News (ಸುದ್ದಿ)

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ | heggaddesamachar.com

Spread the love

ಕನ್ನಡ ವೆಬ್ ಪೋರ್ಟಲ್ “ದಿ ನ್ಯೂ ಇಂಡಿಯನ್ ಟೈಮ್ಸ್” ಕೊರೋನಾ ವಿರುದ್ಧದ ಸಮರಕ್ಕೆ ಸಾಥ್ ನೀಡಿದ್ದು, ಅಳಿಲು ಸೇವೆಯಲ್ಲಿ ನಿರತವಾಗಿದೆ.

ಅವಿರತ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಸ್ನೇಹಿತರಿಗೆ ದಿ ನ್ಯೂ ಇಂಡಿಯನ್ ಟೈಮ್ಸ್ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಸ್ಯಾಲಿಟೈಸರ್ ವಿತರಿಸಿದೆ .
ಇಂಥಾ ತುರ್ತುಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ತಪ್ಪದೇ ನಿಭಾಯಿಸಬೇಕು .
ಇಡೀ ದೇಶ ಕೊರೋನಾ ವಿರುದ್ಧ ಯುದ್ಧ ಸಾರಿದೆ. ಕೊರೋನಾ ಹೆಮ್ಮಾರಿಯ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಮೊರೆ ಹೋಗಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಜನರನ್ನು ಮನೆ ಬಿಟ್ಟು ಬರದಂತೆ ನೋಡಿಕೊಳ್ಳಲಾಗುತ್ತಿದೆ.


ಈ ಕೊರೋನಾ ಎಮರ್ಜೆನ್ಸಿ ನಡುವೆ ಅತ್ಯಗತ್ಯ ಸೇವೆಗಳನ್ನು ಮಾತ್ರ ಒದಗಿಸಲಾಗುತ್ತಿದೆ. ವೈದ್ಯರು, ದಾದಿಯರು, ಪೊಲೀಸರಂತೆ ಅಗತ್ಯ ಸೇವೆಗಳಲ್ಲಿ ಮಾಧ್ಯಮ ಸೇವೆ ಕೂಡ ಇದೆ‌. ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಕೂಡ ಮಾಧ್ಯಮಗಳನ್ನು ಅಗತ್ಯ ಸೇವಾ ವರ್ಗಗಳ ಪಟ್ಟಿಯಲ್ಲಿಟ್ಟು ಮಾಧ್ಯಮ ಮಿತ್ರರ ಕೆಲಸವನ್ನು ಶ್ಲಾಘಿಸಿರುವುದನ್ನು ಸ್ಮರಿಸಬಹುದು .‌


ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮಗಳು ಕೊರೋನಾ ಸಂಕಷ್ಟದ ಕಾಲದಲ್ಲೂ ತಮ್ಮ ಜವಬ್ದಾರಿ ಮೆರೆಯುತ್ತಿರುವುದು ಶ್ಲಾಘನೀಯ.


ಮಾಧ್ಯಮ ಮಿತ್ರರಿಗೂ ನಮ್ಮ ಪ್ರೋತ್ಸಾಹ ಮತ್ತು ಸಹಕಾರದ ಅಗತ್ಯವಿದೆ. ಕ್ಷಣ ಕ್ಷಣಕ್ಕೂ ಸುದ್ದಿ ತಲುಪಿಸುವ ಪತ್ರಕರ್ತರ ಸೇವೆಗೆ ಸಲಾಂ ಹೇಳುತ್ತಾ, ಅವರಿಗೆ ಅನುಕೂಲವಾಗಲೆಂದು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ತನ್ನ ಕೈಲಾದ ಮಟ್ಟಿಗೆ ಸ್ಯಾನಿಟೈಸರ್ ವಿತರಣೆ ಮಾಡಿದೆ.

ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ ಹಾಗೂ ಸಂಸ್ಥೆಯ ಸಿಇಒ ಮತ್ತು ಚಿತ್ರನಟ ರಘುಭಟ್ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಾಧ್ಯಮ ಸ್ನೇಹಿತರಿಗೆ ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ‌.


ರಘು ಭಟ್ ಅವರೊಡನೆ ಹಿಮಾಲಯ ಡ್ರಗ್ಸ್ ಸಿಎಒ ಪಿಲಿಪ್ ಹೆಡನ್, ಹೆಚ್ ಆರ್ ಡೈರೆಕ್ಟರ್ ಕೆ. ಜಿ ಉಮೇಶ್, ಫೈನಾನ್ಸ್ ಹೆಡ್ ಎಂ ಫಾರೂಕ್ , ‌ಹೆಚ್ ಆರ್ ಮ್ಯಾನೇಜರ್ ರಾಜ್ ಕುಮಾರ್ ಹಾಗೂ ರೀಟೆಲ್ ಟೀಮ್ ನ ಜಗದಂರ್ ಸಿಂಗ್ ಮತ್ತು ಶ್ರೇಯಸ್ ಇದ್ದರು.
ಇನ್ನು ಕಳೆದ ಒಂದು ವಾರದಿಂದ ರಘುಭಟ್ ಬೆಂಗಳೂರಿನ ವಿವಧ ಕಡೆಗಳಲ್ಲಿ , ಕೊಳೆಗೇರಿ ಭಾಗಗಳಲ್ಲಿ ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ .


ಕೊರೋನಾ ವಿರುದ್ಧ ಇನ್ನು ಒಂದಿಷ್ಟು ಕಾಲ ಹೋರಾಡ ಬೇಕಿದ್ದು, ನಾವೆಲ್ಲರೂ ಒಗ್ಗಟ್ಟಾಗಿದ್ದು, ಸಮರ ಗೆಲ್ಲೋಣ . ಒಬ್ಬರು ಒಬ್ಬರಿಗೆ ಸಾಥ್ ನೀಡುವುದು , ಲಾಕ್ ಡೌನ್ ಗೆ ಸ್ಪಂದಿಸಿ ಮನೆಯಲ್ಲಿರುವ ಮೂಲಕ ಭಾರತಾಂಭೆಯ ಮಕ್ಕಳೆಲ್ಲಾ ಒಂದೇ ಎಂದು ಒಗ್ಗಟ್ಟು ಪ್ರದರ್ಶಿಸೋಣ .

ರೀ: ಹೆಗ್ಗದ್ದೆ ಸಮಾಚಾರ್

Leave a Reply

Your email address will not be published. Required fields are marked *