರಂಜಿಸುವ ಅಪರೂಪದ ಪಾಣಾರಾಟ ಸೇವೆ.ಒಂಬತ್ತನ್ನೇ ದಿನ ಗರಡಿ ಮನೆಯವರ ಸ್ವಾಮಿ ಕೋಲ, ಜಟ್ಟಿಗನ ಕೋಲ, ರಾಹುತನಕೋಲ, ಕಂಬಳದ ಕೋಲ,  ಭೂತರಾಯನ‌ಅಣಿ ಮತ್ತು ರಾಹುತನ ಕೋಲ,  ಹತ್ತನೆಯ ದಿನ ಮಳಮನೆಯವರ ಪಂಜುರ್ಲಿ ಕೋಲದಲ್ಲಿ ಭಯ, ಭಕ್ತಿ ಹುಟ್ಟಿಸುವ ವಾತಾವರಣವಿದ್ದು ಪುಟ್ಟನ ಕೋಲ, ಭೂತರಾಯನ ಕೋಲದಲ್ಲಿ ವಿಶೇಷ ಆಕರ್ಷಣೆಯಿದೆ. ಹನ್ನೊಂದನೆಯ ದಿನ ಜಂಬೆಟ್ಟು ಕೆಳಮನೆಯವರ ವಿವಿಧ ಸೇವೆ‌ಕೋಲ , ಜಟ್ಟಿಗನ ಕೋಲ, ಹುಲಿ-ಹಂದಿ ಕೋಲ,ಹೋರಿ ಕಂಬಳಕ್ಕೆ ಹೋಗುವುದು, ಭೂತರಾಯನ ಅಣಿ .ಹನ್ನೆರಡನೆಯ ದಿನ ಬಾಳೆಹಿತ್ಲು ಮನೆಯವರ  ದಾಸರ ಕೋಲ, ಹುಲಿ-ಹಂದಿಕೋಲ, ಹರಕೆಕೋಲ ನಡೆಯುತ್ತದೆ. ಬಾಳೆಹಿತ್ಲು ಮನೆಯವರು ಮುದ್ದುಸ್ವಾಮಿ ದೇವಳದ ಪೂಜಾ ವಿಧಿಗಳನ್ನು ನಡೆಸುವ ಅರ್ಚಕ ಮನೆತನ. ಈಗಿನ ಅರ್ಚಕರಾಗಿ ರಾಜೀವ ಶೆಟ್ಟಿಯವರು ಶ್ರದ್ಧೆಯಿಂದ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಾರೆ.

      ಶ್ರೀ ಮುದ್ದುಸ್ವಾಮಿ ದೇವಸ್ಥಾನದ ಪಾಣಾರಾಟದ ಇನ್ನೊಂದು ವಿಶೇಷವೆಂದರೆ ಮದುವೆಯ ಹರಕೆ ಕೋಲ ನಡೆಯುವುದು. ಈ ಸೇವೆಯಲ್ಲಿ ಮದುಮಗ, ಮದುಮ ಗಳು,ಎರಡು ಕಡೆಯ ದಿಬ್ಬಣ, ಪುರೋಹಿತರು , ಕನ್ಯಾ ದಾನ,  ಶೋಭಾನ ಮದುವೆಯ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪಾಣರು ಮದುವೆಯಂತೆ ನಡೆಸುವುದ  ರಿಂದ ಇಲ್ಲಿ ನಡೆಯುವ ಹನ್ನೆರಡು ದಿನ ಕೋಲವನ್ನು ಪಾಣಾರಾಟ ಎಂದು ಕರೆಯುವುದು ರೂಢಿ.  ಕೊನೆಯಲ್ಲಿ ನಡೆಯುವ ಅಣಿ ಸೇವೆ ಸಾಕಷ್ಟು ಕೌತುಕಕಾರಿ, ಎತ್ತರದ ಅಣಿಯನ್ನು ತಯಾರಿಸಿ ಅದನ್ನು ಹೊತ್ತು ಕುಣಿಯುವ ಪಾಣರು ಕೋಲ ಕಟ್ಟುವವರ ಸಾಹಸ ನಿಜವಾಗಿಯೂ ಮೈನವಿರೇಳಿಸುತ್ತದೆ. ಆವೇಶ ಭರಿತ ಅಣಿಹೋತ್ತವರು ಮುದ್ದುಸ್ವಾಮಿ ದೇವಸ್ಥಾನದಿಂದ ಹೊರಟು ಅಣಿಯನ್ನು ಸೀತಾನದಿ ತೀರದ ನಿರ್ದಿಷ್ಟ ಸ್ಥಳದಲ್ಲಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ಅಣಿ ಮೆರವಣಿಗೆ ಹೋಗುವಾಗ ಈ ಊರಿನಲ್ಲಿ ಯಾರು ಮಲಗಿ ನಿದ್ದೆ ಮಾಡುತ್ತಿರಬಾರದು ಎನ್ನುವ ಪ್ರತೀತಿ ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗಿದೆ.ಉತ್ತರೋತ್ತರ ಶ್ರೇಯಸ್ಸು, ಉದ್ಯೋಗ, ಕಾರ್ಯಸಾಧನೆ, ವ್ಯವಹಾರ ವೃದ್ಧಿಗಾಗಿ ಬದುಕೆಂಬ ಬಂಡಿಸಾಗುತ್ತಿರುವಾಗ ಸಂಭವಿಸುವ ಕೆಲ ಘಟನೆ ನೋವು ವೇಧನೆಗಳ ಉಪಶಮನಕ್ಕಾಗಿ ದೇವರ ಮೋರೆ ಹೋಗಿ ಹರಕೆ ರೂಪದಲ್ಲಿ ಕೋಲ ದೇವರಿಗೆ ಸಲ್ಲಿಸುತ್ತಾರೆ.
   ಕೋಲ ಸೇವೆ ಮುಗಿದ ನಂತರ ದೇವರು ಸೀತಾನದಿಗೆ ತೀರ್ಥಸ್ನಾನಕ್ಕೆ ಹೋಗಿಬರುವ ಕ್ರಮ ಇದ್ದು ಪರಂಪರಾಗ ತ ಚಂಡೆವಾದನ, ಕೊಂಬು ಕಹಳೆ, ವಾದ್ಯಗಳ ನಿನಾದ, ಕಲಶ ಹಿಡಿದ ಹೆಣ್ಣು ಮಕ್ಕಳು, ಆರತಿ ಹಿಡಿಯುವ ಸುವಂಗಲೆಯರ ಶೋಭಾನ, ವಿವಿಧ ವೇಷಗಳ ಅಪೂರ್ವ ಸಂಗಮದೊಂದಿಗೆ  ದೇವರಿಗೆ ಕೊಡೆ ಹಿಡಿದು ಕ್ಷೌರಿಕರು, ಮಡಿಹಾಕುತ್ತಾ ಮಡಿವಾಳರು, ವಾದ್ಯ ಊದುವ ದೇವಾಡಿಗರು, ದೀವಟಿಕೆ ಹಿಡಿಯುವ ಮೊಗವೀರರು, ಕುಂಬಾರರಿಗೆ ಹಿಲಾಲು, ಆಚಾರಿಯವರ ಸುಡುಮದ್ದುಗಳ ಪ್ರದರ್ಶನ, ಪೂಜಾರಿಯವರ ಸೂಡಿಯೊಂದಿಗೆ ವೈವಿಧ್ಯಮಯ ಬ್ಯಾಂಡ್ ವಾದ್ಯ, ಕೊಂಬು ಕಹಳೆ, ಸಾಂಸ್ಕೃತಿಕ ವೇಷ ಭೂಷಣ ಸಂಭ್ರಮ ದೊಂದಿಗೆ ಪುಷ್ಷಾಲಂಕೃತಗೊಂಡ ಮುದ್ದುಸ್ವಾಮಿಯು ಭವ್ಯ ವೆರವಣಿಗೆಯೊಂದಿಗೆ‌ ಹೊಳೆಗೆ ಹೋಗಿ ಬರುವಾಗ ಮಕರ ಸಂಕ್ರಮಣದ ಸೂರ್ಯೋದಯವಾಗಿರುತ್ತದೆ. ಅದೇ ದಿನ ಪಾನರು ಕಳ್ಳು ಹೊತ್ತು ಹಾಡುವ ಸನ್ನಿವೇಶ ಹಿಂದಿನಿಂದ ನಡೆದು ಬಂದಿದ್ದು ಈಗಲೂ ವಾಡಿಕೆ ಯಲ್ಲಿದೆ , ಪರಂಪರೆ ಆಚರಣೆ, ನಂಬಿಕೆ ನಡಾವಳಿಯೊಂದಿಗೆ ಅಕ್ಷರಶಃ ಶ್ರದ್ಧಾ ಭಕ್ತಿಯಿಂದ ನಡೆಯುವ ಪಾಣರ ಆಟಕ್ಕೆ ಊರಪರ ಊರ ಭಕ್ತಾದಿಗಳು ಭಕ್ತಿ ಪೂರಕವಾಗಿ ಭಾಗವಹಿಸುತ್ತಾರೆ.

       ಮುದ್ದುಸ್ವಾಮಿ ದೇವಳದ ಸುತ್ತು ಪೌಳಿಯೊಳಗೆ ನಾಗ ಹುಲಿದೇವರು ಮತ್ತು ಪರಿವಾರ ದೇವತೆಗಳಿದ್ದು ಅದಕ್ಕೆಲ್ಲಾ ಸೂರ್ಯನಾರಾಯಣ ಶಾಸ್ತ್ರಿ ಹಾಗೂ ವಿಶ್ವನಾಥ ಶಾಸ್ತ್ರಿಯವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 24ರಂದು ಹಾಲು ಹಬ್ಬ ಗೆಂಡ ಸೇವೆ ಮತ್ತು ಧಕ್ಕೆ ಬಲಿ ನಡೆದು ಮರುದಿನ ಶ್ರೀ  ಕ್ಷೇತ್ರ ಮಂದಾರ್ತಿ   ದುರ್ಗಾಪರಮೇಶ್ವರಿ ಮೇಳದವರಿಂದ ಸೇವೆ ಆಟ ನಡೆಯುತ್ತದೆ.

Leave a Reply

Your email address will not be published. Required fields are marked *