News (ಸುದ್ದಿ)
ಜೈ ಭೀಮ್ ಪವರ್ ಇಂಡಿಯಾ ವ್ಯಾಯಾಮ ಶಾಲೆ ವತಿಯಿಂದ ಆಹಾರ ಕಿಟ್, ತರಕಾರಿ, ಮಾಸ್ಕ್ ವಿತರಣೆ: heggaddesamachar.com

ಲಯನ್ಸ್ ಕ್ಲಬ್ ಮೈಸೂರು ಸೆಂಟ್ರಲ್ dist 317,
ಜೈ ಭೀಮ್ ಪವರ್ ಇಂಡಿಯಾ ವ್ಯಾಯಾಮ ಶಾಲೆ ವತಿಯಿಂದ ಬಡವರಿಗೆ ಆಹಾರ ಕಿಟ್ ,ತರಕಾರಿ ಹಾಗೂ ಮಾಸ್ಕ್ ವಿತರಿಸಲಾಯಿತು.
ಮೈಸೂರಿನ ಅಶೋಕಪುರಂನಲ್ಲಿ
ಲಯನ್ಸ್ ಕ್ಲಬ್ ಮೈಸೂರು ಸೆಂಟ್ರಲ್ dist 317 ರ ಜಿಲ್ಲಾ ರಾಜ್ಯಪಾಲ ನಾಗರಾಜು ಆಹಾರ ಕಿಟ್,ತರಕಾರಿ ವಿತರಿಸಿದರು.
ನಂತರ ಮಾತನಾಡಿದ ಅವರು
ಕೋರೋನಾ ಭೀತಿ ಹಿನ್ನಲೆ ಜನರು ತೊಂದರೆಗೆ ಒಳಗಾಗಿದ್ದಾರೆ.ಅಶೋಕಪುರಂ ನಲ್ಲಿ ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದಾರೆ. 200 ಕಡುಬಡ ಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್,ತರಕಾರಿ,ಮಾಸ್ಕ್ ವಿತರಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ , ಗೋವಿಂದರಾಜು , ಗೋಪಾಲ್ , ಸ್ವಾಮೀ ಕುಮಾರ್ , ಸಂಪತ್ , ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು,