ಜೀವಂತ ಮರಗಳಿಗೆ ಮೊಳೆಹೊಡೆದು ಜಾಹಿರಾತುಫಲಕ ತೂಗಿಸುವ  ಶತಮೂರ್ಖರು : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

           ಭೂಮಿ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಅತೀ ಬುದ್ದಿವಂತ ಪ್ರಾಣಿ ಯಾವುದೆಂಬ ಪ್ರಶ್ನೆಗೆ ಎಲ್ಲರ ಒಂದೇ ಉತ್ತರ  ಮನುಷ್ಯ . ಕಲಿಕೆಯಲ್ಲಾಗಲಿ ಕಲಿತದ್ದನ್ನು ಪ್ರಯೋಗಿಸಿ ಯಶಸ್ಸುಗೊಳಿಸುವುದರಲ್ಲಿ ಮನುಷ್ಯನಿಗೆ ಬೇರಾವ ಪ್ರಾಣಿಗಳು ಸರಿಸಮಾನವಾಗಿಲ್ಲ. ಮಾನವ ಇತರ ಜೀವಿಗಳಿಗಿಂತ ಹೆಚ್ಚಿನ ಬುದ್ದಿ ಶಕ್ತಿ ಇದೆಯೆಂಬ ವಿಶ್ವಾಸ ಬಲದಿಂದ ತಂತ್ರಗಾರಿಕೆಯಲ್ಲಿ ಅಮೋಘ ಆವಿಷ್ಕಾರಗಳನ್ನು ಮಾಡುತ್ತಾ‌ ಪ್ರಕೃತಿಯನ್ನು ತನಗೆ ಬೇಕಾದಂತೆ ಬದಲಾಯಿಸಿಕೊಂಡು ಪ್ರಗತಿ ಎಂಬ ಭ್ರಮೆಯಲ್ಲಿ ವಿಜ್ರಂಬಿಸುತ್ತಿರುವುದು ವಿಪರ್ಯಾಸ. ವನಸಿರಿಯ ನಾಡು ವೈವಿಧ್ಯಮಯ ಸಸ್ಯ ಸಂಕುಲಗಳ ಬೀಡು ಎಂಬ ಹೆಗ್ಗಳಿಕೆಯ ಕರ್ನಾಟಕದ ವಿದ್ಯಾವಂತರ  ನಾಡು ಬುದ್ದಿವಂತರ ಬೀಡು, ಪ್ರಗತಿಪರ ಊರು ಎಂಬೆಲ್ಲಾ ಹೆಗ್ಗಳಿಕೆ ‌ಹೊತ್ತ ನಮ್ಮ  ದಕ್ಷಿಣ ಕನ್ನಡ, ಉಡುಪಿ, ಕುಂದಾಪುರದಲ್ಲಿ  ಜೀವಂತ ಮರಗಳಿಗೆ ಮೊಳೆ ಹೊಡೆದು ಜಾಹಿರಾತು ಫಲಕ ತೂಗಿಸಿದ ಶತಮೂರ್ಖರಿದ್ದಾರೆ. ಅಭಿವೃದ್ಧಿ ಕಾಮಗಾರಿ ಯೋಜನೆಗಳ ಹೆಸರಿನಲ್ಲಿ ಲಕ್ಷ ಗಟ್ಟಲೇ ಮರಗಳನ್ನು ನಾಶಮಾಡಿದ್ದು ಅಲ್ಲದೆ. ಮಾನವ ಚಟುವಟಿಕೆಗಳ ಹೆಚ್ಚಳ, ಅರಣ್ಯನಾಶವು ಸಸ್ಯವೈವಿಧ್ಯತೆಯ ತಾಣಗಳ ಮೇಲೆ ಪರಿಣಾಮ ಬೀರಿದ್ದು ಹೊಸತೆನಲ್ಲ‌ ಅರಣ್ಯ ಸಂರಕ್ಷಣೆ ಕುರಿತು ನಾಡಿನಾದ್ಯಂತ ಸಾರ್ವಜನಿಕರ ಕೂಗೊಂದು ಹಿಂದಿನಿಂದಲೂ ಇತ್ತು.  ಹಸಿರೇ ಉಸಿರು ಇದು ಆಗಾಗ ಕೇಳಿ ಬರುವ ಕೂಗು ಹೌದು ಅವ್ಯಾಹತವಾಗಿ  ನಡೆಯುತ್ತಿದ್ದ ಅರಣ್ಯ ನಾಶ ತಪ್ಪಿಸಲು  ಮರ ಸಂರಕ್ಷಣಾ ಕಾಯ್ದೆ 1970 ರಲ್ಲಿ  ಭಾರತದಲ್ಲಿ ಅದು ಮೊದಲು ಜಾರಿಗೆ ಬಂದದ್ದು ಕರ್ನಾಟಕದಲ್ಲಿ. ಮರಬೆಳೆಸುವ, ರಕ್ಷಿಸುವ  ವಿಚಾರದಲ್ಲಿ ಕೆಲವರು ತಮ್ಮನ್ನು ತೊಡಗಿಕೊಂಡಿದ್ದರು. ಆದರೆ ನಿಂತ ‌ಜೀವಂತ ಮರಕ್ಕೆ ಮೊಳೆ ಹೊಡೆಯುತ್ತಾರೆ. ಜಾಹಿರಾತಿನ  ಮಹಿಮೆ ಇಲ್ಲಿ ತನಕ ಬರಬಹುದು ಎಂದು ಯಾರು ಯೋಚಿಸಿರ ಲಾರರು ಈ ನಾಶಕ್ಕೆ  ತಡೆ ಹಾಕುವುದು ನಮ್ಮೇಲ್ಲರ ಮೊದಲ ಕರ್ತವ್ಯ. 

       ಈ ಸಲ‌ ಮುಂಬಯಿಯಿಂದ ಊರಿಗೆ ಬಂದವಳು ಮಂಗಳೂರಿನಿಂದ ಮಾರಣಕಟ್ಟೆವರೆಗೆ ; ಸ್ಯಾಬ್ರಕಟ್ಟೆ ಯಿಂದ ಪಡುಬಿದ್ರಿತನಕ ಹಾಗೂ ಕುಂದಾಪುರ, ಉಡುಪಿ ಯ ಹಲವೆಡೆ ವಿವಿಧ ಕಾರಣಕ್ಕಾಗಿ ಪ್ರಯಾಣಿಸಿದ್ದೆ. ಅನೇಕಾನೇಕ ಜಾಹಿರಾತು ಪಲಕಗಳು ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದು ನಿಂತ ಮರಗಳಲ್ಲಿ ಬಳ್ಳಿಕಟ್ಟಿ ತೂಗಾಡುವುದು ನೋಡಿದೆ. ಕೆಲ  ಮರಗಳಿಗೆ ಮೊಳೆ ಹೊಡೆದು ಜಾಹಿರಾತು ಪಲಕ  ಸಿಕ್ಕಿಸಿರುವುದ ಕಂಡು‌ ಬೇಸರ ಗೊಂಡೆ .ಎತ್ತರದಲ್ಲಿ ದೂರದಲ್ಲಿ ಇದ್ದ‌ಮರಗಳ photo ತೆಗೆಯಲಾಗದೆ ಯೊಚನೆಯಲ್ಲಿ ಬಿದ್ದೆ . ಸಾಕ್ಷಿ ಇಲ್ಲದೆ‌  ಬರೆಯುವಂತೆ ಇಲ್ಲ ಎಂದು ‌ಯೊಚನೆಯಲ್ಲಿದಾಗ  ಮಣಿಪಾಲದ ಹೃದಯ ಭಾಗದಲ್ಲಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ( ಕೆಎಂಸಿ)ನ  ಗೇಟ್ ನ ಎದುರು ಹಾಗೂ ಎಡ ಬಾಗದಲ್ಲಿ  ಅಂದರೆ ಕೆಎಂಸಿ ಮತ್ತು ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಗಳ ನಡುವೆ ಇರುವ ಬಸ್ ನಿಲ್ದಾಣದ ಬದಿಯಲ್ಲಿ ಎತ್ತರಕ್ಕೆ‌ ಬೆಳೆದ  ಮರಗಳಿಗೆ  5 ಫಿಟ್ ನಷ್ಟೆ ಎತ್ತರದಲ್ಲಿ   ದೊಡ್ಡ ದೊಡ್ಡ  ಮೊಳೆ ಹೋಡೆದು‌ ಜಾಹಿರಾತು ಪಲಕಗಳನ್ನು ತೂಗಿಸಲಾಗಿದೆ. ವಿದ್ಯಾವಂತರು ಬುದ್ದಿವಂತರು  ದಿನ ನಿತ್ಯ ಹಾದು ಹೋಗುವ ದಾರಿ ಇದು. ಮೊಳೆ ಹೊಡೆದು ತೂಗಿಸಿದ ಜಾಹಿರಾತಿನಲ್ಲಿ ಇದ್ದ ನಂಬರ್ ಗೆ phone ಮಾಡಿದರೆ ಕನ್ನಡ ಬಾರದೆ ಹರಕು ಮುರುಕು ಇಂಗ್ಲಿಷ್ ನಲ್ಲಿ ಉತ್ತರ ಬಂತು. ಜಾಹಿರಾತು ತೂಗಿಸಲು ನಮ್ಮ ನಾಡಿನ ನೆಲದಲ್ಲಿ ಬೆಳೆದ ಮರ ಬೇಕು ಆದರೆ ಕೇಳಿದ ಪ್ರಶ್ನೆ ಗೆ ಉತ್ತರಿಸಲು ಸ್ಥಳೀಯ ಭಾಷೆಯಾದ ತುಳು ಕನ್ನಡ ಎರಡು ಬಾರದ ಭಾಷೆ ಇಲ್ಲದವರು ಸಿಕ್ಕರು.

ಮಾಡಿದ ತಪ್ಪು ಗಳಿಂದ ಪಶ್ಚಾತ್ತಾಪ ಪಟ್ಟು ಕೊಂಡರೆ ವ್ಯಕ್ತಿ ತ್ವದಲ್ಲಿ  ಬದಲಾವಣೆಗಳ ನೀರಿಕ್ಷಿಸಬಹುದು. ಅಪರಾಧಿ ಬಾವ ಹೊಂದಿದ್ದರೆ ಮತ್ತೆ ಅದೇ ತಪ್ಪು ಮರುಕಳಿಸದು. ಮನುಷ್ಯನಾಗಿರುವುದರಿಂದ  ತಪ್ಪ ಗಳು ಆಗುವುದು ಸಹಜ ಆದರೆ ಒಂದು ನಾಲ್ಕು ಮರಗಳಿಗೆ  ಮೊಳೆ ಹೊಡೆದರೆ  ಏನಾಗುತ್ತದೆ. ಇದೆಲ್ಲಾ ಸಣ್ಣ ವಿಚಾರ  ಹಾಗೇನೂ ತೊಂದರೆ  ಆಗುದಿಲ್ಲ ಮರಕ್ಕೆ ಎಂದು ಉದಾಸಿನತೆಯೋ ನಿರ್ಲಿಪ್ತತೆಯಿಂದ ಕೈಕಟ್ಟಿ‌ಕುಳಿತು ಕೊಳ್ಳವ ಬದಲು ಪ್ರಕೃತಿಯನ್ನು ಉಳಿಸಿ ಶ್ರೀಮಂತಗೊಳಿ ಸಿ ಕೊಂಡು ನಮ್ಮ ಮುಂದಿನ ಪೀಳಿಗೆಗೆ ನೆಮ್ಮದಿಯಿಂದ ಬದುಕಲು ಬಿಡೋಣ. ” ಎಲ್ಲಿಯವರೆಗೆ ಭೂಮಂಡಲವು ಪರ್ವತ, ಅರಣ್ಯಗಳನ್ನು ಹೊಂದಿರುತ್ತದೆಯೋ ಅಲ್ಲಿಯವರೆಗೆ ಮಾನವ ಸಂತತಿಯು ಮುಂದುವರಿ ಯುವುದು” ಎಂಬ ಮಾರ್ಕಂಡೆಯಾ ಮುನಿಯ ಎಚ್ಚರಿಕೆಯ ಕಿವಿ ಮಾತು ಇಂತವರಿಗೆ ಕಿವಿ ಮೇಲೆ ಬಿಳುವುದಿಲ್ಲ. ಮರಗಳ ನಾಶದಿಂದ ಆಗುತ್ತಿರುವ ಹಾನಿ ಅಪಾರ. ಇದು ‌ನಮ್ಮ ಜೀವನ ಹಾಗೂ ಪರಿಸರದ‌ ಮೇಲೆ ಬೀಕರ ಪರಿಣಾಮ ಬೀರುತ್ತಿದ್ದು. ಗಿಡ, ಮರ, ಪರಿಸರ ಸಂರಕ್ಷಣೆಯ ಬಗ್ಗೆ  ಪ್ರಸುತ್ತದಿನಗಳಲ್ಲಿ  ಎಚ್ಚರಿಕೆಯಿಂದ ಕಾರ್ಯವೆಸಗಿದರೆ ಮಾತ್ರ ಮುಂದಿನ ಪೀಳಿಗೆಗೆ ಈ ಪರಿಸರ ಉಳಿಯ ಬಹುದು.  ಮಣಿಪಾಲದಂತ ಪರಿಸರದಲ್ಲಿ ಗಿಡ ಮರಗಳು ಉಳಿಯದಿದ್ದರೆ. ಭವಿಷ್ಯದಲ್ಲಿ ಇಲ್ಲಿ ಮಾನವ ಬದುಕಿಗಾಗಿ ಉಸಿರಾಟವಾಡಲು  ಹೋರಾಡ ಬೇಕಾದಿತು. ಈಗಾಗಲೇ ಕಾಂಕ್ರೀಟ್ ಕಾಡಾಗಿ ಬೆಳೆಯುತ್ತಿರುವ ಮಣಿಪಾಲದಲ್ಲಿ  ಮರ ಬೆಳಸಿ ಪರಿಸರದ ಸಮತೋಲನವನ್ನು ಉಳಿಸುವ ದೃಷ್ಟಿಯಿಂದ  ವೃಕ್ಷಗಳ ಬೆಳೆಸುವುದು ಅತಿ ಅವಶ್ಯಕ. ಗಿಡ ಮರಗಳನ್ನು ಜೀವನಾಡಿ ಎನ್ನುತ್ತಿದ್ದ ಮನುಷ್ಯ ಸ್ವಾರ್ಥಕ್ಕಾಗಿ ಮರಗಳ ಮಾರಣ ಹೋಮದಲ್ಲಿ ತೊಡಗಿದ್ದು‌ ವಿಪರ್ಯಾಸ.

   ಮನುಷ್ಯನ ಅತೀ ಬುದ್ದಿವಂತಿಕೆಯ ಸೊಕ್ಕು ತಂದೊಡಿದ ಆಪತ್ತುಗಳ ನೇರ ಅಭಿವೃದ್ಧಿ ಎಂಬುದರ ಅರ್ಥ ತಿರುಚುವ ವ್ಯವಹಾರ ನಿಂತು ನೈಜ ಏಳಿಗೆಯ ಚಟುವಟಿಕೆ ‌ಹೆಚ್ಚಬೇಕು ಮರಗಳ‌ ನಾಶ ನಿಂತು ಸಸ್ಯ ವೈವಿಧ್ಯ ಉಳಿದು ಹಸಿರು ವಿಸ್ತರಣೆ ದ್ವಿಗುಣವಾಗಬೇಕು.‌2 -3 ದಶಕಗಳ ಹಿಂದೆ ‌ರಸ್ತೆಯ ಇಬ್ಬಗೆಯಲ್ಲಿ ಡೊಡ್ಡ ಡೊಡ್ಡ ಮರಗಳು ಕಾಣಸಿಗುತ್ತಿದ್ದವು . ಆದರೆ ಅವೆಲ್ಲ‌ ಈಗ  ಬೇರೆ ಬೇರೆ ಕಾರಣಗಳಿಂದ  ಕಣ್ಮರೆಯಾಗುತ್ತಿದೆ. ಮಾನವ ಹಸ್ತಕ್ಷೇಪದಿಂದ ಮರಗಳು ವಿವಿಧ ರೀತಿಯಲ್ಲಿ ಅವನತಿ ಹೊಂದುತ್ತಿರುವ ವೇಗವು ಗಾಬರಿ ಹುಟ್ಟಿಸುವಂ ತೆ ಇದೆ.ಹಲವಾರು ಯೋಜನೆಗಳ ಹೆಸರಿನಲ್ಲಿ ಮರಗಳ ನಾಶಕ್ಕೆ ಮುಂದಾಗಿದ್ದು ಹೀಗೆಯೇ ಮುಂದುವರಿದರೆ ಪ್ರಾಣ, ಪಕ್ಷಿಸಂಕುಲಕ್ಕೆ ಮಾತ್ರವಲ್ಲದೆ ಮನುಷ್ಯರಿಗೂ ಅಪಾಯವಿದೆ. ಇದರ ಮುನ್ಸೂಚನೆ ಎಂಬಂತೆ ಅಕಾಲಿಕ ಮಳೆ , ಇತ್ತೀಚೆಗೆ ಮನುಷ್ಯನ ಪ್ರತಿಯೊಂದು  ಚಟುವಟಿಕೆ ಯೇ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ತನ್ನ ತಪ್ಪು ಗಳಿಂದ ಪಾಠಕಲಿಯದೆ ಮೂಲ ಪ್ರಕೃತಿಯನ್ನು ಅವಗಣಿಸಿ ನಮ್ಮ ಜೀವನ  ವಿಧಾನಗಳನ್ನು ರೂಪಿಸಿ ಕೊಳ್ಳುತ್ತಿರುವುದೇ  ಅನೇಕ ದುರಂತಗಳಿಗೆ‌ ಕಾರಣ ಈಗಾಗಲೇ ಆಗಿರುವ ಮಳೆ ಸೆಖೆ, ಚಳಿ ಅಳೆವ ಕಾಲಮಾನ ಬದಲಾಗಿ ಅಂತರ್ಜಲ ಮಟ್ಟ ಕುಸಿದಿದೆ. ಮರ ಗಿಡಗಳು ನಮಗೆ ಪ್ರಕೃತಿ ನೀಡುವ ಅಪೂರ್ವ ಬಳುವಳಿ ಶುದ್ದ ಗಾಳಿ, ಶುದ್ದ ನೀರು, ಪರಿಸರದೊಂದಿಗೆ ಜೀವನ ನಮ್ಮ ಆ ಜನ್ಮಹಕ್ಕು ಯಾರು ಕಸಿಯಲು ಅಸಾದ್ಯ.

      ” ಒಂದು ವೃಕ್ಷವನ್ನು ಗಮನಿಸಿದರೆ ಅದು ತನ್ನ ವಿಕಾಸದೊಂದಿಗೆ ಹಲವರಿಗೆ ಆಸರೆ ಆಗುತ್ತದೆ. ಮರವೆಂದರೆ ಒಂದು ವಿಶಿಷ್ಟ ಜೀವಕೊಶ ಅದರ ಔದಾರ್ಯ, ಕಲ್ಯಾಣ ಗುಣ  ಅನಂತ ತನಗಾಗಿ ಏನನ್ನು ಉಳಿಸಿಕೊಳ್ಳದೆ ಬಂದವರಿಗೆ  ತನ್ನ ಅಸ್ತಿತ್ವವನ್ನು ಧಾರೆ ಎರೆಯುತ್ತಾ ಎಲ್ಲಾ ಜೀವಿಗಳಿಗೂ ಆಶ್ರಯ ನೀಡುತ್ತದೆ. ಕಡಿಯಲು‌ ಕೊಡಲಿ ತಂದರು ನೇರಳು ನೀಡುತ್ತದೆ” ಎಂದು ಭಗವನ್ ಬುದ್ಧನು ತಿಳಿಸಿರುವಂತೆ  ಮರವೊಂದು ಸತ್ತರೆ  ಒಣಗಿ ಮಾನವನಿಗೆ‌ ಉರುವಲಾಗಿ  ಉಪಯೋಗಕ್ಕೆ ಬಂದು ಬುದಿಯಾಗಿಯು ಗೊಬ್ಬರವಾಗುತ್ತದೆ. ಅದೇ‌ಮಾನವ ಸತ್ತರೆ ಕೊಳೆತು ದುರ್ನಾತ ಬೀರುತ್ತದೆ. ಈ  ರೀತಿಯಾಗಿ ತನ್ನ ಜೀವನವನ್ನು ಸಾರ್ಥಕ ಗೊಳಿಸಿಕೊಂಡು ಪರೋಪಕಾರಕ್ಕಾಗಿಯೇ ತಲೆ ಎತ್ತಿದ ಮರಗಳಿಗೆ ಮೊಳೆ ಹೊಡೆದವರು ಶತ ಮೂರ್ಖರಲ್ಲದೆ ಮತ್ತೆನು. ವೃಕ್ಷವನ್ನು ಯಾರು ಲೋಕೋಪಕಾರಕ್ಕಾಗಿ ನೆಟ್ಟು ಬೆಳೆಸುತ್ತಾರೆ ಅವರು ಸ್ವರ್ಗ ಪಡೆಯುತ್ತಾರೆ. ಎಂಬ ಸುಭಾಷಿತವೊಂದ ರಲ್ಲಿ  ಹೇಳುವ ಮಾತಿದೆ.  ಹಾಗಾದರೆ ಜೀವಂತ ಮರಗಳಿಗೆ ಮೊಳೆ ಹೋಡೆವವರು ಎಲ್ಲಿಗೆ ಹೋಗ ಬಹುದು ಅವರಿಗೆ‌ ಏನೇನ್ನ ಬೇಕು. ಭಾರತೀಯ ಸಂಸ್ಕೃತಿಯಲ್ಲಿ  ಪ್ರಾಚೀನ ಕಾಲದಿಂಲೂ ನಿಸರ್ಗ ರಕ್ಷಣೆ ಹಾಗೂ ಮರಗಳಿಗೆ ಪೂಜ್ಯ ಸ್ಥಾನ ವಿದೆ. ವೃಕ್ಷ ಪೂಜೆ ಪರಿಸರ ರಕ್ಷಣೆಗೆಂದೆ ಹಿರಿಯರು ವಿಧಿಸಿದ ನಿಯಮ. ಬ್ರಹ್ಮಾಂಡ ಸೃಷ್ಟಿಯಲ್ಲಿ ಅತ್ಯಂತ ಮುಖ್ಯವಾದ  ಸೃಷ್ಟಿ ಎಂದರೆ ಮರಗಳು ಎನ್ನುವ ಒಂದು ಮಾತಿದೆ.  ಸಸ್ಯ ಸಂಬಂಧಿತ ಸಂಶೋದನೆಗಳಿಂದ ಜಗತ್ತ್ ಪ್ರಸಿದ್ಧರಾದ  ವಿಜ್ಞಾನಿ ಜಗದೀಶ್ ಚಂದ್ರ ಬೋಸ್  ಮರಗಳಿಗೆ ಸೃರ್ಶ ಜ್ಞಾನ ವಿದೆ , ಸಸ್ಯಗಳು ಪ್ರಾಣಿಗಳಂತೆ ನೋವು ಅನುಭವಿಸುತ್ತವೆ. ಚಿವುಟಿದರೆ , ವಿಷವುಣಿಸಿದರೆ ಸಾಯುತ್ತವೆ ಎಂದು ತಾನು ಕಂಡು ಕೊಂಡ ಸತ್ಯವನ್ನು ಸಾರಿದ್ದರು ಹಾಗಾದರೆ ತಲೆ ಎತ್ತಿ ‌ನಿಂತ ಜೀವಂತ ‌ಮರಕ್ಕೆ ಮಳೆ ಹೊಡೆದರೆ ಅದಕ್ಕೆ ‌ನೋವಾಗದೆ .

        ಪರಿಸರಕ್ಕೆ ಹಾನಿಯಾದರೆ ಜೀವಕೋಟಿಗಳಿಗೆ ಹಾನಿ. ನಾವು ಪರಿಸರವನ್ನು ‌ರಕ್ಷಿಸಿಡದಿದ್ದರೆ‌ ಪರಿಸರ ನಮ್ಮನ್ನು ರಕ್ಷಿಸಲಾರದು . ನಮ್ಮ ಸ್ವಾರ್ಥ ಸಾಧನೆಗಾಗಿ ಕಾಡನ್ನು ,ಮರಗಳನ್ನು ನಶಮಾಡುವ ಯತ್ನ ಅಂದರೆ ‌ಮರದ ಮೇಲೆ ಕುಳಿತು ಮರದ ಬುಡ ಕಡಿದ ದಡ್ಡನ‌ ಕಥೆಯಂತೆ. ಪರಿಸರ ಪ್ರೇಮದ ಸಂದೇಶ ‌ಹೊತ್ತ ಜಾಹಿರಾತು ಅನುದಿನವು‌ ಬಿತ್ತರವಾಗಬೇಕೆ ಹೊರತು  ಮರಕ್ಕೆ ಮೊಳೆ ಹೊಡೆದು ಜಾಹಿರಾತು ತೂಗಿಸುವುದಲ್ಲ ಎಂಬ ಸ್ವಲ್ಪ ಜ್ಞಾನವಾದರು ಇರಬೇಕು. ಈ ನೆಲ, ಕಾಡು, ಜಲ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರ ಮನಸ್ಸಿನ ಲ್ಲಿರಬೇಕು ಹಾಗಿದ್ದರೆ ಮಾತ್ರ  ಮುಂದಿನ ಪೀಳಿಗೆಗೆ ಪರಿಸರವನ್ನು ಕೊಡುಗೆಯಾಗಿಡಲು ಸಾಧ್ಯ. ಸಸ್ಯ ರಾಶಿಗಳ ಪ್ರಮಾಣ ವೈವಿಧ್ಯತೆ ಹಾಗೂ ಭಿನ್ನತೆಗಳಲ್ಲಿ ಒಟ್ಟಾಗಿ ಪ್ರತಿಬಿಂಬಿಸುವ ಒಂದು ಪರಿಕಲ್ಪನೆ ಸಸ್ಯ ವೈವಿಧ್ಯತೆಯನ್ನು ಮಾನವ  ಪರಿಸರವನ್ನು ತನ್ನ ಅನುಕುಲತೆಗೆ‌ ತಕ್ಕಂತೆ ಹದಗೊಳಿಸ‌‌‌ತೊಡಗಿದ ಆಮೇಲೆ ‌ನಾವಾಗಿ ಆಹ್ವಾನಿಸಿ ಕೊಂಡ ಈ ಪರಿಸರ ಅಸಮಾತೋಲದ ವಿಪತ್ತುಗಳಿಂದ ಪಾರಾಗುವುದು ಹೇಗೆ ಎಂಬ ಪ್ರಶ್ನೆಯು ಕಾಡತೊಡಗಿತು. ತನ್ನ ಸ್ವರ್ಥಕ್ಕಾಗಿ ಪ್ರಕೃತಿದತ್ತ ಪರಿಸರವ  ಪರಿವರ್ತನೆಯ ಹೆಸರಿನಲ್ಲಿ ನಾಶವಡಿಸುವ ವ್ಯಕ್ತಿಯಾಗಲಿ, ಸಂಸ್ಥೆ ಯಾಗಲಿ ,ಅವರ ವಿರುದ್ಧ ಅಡಿಯಿಡುವುದು ಎಲ್ಲ ‌ನಾಗರೀಕರ ಜನ್ಮ ಸಿದ್ದ ಹಕ್ಕು. ಕಾಡು ಬೆಳಸಿ‌ನಾಡು ಉಳಿಸಿ ಎಂಬ ಹೇಳಿಕೆ ಚಾಲ್ತಿಯಲ್ಲಿರೊದೇನೊ ನಿಜ ಆದರೆ ಅದೆಷ್ಟು ಮರಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಿವಿ. ಲೆಕ್ಕ ಹಾಕಿದರೆ  ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಸುತ್ತ ಮುತ್ತಲಿನ ಪರಿಸರದಿಂದ ಮನೆಯಿಂದ ಹಿರಿಯರ ನಡವಳಿಕೆಯಿಂದ ಒಳ್ಳೆಯದು  ಕೆಟ್ಟದು ಎಲ್ಲವನ್ನೂ ಕಲಿತ್ತಿದ್ದೆವೆ ಆದರೆ ಜೀವಂತ ಮರಗಳಿಗೆ ಮೊಳೆ ಹೊಡೆವ ವಿಕೃತ ಬುದ್ದಿ ಎಲ್ಲಿಂದ ಕಲಿತೆವು…..

Leave a Reply

Your email address will not be published. Required fields are marked *