News (ಸುದ್ದಿ)

ದಲಿತರು & ಪ್ರಗತಿಪರರಿಂದ ಮೌನ ಪ್ರತಿಭಟನೆ: heggaddesamachar.com

Spread the love

ಲಾಕ್ ಡೌನ್ ನಡುವೆಯು ನರಸೀಪುರದಲ್ಲಿ ಪ್ರತಿಭಟನೆ ಬಿಸಿ.

ಡಾ.ಆನಂದ್ ತೇಲ್ತುಮ್ಬಡೆ ಬಂಧನ ಖಂಡಿಸಿ ಮೌನ ಪ್ರತಿಭಟನೆ. ತಿ.ನರಸೀಪುರ ಪ್ರಗತಿಪರರು ಮತ್ತು ದಲಿತ ಮುಖಂಡರಿಂದ ಮೌನ ಪ್ರತಿಭಟನೆ. ಪಟ್ಟಣದ ಡಾ.ಬಿ ಆರ್ ಅಂಭೇಡ್ಕರ್ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆ. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಚಾರವಾಗದಿ ಪ್ರಭುಸ್ವಾಮಿ. ಡಾ ಬಿ ಆರ್ ಅಂಭೇಡ್ಕರ್ ಜನ್ಮದಿನದಂದು ಖ್ಯಾತ ಪ್ರಗತಿಪರರು, ಲೇಖಕರು, ಚಿಂತಕರು ಆನಂದ್ ತೇಲ್ತುನ್ಬದೆ ಬಂಧನ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ.

ಭೀಮ ಕೋರೆಗಾವ್ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡ ಕಾರಣ ಬಂಧನ ಮಾಡಲಾಗಿದೆ. ದೇಶಾದ್ಯಂತ ಕೊರೊನ ವೈರಸ್ ಇರುವ ಕಾರಣ ಪ್ರತಿಭಟನೆ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ದೇಶಾದ್ಯಂತ ಪ್ರಗತಿಪರರು ಆನಂದ್ ತೇಲ್ತುನ್ಬದೆ ಬಂಧನ ಖಂಡಿಸಿ ಮೌನ ಪ್ರತಿಭಟನೆ ನಡೆಸುತ್ತಿದೆ. ಕೂಡಲೇ ಸರ್ಕಾರ ಆನಂದ್ ತೇಲ್ತುನ್ಬದೆ ರವರನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಪ್ರತಿಭಟನೆಯಲ್ಲಿ ಆಲಗೂಡು ಚಂದ್ರಶೇಖರ್, ಬನ್ನಹಳ್ಳಿಹುಂಡಿ ಸೋಮಣ್ಣ,ದಲಿತ ಮುಖಂಡರಾದ ಕುಕ್ಕೂರು ರಾಜು,ನಾಗರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *