News (ಸುದ್ದಿ)
ತೈಲ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ: heggaddesamachar

ತೈಲ ಬೆಲೆ ಏರಿಕೆ ಖಂಡಿಸಿ ಪ್ರೋಟೆಸ್ಟ್. ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸರ್ಕಾರದ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ.
ಕೊರೊನಾ ಹಿನ್ನಲೆ ಜನ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಸರ್ಕಾರ ತೈಲ ಬೆಲೆ ಏರಿಕೆ ಮಾಡಿದೆ. ತೈಲ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ದಿನ ನಿತ್ಯದ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಕೂಲಿ ಕಾರ್ಮಿಕರು,ತರಕಾರಿ ಬೆಳೆಗಾರರು,ದಿನ ನಿತ್ಯ ದ್ವಿಚಕ್ರ,ಗೂಡ್ಸ್ ಆಟೋಗಳನ್ನ ನಂಬಿ ಜೀವನ ನಿರ್ವಹಣೆ ಮಾಡ್ತೀದ್ದಾರೆ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಗದಾ ಪ್ರಹಾರ ಮಾಡುತ್ತಿದೆ. ಆದ್ದರಿಂದ ತೈಲ ಬೆಲೆಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಬೇಕು. ವೇದಿಕೆ ಮುಖಂಡ ನಾಲಾಬೀದಿ ರವಿ ಹೇಳಿಕೆ. ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಬೋಗಾದಿ ಸಿದ್ದೇಗೌಡ,ಗುರುಬಸಪ್ಪ,ಪ್ಯಾಲೇಸ್ ಬಾಬು,ಗೋಪಿ,ಪರಿಸರಚಂದ್ರ ,ಮದನ್,ಬೀಡಾಬಾಬು,ಸೇರಿದಂತೆ ಇತರರು ಭಾಗಿ.
