ದರ್ಶನ್ ರಾಬರ್ಟ್ ಈ ವರ್ಷ ಬಿಡುಗಡೆಯಾಗೋದು ಡೌಟ್: heggaddesamachar

ಸಿನಿಪ್ರಿಯರಿಗೆ ಕೊರೊನಾ ಕಂಟಕ ಹಿಂಸೆಯಂತಾಗಿದೆ.
ಯಾವಾಗಲೂ ಫಸ್ಟ್ ಡೇ ಫಸ್ಟ್ ಶೋ ಅಂತ ಥಿಯೇಟರ್ಗೆ ಓಡಾಡುತ್ತಿದ್ದ ಸಿನಿಪ್ರಿಯರು ಕರೋನ ಕಂಟಕದಿಂದ ಸಮಯ ಕಳೆಯುವುದು ಹೇಗೆ ಎಂದು ತಿಳಿಯದೆ ಯಾವಾಗ ಥಿಯೇಟರ್ ಗಳನ್ನು ತೆರೆಯುತ್ತಾರೆ ಎಂದು ಕಾಯ್ತಾ ಇದ್ದಾರೆ.

ಇನ್ನೊಂದು ಕಡೆ ಚಿತ್ರರಂಗ ಕೂಡ ಕೆಲವೊಂದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು, ಬಿಡುಗಡೆಯಾಗದೆ ಅರ್ಧದಲ್ಲೇ ನಿಂತಿತ್ತು.
ಇನ್ನು ಕೆಲವು ಸಿನಿಮಾಗಳು ಶೂಟಿಂಗ್ನಲ್ಲಿ ತೊಡಗಿಸಿಕೊಂಡಿವೆ ಅದು ಸರ್ಕಾರ ನಿಗದಿಪಡಿಸಿದ ನಿಯಮದಡಿಯಲ್ಲಿ ಕಾರ್ಯ ಮುಂದುವರಿಸಿದೆ.ಹೆಚ್ಚಾಗಿ ಸದ್ದು ಮಾಡಿದ್ದ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ದೊಡ್ಡದಾದ ಬಜೆಟ್ನಲ್ಲಿ ನಿರ್ಮಾಣವಾಗಿದ್ದು, ಲಾಕ್ ಡೌನ್ ಮುಗಿದ ತಕ್ಷಣ ಸಿನಿಮಾ ತೆರೆಕಾಣಲಿದೆ ಎಂದು ಹೇಳಲಾಗಿತ್ತು.

ಆದರೆ ರಾಬರ್ಟ್ ಚಿತ್ರದ ನಿರ್ಮಾಪಕರಾದ ಉಮಾಪತಿ ಅವರು ಈ ವರ್ಷದಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆ ಮಾಡುತ್ತಿರುವುದು ಅನುಮಾನ ಅಂತ ಹೇಳಿರುತ್ತಾರೆ. ಈಗಾಗಲೇ ಸೆನ್ಸಾರ್ ಮಂಡಳಿಗೆ ರೆಡಿಯಾಗಿರುವ ರಾಬರ್ಟ್ ಸಿನಿಮಾ, ಕೊರೋನ ಆತಂಕ ಕಡಿಮೆಯಾಗಿ ಸಹಜಸ್ಥಿತಿಗೆ ಬಂದಮೇಲೆ ರಾಬರ್ಟ್ ಸಿನಿಮಾವನ್ನು ಬಿಡುಗಡೆಗೊಳಿಸಲಾಗುವುದು ಎಂದು ಉಮಾಪತಿ ಅವರು ಹೇಳಿದ್ದಾರೆ.
ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆಗೆ ಅವಕಾಶ ಇದ್ದರೂ ಬಹುಕೋಟಿ ವೆಚ್ಚದಿಂದ ಸಿನಿಮಾ ತಯಾರಿ ನಡೆದಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಥಿಯೇಟರ್ನವರಿಗೂ ಒಂದು ಕೋರಿಕೆಯನ್ನು ಮುಂದಿಟ್ಟ ಉಮಾಪತಿ ಅವರು,
ಚಿತ್ರಮಂದಿರದಲ್ಲಿ ವ್ಯವಸ್ಥೆ ಹಾಗೂ ಈ ಕೊರೋನ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸ್ಯಾನಿಟೈಸರ್ ಥರ್ಮಲ್ ಸ್ಕ್ರೀನಿಂಗ್ ಮತ್ತು ಶುಚಿತ್ವವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ, ಜನರು ಹೆಚ್ಚಾಗಿ ಮಾಲ್ಗಳಿಗೆ ಬಂದು ಸಿನಿಮಾ ನೋಡಿ ಖುಷಿ ಪಡುತ್ತಾರೆ ಎಂದು ಅಭಿಪ್ರಾಯಪಟ್ಟರು.