Literature (ಸಾಹಿತ್ಯ)

ಜೋಗ ಧುಮ್ಮಿಕ್ಕುವ ದ್ರಶ್ಯಕಾವ್ಯ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಪ್ರಕೃತಿಯ ನೈಜ ಸೌಂದರ್ಯಕ್ಕೆ ಅಗ್ರತಾಣವಾದ ಪಶ್ಚಿಮ ಘಟ್ಟಗಳ ಸಾಲುಗಳ ನಡುವೆ ನಿಸರ್ಗದ ಮಡಿಲಲ್ಲಿ ಬೆಟ್ಟಗಳ ಸಾಲು ಮಾರ್ಗದುದ್ದಕ್ಕೂ ಮುಗಿಲುಚುಂಬಿಸುವ ದಟ್ಟ ಹಸಿರು ಕಾನನದ ಪ್ರಶಾಂತ ವಾತಾವರಣ ಹಾಗೂ ಹಕ್ಕಿಗಳ‌ ಚಿಲಿಪಿಲಿ ಕಲರವ, ಪ್ರಕ್ರತಿ ಸೌಂದರ್ಯದ ಖನಿ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ ದಲ್ಲಿ ಜನ್ಮತಾಳುವ ಶರಾವತಿ ನದಿ ರಭಸದಿಂದ‌ಹರಿದು ಜೋಗದಲ್ಲಿ ಧುಮ್ಮಿಕ್ಕುತ್ತಾಳೆ. ಅದೇ ವಿಶ್ವ ವಿಖ್ಯಾತ‌ ಜೋಗಜಲಪಾತ.

ಭೋರ್ಗರೆಯತ್ತಾ ಹಾಲ್ನೋರೆಯುಕಿಸುತ್ತಾ ವೈಯ್ಯಾರದೊಂದಿಗೆ ರೌದ್ರತೆಯನ್ನು ತೋರುವ ಸೌಂದರ್ಯ ವರ್ಣನಾತೀತ. ಧರೆಗಿಳಿವ ದೇವ ವಧುವಿನಂತೆ ಕಂಗೊಳಿಸುವ ದೃಶ್ಯ ವ್ವೈಭವ, ಜಲಪಾತದ ಬೆಳ್ನೊರೆಗಳ ಚೆಲುವಿನ ಚಿತ್ತಾರವನ್ನು ಕಣ್ತುಂಬಿಕೊಳ್ಳುವ ಕಾತರದಲ್ಲಿ ಜೋಗಜಲಪಾತಕ್ಕೆ ಬಂದಾಗ ಇಲ್ಲಿನ ಜಲಧಾರಗಳ ನ್ರತ್ಯ ವ್ಯೆಭವ, ಜಲಪಟಗಳ ಝೇಂಕಾರ, ಪ್ರಾಕೃತಿಕ ಸೌಂದರ್ಯ ಮನಸ್ಸಿಗೆ ಆಹ್ಲಾದ ನೀಡಿತು. ಆಳವಾದ‌ ಕಣಿವೆ, ಸುಂದರವಾಗಿ‌ ಧುಮ್ಮಿಕ್ಕುವ ಜಲಪಾತ ತುಂತುರುಹನಿಗಳ ಸಿಂಚನದೊಂದಿಗೆ‌ಜಲಪಾತದ ಹರ್ಷೊದ್ದಾರಗಳ‌ ವೀಕ್ಷಣೆಗೆ‌ ಪ್ರವಾಸಿಗರ ದಂಡೇ‌ ಜಲಪಾತದತ್ತ‌ ಹರಿದು‌ ಬರುತ್ತದೆ.

ಕೊರೋನಾ ಲಾಕ್ ಡೌನ್ ಘೋಷಣೆ ನಂತರ ಮಾರ್ಚ್ ಕೊನೆಯ‌ವಾರದಿಂದ ಜೋಗದ ಎಲ್ಲಾ ಗೆಟ್ ಗಳಿಗೆ ಬೀಗಹಾಕಿ ಜಲಪಾತ ವೀಕ್ಷಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಜೂನ್ 8 ರಿಂದ ಕೊರೋನ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತ ಜನವೀಕ್ಷಣೆಗೆ ಮುಕ್ತವಾಗಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ವಿವಿಧ ಸಿದ್ಧತೆಯನ್ನು ನಡೆಸಿಪ್ರವಾಸಿಗರ ಆಗಮನದ ಹಿನ್ನೆಲೆಯಲ್ಲಿ ‌ಗೇಟಿನಲ್ಲೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.ಪ್ರವಾಸಿಗರು‌ ಕಡ್ಡಾಯವಾಗಿ ಮಾಸ್ಕಧರಿಸಿ ಭೌತಿಕ ಅಂತರವನ್ನು ಕಾಯ್ದುಕೊಳ್ಳ ಬೇಕು. ಜೋಗಜಲಪಾತ ಸ್ಥಳದಲ್ಲಿ ಊಟ ಉಪಚಾರ ಹಾಗೂ ವಸತಿ ಸೌಲಭ್ಯ ಇರುವುದಿಲ್ಲ, ಕೇವಲ ‌ಜಲಪಾತ ವೀಕ್ಷಣೆಗೆ ಮಾತ್ರ ಅವಕಾಶ ಸದ್ಯಕ್ಕೆಮಾಡಿಕೊಡಲಾಗುತ್ತಿದೆ.

‌ಜೋಗ ಜಲಪಾತದ‌ ಜಲರಾಶಿಯ ಹಾಲ್ನೋರೆಯ ಚಿತ್ತಾರ, ನಿಬ್ಬೆರಗು ಗೊಳಿಸುವ ಮೋಹಕ ನೋಟ ಅನುಪಮ. ಹಸಿರು ಗಿರಿ ಶೃಂಗಗಳ ನಡುವೆ ‌ಬೆಳ್ಳಿರೇಖೆಯಂಥ‌ ಜಲಪಾತ ಮಲೆನಾಡಿನ ಹೆಮ್ಮೆ. ಭಾರತದ ಅತೀ ಎತ್ತರದ ಜಲಪಾತ ವೆಂದರೆ ವಿಶ್ವವಿಖ್ಯಾತ ಜೋಗ ಜಲಪಾತ. ಎತ್ತರದಿಂದ‌ ನೀರು ಭೋರ್ಗರೆಯತ್ತಾ‌ ಧಾರೆ ಧಾರೆ ಯಾಗಿ ಧುಮ್ಮಿಕ್ಕುವ ‌ಜಲಪಾತವನ್ನು‌ ನೋಡುವುದೆಂದರೆ ಎಲ್ಲಾ ‌ವಯೋಮಾನದವರಿಗೂ ಕನಸಿನ ಲೋಕದಲ್ಲಿ ವಿಹರಿಸಿದಂತ ವಾಸ್ತವ ಅನುಭವ.

ಮಾನವನಾಗಿ ಹುಟ್ಟಿದ್ಮೇಲೆ ಏನೇನ್‌ಕಂಡಿ ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ ಹೇರಿಕೊಂಡು ಹೋಗುದಿಲ್ಲ ಸತ್ತಾಗ್ ಬಂಡಿ ಇರೋದ್ರೋಳಗೆ‌ ಒಮ್ಮೆ ನೋಡು ಜೋಗಾದ್ ಗುಂಡಿ ಎಂಬ ‌ಹಾಡು ಜೋಗದ‌ ನೆನಪು ಅಚ್ಚಳಿಯದೆ‌ಉಳಿಯುವಂತೆ ಮಾಡಿದೆ. ಇಲ್ಲಿನ ‌ಜಲಧಾರೆ‌ ವೀಕ್ಷಿಸುವುದೇ‌ ರೋಚಕ‌ ಅನುಭವ. ಮನಮೋಹಕ ಪ್ರಕೃತಿ ಸೌಂದರ್ಯಕ್ಕೆ ಮೆರುಗು ಇಟ್ಟಂತಹ
ಬೆಟ್ಟದ ಸಾಲುಗಳನ್ನು ‌ಸೀಳಿಕೊಂಡು ಹಾಲಿನ ನೊರೆಸುಸುತ್ತಾ‌ ಧರೆಗೆ ಅಪ್ಪಳಿಸುತ್ತಿರುವ ಈ‌ ಜಲಪಾತ ತನ್ನ ಅಂದಚಂದದಿಂದ ದೂರದಿಂದಲೇ ಪ್ರವಾಸಿಗರನ್ನು ಸೆಳೆಯುತ್ತದೆ.

ಹಸಿರು ಕಾನನದಿಂದ ಹರಿದು ಬರುವ ನೀರು ನರ್ತಿಸುತ್ತಾ ಮಳೆ ರಾಯನ ಆಭರ್ಟಕ್ಕೆ ರುದ್ರ ರಮಣೀಯ ವಾದ ಜೋಗ ಮತ್ತೋಮ್ಮೆ ಮೈತುಂಬಿಕೊಂಡು‌ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಕ್ಷರ ದಲ್ಲಿ ವರ್ಣಿಸಲಾಗದು ನೋಡಿಯೇ ಸವಿಯ ಬೇಕಾದುದು. ಜೂನ್ ನಿಂದ ಅಕ್ಟೋಬರ್ ವರೆಗೆ ಜೋಗ ಹೊಸತೊಂದು ಆಯಾಮಕ್ಕೆ ತೆರೆದುಕೊಳ್ಳುತ್ತದೆ . ಜಲಧಾರೆಯ ತುಂತುರು ‌ಹಾಡು ಮಳೆಗಾಲ‌ ಬಂತೆಂದರೆ‌‌ ಪ್ರಕ್ರತಿ ಗೆ ‌ಹಬ್ಬ. ಶಾಶ್ವತವಾಗಿ ಜೋಗ ಜಲಪಾತ ಮನದಾಳದಲ್ಲಿ ಉಳಿಯಬೇಕು ಅಂದರೆ‌ಮಳೆಗಾಲದ ವೀಕ್ಷಣೆ ‌ಸರಿ.

ಶಿವಮೊಗ್ಗದಿಂದ 106 ಕಿ.ಮೀ ಮತ್ತು ಸಾಗರ ದಿಂದ 25 ಕಿ.ಮೀ ದೂರದಲ್ಲಿರುವ ಜೋಗ ಜಲಪಾತದಲ್ಲಿ ನೀರಿನದ್ದೆ ಸಾಮ್ರಾಜ್ಯ. ಅಪೂರ್ವ ಸೌಂದರ್ಯ, ರಮಣೀಯತೆ ,ರೌದ್ರತೆಯನ್ನು ತನ್ನ ‌ಮಡಿಲಲ್ಲಿ‌ ಹುದುಗಿಸಿಕೊಂಡ ಈ‌ ಜಲಪಾತ ನಾಲ್ಕು ಕವಲು ಗಳಾಗಿ ಬೀಳುವ ಜಲಧಾರೆಯನ್ನು “ರಾಜ”. “ರಾಣಿ’ “ರೋರರ್ “ಹಾಗೂ “ರಾಕೆಟ್ “ಎಂದು ನಾಮಾಂಕಿತ ಗೊಳಿಸಿದವರು ಬ್ರಿಟಿಷರು.‌ ಇಲ್ಲಿನ ನಾಲ್ಕು ಧಾರೆಯಲ್ಲಿ‌ ಮೊದಲ ಧಾರೆ “ರಾಜ” ಸ್ಥಳೀಯ ಐತಿಹ್ಯ ವನ್ನು ಆಧರಿಸಿ ‌ಮೊದ ಮೊದಲು ವಿದೇಶಿ ‌ಪ್ರವಾಸಿಗರು ಆ ಧಾರೆಯ ಹಿಂದಿನ ಬಂಡೆಯನ್ನು ಅರಸು ಕಲ್ಲು ಎಂದು ರಾಜಠೀವಿಯಿಂದ ಸುರಿವ ಮೊದಲಧಾರೆಯನ್ನು ರಾಜ ಎಂದೇ ಕರೆದರು ಮತ್ತು ದಾಖಲಿಸಲಾಯಿತು.

ಜೋಗ ಜಲಪಾತ ಆರ್ಭಟಿಸುವ ಸದ್ದು ಬಹು ದೂರದ ವರೆಗೂ‌ಕೇಳುವ ಎರಡು‌ ಬದಿಯ‌ ಕಲ್ಲುಗಳಿಗೆ ಬಡಿದು ಮುನ್ನುಗ್ಗುವ ಧಾರೆ ಕಾರಣವಾದ್ದರಿಂದ ಪ್ರವಾಸಿಗರೇ ಗರ್ಜಿಸುತ್ತಾ ಆರ್ಭಟಿಸುತ್ತಾ ಸಾಗುವ ಧಾರೆಗೆ “ರೋರರ್” ಎಂದು ಹೆಸರಿಸಿದರು. ಇನ್ನೊಂದು ಧಾರೆ ಅತಿ ವೇಗದಲ್ಲಿ ನೀರು ‌ಕೆಳಗೆ ಬಿದಂತೆ ಕಾಣುವುದರಿಂದ ಇದನ್ನು ರಾಕೆಟ್ ಎನ್ನಲು‌ಪ್ರಾರಂಭಿಸಿದರು.ಜಲಪಾತ ತುಂಬಿ ಹರಿವ ಕಾಲದಲ್ಲಿ ಶ್ವೇತವರ್ಣದಲ್ಲಿ ಧರೆಗಿಳಿವ ದೇವ ವಧುವಿನಂತೆ‌ ಕಂಗೊಳಿಸುವ ಕಾರಣ ಫ್ರೆಂಚ್ ಪ್ರವಾಸಿ ಯೊಬ್ಬರು ರಾಣಿ ಧಾರೆಯನ್ನು ಶ್ವೇತ ವಸನದಲ್ಲಿ ಶ್ರಂಗರಿಸಲ್ಪಟ್ಟ ವಧು ಎಂದು ‌ಕರೆದ ಕಾರಣ ಆ ಧಾರೆಗೆ‌ ರಾಣಿ ಯೆಂದು ಕರೆಯಲ್ಪಟ್ಟಿತು.

ಜೋಗ ಜಲಪಾತ ನೀರಿನ ಭೋರ್ಗರೆತದ ಸದ್ದು ಪ್ರತಿಧ್ವನಿಸುತ್ತಾ ಕಿವಿಗೆ ಅಪ್ಪಳಿಸುತ್ತದೆ. ತುಂತುರು ‌ಹನಿಯ ಸಿಂಚನದೊಂದಿಗೆ ನೀರಿನ ಅಬ್ಬರ ಗುಡುಗಿನಂತೆ ಭಾಸವಾಗುತ್ತದೆ. ಈ ಜಲಪಾತವನ್ನು ನಿಂತು ನೋಡಲು ಸ್ಥಳ ವಕಾಶವಿದೆ. ಜೋಗದ‌ಗುಂಡಿಗೆ ಇಳಿಯಲು ಕಲ್ಲಿನಲ್ಲಿ ಕಟ್ಟಿದ 1400 ಮೆಟಿಲುಗಳ ವ್ಯವಸ್ಥೆ ಚನ್ನಾಗಿದೆ. ಬಿರುಗಾಳಿ, ದಟ್ಟ ಮಳೆ ಗಾಲದಲ್ಲಿ ಇಲ್ಲಿಗೆ ತೆರಳುವಾಗ ಎಚ್ಚರಿಕೆಯ ಅಗತ್ಯವಿದೆ. ಇಲ್ಲಿನ ಸಿಂಬದಿಗಳು ನೀಡುವ ಮಾರ್ಗದರ್ಶನ ಪಾಲಿಸ ಬೇಕು. ನಾಲ್ಕು ಸ್ಥಳ ಗಳಿಂದ ವೀಕ್ಷಣೆ ಗೆ ಅವಕಾಶವಿದ್ದು ಪ್ರತಿಯೊಂದು ಸ್ಥಳ ದಿಂದಲೂ ವಿಭಿನ್ನ ದ್ರಶ್ಯ ವೈಭವ ನೋಡಬಹುದು.

1916ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಜೋಗಕೆ ಭೇಟಿ ನೀಡಿ ವಿದ್ಯುತ್ ಯೋಜನೆ ಗೆ ಸಮೀಕ್ಷೆ ನಡೆಸಲು ಆದೇಶಿಸಿದ್ದರಂತೆ. ಜೋಗದಲ್ಲಿ ಸುರಿಯುತ್ತಿದ್ದ ಅಪಾರ ಪ್ರಮಾಣದ ನೀರಿನಿಂದ ವ್ಯರ್ಥವಾಗುತ್ತಿದ್ದ ಶಕ್ತಿಯನ್ನು ಕಂಡು ಮರುಗಿ ಎಷ್ಟೊಂದು ನೀರು ಹಾಳಾಗುತ್ತಿದೆ ಎಂದು ಉದ್ಗರಿಸಿದ್ದು ನಂತರ 1918 ರಲ್ಲಿ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಕೈಗೊಳ್ಳಲು ಅಗತ್ಯ ಸರ್ವೆ ಮತ್ತು ಸಮೀಕ್ಷೆ ನಡೆಸುವುದಕ್ಕೆ ಆದೇಶ ಪಡೆಯಲು ಪ್ರ ಮುಖ ಪಾತ್ರಧಾರಿಯಾದರು.

ಬ್ರಿಟಿಷ್ ಸರ್ಕಾರ ಜೋಗಜಲಪಾತದ ಎತ್ತರವನ್ನು ಅಳೆಯವ ನಿಟ್ಟಿನಲ್ಲಿ ಸಭೆ ಕರೆದು ಅದಕ್ಕಾಗಿ ಕ್ಯಾಪ್ಟನ್ ಗ್ರೇ ಎಂಬ ಸೈನ್ಯ ಅಧಿಕಾರಿ ವಿಲಿಯಂ ನೆರವಿನಿಂದ ಜಲಪಾತದ ಎತ್ತರವನ್ನು ಅಳೆದರು .ಆದರೆ ಸರ್ವೆ ಆರಂಭಿಸಿದ ಪ್ರಥಮ ತಂಡದ ನಾಯಕ ಕ್ರಷ್ಣರಾವ್ ಎಂಬ ಇನ್ನೊಂದು ಮಾಹಿತಿಯು ಇದೆ.

ಜೋಗ ಜಲಪಾತ ಪರಿಸರ ವನ್ನು ‌ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗೊಳಿಸಲು ಸೂಚನೆ ಇಲ್ಲಿ ನೀಡಲಾಗಿದೆಯಾದರು ಪ್ರವಾಸಿಗರು ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಜೋಗ ಜಲಪಾತ ಅಥವಾ ಸಾಗರಕ್ಕೆ ಕರ್ನಾಟಕದ ಹೆಚ್ಚಿನೆಲ್ಲಾ ಸ್ಥಳ ಗಳಿಂದ ವಾಹನ ಸೌಕರ್ಯ ಹಾಗೂ ಬಸ್ಸ ಸೌಲಭ್ಯ ವಿದೆ.

ಮಳೆಗಾಲದಲ್ಲಿ ಪ್ರಕ್ರತಿ ಮತ್ತಷ್ಟು ಸೌಂದರ್ಯ ವನ್ನು ತುಂಬಿ ಕೊಂಡು ಜೀವ ರಾಶಿಗೆಲ್ಲಾ ಹೊಸ ತನ ನೀಡುತ್ತಾ‌ಹರಿವ ಜೋಗ ಜಲಪಾತದ ಸೊಬಗನ್ನು ಕಣ್ತುಂಬಿಕೊಳುವುದೇ ಕಣ್ಣ್ ಮನಗಳಿಗೆ ಸ್ವರ್ಗ. ಮುಂಗಾರು ಪ್ರಾರಂಭವಾಗಿ ಇದೀಗ ಬಹುದಿನಗಳಿಂದ ಬಿಸಿಲ ಬೇಗೆಗೆ ಬಸವಳಿದ ಜಲಪಾತಗಳು ಪುಟಿದೆದ್ದಿದೆ. ಧುಮ್ಮಿಕ್ಕುವ ಜೋಗ ಜಲಧಾರೆಗೆ ಹೊಸ ರೂಪ ‌ನೀಡಿದೆ. ಮಳೆಯಿಂದಾ ಪುಳಕಗೊಂಡ ಮಲೆನಾಡು ಮದುವಣಗಿತ್ತಿಯಂತೆ ಕಂಗೊಳಿಸುತಿದೆ. ಪ್ರಕೃತಿಯ ನಿತ್ಯೋತ್ಸವ, ವರ್ಷ ಧಾರಗೆ ಮ್ಯೆದುಂಬಿದ ಜೊಗಜಲಪಾತ ಧುಮ್ಮಿಕ್ಕುವ ದ್ರಶ್ಯಕಾವ್ಯ ಪ್ರವಾಸಿಗರ ನೆಚ್ಚಿನ ತಾಣ.

Leave a Reply

Your email address will not be published. Required fields are marked *