News (ಸುದ್ದಿ)

ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ – ಜೂನ್ 7 ಕ್ಕೆ ಪದಗ್ರಹಣ: heggaddesamachar

Spread the love

ಜೂನ್ 7 ರಂದು ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ಪದಗ್ರಹಣ ಹಿನ್ನಲೆ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ ನಡೆಯಿತು.

ಮೈಸೂರಿನ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಜೂನ್ 7 ರಂದು ನಡೆಯಲಿದೆ.ಕೊರೊನಾ ಭೀತಿ ಹಿನ್ನಲೆ ಕಾಂಗ್ರೆಸ್ ಪಕ್ಷದ ನಾಯಕರು,ಮುಖಂಡರು,ಕಾರ್ಯಕರ್ತರು ಪದಗ್ರಹಣ ಕಾರ್ಯಕ್ರಮಕ್ಕೆ ಭಾಗವಹಿಸಲು ಸಾಧ್ಯವಾಗದ ಕಾರಣ
ಮೈಸೂರಿನಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತದೆ.ಮೈಸೂರಿನ 65 ವಾರ್ಡ್ ನಲ್ಲಿ ಎಲ್.ಇ.ಡಿ. ವಾಲ್ ಅಳವಡಿಸಲು ಚಿಂತನೆ ನಡೆಸಲಾಗುತ್ತದೆ ಎಂದರು.

ಪೂರ್ವ ಭಾವಿ ಸಭೆಯಲ್ಲಿ ನಗರ ಅಧ್ಯಕ್ಷ ಮೂರ್ತಿ, ಪಾಲಿಕೆ ಸದಸ್ಯರುಗಳಾದ ಲೋಕೇಶ್ ಪಿಯಾ,ಜೆ ಗೋಪಿ,ಮಾಜಿ ನಗರಾಧ್ಯಕ್ಷರಾದ ಟಿ ಎಸ್ ರವಿಶಂಕರ್ ,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಕೆಪಿಸಿಸಿ ಸದಸ್ಯರಾದ ಭಾಸ್ಕರ್ ,ವೀಣಾ, ಶ್ರೀನಾಥ್ ಬಾಬು, ಬ್ಲಾಕ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್ ,ಶ್ರೀಧರ್,ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಎಂ ಕೆ ಅಶೋಕ್, ಯುವಕಾಂಗ್ರೆಸ್ ಅಧ್ಯಕ್ಷರಾದ ಮನೋಜ್, ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್, ಎಂ ಸಿ ಚಿಕ್ಕಣ್ಣ,ಓಬಿಸಿ ಅಧ್ಯಕ್ಷ ಶಿವಮಲ್ಲು,ಸೇವಾದಳ ಗಿರೀಶ್ , ಐಟಿ ಸೆಲ್ ನಿರಾಲ್,ಡೈರಿ ವೆಂಕಟೇಶ್,ಡಾ.ಸುಜಾತ ರಾವ್,ನಾಗರತ್ನ,ಮಂಜುಳಾ ಹಾಗೂ ಕೆಆರ್ ಕ್ಷೇತ್ರದ ಎಲ್ಲಾ ವಾರ್ಡಿನ ಅಧ್ಯಕ್ಷರುಗಳು,ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *