News (ಸುದ್ದಿ)
ಡಾ.ಯತೀಂದ್ರ ಸಿದ್ಧರಾಮಯ್ಯನವರಿಂದ 2000 ಆಹಾರ ಕಿಟ್ ವಿತರಣೆ: heggaddesamachar.com

ಮೈಸೂರು: ವರುಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರವರ ನೇತೃತ್ವದಲ್ಲಿ ವಾರ್ಡ್ ನಂ.44 ರಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.
ಮೈಸೂರಿನ ಜನತಾನಗರದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರವರು ಆಹಾರ ಕಿಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ ಮಾತನಾಡಿ ಮಹಾಮಾರಿ ಕೊರೋನಾದಿಂದ ಜನರು ಸಂಕಷ್ಟದಲ್ಲಿದ್ದಾರೆ.ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ವಾರ್ಡ್ ನಂ.44 ರ ಜನತಾನಗರದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯರವರ ನೇತೃತ್ವದಲ್ಲಿ 2 ಸಾವಿರ ಆಹಾರ ಕಿಟ್ ವಿತರಿಸಿದ್ದೇವೆ.ಆದಷ್ಟು ಬೇಗ ದೇಶದಲ್ಲಿ ಕೊರೊನಾ ಮುಕ್ತವಾಗಲಿ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್,ಪಾಲಿಕೆ ಸದಸ್ಯ ಗೋಪಿ,ಟಿಬಿ ಚಿಕ್ಕಣ್ಣ ಸೇರಿದಂತೆ ಇತರರು ಭಾಗಿಯಾಗಿದ್ದರು.