News (ಸುದ್ದಿ)

ಟೌನ್ ಹಾಲ್ ಗೆ ಬನ್ನಿ ಪ್ರತಿಭಟಿಸೋಣ: ಪಟ್ಲ ಅಭಿಮಾನಿಗಳ ಕರೆ

Spread the love

ಮೊನ್ನೆ ಮೊನ್ನೆ ರಂಘಸ್ಥಳದಲ್ಲಿ ಪಟ್ಲ ಭಾಗವತರಿಗಾದ ಅನ್ಯಾಯದ ವಿರುದ್ದ ಇದೀಗ ಮಹಾನಗರದಲ್ಲೂ ಪ್ರತಿಭಟಿಸಲು ಪಟ್ಲ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಇದು ಕೇವಲ ಪಟ್ಲರಿಗೆ ಮಾತ್ರವಲ್ಲ ಅದು ಕಲೆಗೆ, ಕಲಾವಿದರೆಲ್ಲರಿಗೆ ಅಷ್ಟೇ ಅಲ್ಲದೆ ಕಟೀಲು ಭ್ರಮರಾಂಬೆಯ ಸಾನ್ನಿಧ್ಯಕ್ಕೂ ಮಾಡಿದ ಅವಮಾನ ಹಾಗಾಗಿ ಬೆಂಗಳೂರಿನಲ್ಲಿ ದಿನಾಂಕ ೨೮ ರ ಗುರುವಾರ ನಾವೆಲ್ಲರೂ ಪ್ರತಿಭಟಿಸಲಿದ್ದೇವೆ. ನೀವೆಲ್ಲರೂ ಜೊತೆಯಾಗಿ ಎಂದು ಸತೀಶ್ ಅವರ ಅಭಿಮಾನಿಗಳು ತಿಳಿಸಿದ್ದಾರೆ.

ಕೇವಲ ಕರಾವಳಿಯವರು ಮಾತ್ರವೇ ಅಲ್ಲ. ಸಮಸ್ತ ಕಾಲಾಭಿಮಾನಿಗಳೂ ಇದರಲ್ಲಿ ಪಾಲ್ಗೊಳ್ಳುವರು, ಸಾಹಿತಿಗಳು, ಸಿನಿಮಾ ನಟರು ಹೀಗೆ ಕಲಾಮಾತೆಯ ಮಕ್ಕಳೆಲ್ಲರೂ ಒಂದಾಗಿ ಸಾಂಕೇತಿಕವಾಗಿ ಪ್ರತಿಭಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ಇದು, ಇತರ ಎಲ್ಲಾ ’ಬ್ರಹತ್ ಪ್ರತಿಭಟನೆ’ ಎಂಬ ಮಾದರಿಯಲ್ಲ!
ಜಾತಿ, ಭಾಷೆ,ಧರ್ಮ, ರಾಜಕೀಯ ಯಾವ ಲೇಬಲ್ಲೂ ಇಲ್ಲ. ಅನ್ಯಾಯದ ವಿರುದ್ದ ನಾವು ಧ್ವನಿಯಾಗುತ್ತಿದ್ದೇವೆ. ಇಲ್ಲಿ ಗುರಿಯೊಂದೇ ನಾಯಕ. ಪಟ್ಲ ಸತೀಶ್ ಶೆಟ್ಟರಿಗೆ ನ್ಯಾಯ ಸಿಗಬೇಕು ಎನ್ನುವುದೇ ನಮ್ಮ ಒಕ್ಕೊರಲ ಧ್ವನಿ. ಒಂದಿನಿತು ಬಿಡುವು ಮಾಡಿಕೊಂಡು ನಮ್ಮ ಜೊತೆ ತುಸುಹೊತ್ತು ನ್ಯಾಯದ ಕೂಗಿಗೆ ನೀವೂ ಧ್ವನಿಯಾಗಬೇಕು ಎಲ್ಲರೂ ಬನ್ನಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಪಟ್ಲ ಅಭಿಮಾನಿಗಳು ಎಲ್ಲರಿಗೂ ಸ್ವಾಗತ ಕೊರಿದ್ದಾರೆ‌

ಟೌನ್ ಹಾಲ್ ಗೆ ಬನ್ನಿ
ನಾವೆಲ್ಲ ಅಲ್ಲಿದ್ದೇವೆ ಎಂದು
1) ಸತೀಶ್ ಪಟ್ಲ ಅಭಿಮಾನಿಗಳು ಬೆಂಗಳೂರು
2) ಜೈ ಭಾರ್ಗವ ಬಳಗ
3) ಜಾಗೃತ ಬಿಲ್ಲವ ವೇದಿಕೆ ಬೆಂಗಳೂರು
4) ಟೀಮ್ ಅಭಿಮತ
5) ಅಭಯ್ ಕ್ರಿಕೇಟರ್ಸ್ ಬೆಂಗಳೂರು
6) ಟೀಮ್ ಯಕ್ಷ ವೃಕ್ಷ ಬೆಂಗಳೂರು
7) ಕರಾವಳಿ ಮಿತ್ರ ಬಳಗ ಬೆಂಗಳೂರು
? ಸಿರಿಕಲಾ ಮೇಳಬೆಂಗಳೂರು
9) ಹೊಸಂಗಡಿ ಅಭಿಮಾನಿ ಬಳಗ ಬೆಂಗಳೂರು
10) ಯಕ್ಷ ಸಂಕ್ರಾಂತಿ ಮಿತ್ರರು ಬೆಂಗಳೂರು
11) ಯಕ್ಷ ಸಂಘಟಕ ಮಿತ್ರರು ಬೆಂಗಳೂರು
12) ಕಲಾಕ್ಷೇತ್ರ ಮಿತ್ರ ಬಳಗ ಬೆಂಗಳೂರು
13) ರಾಷ್ಟ್ರೀಯ ಶ್ರಮಿಕರ ಸಂಘಟನೆ.
14) ಮಲ್ನಾಡ್ ಮಿತ್ರ ಬಳಗ, ಬೆಂಗಳೂರು
ಮುಂತಾದ ತಂಡಗಳು ಕರೆಕೊಟ್ಟಿವೆ…

Leave a Reply

Your email address will not be published. Required fields are marked *