Cinema (ಸಿನಿಮಾ)

ದಬಾಂಗ್ 3 ಸಿನಿಮಾ ವಿಮರ್ಶೆ : heggaddesamachar.com

Spread the love

ಸಂದೀಪ್ ಶೆಟ್ಟಿ ಹೆಗ್ಗದ್ದೆ

ಮೊದಲಿಗೆ ಕನ್ನಡದಲ್ಲಿ ಸಲ್ಮಾನ್ ಖಾನ್ ಸಿನಿಮಾ ನೋಡುವಂತಹ ಭಾಗ್ಯ ನಮಗೆ ಸಿಕ್ಕಿತಲ್ಲ ಎಂದು ಖುಷಿಪಡೋಣ, ಆನಂತರ ಈ ಸಿನಿಮಾದಲ್ಲಿ ಏನಿದೆ, ಏನಿತ್ತು, ಬಾಲಿವುಡ್ ಮಾಸ್ ಸಿನಿಮಾ ನಮ್ಮ ನೇಟಿವಿಟಿಗೆ ಸೆಟ್ ಆಗತ್ತಾ !? ಇತ್ಯಾದಿಗಳ ಬಗ್ಗೆ ಚರ್ಚಿಸೋಣ…
ಇದೊಂದು ಕಮರ್ಷಿಯಲ್ ಚಿತ್ರ. ಬಹುತೇಕ ಇತ್ತೀಚಿನ ಸಲ್ಮಾನ್ ಖಾನ್ ಅವರ ಎಲ್ಲಾ ಸಿನಿಮಾಗಳು ಹೇಗೆ ವಕ್ರ ಪ್ಲಸ್ ಫನ್ನಿ ಎನಿಸುತ್ತೊ ಇದು ಕೂಡ ಹಾಗೆ ಇದೆ. ಹೇಳಲಾರದ್ದು ಎನಿಲ್ಲ, ಹೇಳಿಕೊಳ್ಳುವಂತದ್ದೂ ಏನಿಲ್ಲ. ಲಾಜಿಕ್ ಹುಡುಕದೆ ನೋಡಿದರೆ ರಂಜಿಸದೆ ಬಿಡುವುದಿಲ್ಲ.
ನನ್ನ ಪ್ರಕಾರ ಸುದೀಪ್ ಡಿಡ್ ಬೆಸ್ಟ್ ಆ್ಯಕ್ಟಿಂಗ್ ಇನ್ ದಿಸ್ ಮೂವಿ, ಸುದೀಪ್ ಈಸ್ ಫಸ್ಟ್, ಸಲ್ಮಾನ್ ಈಸ್ ನೆಕ್ಸ್ಟ್ ಬಿಕಾಸ್ ಲಾಜಿಕ್ ಇಲ್ಲದ ಸಿನಿಮಾನ ನಮ್ಮ ಕನ್ನಡದ ಮಂದಿ ಅಷ್ಟಾಗಿ ಒಪ್ಪಿಕೊಳ್ಳುವುದಿಲ್ಲ ಅಫ್ ಕೋರ್ಸ್ ಇದು ಎಂಟರ್ ಟೈನ್ ಮೆಂಟ್ ಫಿಲಂ.
ಸುದೀಪ್ ಎಂತಹದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇಲ್ಲೂ ಕೂಡ ಅವರ ಸ್ಟೈಲ್, ಲುಕ್, ಆ್ಯಟಿಟ್ಯೂಡ್, ಸ್ಟಂಟ್ ಎಲ್ಲವೂ ಸಖತ್ ಎನಿಸುತ್ತೆ. ಸಲ್ಮಾನ್ ಎದುರು ನಿಲ್ಲಬಹುದಾದ ಖಡಕ್ ವಿಲನ್ ಅವರು ಎನ್ನುವುದನ್ನ ಸಾಭಿತುಪಡಿಸಿದ್ದಾರೆ.

ನೀವು ದಬಾಂಗ್ 1 ಮತ್ತು 2 ನ್ನು ನೋಡಿದ್ದರೆ ನಿಮಗೆ ಅಲ್ಲಿ ವಿಚಿತ್ರ ಮ್ಯಾನರಿಸಂನ ಚುಲ್ ಬುಲ್ ಪಾಂಡೆ ಸಿಕ್ಕಿರುತ್ತಾರೆ, ಇಲ್ಲೂ ಕೂಡ ಸಲ್ಮಾನ್‍ರ ಅದೇ ಮ್ಯಾನರಿಸಂ ಕಂಟಿನ್ಯೂ ಆಗಿದೆ. ಕಥೆ ಕೂಡ ಹಿಂದಿನ ಎರಡು ಚಿತ್ರಗಳ ಹಿಂದಕ್ಕೆ ಹೋಗಿ ಚುಲ್ ಬುಲ್ ಪಾಂಡೆ ಹೇಗಿದ್ದಿದ್ದ!? ಹೇಗಾದ!? ಎನ್ನುವುದನ್ನೂ ತೋರಿಸುತ್ತದೆ.

ಚಿತ್ರದ ಅನೇಕ ಕಡೆಯಲ್ಲಿ ಲಾಜಿಕ್ ಇಲ್ಲ. ಅದು ಹೋದಂತೆ ನೀವು ಗ್ರಹಿಸಿಕೊಳ್ಳಬೇಕು, ಹಾಡುಗಳೂ ಕೂಡ ಸರಿಸಾಟಿಯಾಯ್ತು ಅಂತ ಅಷ್ಟಾಗಿ ಅನಿಸುವುದಿಲ್ಲ. ಆದರೆ ಸಲ್ಮಾನ್ ಮತ್ತು ಸುದೀಪ್ ಇಬ್ಬರ ಡೈಲಾಗ್ ಗಳು, ಗಾದೆ ಮಾತುಗಳ ಬಳಕೆಗಳು, ಹೌದು ಹುಲಿಯಾ! ಎನ್ನುವ ಇತ್ತಿಚಿನ ಟ್ರೆಂಡಿಂಗ್ ಮಾತುಗಳು ಅರೇ ಅಪ್ಪಟ ಕನ್ನಡದ ಸಿನಿಮಾನೇ ಕೊಟ್ರಲ್ಲ ಎಂದೆಳುತ್ತವೆ.
ಬಾಲಿವುಡ್ ಮಂದಿಗೆ ಈ ಸಿನಿಮಾ ಇಷ್ಟವಾಗುತ್ತೆ ಕಾರಣ ಅಲ್ಲಿ ಚುಲ್ ಬುಲ್ ಪಾಂಡೆಯ ಮನರಂಜನೆಯನ್ನ ಮಾತ್ರಾ ಜನ ಓರೆಗೆ ಹಚ್ಚಿಕೊಂಡು ನೋಡುತ್ತಾರೆ. ಆ ರೀತಿ ನೋಡಿದವರಿಗೆ ಈ ಸಿನಿಮಾ ಮಸ್ತ್.
ಚುಲ್ ಬುಲ್ ಗೆ ಸೋನಾಕ್ಷಿಗೂ ಮುನ್ನ ಒಬ್ಬಳು ಲವರ್ ಇರುತ್ತಾಳೆ, ಹಾಗಾದರೆ ಅವಳ್ಯಾರು!? ಅವಳೇನಾದಳು!? ಬಾಲಿಸಿಂಗ್ ಯಾರು!? ಆತನಿಗ್ಯಾಕೆ ಚುಲ್ ಬುಲ್ ಪಾಂಡೆಯ ಮೇಲೆ ದ್ವೇಷ, ಹೇಗೆ ಹೀರೋ- ವಿಲನ್ ಕಾದಾಟಕ್ಕೆ ಇಳಿತಾರೆ ಇವೆಲ್ಲ ಕಥೆಯ ಒಳಾಂಶ.

ಕೊನೆಯಾದಾಗಿ ಒಂದು ಮಾತು; ಕನ್ನಡಕ್ಕೆ ಎಷ್ಟು ಬೇಕೋ ಅಷ್ಟೂ ಪ್ರಯತ್ನವನ್ನ ಹಾಕಿ ಡಬ್ ಮಾಡಿ ಚಿತ್ರವನ್ನ ಚಿತ್ರತಂಡ ನಿಮ್ಮ ಮುಂದಿಟ್ಟಿದೆ. ಮಿಸ್ಟೇಕ್ಸ್ ಗಳು ಇರಬಹುದು ಆದರೆ ಮಾಸ್ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗುವಂತಿದೆ. ಅದು ಬೇಕು ಇದು ಬೇಕು ಎಂದು ಹೋದರೆ ಕಷ್ಟವಾದೀತು. ಅದಿಲ್ಲಿ ಬೇಕಿತ್ತಾ ಎಂದುಕೊಂಡರೆ ಅಭಾಸವಾಗಬಹುದು, ಮನರಂಜನೆ ಮಾತ್ರಾ ತಲೆಯಲ್ಲಿಟ್ಟುಕೊಂಡು ಹೋದರೆ ಸಂಪೂರ್ಣ ಮನರಂಜನೆ ನಿಮ್ಮದಾಗಬಹುದು.

Leave a Reply

Your email address will not be published. Required fields are marked *