ಜನರ ಅಳು-ಗೋಳು ಕೇಳಿಸುತ್ತಿಲ್ಲವೇ ಎಲ್ಲೋ ಎಕ್ಸ್ ಪ್ರೆಸ್… ಸರ್ಕಾರದಿಂದಲೇ ತೊಂದರೆಗೆ ಸಿಲುಕಿತಾ ಕ್ಯಾಬ್ ಸರ್ವಿಸ್…Yellow Express -HeggaddeSamachar –

ಅಲ್ಲಿ ಹಣ ಹೂಡಿದವರು ಸಾವಿರಾರು ಜನ. ಪ್ರತಿ ತಿಂಗಳು ತಮ್ಮ ಖಾತೆಗೆ ನಾವು ಹೂಡಿಕೆ ಮಾಡಿದ್ದಕ್ಕಿಂತ ಹಣಕ್ಕೆ ಬಡ್ಡಿಗಿಂತಲೂ ಅಧಿಕ ಲಾಭ ಬರುತ್ತದೆ ಎಂದುಕೊಂಡವರವರು. ಅಷ್ಟೇ ಅಲ್ಲ ಹಣದಷ್ಟೇ ಮೌಲ್ಯದ ಕಾರುಗಳು ನಮ್ಮ ಬೆಂಗಳೂರಲ್ಲಿ ನಮ್ಮ ಹೆಸರಿನಲ್ಲಿ ಓಡಾಡುತ್ತೆ ಅಂದುಕೊಂಡಿದ್ದವರಿಗೆ ಈಗ ಹಣವೂ ಇಲ್ಲ, ಕಾರೂ ಇಲ್ಲ, ಹೂಡಿದ್ದ ಹಣಕ್ಕೆ ಗ್ಯಾರೆಂಟಿಯೂ ಇಲ್ಲದೆ ಊಟ ನಿದ್ದೆ ಬಿಟ್ಟು, ಪೋಲೀಸು, ಕೋರ್ಟು, ಸಿ.ಐ.ಡಿ. , ಪ್ರತಿಭಟನೆ ಅಂತ ಓಡಾಡುವಂತಾಗಿದೆ.
ಹೌದು! ಇಷ್ಟೆಲ್ಲಾ ಕರ್ಮಕಾಂಡ ಎಸಗಿದ್ದು ಎಲ್ಲೋ ಎಕ್ಸ್ ಪ್ರೆಸ್ ಎನ್ನುವ ಕಂಪೆನಿ. ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡು, ಇದೀಗ ಕೈಗೆ ಸಿಗದೆ ತಲೆ ಮರೆಸಿಕೊಂಡು, ಯಾರ ಸಂಪರ್ಕಕ್ಕೂ ಸಿಗದೆ ಹಣದ ಜೊತೆಗೆ ಭೂಗತವಾಗಿದೆ.
ಒಂದು ವಿವರದ ಪ್ರಕಾರ ಈ ಹಗರಣದಲ್ಲಿ ಪ್ರಮುಖ ಆರೋಪಿ ಎನಿಸುವುದು ಸಚಿನ್ ನಾಯಕ್ ಆದರೆ ಇಷ್ಟೆಲ್ಲ ಹಗರಣದ ಕಿಂಗ್ ಪಿನ್ ಜೋಸ್ ಥಾಮಸ್ ಮತ್ತು ಆತನ ಸಹಚರ ಕೂಡ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.

ಇಷ್ಟು ಬೇಗ ಹೀಗೆ ಯಾಕಾಯ್ತು?
ನಮಗೆ ಸರಿಯಾಗಿ ಪ್ರತಿ ತಿಂಗಳು ಹಣ ಬರುತ್ತಿತ್ತು ಸ್ವಾಮಿ:
ನಮಗೆ ಪ್ರತಿ ತಿಂಗಳು ಹಣ ಬರುತ್ತಿತ್ತು. ಕಂಪೆನಿ ನಮಗೆ ಸರಿಯಾದ ಐ.ಡಿ, ಜೊತೆಗೆ ಎಗ್ರಿಮೆಂಟನ್ನು ನೀಡಿತ್ತು. ನಾವಂದುಕೊಂಡಂತೆ ನಮ್ಮ ಕಾರುಗಳೂ ಕೂಡ ರಸ್ತೆಯಲ್ಲಿ ಓಡಾಡುತ್ತಿತ್ತು… ಎಲ್ಲ ಸರಿಯಿದೆ ಅನ್ನೋವಾಗ ಸಚಿವ ಆರ್. ಅಶೋಕ್ ಕಡೆಯಿಂದ ಕಂಪೆನಿಗೆ ಸಮಸ್ಸ್ ಬಂತು, ಇಷ್ಟೊಂದು ಹಣದಿಂದ ಹೇಗೆ ವ್ಯವಹಾರ ಆಯ್ತು ಎಂಬುದಕ್ಕೆ ತನಿಖೆಯಾಗಬೇಕು ಅಂತ ಸಿ.ಐ.ಡಿಗೆ ಒಪ್ಪಿಸಿದ್ರು… ಸುಖಾ ಸುಮ್ಮನೆ ನಮ್ಮ ಹೊಟ್ಟೆ ಮೇಲೆ ಬರೆ ಬಿತ್ತು… ಕಂಪೆನಿ ಆಡಳಿತದವರು ಹೆದರಿ ಓಡಿದರು… ಈಗ ನಮಗೆ ಸರ್ಕಾರವೂ ಸಹಾಯಕ್ಕಿಲ್ಲ, ಕಂಪೆನಿಯ ಸಹಕಾರವೂ ಇಲ್ಲ. ನಾವು ಮಾಡಿರುವ ಸಾಲ ನಾವೇ ತೀರಿಸುವಂತಾಯ್ತು ಎನ್ನುತ್ತಾರೆ ಮೋಸಹೋದ ಬಂಡವಾಳದಾರರು.
ಅಂದ ಹಾಗೆ ಈ ರೀತಿಯ ಹಗರಣ ನಡೆಸದಿರುವುದು ಇದೇ ಮೊದಲಲ್ಲ.
ಈ ಹಿಂದೆ ಇದೇ ಎಲ್ಲೋ ಎಕ್ಸ್ ಪ್ರೆಸ್ ಆನ್ ಲೈನ್ ಕ್ಯಾಬ್ ಸರ್ವೀಸ್ ಹೆಸರಿನಲ್ಲಿ ಸುಮಾರು ೧೦೦ ಜನರಿಂದ ಲಕ್ಷಾಂತರ ರೂ. ಸಂಗ್ರಹಿಸಿದ್ದ ಬಗ್ಗೆ ಕೇರಳದ ಎರ್ನಾಕುಲಂ ಪೋಲೀಸ್ ಠಾಣೆಯಲ್ಲಿ ಇದೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ತುಕ್ಕು ಹಿಡಿಯುತ್ತಿರುವ ೧೦೦ ಕಾರುಗಳ ಗತಿಯೇನು!?
ಈಗಾಗಲೇ ಎಲ್ಲೋ ಎಕ್ಸ್ ಪ್ರೆಸ್ ಹೆಸರಿನಲ್ಲಿ ಸಂಸ್ಥೆ ನೂರು ಕಾರುಗಳನ್ನ ಖರೀದಿಸಿದ್ದು, ಅವು ಇಷ್ಟು ದಿನ ರೋಡಲ್ಲಿ ಓಡಾಡುತ್ತಿತ್ತು ಇದೀಗ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುವ ಸ್ಥಿತಿಗೆ ಮರಳುತ್ತಿವೆ. ತನಿಖೆಯಾಗಿ ಅದು ಮುಗಿಯುವಷ್ಟರಲ್ಲಿ ಅದರ ಮೌಲ್ಯ ಪಕ್ಕಾ ಕುಸಿಯುತ್ತದೆ ಎಂದು ಅನೇಕರು ಆಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಮೋಸ ಹೋಗಿರುವ ಸಾರ್ವಜನಿಕರು ಸಿ.ಐ.ಡಿ ಗೆ ತಮ್ಮ ಹಣದ ಹೂಡಿಕೆಯ ನಕಲು ಪ್ರತಿ ಮತ್ತು ಕಂಪ್ಲೆಂಟ್ ಅರ್ಜಿಯನ್ನ ಸಲ್ಲಿಸಿದ್ದು, ವಿಚಾರಣೆಯ ಭಾಗವಾಗಿ ಸಂಸ್ಥೆಯ ೮ ಜನರನ್ನ ಪೋಲೀಸರು ಬಂಧಿಸಿದ್ದಾರೆ.

ಇಷ್ಟೆಲ್ಲಾ ಸರ್ಕಾರಕ್ಕೆ ಬಹುವಾಗಿ ತಿಳಿದಿದ್ದರೂ ಈ ಬಗ್ಗೆ ಹೆಚ್ಚು ಗಮನ ಕೊಡುತ್ತಿಲ್ಲ, ಜನರಿಗೆ ಸಾಲ ಮಾಡಿ ಹೂಡಿರುವ ಹಣ ಹಿಂತಿರುಗುತ್ತೋ ಇಲ್ಲವೋ ಗೊತ್ತಿಲ್ಲ…
ಮಾನ್ಯ ಮುಖ್ಯಮಂತ್ರಿಗಳೇ ನೀವಾದರೂ ಈ ಬಗ್ಗೆ ಗಮನಕೊಡಿ…
ಜನರ ನೋವಿಗೆ ಸ್ಪಂಧಿಸಿ…
ರೀ: ಹೆಗ್ಗದ್ದೆ ಸಮಾಚಾರ್
