Literature (ಸಾಹಿತ್ಯ)

ಜಿ. ಐ ಮಾನ್ಯತೆ ಹೊಂದಿದ ಘಮ ಘಮಿಸೊ ಉಡುಪಿ ಮಲ್ಲಿಗೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಪರಿಶುದ್ಧವಾದ ಬಿಳುಪು ಶುಭ್ರವರ್ಣದ ಸುಂದರ ‌ಕೋಮಲ ಸುಗಂಧ ಯುಕ್ತ‌ ಮನಸೂರೆ ಗೊಳ್ಳುವ ಸುವಾಸನಾಭರಿತ ಉಡುಪಿ ಶಂಕರಪುರ ಮಲ್ಲಿಗೆಯ ಸೌಂದರ್ಯ ಅವರ್ಣನೀಯ . ಬೆಳ್ಳಿ ನೋರೆಗಳು ಹಸಿರು ಪ್ರಕೃತಿಯನ್ನು ಅಪ್ಪಿಕೊಂಡಂತೆ ಇರುವ ಮಲ್ಲಿಗೆಯ ತೊಟ್ಟು ಹಾಗೂ ತನ್ನ ಪರಿಮಳದಿಂದ ಎಲ್ಲರನ್ನೂ ಸ್ವಾಗತಿಸುವ ಮಲ್ಲಿಗೆಯ ಸೌಂದರ್ಯಕ್ಕೆ, ಸುಂದರತೆಗೆ ಪ್ರತಿಕವಾಗಿ ಜಿ.ಐ ಮಾನ್ಯತೆ‌ ಹೊಂದಿದೆ. ಭೌದ್ಧಿಕ ಆಸ್ತಿ ಹಕ್ಕಿನಡಿ ನೊಂದಣಿಯಾದ ಉಡುಪಿ ಮಲ್ಲಿಗೆ ಬೌಗೋಳಿಕ ಸೂಚ್ಯಂಕದ ಪಟ್ಟಿಯಲ್ಲಿ ಸ್ಥಾನ ಪಡೆದು ಟ್ಯಾಗ್ ಹೊಂದಿದ್ದು ಘಮ ಘಮಿಸುವ ಪರಿಮಳದೊಂದಿಗೆ ಕಣ್ಣಿಗೆ ಮನಸ್ಸಿಗೆ ತಂಪನ್ನು‌ ಮೂಗಿಗೆ ಕಂಪನ್ನು ನೀಡುವ ಉಡುಪಿ ಮಲ್ಲಿಗೆ 700 ರಿಂದ 800 ಹೂ ಸೇರಿದರೆ ಒಂದು ಚಂಡು. ನಾಲ್ಕು ಚಂಡು ಸೇರಿದರೆ ಒಂದು ಅಟ್ಟಿ ,ಒಂದು ಅಟ್ಟಿಯಲ್ಲಿ ಸರಾಸರಿ 3 ಸಾವಿರ ಹೂವಿರುತ್ತದೆ.

‌ಭೌಗೋಳಿಕ ಸೂಚನೆ ಜಿ ಐ ಒಂದು ನಿರ್ದಿಷ್ಟ ಸ್ಥಳ ಪ್ರದೇಶಕ್ಕೆ ಅನುರೂಪವಾಗಿ ಕೆಲವು ವಸ್ತು ಗಳಿಗೆ ಬಳಸುವ‌ ಚಿಹ್ನೆ ಅಥವಾ ಮಾನ್ಯತೆ. ಸಂಪ್ರದಾಯಕ ವಿಶೇಷತೆಗಳನ್ನು ಹೊಂದಿರುವ ವಿಶ್ವ ವಾಣಿಜ್ಯ ಸಂಸ್ಥೆ ಸದಸ್ಯರಾಗಿ ನೊಂದಣಿ ಮತ್ತು ಸಂರಕ್ಷಣೆ ಕಾಯ್ದೆ ಹಕ್ಕನ್ನು ಹೊಂದಿದ‌ ದೇಶದ ಬೌದ್ಧಿಕ ಆಸ್ತಿಗಳ ಹಕ್ಕು ವ್ಯಾಪಾರ ವ್ಯವಹಾರ ಸಂಬಂಧಿತ ಅಂಶಗಳ ಕುರಿತಾದ ವಾಣಿಜ್ಯ ಸಂಸ್ಥೆಯ ಒಪ್ಪಂದದಂತೆ ಸದಸ್ಯರ ಭೌಗೋಳಿಕ ಪ್ರದೇಶದಲ್ಲಿ ಇರುವ ಅಪರೂಪದ ಅಗತ್ಯದ, ದಿನನಿತ್ಯ ಬಳಕೆಯಲ್ಲಿರುವ ಉತ್ಪನ್ನ ‌ಅಥವಾ ವಸ್ತುಗಳನ್ನು ಗುರುತಿಸುವ‌ ಸೂಚನೆ,

‌ವಾಣಜ್ಯ ಹೂ ಬೆಳೆಗಳಲ್ಲಿ ಮಲ್ಲಿಗೆ ಮುಖ್ಯ ವಾಗಿದ್ದು, ಪ್ರಕೃತಿಯ ಅನನ್ಯ ‌ಕೊಡುಗೆ‌ ನಿಸರ್ಗದ ಅತ್ಯ ಅದ್ಬುತ ಸೃಷ್ಟಿ. ಆದಾಯದ ಮೂಲವು ಹೌದು . ಹಬ್ಬ ‌ಹರಿದಿನಗಳಲ್ಲಿ, ಮದುವೆ ಮಂಟಪಗಳಲ್ಲಿ, ಜಾತ್ರೆ ಉತ್ಸವ ಗಳಲ್ಲಿ ಶುಭ ಕಾರ್ಯ, ಸೀಮಂತ, ದೇವರ ‌ಪೂಜಾ ಅಲಂಕಾರದಲ್ಲಿ ಮತ್ತು ನವವಧುವಿಗೆ ನಿಳ ಜಡೆ ಹೆಣೆದು ಅದಕ್ಕೆ‌ ಮಲ್ಲಿಗೆಯ ಹೂ ಸುತ್ತಿ ನವವಧುವನ್ನು ಶೃಂಗಾರ ಮಾಡುವಲ್ಲಿ ಮಲ್ಲಿಗೆಯ ಪಾತ್ರ ಬಹಳ ಮಹತ್ವದ್ದು. ‌ಗಾತ್ರದಲ್ಲಿ ಚಿಕ್ಕ ದಾದರು ಕೀರ್ತಿ ದೊಡ್ಡದು ಎನ್ನುವ ಮಾತು‌ ಮಲ್ಲಿಗೆ ಹೂವಿಗೆ ಅನ್ವಯವಾಗುತ್ತದೆ.

ಇಷ್ಟೆಲ್ಲ ಹೆಗ್ಗಳಿಕೆ ಹೊತ್ತು‌ ಮೆರೆಯುವ ನಮ್ಮ ಉಡುಪಿ ಶಂಕರಪುರ ಮಲ್ಲಿಗೆ ಅಭಿವೃದ್ಧಿಗೆ ಸ್ವಸಹಾಯ ಸಂಘಗಳು, ತೋಟಗಾರಿಕಾ‌ ಇಲಾಖೆ, ಕೃಷಿ ತರಬೇತಿ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ‌ನೀಡುತ್ತಿದ್ದಾರೆ. ಉಡುಪಿ ‌ತೋಟಗಾರಿಕಾ ಇಲಾಖೆಯ ‌ ಪುಷ್ಪ ಹರಾಜು ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದಲ್ಲಿ ಮಲ್ಲಿಗೆ ಕೃಷಿಯ ವೈಜ್ಞಾನಿಕ ಬೇಸಾಯ ಪದ್ಧತಿ ಬಗ್ಗೆ ತರಬೇತಿ ಶಿಬಿರ‌ ನಡೆಸಲಾಗುತ್ತದೆ ಆದರೆ ಸರಕಾರ ಮತ್ತು ‌ತೋಟಗಾರಿಕಾ‌ ಇಲಾಖೆ ಸಸ್ಯ ಶಾಸ್ತ್ರ ವಿಭಾಗ ಇನ್ನೂ ತೀವ್ರತರದಲ್ಲಿ ಜಾಗ್ರತರಾಗಬೇಕು . ಮಲ್ಲಿಗೆಯ ಬೆಳೆಗೆ‌ ಬೇಕಾಗುವ ಸಲಹೆ‌ ಸೂಚನೆಗಳನ್ನು ಜನಸಾಮಾನ್ಯರಿಗೆ‌ ಸಸ್ಯಶಾಸ್ತ್ರ ಜ್ಞರು‌ ನೀಡುತ್ತಾ ಬಂದಲ್ಲಿ ಮಲ್ಲಿಗೆ ಗಿಡ ಅಮರವಾಗಿ ಉಳಿಯಬಹುದು. ಇಲ್ಲದಿದ್ದರೆ ಕರ್ನಾಟಕದ ಉಪಯುಕ್ತವೆನಿಸಿದ ಅದೆಷ್ಟೋ ಜಾತಿಯ ಗಿಡ,‌ಮರ,‌ಬಳ್ಳಿ, ಔಷಧೀಯ ಸಸ್ಯಗಳು ಅಳಿವಿನಂಚಿನಲ್ಲಿ ಇರುವಂತೆ ಮಲ್ಲಿಗೆಯ ಕಥೆ ಆದಲ್ಲಿ ಆಶ್ಚರ್ಯ ವಿಲ್ಲ.

ಉಡುಪಿಯ ಸಮಿಪವಿರುವ ಮಲ್ಲಿಗೆ ಪುರವೆಂದು‌ ಹೆಸರು ಪಡೆದ ಶಂಕರಪುರ,ಕಟಪಾಡಿ,ಶಿರ್ವ, ಕಳತ್ತೂರು, ಇನ್ನಂಜೆ, ಬೆಳ್ಮಣ್,ಕುತ್ಯಾರ್,ಪೆರ್ಣಕಿಲಗಳಲ್ಲಿ ಅತೀ ಹೆಚ್ಚು ಮಲ್ಲಿಗೆ ಬೆಳೆಯುತ್ತಾರೆ. ಉಡುಪಿ ಮಲ್ಲಿಗೆಯ ಸಮಗ್ರ‌ಮಾಹಿತಿಗಾಗಿ ಟ್ಯಾಕಿಯಂಟ್ ಸಂಸ್ಥೆ ಅಭಿವೃದ್ಧಿ ಪಡಿಸಿದ ಆ್ಯಪ್ ನಲ್ಲಿ‌ ನಿತ್ಯದರ, ಮಲ್ಲಿಗೆ ಕೃಷಿ ಮಾಹಿತಿ ಗಿಡ‌ನಾಟಿವಿಧಾನ, ಗಿಡಗಳಿಗೆ ಭಾದಿಸುವ ರೋಗಗಳು ಹಾಗೂ ಅದರ ನಿಯಂತ್ರಣ ವಿಧಾನದ ಮಾಹಿತಿ ಇದೆ. ಉಡುಪಿ ಮಲ್ಲಿಗೆ ಬೆಳೆಗಾರರ ಸಂಘದಿಂದ ಬೇಡಿಕೆ ಮತ್ತು ಉತ್ಪಾದನಾ ಪ್ರಮಾಣದ ಆಧಾರದಲ್ಲಿ ‌ದರನಿಗದಿಯಾಗುತ್ತದೆ.

ಮಲ್ಲಿಗೆಯ ಕೋಮಲವಾದ ಮೊಗ್ಗು ಅರಳಿ ಸುವಾಸನೆ ಕುಂದುವ ಮೊದಲೇ ಉಪಯೋಗಿಸ ಬೇಕು.ಗಿಡದಿಂದ ‌ಸಮಯಕ್ಕೆ‌ ಸರಿಯಾಗಿ ಮೊಗ್ಗು‌ಆರಿಸಿ ನೆಯ್ದರೇನೆ ಮಾರಾಟಕ್ಕೆ ಸಿದ್ದವಾದ ಸುಂದರ ‌ಮಾಲೆಯಾಗುತ್ತದೆ.ಮಲ್ಲಿಗೆ ‌ಮೊಗ್ಗು ನೆಯ್ದುವುದು ಒಂದು ‌ಕಲೆ.ಕೈ ಚುರುಕು‌ ಇರುವವರು ಅತೀ ಬೇಗನೆ‌ ಮೊಗ್ಗು ಹಾಳಾಗದಂತೆ ಸುಂದರ ‌ಮಾಲೆ ಯಾವುದೇ ಪ್ರಯಾಸವಿಲ್ಲದೇ ನೆಯ್ಯುತ್ತಾರೆ.

ಲಕ್ಷಾಂತರ ‌ರೂಪಾಯಿ‌ ವ್ಯವಹಾರದ ಮಲ್ಲಿಗೆ ಬೆಳೆಯನ್ನು ಸಮಯಕ್ಕೆ ಸರಿಯಾಗಿ ಆರೈಕೆ ‌ಮಾಡದಿದ್ದಲ್ಲಿ ಗಿಡಗಳು ‌ಹುಳದ‌ ಬಾದೆಗೆ‌ ಗುರಿಯಾಗುತ್ತವೆ. ಮಲ್ಲಿಗೆ ಇಳುವರಿ ಜಾಸ್ತಿಆದಾಗ ದರ ಕಡಿಮೆ ಆಗಿ ನಷ್ಟವಾದರೂ ಮಲ್ಲಿಗೆ ಕೊಯ್ಯವುದು ಅನಿವಾರ್ಯ. ಗಿಡದಲ್ಲಿ ‌ಹೂ ಹಾಗೆ ಬಿಟ್ಡರೆ ಗಿಡ‌ಹಾಳಾಗುವುದು. ಗಿಡವನ್ನು ಪ್ರತಿ ವರ್ಷ ಸ್ವಚ್ಛ ಗೊಳಿಸಿ‌ ಉತ್ತಮ‌ ನಿರ್ವಹಣೆ ಮಾಡಬೇಕು.ಚಳಿಗಾಲದ ‌ಮುಗಿಯುವ ವೇಳೆಗೆ ಬುಡಕ್ಕೆ‌ಗೊಬ್ಬರ‌ ಹಾಕಿ ನೆಲದ‌ ಫಲವತ್ತತೆ‌‌ ಕಾಯ್ದಕೊಳ್ಳಲು ಗಿಡದ ಬುಡದ ಮಣ್ಣನ್ನು 2ರಿಂದ 3 ವರ್ಷ ಕ್ಕೊಮ್ಮೆ ಬದಲಾಯಿಸ ಬೇಕಾಗುತ್ತದೆ ಸಾಮಾನ್ಯವಾಗಿ ‌ಸಾವಯವ ಪದಾರ್ಥಗಳಿಂದ ಕೂಡಿದ ಭೂಮಿಯಲ್ಲಿ ಮರಳು ಮಿಶ್ರಿತ ಕೆಂಪು ‌ಮಣ್ಣು ಒಣ‌ ಗೊಬ್ಬರ ಮಲ್ಲಿಗೆ ಬೆಳೆಗೆ‌ ಉತ್ತಮ.

ಉಡುಪಿ ‌ಮಲ್ಲಿಗೆಯಿಂದ ಸುವಾಸಿತ ‌ದ್ರವ್ಯ ತಯಾರಿಕೆಗೆ ಟಿ.ಎ.ಪೈ ಮೆನೇಜ್ ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಪ್ಮಿ) ತಯಾರಿನಡೆಸುತ್ತಿದೆ. ಮಲ್ಲಿಗೆ ಕೇವಲ ನಮ್ಮ ‌ದೇಶಕ್ಕೆ ಮಾತ್ರ ಸಿಮಿತವಾಗಿರದೆ ವಿದೇಶದಲ್ಲೂ ‌ಬೇಡಿಕೆ‌ ಇದೆ. ಮಲ್ಲಿಗೆ ಹೂವಿನಲ್ಲಿ ಏನೊ ಒಂದು ವಿಶೇಷ ವಿದ್ದು. ಅರಳಿದ ಹೂವಿಗಿಂತ ಮೊಗ್ಗಿನ ಮಾಲೆಗೆ ಬೆಲೆ ಹೆಚ್ಚು. ಮಲ್ಲಿಗೆ ‌ಬೇಡಿಕೆ‌ ಹೆಚ್ಚಿದ್ದು ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತರ್ಜಲದ‌ಕೊರತೆ ಹವಾಮಾನ ದಲ್ಲಿ ‌ಆಗುತ್ತಿರುವ ವ್ಯತ್ಯಾಸಗಳು ಆಕಾಲದಲ್ಲಿ ಬಿಳುವ‌ ಮಳೆ ಮಲ್ಲಿಗೆಯ ಬೆಳೆಗೆ ಮಾರಕವಾಗುತ್ತಿದೆ. ಮಲ್ಲಿಗೆ ಪ್ರಕೃತಿ ‌ನಮಗೆ ನೀಡಿದ ವರ ಪ್ರಸಾದ.ಮಲ್ಲಿಗೆ ಅಂತಹ ಪವಿತ್ರ ಹೂವನ್ನು ಬೆಳೆವ‌ ನಮ್ಮ‌ ನಾಡು ಪುಣ್ಯದ ಬೀಡು.

Leave a Reply

Your email address will not be published. Required fields are marked *