News (ಸುದ್ದಿ)

ಜೀವಂತ ಸಮಾಧಿಯಾಗ್ತೀನಿ ಅಂದ ಸ್ವಾಮೀಜಿ ಹೆದರಿ ಪರಾರಿಯಾದ: heggaddesamachar.com

Spread the love

ಚಿಕ್ಕಬಳ್ಳಾಪುರದ ಚಿಕ್ಕನಹಳ್ಳಿಯಲ್ಲಿ ಹೀಗೊಂದು ಘಟನೆ ನಡೆದಿದೆ. ಕಳೆದ ಒಂದು ತಿಂಗಳಿನಿಂದ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ಸ ತಾರ್ನೇಯಿ ಸಾಯಿ ಎಂಬ ಸ್ವಯಂ ಘೋಷಿತ ಸ್ವಾಮೀಜಿ ಸೋಮವಾರ ನಾನು ಜೀವಂತ ಸಮಾಧಿಯಾಗ್ತೀನಿ, 72 ಗಂಟೆ 9 ಅಡಿ ಮಣ್ಣೊಳಗೆ ಇರ್ತಿನಿ ಎಂದು ಪ್ರಚಾರ ನಡೆಸಿದ್ದ.

ಎಲ್ಲಾ ಸಿದ್ಧತೆ ನಡೆದ ಬಳಿಕ ಇನ್ನೇನು ಸಮಾಧಿಯಾಗ್ತಾನೆ ಎನ್ನುವ ಸಮಯಕ್ಕೇ ಸರಿಯಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗ್ರಾಮದ ಅನೇಕರು ಈ ಜೀವಂತ ಸಮಾಧಿಯ ಪ್ರಕ್ರಿಯೆಯನ್ನು ನೋಡಲು ಬೆಳಿಗ್ಗೆಯಿಂದಲೂ ಆಗಮಿಸುತ್ತಿದ್ದರು.

೭೨ ಗಂಟೆಗಳ ಕಾಲ ಜೀವಂತ ಸಮಾಧಿಯಾಗುವ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪರವಾನಗಿ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಪೋಲೀಸರು ಎಚ್ಚರಿಕೆ ನೀಡಿದರು ಹಾಗಾಗಿ ಸಮಾಧಿಯಾಗಿಲ್ಲ, ಈ ನಿಟ್ಟಿನಲ್ಲಿ ಸ್ವಾಮೀಜಿ ನಾಪತ್ತೆಯಾಗಿರುವುದಾಗಿ ಮೂಲಗಳ ವರದಿ ಹೆಗ್ಗದ್ದೆ ಸಮಾಚಾರ್.ಕಾಮ್ ಗೆ ತಿಳಿಸಿದೆ.

One thought on “ಜೀವಂತ ಸಮಾಧಿಯಾಗ್ತೀನಿ ಅಂದ ಸ್ವಾಮೀಜಿ ಹೆದರಿ ಪರಾರಿಯಾದ: heggaddesamachar.com

Leave a Reply

Your email address will not be published. Required fields are marked *