ದಿನಕ್ಕೊಂದು ತರಹದ ಹವಮಾನ.. ಗೇರು ಕೃಷಿಗೆ ಸಂಕಷ್ಟ… ಬೆಳೆಗಾರರಲ್ಲಿ ಭಯ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

 ಮಕರ ಸಂಕ್ರಾಂತಿಯ ಸಮಯ ನಾನು ಊರಲ್ಲಿ ‌ಇದ್ದಕಾರಣ ನಮ್ಮೂರ ಗುಡ್ಡ ಬೆಟ್ಟ ಗೇರು ತೋಟಗಳಲ್ಲಿ ಸುತ್ತಾಡುತ್ತಾ  ಭೂಮಿ ತಾಯಿಯ ಸೊಬಗು ಹೆಚ್ಚಿಸಿ ನಿಂತ ಗೇರು ಮರಗಳ ಸಾಲು ಸಾಲು ಕಂಡೆ . ಚಿಗುರೊಡೆ ದ ಗೇರುಮರ , ಹುಲುಸಾಗಿ ಬೆಳೆದ ಹೂವಿನ ಗೊಂಚಲಿ ನಿಂದ ಮಿಡಿಗಳು ಇಣುಕುತ್ತಿದ್ದವು‌ ಹಾಗೂ ಇನ್ನೂ ಕೆಲವು ನೆಲದಲ್ಲಿ ಉದುರಿ ಬಿದ್ದಿದ್ದವು  ಅಕಾಲಿಕವಾಗಿ ಸುರಿದ ಮಳೆ ಆತಂಕ ಮೂಡಿಸಿದ್ದು ಮಳೆಯಿಂದ ತೇವಾಂಶ ಹೆಚ್ಚಾಗಿ ಗೇರುಮರ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ  ಅಲ್ಲದೆ  ಅಪಕ್ವ ಗೇರು ಹೂವು ಹಾಗೂ  ಕಾಯಿ ಉದುರುವ ಆತಂಕ ಎದುರಾಗಿದೆ ಎಂಬ ಚಿಂತೆ ಬೆಳೆಗಾರರನ್ನು ಆವರಿಸಿದೆ.  ಈ ಬಾರಿ ಮುಂಗಾರು ಫಲಪ್ರದವಾಗಿದ್ದು ಗೇರುಮರಗಳು ಮೈ ತುಂಬಾ ಹೂ ಹೋದ್ದು ನಿಂತಿದ್ದವು. ಕೆಲವೆಡೆ ಪೀಚು ಹೊರ ಬಂದಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿತ್ತು . ನವೆಂಬರ್  ಡಿಸೆಂಬರ್ ನಲ್ಲಿ ಸುರಿದ  ಮಳೆಯೇ ಉತ್ತಮ ಬೆಳೆಗೆ ಸಾಕ್ಕಿತ್ತು  ಆದರೆ ಜನವರಿಯಲ್ಲಿ ಬಿದ್ದ ಅಕಾಲಿಕ ಮಳೆ ಕಾಯಿ ಮಿಡಿಯನ್ನು ಉದಿರಿಸುವ ಸಾಧ್ಯತೆ ಹೆಚ್ಚಾಗಿ ಬೆಳೆಗಾರರಲ್ಲಿ ನಿರಾಶೆ ಮೂಡಿದೆ. ಜನವರಿ ಫೆಬ್ರವರಿಯಲ್ಲಿ ಇಬ್ಬನಿಯಷ್ಟೆ ಮರಕ್ಕೆ ಸಾಕಾಗುತ್ತದೆ. ಅಕಾಲಿಕವಾಗಿ ಸುರುದ ಮಳೆ ಬೆಳೆಗಾರರ ಲೆಕ್ಕಚಾರವನ್ನು ತಲೆ ಕೆಳಗಾಗಿಸಿದೆ.


         ನವೆಂಬರ್- ಡಿಸೆಂಬರ್ ನಲ್ಲಿ ಮರ ಚಿಗುರಿ ಜನವರಿಯಲ್ಲಿ ಹೂಬಿಡಲು ಪಾರಂಭವಾಗುತ್ತದೆ. ಫೆಬ್ರವರಿಯಲ್ಲಿ ಗೇರು ಬೀಜ ಕೊಯ್ಲಿಗೆ ಬಂದು ಮೇ ತಿಂಗಳಾಂತ್ಯದವರೆಗೂ ಫಸಲೂ ಸಿಗುತ್ತದೆ. ಆದರೆ ಗೇರು ಕೃಷಿಯನ್ನು ನಂಬಿದ್ದ ಬೆಳೆಗಾರರಿಗೆ ‌ನಿರಾಶೆಕಾದಿದೆ. ಹವಾಮಾನದ ಫಲಕೃತಿಯಿಂದ‌ ಮರಗಳು ಸಾಕಷ್ಟು ಪ್ರಮಾಣದಲ್ಲಿಎಲೆ ಯುದುರಿಸಿ ಚಿಗುರಲ್ಲಿಲ್ಲ, ಚಿಗುರಿದ ಮರಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮೊಗ್ಗು ಮೂಡಿಸಲಿಲ್ಲ, ಮೊಗ್ಗು ಬಂದ ಮರಗಳಲ್ಲಿ ಸರಿಯಾಗಿ ಹೂವಾಗಲಿಲ್ಲ.ಅಪ್ಪಿ ತಪ್ಪಿ ಹೂಬಿಟ್ಟ ಮರಗಳಲ್ಲಿ ಹೂವು ಮಿಡಿಯಾಗಿ ಹೊರ ಬರಲಿಲ್ಲ. ಮಿಡಿಯಾದ ಮರಗಳಲ್ಲಿ ಮಿಡಿಬೆಳೆದು ಹಣ್ಣಾಗುವ ಸೂಚನೆ ಕಾಣುತ್ತಿಲ್ಲ. ಗೇರು ಬೀಜಕ್ಕೆ ಈ ವರ್ಷ ದೊಡ್ಡ ದುರಂತ ಕಾದಿದೆ.ಮಂಜು ಕವಿದ ಮೋಡ ಮುಸುಕಿದ‌ ಹವೆಯಲ್ಲಿ ಹೂಗಳೆಲ್ಲ ಕರಟಿ ಕಪ್ಪಾಗಿದೆ. ಹಾಗೆ ಅಪ್ಪಿ ತಪ್ಪಿ ಮಿಡಿಯಾದವುಗಳು ಕೂಡ ಆರೋಗ್ಯ ಪೂರ್ಣವಾಗಿ ಬೆಳೆಯುತ್ತಿಲ್ಲ. ಕೆಲ ಮರಗಳು ಸರಿಯಾಗಿ ಹೂ ಬಿಡಲೇ ಇಲ್ಲ. ಒಟ್ಟಿನಲ್ಲಿ ಮೋಡಗಳು ಗೇರು ಬೀಜದ ಭವಿಷ್ಯವನ್ನು ಅಳಿದಿದೆ. ಅಷ್ಟೇ ಅಲ್ಲದೆ ಅಕಾಲಿಕ ಮಳೆ ಸುಡುಬಿಸಿಲು, ಚಳಿವಿಳಂಬ, ಆಗಾಗ ‌ಮೋಡ‌ ಕವಿಯುತ್ತಿರುವುದು‌ ದಿನಕ್ಕೊಂದು ತರಹದ ಹವಾಮಾನದಿಂದಾಗಿ ಗೇರು ಕೃಷಿಗೆ ಸಂಕಷ್ಟ ಎದುರಾಗಿದೆ. ಮಳೆ ಹೆಚ್ಚಾಗಿದ್ದರಿಂದ ಹೆಚ್ಚಿನ ಗೇರು‌ಮರಗಳಲ್ಲಿ ಹೂಬಿಡುವ ಪ್ರಕ್ರಿಯೆ ಸರಿಯಾಗಿ ಆಗಲಿಲ್ಲ.ಹೂ ಬಿಟ್ಟ ನಂತರ ‌ಮಳೆ ಬಂದರು‌ ಗೇರು ಹೂ ಅರಳುವುದಿಲ್ಲ. ವಾತಾವರಣದಲ್ಲಿ ಆಗುತ್ತಿರುವ ಬದಲಾ ವಣೆಗಳಿಂದ‌ ಬೆಳೆ ವಿಳಂಬದ ಜತೆಗೆ ಕೀಟಭಾದೆ ಸಹಿತ ಇನ್ನಿತರ ರೋಗಗಳು ಕಾಣಿಸಿಕೊಳ್ಳುತ್ತದೆ‌ ಎನ್ನತ್ತಾರೆ ಬಾರುಕೂರಿನ ರಾಮನಾಯಕರು .

 ‌  ಈ ವರ್ಷ ಸಪ್ಟೆಂಬರ್ ನಿಂದ ನವೆಂಬರ್ ಕೊನೆಯ ತನಕ ನಿರಂತರ ‌ಮಳೆ‌ ಬಂದಿದ್ದರಿಂದ‌ ಗೇರು‌ಮರದ ಕಾಂಡ ಒಣಗಲಿಲ್ಲ‌ಕಾಂಡ ಒಣಗದಿದ್ದರೆ ಮರ ಬೆಳೆಯುತ್ತಲೇ ಇರುತ್ತದೆ. ಕಾಂಡ ಒಣಗಿದರೆ‌ಮಾತ್ರ ಬೆಳೆಯುವವಿಕೆ ನಿಲ್ಲಿಸಿ‌ಹೂ ಬಿಡುತ್ತದೆ ‌. ಈ ಬಾರಿ ಮಳೆ‌ ಹೆಚ್ಚಾಗಿದ್ದರಿಂದ ಹೂವು ಬಿಡುವ ‌ಪ್ರಕ್ರಿಯೇ ವಿಳಂಬವಾ ಗಿ ಅದರ ‌ನಂತರ ಫಸಲಿಗೆ‌ಬೇಕಾದ ಚಳಿಯು ಕಂಡು ಬರಲಿಲ್ಲ ‌ ಸೆಕೆ‌ ಮತ್ತು ‌ಮೋಡ‌ ಮುಸುಕಿದ ವಾತಾವರಣ ‌ಗೇರು ಬೆಳೆಗೆ‌ಪೂರಕವಲ್ಲ. ಗೇರು ಕೃಷಿಕರು ಹವಾಮಾನ ವೈಪರೀತ್ಯಗಳಿಂದ ಅನೇಕ ಕಷ್ಟನಷ್ಟಕ್ಕೆ ಒಳಗಾಗುತ್ತಾರೆ. ಆದರೂ ‌ಸರಕಾರ ಹಾಗೂ ಕೃಷಿ ಇಲಾಖೆಯಿಂದಾಗಲಿ ಇತರ ತೋಟಗಾರಿಕಾ ಇಲಾಖೆಗಳಿಗೆ ಸಿಗುವ ರೀತಿಯ ‌ಸೌಲಭ್ಯ ಸಿಗುತ್ತಿಲ್ಲ.


           ಮಾರುಕಟ್ಟೆಯಲ್ಲಿ ಗೋಡಂಬಿಯ ಬೆಲೆ ಮತ್ತು ಬೇಡಿಕೆ ‌ಇತ್ತೀಚಿನ ವರ್ಷಗಳಲ್ಲಿ ಏರುಗತಿಯಲ್ಲಿ ಇದ್ದು 2019ರಲ್ಲಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಗೇರುಸಸಿ ಖರೀದಿಯಲ್ಲಿ ತೊಡಗಿದ್ದು ನಿರ್ಲಕ್ಷ್ಯ ಕ್ಕೀಡಾಗಿದ್ದ ಗೇರುಕೃಷಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ದಕ್ಷಿಣ ಕನ್ನಡದ ಗೇರು ಸಂಶೋಧನಾ ನಿರ್ದೇಶನಾಲಯ ದಲ್ಲಿ 4 ಲಕ್ಷಕ್ಕೂ ‌ಹೆಚ್ಚಿನ ಗೇರುಸಸಿ ಪ್ರತಿ ವರ್ಷ ವಿತರಿಸ ಲಾಗುತ್ತದೆ‌ . ಗೇರು ಕೃಷಿಯತ್ತ‌ ಬೆಳೆಗಾರರ ಆಸಕ್ತಿ ಹೆಚ್ಚುತ್ತಿದ್ದು.ಗೇರುಬೀಜಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ದೇಶಿಮಟ್ಟದಲ್ಲಿ ಗೋಡಂಬಿ ಸಂಸ್ಕರಣಾ ಸಾಮರ್ಥ್ಯ ಹೆಚ್ಚುತ್ತಿದ್ದು ನಮ್ಮ ದೇಶ ರಫ್ತು ಮಾಡುವ‌ ನಾಲ್ಕು‌ಮುಖ್ಯ ಕೃಷಿ ಉತ್ಪನ್ನಗಳಲ್ಲಿ ಗೇರು ಒಂದು. ಆದರೆ ನಮ್ಮ ದೇಶದ ದುರಂತವೊ ಎಂಬಂತೆ ಗೇರು ಸಂಸ್ಕರಣೆ ಯ ಪ್ರಧಾನ ಕೇಂದ್ರವಾದ ಕೇರಳದ ಸಂಸ್ಕ್ರರಣಾ ಫಟಕ ನಷ್ಟ ಬರಿಸಲಾಗದೆ ಮುಚ್ಚಬೇಕಾದ‌ಪರಿಸ್ಥಿತಿ ಬಂದಿದೆ.

         ಗೋಡಂಬಿ ಎಂದಾಕ್ಷಣ ಎಲ್ಲರಿಗೂ ಅದರ ಬೀಜ ದ ರುಚಿಯ ನೆನಪಾಗುವುದು ಸಹಜ ಈ ಹಣ್ಣಿನ ವೈಜ್ಞಾನಿಕ ಹೆಸರು ಅನಾಕಾರ್ಡಿಯಂ ಆಕ್ಸಿಡೆಂಟೇಲ್. ಕನ್ನಡದಲ್ಲಿ ಗೇರು,ಜಿಡಿ, ಮಂದರಿಪಪ್ಪು ಹೆಸರುಗಳಿಂದ ಕರೆಯುತ್ತಾರಂತೆ. ಇದರಲ್ಲಿ ಸಸಾರಜನಕ, ಶರ್ಕರ ಪಿಷ್ಟ, ಕಬ್ಬಿಣ, ಕ್ಯಾಲ್ಸಿಯಂ, ಸಿ ವಿಟಮಿನ್ ಗಳು ಹೆರಳವಾಗಿದೆ ಹಾಗೆ ಗೇರು ಮೂಲತಃ ಭಾರತದಲ್ಲಾ ದಕ್ಷಿಣ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಈ ಹಣ್ಣಿನ ತವರು ಪ್ರೋರ್ಚ್ಗೀಸರು ಭಾರತಕ್ಕೆ ಗೋಡಂಬಿ ಸಸ್ಯವನ್ನು ತಂದರು ಎನ್ನುತ್ತಾರೆ ಕೃಷಿ ವಿಜ್ಞಾನಿ ಡಾ.ಜಗದೀಶ್.

     ಪ್ರಾಕೃತಿಕವಾಗಿ ಬೆಳೆಯುವ ಗೇರುಕೃಷಿಯತ್ತಾ‌ ನಮ್ಮ ಹಿರಿಯರು‌ತೋರುತ್ತಿದ್ದ ಒಲವು ಸಂಪಾದನೆ ಆದಾಯ ಎಂಬುದು ಇಂದು ಯಾರಿಗೂ ಅಷ್ಟಾಗಿ ಬೇಕಾಗಿಲ್ಲ ಆರ್ಥಿಕವಾಗಿ ಬಡವರಾಗಿದ್ದ ಕಾಲದಲ್ಲಿ ‌ಜನರ‌ ದಿನ ನಿತ್ಯ ದ ಖರ್ಚಿಗೆ ,ಬಟ್ಟೆ ಬರೆಗಳಿಗಾಗಿ ಗೇರುಬೀಜ ಆರ್ಥಿಕ ಸಂಪನ್ಮೂಲವಾಗಿತ್ತು ಯಾವುದೇ ರಸಗೊಬ್ಬರ ನೀರು ಆರೈಕೆ ಇಲ್ಲದೆ ‌ಹೇರಳವಾಗಿ ಬೆಳೆಯುತ್ತಿದ್ದ‌ಗೇರು ಕೃಷಿ ಗೆ‌ತೋಟಗಾರಿಕಾ ಇಲಾಖೆಯಲ್ಲಿ ಗೇರು ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಿದ್ದು ರೈತರಿಗೆ ಉಪಯುಕ್ತ ವಾಗಿದೆ.


            ಭಾರತದಲ್ಲಿ ವಾರ್ಷಿಕ 20 ಲಕ್ಷ ಟನ್ ಗೂ ಹೆಚ್ಚು ಗೇರು ಬೀಜ ಬೇಡಿಕೆ ಇದೆ . ಆದರೆ ಉತ್ಪಾದನೆ ಯಾಗುತ್ತಿರುವುದು 8 ಲಕ್ಷ ಟನ್ ಮಾತ್ರ ಎಂಬುದು ಆಶ್ಚರ್ಯ. ಗೋಡಂಬಿಯ ಪ್ರಮುಖ ತಳಿಗಳಿಂದ ಉಳ್ಳಾಲ, ಭಾಸ್ಕರ ಗೋವಾ, ಎನ್ ಡಿ.ಆರ್ 2. ‌ವೆಂಗೂರ್ಲಗಳು ಮತ್ತು ಕೆಲ ಉತ್ತಮ ತಳಿಗಳು‌ ಮೂರು‌ ವರ್ಷಕ್ಕೆ ಹೂ‌ಬಿಡಲು ಪ್ರಾರಂಭಿಸಿ ಉತ್ತಮ ಫಸಲು ದೊರಕಲು ಪ್ರಾರಂಭವಾದರು ಕೀಟ ಬಾದೆ, ಕಾಂಡ ಕೊರೆದ‌ ಹುಳುಗಳ‌ಕಾಟದಿಂದ ಬೇಡಿಕೆ ಇರುವಷ್ಟು ಪೂರೈಸಲು ಆಗುತ್ತಿಲ್ಲ. ಗೇರು ‌ಮಂಡಳಿ‌ಗೇರು ಬೆಳೆ‌ಹೆಚ್ಚಿಸಿ ಅದಕ್ಕೆ ಪೂರಕವಾಗಿ ರೋಗ ‌ನಿಯಂತ್ರಣ‌ ಹಾಗೂ ಬೆಂಬಲ‌ಬೆಲೆ ನೀಡಿದರೆ ಬೀಜ ಪ್ರಮಾಣ ಹೆಚ್ಚಾಗಿ ದೇಶಿ ಕಾರ್ಖಾನೆಗಳಿಗೆ ಬೇಕಾದಷ್ಟು ಒದಗ ಬಹುದೊ ಎನೋ‌ ಆದರೆ ಗೇರು ಉದ್ಯಮಗಳಿಗೆ ಹೊರ ದೇಶದದ ಬೀಜ ಆಮದು ಆದರೆ ಅಷ್ಟೇ ಕಾರ್ಖಾನೆ ಯಂತ್ರ ಚಲಿಸುತ್ತದೆ ಎನ್ನುತ್ತಾರೆ. ಮುಖ್ಯವಾಗಿ ಮಲೇಷ್ಯಾ ಮತ್ತು ಆಫ್ರಿಕಾ ದಿಂದ  ಗೇರು ಆಮದು ಆಗುತ್ತದೆ ಎನ್ನಲಾಗಿದೆ. ಸಂಸ್ಕರಿಸಿ ಅರಬ್ ರಾಷ್ಟ್ರ ಮತ್ತು ಅಮೆರಿಕಕ್ಕೆ ರಪ್ತು ಮಾಡಲಾಗುತ್ತದೆ. ಗೇರು ಉದ್ಯಮಕ್ಕೂ  ಸಂಕಷ್ಟವಿದೆ. ಮಾರುಕಟ್ಟೆ ‌ಚೇತರಿಕೆಗೆ ರಫ್ತು ಆಮದಿನ ಸಮಸ್ಯೆಯಲ್ಲಿ ‌ಸುಧಾರಣೆ‌ಬೇಕು. ಆರ್ಥಿಕ ‌ಪರಿಸ್ಥಿತಿಯಿಂದಾಗಿ‌ ವಿದೇಶಗ ಳಲ್ಲಿ ಹಣದ ಚಲಾವಣೆ‌ ಕಡಿಮೆಯಾಗಿದೆ. ಗೇರು ಬೀಜ ನಿತ್ಯ ಜೀವನಕ್ಕೆ ಅನಿವಾರ್ಯವಲ್ಲದ ಕಾರಣ ಮಾರಾಟದಲ್ಲಿ ಕುಸಿತ ಗೊಂಡಿದೆ.

      ಗೇರುಬೀಜದಷ್ಟು ಗೇರು ಹಣ್ಣು ಪ್ರಖ್ಯಾತ ಹೊಂದದೆ ಇರುವುದು ಒಂದು ದುರಂತ ದಾರಾಳವಾಗಿ ವಿಟಮಿನ್ ‌ಹೊಂದಿರುವ‌ಗೇರು‌ಹಣ್ಣು  ಜನಬಳಕೆಯಲ್ಲಿ ಹಿಂದೆ ಇದೆ. ಗೇರು ‌ಹಣ್ಣಿನಲ್ಲಿ ಆಂಟ್ಯಿ ಆಕ್ಸಿಂಡಂಟ್ ಅಧಿಕವಾಗಿದ್ದು ಬ್ಯಾಕ್ಟೀರಿಯಾ ನಿರೋಧ ಅಂಶ‌  ಹೆಚ್ಚಾಗಿದೆ. ಮಂಗಳೂರು ಶ್ಯಾಮಲಾ ಶಾಸ್ತ್ರಿ ಎಂಬವರು ಗೇರು ಹಣ್ಣಿನ ಸಿರಪ್ ತಯಾರಿಸುವುದರಲ್ಲಿ ಸಫಲರಾಗಿದ್ದಾರೆ. ಅಷ್ಟೇ ಅಲ್ಲದೇ ‌ಕೆಲವೆಡೆ ಗೇರು ಹಣ್ಣಿನಿಂದ ಬಟ್ಟಿ ಇಳಿಸಲು ಉಪಯುಕ್ತವಾದ ಗೇರು ಹಣ್ಣಿನಿಂದ ಸಿದ್ದಪಡಿಸಿದ ಶರಾಬು ಔಷಧೀಯ ಗುಣ ಹೊಂದಿದೆ ಎನ್ನುತ್ತಾರೆ.

 ಗೋಡಂಬಿಗೂ ಒಂದು ದಿನ ವಿದೆ . ಅದೇ ನವೆಂಬರ್ 23. ಇತ್ತೀಚಿನವರೆಗೂ ಈ ಬೆಳೆಯು ನಿರ್ಲಕ್ಷಿತವಾಗಿದ್ದು ಗುಡ್ಡ, ಬಂಜರು ಭೂಮಿ ಪ್ರದೇಶದಲ್ಲಿ ಯಾವುದೇ ವ್ಯವಸ್ಥಿತ ಬೇಸಾಯ ಅಳವಡಿಸದೆ‌ ಬೆಳೆಯುವ ಬೆಳೆಯಾಗಿತ್ತು. ಗೇರು ಬೀಜಕ್ಕೆ ಉತ್ತಮ ಬೆಲೆ ಬಂದ ಮೇಲೆ ಗೇರು ಕೃಷಿಗೆ‌ ಬೆಳೆಗಾರರಲ್ಲಿ ಆಸಕ್ತಿ ಹೆಚ್ಚುತ್ತಿದ್ದು ಹಾಗೆ ಸರಕಾರ ಕೂಡ ಗೇರುಸಸಿಗಳನ್ನು ಹಂಚುತ್ತಿದೆ. ಗೇರು ಉದ್ದಿಮೆ ವೇಗವಾಗಿ ಸಾಗುತ್ತಿದೆ. ಆದರೆ ಗೇರು ಉತ್ಪಾದನೆಗೆ  ಕಡಿಮೆ ಗಮನ ನೀಡಲಾಗುತ್ತದೆ.


 
ಗೇರು ಬೀಜದ ಕುತೂಹಲ ಬರಿತ ಕಥೆ

     ಮನದೇವತೆಯಿಂದ ವರ ಪಡೆದ ಗೇರು ಬೀಜ ವೊಂದು  ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿತು ಆದರೆ ತನ್ನ ಅಹಂಕಾರದಿಂದ ಗೇರು ಬೀಜದ ಒಳಗೆ ಮರಳಿ ಹೋಗಲು ಒಪ್ಪಲಿಲ್ಲ. ವನ ದೇವತೆಗೆ ವಿಷಯ ತಿಳಿಯಿತು. ಅತಿಯಾಸೆಗೆ ಬಲಿಯಾದ ಗೇರು ಬೀಜ. ಗೇರು ಬೀಜಕ್ಕೆ ಹಣ್ಣಿನ ಒಳಗೆ ಇದ್ದು ಬೇಸರವಾಯಿತು. ಹೊರಗೆ‌ ಬಂದೊಡನೆ ಯಾರಾದರೂ ನಮ್ಮನ್ನು ತಿನ್ನುತ್ತಾರೆ. ಇದೆಂಥ ಬದುಕು ನಮ್ಮ ದು‌ ಎಂದು ಹೊರಗಿದ್ದ ಎಲೆಯೊಡನೆ ದುಃಖ ಹಂಚಿಕೊಳ್ಳತ್ತಿತ್ತು. ಗೇರು ಬೀಜದ ದುಃಖವರಿತ ವನ ದೇವತೆ ಗೇರುಬೀಜದ  ಎದುರು ಪ್ರತ್ಯೇಕಳಾದಳು ನಿನ್ನ ಇಚ್ಛೆಯನ್ನು ಒಂದು ದಿನ ಮಟ್ಟಿಗೆ ಪೂರೈಸುತ್ತೆನೆ ಅದರಂತೆ ‌ಒಂದು ದಿನ ನೀನು ಹಣ್ಣಿನಿಂದ ಹೊರಗೆ ಇದ್ದು ಕಣ್ತುಂಬಿಕೊಳ್ಳಬಹುದು ಈ ಮಾತಿನಿಂದ ಸಂತಸಗೊಂಡ ಗೇರು ಬೀಜಗಳಲ್ಲಿ ಮರುದಿನ ಗೇರು ಹಣ್ಣಿನ ಹೊರಗೆ ಅಂಟಿ ಕೊಂಡು ಹಿತವಾದ ಬಿಸಿಲು, ನವಿರಾದ ತಂಗಾಳಿ  ,ಎಲ್ಲವನ್ನು ಕಂಡು ಕೇಳಿ ಅನುಭವಿಸಿ ಬೀಜಗಳಿಗಾದ ಸಂತೋಷ ಅಷ್ಟಿಷ್ಟಲ್ಲ. ನೋಡ ನೋಡುತ್ತಲೇ ರಾತ್ರಿಯಾಯಿತು. ದಿನ ಮುಗಿದು ವನ ದೇವತೆ ಕೊಟ್ಟ ಗಡುವು ಮೀರಿ ಗೇರು ಬೀಜ ಹೊರಗೆ ಉಳಿಯಿತು. ಮರುದಿನ ವೈಸುಡುವ ಬಿಸಿಲು, ಹಕ್ಕಿಗಳು ಗೇರು ಬೀಜವನ್ನು ಕೊಕ್ಕಿ ತಿನ್ನಲಾರಂಭಿಸಿದವು. ಪ್ರಾಣಿ ಪಕ್ಷಿಗಳಿಂದ ಜೀವ ಬೆದರಿಕೆ. ಒಟ್ಟಿನಲ್ಲಿ ಗೇರು ಬೀಜಕ್ಕೆ ನಾನು ಸಮಯಕ್ಕೆ ಸರಿಯಾಗಿ ಒಳಗೆ ಹೋಗದೆ ತಪ್ಪು ಮಾಡಿದೆ ಎನಿಸಿತು. ಪುನಃ ವನ ದೇವಿಯನ್ನು ಪ್ರಾರ್ಥಿಸಿತು. ಇನ್ನೂ ನಿನು ಹಣ್ಣಿನ ಒಳಗೆ ಹೋಗುವಂತಿಲ್ಲ. ಆದರೆ ನಿನ್ನ ಕೋಮಲ ಮೈಗೆ ಕವಚ ನೀಡಿ ನಿನ್ನನ್ನು ರಕ್ಷಣೆ ಮಾಡುವೆ ಎಂದು ಕವಚ ಸೃಷ್ಟಿಸಿತು. ಅಂದಿನಿಂದ ಕವಚ ಹೋದ್ದ ಗೇರು ಬೀಜ ಗೇರು ಹಣ್ಣಿನ ಹೊರಗೆ ಉಳಿಯಿತು ಎನ್ನುತ್ತಾರೆ.

Leave a Reply

Your email address will not be published. Required fields are marked *