News (ಸುದ್ದಿ)

ಡಿ.ಕೆ.ಶಿವಕುಮಾರ್ ಹುಟ್ಟು ಹಬ್ಬ – ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಹಣ್ಣು ಹಂಪಲು ವಿತರಣೆ: heggaddesamachar.com

Spread the love

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಮೈಸೂರಿನ ಸುತ್ತ ಮುತ್ತ ಇರುವ ಅನಾಥಾಶ್ರಮ,ವೃದ್ಧಶ್ರಮದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಹರೀಶ್ ಗೌಡರು ಮಾತನಾಡಿ ಡಿಕೆ ಶಿವಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಹಣ್ಣು ಹಂಪಲು ಬ್ರೇಡ್ ವಿತರಿಸಲಾಗಿದೆ.ಈ ಶಾಲೆ ನಡೆಸುತ್ತಿರುವ ಪಾಲಿಕೆ ಸದಸ್ಯ ಮಾವಿ ರಾಮ್ ಪ್ರಸಾದ್ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಅಶೋಕ್ ಮಾತನಾಡಿ ಕೆಪಿಸಿಸಿ ಆಧ್ಯಕ್ಷರು,ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಕೆ.ಆರ್,ಕ್ಷೇತ್ರ,ಚಾಮರಾಜ ಕ್ಷೇತ್ರ, ಎನ್.ಆರ್.ಕ್ಷೇತ್ರದ ಸುತ್ತಾಮುತ್ತಾ ಇರುವ ಜೆ ಎಸ್ ಎಸ್ ವೃದ್ದಶ್ರಮ,ಭಾರತೀ ವೃದ್ದಶ್ರಮ,ಕರುಣಮಯಿ ಟ್ರಸ್ಟ್, ಬಾಪೂಜಿ ಚಿಲ್ಡ್ರನ್ ಟ್ರಸ್ಟ್, ವಿಮಲ್ ಟ್ರಸ್ಟ್, ಮಕ್ಕಳ ಮನೆ,ಅರುಣೋದಯ ವಿಶೇಷ ಮಕ್ಕಳ ಶಾಲೆ,ಅಂಗವಿಕಲ,ಬುದ್ದಿಮಾಂಧ್ಯ ಮಕ್ಕಳ ಆಶ್ರಮಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸಲಾಗಿದೆ.ಡಿ ಕೆ ಶಿವಕುಮಾರ್ ರವರಿಗೆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕರುಣಿಸಲಿ.ಹಾಗೇಯೇ ಮುಂದಿನ ದಿನಗಳಲ್ಲಿ ಸಿಎಂ ಆಗಿ ಅಧಿಕಾರ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Leave a Reply

Your email address will not be published. Required fields are marked *