ದಬ್ಬಾಳಿಕೆಯನ್ನು ದೀವಾಳಿ ಮಾಡಿ ಸ್ವಾಭಿಮಾನದಿಂದ ಗೆದ್ದ ಕೊಡ್ಲಾಡಿಯ ನಾಯಕ ಪ್ರವೀಣ್ ಕುಮಾರ್ ಶೆಟ್ಟಿ : heggaddesamachar

Spread the love

ಕೊಡ್ಲಾಡಿಯನ್ನು ಕೈ ಹಿಡಿದು ಮುನ್ನಡೆಸಲು ತೃತೀಯ ಬಾರಿಗೆ ಮುನ್ನಡೆಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಧೀಮಂತ ನಾಯಕ ಪ್ರವೀಣ್ ಕುಮಾರ್ ಶೆಟ್ಟಿ.

ಹೌದು… ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಡುವೆ, ದಬ್ಬಾಳಿಕೆ ಎಂಬ ಬಂಡಿಯು ಮುನ್ನುಗಲು ಪ್ರಯತ್ನಿಸುವಾಗ ಸ್ವಾಭಿಮಾನದ ಸೇವೆಯೆಂಬ ಧ್ಯೇಯ ಮಂತ್ರವನ್ನು ಜಪಿಸಿ ಸತತ ಮೂರನೇ ಬಾರಿ ಜಯಭೇರಿಯನ್ನ ಬಾರಿಸಿದ್ದಾರೆ ಪ್ರವೀಣ್ ಶೆಟ್ಟಿ.

ಇದು ಅವರ ಮೂರನೇ ಗೆಲುವಾಗಿರೋದರಿಂದ ಬಿಜೆಪಿ ಪಕ್ಷದ ಸೋಲಿಲ್ಲದ ಸರದಾರ ಇವರು ಎನ್ನುವ ಮಾತುಗಳು ಗ್ರಾಮದ ವ್ಯಾಪ್ತಿಯಲ್ಲಿ ಕೇಳಿಬರುತ್ತಿದ್ದು, ಈ ಹಿಂದೆಯೂ ಅನೇಕ ಜನಪರ ಕಾಳಜಿಯುಕ್ತ ಕಾರ್ಯಕ್ರಮವನ್ನು ಮಾಡಿರುವ ಇವರು ನಮ್ಮ ಗ್ರಾಮದ ಅಭಿವೃದ್ದಿಗೆ ತಕ್ಕುದಾದ ನಾಯಕ ಎಂದು ಕೊಡ್ಲಾಡಿ ಗ್ರಾಮದ ಸ್ಥಳೀಯರಾಗಿರುವ ಅಶ್ವಿತ್ ಶೆಟ್ಟಿ ಕೊಡ್ಲಾಡಿಯವರು ತಿಳಿಸಿದ್ದಾರೆ.

ಸಮಾಜದ ಏಳಿಗೆಗಾಗಿ ಸದಾ ಹವಣಿಸುವ ಶ್ರೇಷ್ಠ ನಾಯಕರು ಗೆದ್ದರೆ ನಿಜಕ್ಕೂ ದೇಶವೊಂದು ಅಭಿವೃದ್ದಿಯೆಡೆಗೆ ಸಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದರಂತೆ ಪ್ರವೀಣ್ ಕುಮಾರ್ ಶೆಟ್ಟಿಯವರ ಮೇಲೆ ಇದೀಗ ಇನ್ನಷ್ಟು ನಿರೀಕ್ಷೆಗಳು ಜಾಸ್ತಿಯಾಗಿದ್ದು, ಜನನಾಯಕ ಜನರ ಸೇವೆಯಲ್ಲಿ ಸದಾ ತನ್ನನ್ನ ತಾನು ತೊಡಗಿಸಿಕೊಳ್ಳಲಿ ಎನ್ನುವುದು ನಮ್ಮ‌ಆಶಯ.

ರಿ: ಹೆಗ್ಗದ್ದೆ ಸಮಾಚಾರ್ .ಕಾಮ್ ಬೆಂಗಳೂರು

Leave a Reply

Your email address will not be published. Required fields are marked *