Cinema (ಸಿನಿಮಾ)
ತೆರೆ ಮೇಲೆ ಒಡೆಯನ ದರ್ಬಾರ್ ಯಾವಾಗ ಗೊತ್ತಾ!?: Heggadde Samachar.com

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಹೈಪ್ ಎಬ್ಬಿಸಿರುವ ಸಿನಿಮಾ. ಈಗಾಗಲೇ ಟೀಸರ್ ಮತ್ತು ಲಿರಿಕಲ್ ಹಾಡುಗಳಿಂದ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕುಳಿತಿರುವ ಈ ಚಿತ್ರ ಅಭಿಮಾನಿಗಳಿಗೆ ಒಂದೊಂದೆ ಖುಷಿಯನ್ನ ನೀಡುತ್ತಿದೆ.

ಸದ್ಯಕ್ಕೆ ಚಿತ್ರ ತಂಡದಿಂದ ಇದೀಗ ಸಿಹಿಸುದ್ದಿ ಹೊರಬಿದ್ದಿದ್ದು, ಡಿಸೆಂಬರ್ ೧ ಕ್ಕೆ ಟ್ರೈಲರದ ಬಿಡುಗಡೆಯಾಗುವುದು ಪಕ್ಕಾ ಎನ್ನಲಾಗಿದೆ. ಅಂದಹಾಗೆ ಇದೀಗ ಚಿತ್ರ ಸೆನ್ಸಾರ್ ಮೆಟ್ಟಿಲಲ್ಲಿದ್ದು ಅದು ಮುಗಿದ ಬಳಿಕವೇ ರಿಲೀಸ್ ಡೇಟ್ ಫಿಕ್ಸ್ ಆಗಲಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಎಂ.ಡಿ ಶ್ರೀಧರ್ , ಚಿತ್ರ ಡಿಸೆಂಬರ್ ೧೨ಕ್ಕೆ ಬಿಡುಗಡೆ ಮಾಡಬೇಕು ಅಂತ ನಾವು ಅಂದುಕೊಂಡಿದ್ದರೂ ಸೆನ್ಸಾರ್ ಲೇಟ್ ಆದರೆ ಬಿಡುಗಡೆ ದಿನಾಂಕವೂ ಮುಂದೆ ಹೋಗಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಬಿಡುಗಡೆ ಲೇಟದರೇನಂತೆ ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್ ಮಾತ್ರಾ ಡಿ.೧ ಕ್ಕೆ ಬಿಡುಗಡೆ ಪಕ್ಕಾ… ಅಭಿಮಾನಿಗಳೇ ಈ ಬಗ್ಗೆ ನಿಮ್ಮ ಅನಿಸಿಕೆ ಏನು ಕಮೆಂಟ್ ಬರೆದು ತಿಳಿಸಿ…
Wow…
Jai D boss