News (ಸುದ್ದಿ)
ತಾಯಿ ಸಾವಿನ ನೋವಲ್ಲಿಯೂ ಪರೀಕ್ಷೆ ಬರೆದ ವಿದ್ಯಾರ್ಥಿನಿ: heggaddesamachar

ತಾಯಿ ಸಾವಿನ ನೋವಲ್ಲಿಯೂ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ.
ಮೈಸೂರಿನ ರೂಪಾನಗರದಲ್ಲಿರುವ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯಲ್ಲಿ ದೀಪ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿತ್ತಾಳೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿ ತಾಯಿ ಲಕ್ಷ್ಮಮ್ಮ ನಿನ್ನೆಯಷ್ಟೇ
ಸಾವನ್ನಪ್ಪಿದರು.
ಮೈಸೂರು ತಾಲೂಕು ಬಿರಿಹುಂಡಿ ಗ್ರಾಮದ ನಿವಾಸಿ. ತಾಯಿ ಸಾವಿನಲ್ಲಿ ಪರೀಕ್ಷೆ ಬರೆಯಲು ಹಿಂದೆಟು ಹಾಕಿದ ವಿದ್ಯಾರ್ಥಿನಿಗೆ ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ ಎಂಬುವವರು ಯುವತಿಗೆ ಧೈರ್ಯ ತುಂಬಿ ತನ್ನ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಟ್ಟಿದ್ದಾರೆ.ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿದ್ದಾಳೆ. ಪರೀಕ್ಷೆ ಬರೆದ ಬಳಿಕ ಯುವತಿ ಶವ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.
