News (ಸುದ್ದಿ)

ತಿರುಪತಿ ದೇಗುಲ ಓಪನ್ – ಇಂದಿನಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ: heggaddesamachar

Spread the love

ಕೊರೋನಾ ಲಾಕ್​ಡೌನ್​​ನಿಂದ ಬಂದ್​ ಆಗಿದ್ದ ತಿರುಪತಿ ತಿಮ್ಮಪ್ಪನ ದೇಗುಲ ಓಪನ್.

ಸಾರ್ವಜನಿಕರ ದರ್ಶನಕ್ಕೆ ಇಂದಿನಿಂದ ಅವಕಾಶ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆಂಧ್ರಪ್ರದೇಶ ಸರ್ಕಾರದ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ನಡುವೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ.

ದಿನಕ್ಕೆ 6 ಸಾವಿರ ಭಕ್ತರಿಗೆ ಅವಕಾಶ. ಕೇಂದ್ರದ ಮಾರ್ಗಸೂಚಿಯ ಪ್ರಕಾರ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ದರ್ಶನಕ್ಕೆ ಅವಕಾಶ ಇಲ್ಲ .

ದರ್ಶನಕ್ಕಾಗಿ ಈಗಾಗಲೇ ಆನ್​​ಲೈನ್ ಮೂಲಕ 3 ಸಾವಿರ ಜನರಿಗೆ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ 3 ಸಾವಿರ ಟಿಕೆಟ್​ಗಳನ್ನು ತಿರುಪತಿಯ ಅಲಿಪಿರಿ ಕೌಂಟರ್​ನಲ್ಲಿ ಕೊಡಲಾಗುತ್ತಿದೆ.

ತಿಮ್ಮಪ್ಪನನ್ನ ಕಣ್ತುಂಬಿಕೊಳ್ಳಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

Leave a Reply

Your email address will not be published. Required fields are marked *