News (ಸುದ್ದಿ)
ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯ ಕೊರೊನಾ ಸೋಂಕು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು – ಬಿ ಎ ಶಿವಶಂಕರ್ ಒತ್ತಾಯ : heggaddesamachar.com

ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯ ಕೊರೊನಾ ಸೋಂಕು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು, ಪಿ.52 ಕೊರೊನಾ ಸೋಂಕಿತ ಹಾಗೂ ಆಡಳಿತ ವರ್ಗದವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್ ಸರ್ಕಾರಕ್ಕೆ ಒತ್ತಾಯಿಸಿದರು.
ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯ ಪಿ.52 ವ್ಯಕ್ತಿಯಿಂದ ಕಾರ್ಖಾನೆಯ 76 ಜನರಿಗೆ ಕೊರೊನಾ ಸೋಂಕು ಹರಡಿದೆ.ಈ ಸೋಂಕು ಯಾರಿಂದ ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲು ದಕ್ಷ ಅಧಿಕಾರಿ ಹರ್ಷಗುಪ್ತರವರನ್ನು ನೇಮಕ ಮಾಡಿದರೂ ತನಿಖೆ ಸಫಲವಾಗಲಿಲ್ಲ.1 ತಿಂಗಳ ಹಿಂದೆ ಸಿ ಬಿ ಐ ತನಿಖೆಗೆ ಆಗ್ರಹಿಸಿ ಸಿಎಂ ಯಡಿಯೂರಪ್ಪರವರಿಗೂ ಮನವಿ ಮಾಡಿದ್ದೇವೆ.ಈ ಬಗ್ಗೆ ಸರ್ಕಾರದಿಂದ ಯಾವ ಮಾಹಿತಿ ಲಭ್ಯವಾಗಿಲ್ಲ. ಕಾರ್ಖಾನೆಯ ಕೊರೊನಾ ಸೋಂಕು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು, ಪಿ.52 ಕೊರೊನಾ ಸೋಂಕಿತ ಹಾಗೂ ಆಡಳಿತ ವರ್ಗದವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.