ತೆಂಗಿನ ತೋಟಕ್ಕೆ ಅನುಮಾನಾಸ್ಫದ ಬೆಂಕಿ-ರೈತ ಮಹಿಳೆಯ ಗೋಳಾಟ : heggaddesamachar.com

“5 ವರ್ಷದಿಂದ ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ 30 ತೆಂಗಿನ ಮರಗಳು ಮತ್ತು 20 ಸಸಿಗಳು ಅನುಮಾನಸ್ಪದವಾಗಿ ಬೆಂಕಿಗೆ ಹಾವುತಿ …ಸೂಕ್ತ ಪರಿಹಾರಕ್ಕಾಗಿ ಸಚಿವ ನಾರಾಯಣಗೌಡರಿಗೆ ಮಧ್ಯಮ ಮುಖಾಂತರ ಅಂಗಲಾಚಿ ಬೇಡಿದ ರೈತ ಮಹಿಳೆ ನಂಜಮ್ಮ”
ಕೆ ಆರ್ ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲ ಹೊಸೂರು ಗ್ರಾಮದ ನಂಜಮ್ಮ ಲೇಟ್ ದೊಡ್ಡೇಗೌಡ ಮಗನಾದ ಕುಮಾರಸ್ವಾಮಿ ರವರಿಗೆ ಸೇರಿದ 60/30 ಮತ್ತು 68/2 ಸೇರಿದ ಸರ್ವೇ ನಂಬರ್ ಜಮೀನಿನಲ್ಲಿ ಕಬ್ಬು ಪಸಲನ್ನು ಬೆಳೆದು ಕಳೆದ ವಾರದಲ್ಲಿ ಕಟಾವು ಮಾಡಿಸಿದ್ದು ಕಬ್ಬಿನ ತರಗು ಇದ್ದಕಾರಣ ಅನುಮಾನಸ್ಪದವಾಗಿ ಬೆಂಕಿ ತಗಲಿರುವ ಹಿನ್ನೆಲೆಯಲ್ಲಿ 50ಕ್ಕು ಹೆಚ್ಚು ತೆಂಗಿನ ಮರಗಳು ರಕ್ಕಸ ಬೆಂಕಿಗಾಹುತಿಯಾಗಿದೆ ಮತ್ತು ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ ಎಂದು ರೈತ ಕುಮಾರಸ್ವಾಮಿ ಅವರವರು ಘಟನೆ ಕುರಿತು ಮಾತನಾಡಿದರು ….
ನೀರಿಲ್ಲದೆ ಮೂರು ನಾಲ್ಕು ಕೊಳವೆ ಬಾವಿ ತೆಗೆಸಿ ನೀರು ಬರದೆ ಸಾಲಸೋಲ ಮಾಡಿ ಮತ್ತೊಂದು ಕೊಳವೆ ಬಾವಿ ಕೊರೆಸಿ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆವರು ಸುರಿಸಿ ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ್ದ ತೆಂಗಿನ ಮರಗಳು ಸುಟ್ಟು ಕರಕಲಾಗಿದೆ ಇದು ನಮ್ಮ ಜೀವನದಲ್ಲಿ ಮರೆಯಲಾಗದ ನೋವು ದಯಮಾಡಿ ನಮ್ಮ ಕ್ಷೇತ್ರದ ಶಾಸಕರು ಮತ್ತು ತೋಟಗಾರಿಕೆ ಸಚಿವರಾದ ಕೆಸಿ ನಾರಾಯಣಗೌಡರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯನ್ನು ಪರಿಗಣಿಸಿ ಸೂಕ್ತ ಪರಿಹಾರ ಕೊಡಿಸಿ ನಿಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಿ ಯಂದು ಮಾಧ್ಯಮ ಮುಖಾಂತರ ಅಂಗಲಾಚಿ ಬೇಡಿಕೊಂಡ ತಮ್ಮ ಅಳಲು ತೋಡಿಕೊಂಡ ರೈತ ಮಹಿಳೆ ನಂಜಮ್ಮ….