ಜನಜೀವನ : ಲಿಂಗದ ನಡುವೆ ಜೊಲ್ಲು ಸುರಿಸುವ ಲೈಂಗಿಕತೆ, ಅನಾಚಾರದಿಂದ ಅತ್ಯಾಚಾರ ಮಾತೃಸಮಾನ ಮಕ್ಕಳಿಂದ ಮುತ್ತಜ್ಜಿವರೆಗೆ ಅತ್ಯಾಚಾರಿಯ ಭೋಗದವಳು!!! -HeggaddeSamachar

Spread the love

ನೋವು ನಲಿವುಗಳೆಂಬ ಬಾಳ ಪುಟದಲ್ಲಿ, ಸಂತಸ ಸಂಭ್ರಮ ಒಂದೊಂದು ಮಗ್ಗುಳುಗಳಾದರೆ, ಸುಖದ ಸುಪ್ಪತ್ತಿಗೆಯಲ್ಲಿ ಕಾಲಕಳೆಯುವ ಶ್ರೀಮಂತ ಮನೆತನ; ಇನ್ನೊಂದೆಡೆ ಬೆವರಹನಿ ಭುವಿಗೆ ಅಪ್ಪುಗೆಯ ನೀಡಿದರೂ… ಆರಕ್ಕೆರದೆ! ಮೂರಕ್ಕಿಳಿಯದೇ! ಬದುಕು ಸಾಗಿಸುವ ಸಾಮಾನ್ಯ ಜನರು; ಮಗದೊಂದು ಮೂಲೆಯಲ್ಲಿ ಅಂಗಲಾಚಿ! ಕಾಡಿಬೇಡಿ! ಜೀವನ ಜಂಜಾಟದಲ್ಲಿ ಬೆಂದು, ಸಾವ ನೋವ!!! ಬದುಕು ಎತ್ತಕಡೆಯೆಂದೇ ತಿಳಿಯದೇ… ಜೀವ ಇದೆ ಅಷ್ಟೇ ಎನ್ನುವಂತೆ, ನೋವಿನೌತಣದಲ್ಲಿ ನರಳಾಡುವ ನತದೃಷ್ಟರು…
ಆದರೆ ಎಲ್ಲವೂ ಗುರುತಿಸಲ್ಪಡುವುದು ಜನ ಅಥವಾ ಜನರು ಎಂಬ ನಾಮಧ್ಯೇಯದೊಂದಿಗೆ…
ಹಣದ ಮೋಹವೋ ಹಸಿವಿನ ದಾಹವೋ… ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವ ಮಟ್ಟಕ್ಕೆ ಬದಲಾವಣೆಗಳು ಎಷ್ಟೊಂದು ರೀತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಯೋಚಿಸುವಾಗ ಅಚ್ಚರಿಯೊಂದು ಕಣ್ಣಮುಂದೆ ಹಾಯ್ದು ಹೋದರೆ, ಒಂದೊಮ್ಮೆ ಕೆಲವೊಂದು ಸಮಯ, ಸಂದರ್ಭ, ಸನ್ನಿವೇಶಗಳ ರೂಪದಲ್ಲಿ ನಮ್ಮೆದುರು ಯಕ್ಷಪ್ರಶ್ನೆಯಾಗಿ! ಕಾಡುವಂತೆ ಇದ್ದರೂ… ಹೀಗೊಂದು ಬದುಕು ಸಾದ್ಯನಾ!? ಎನ್ನುವಷ್ಟರ ಮಟ್ಟಕ್ಕೆ ಯೋಚನೆಯ ತಾಳ ಮನ ತಟ್ಟುತ್ತಾ, ಕೆಲವೊಂದು ಪಾಠಗಳು ಮನದಟ್ಟಾಗುತ್ತವೆ.

ಬದುಕು ಎಂಬ ಪದವದು ಮೂರಕ್ಷರ. ಅದರೂ ಅದೊಂದು ಎಷ್ಟೊಂದು ವಿಭಿನ್ನತೆಯನ್ನು ಪಡೆದಿದೆ ಅಲ್ವಾ…!!!
ಬದುಕು ನಡೆಸುವುದಕ್ಕಾಗಿ ಸಂಪಾದನೆ ಎಂಬ ಗಳಿಕೆಗೆ ಹಗಳಿರಳು ಶ್ರಮ ಪಡುವ ಶ್ರಮಜೀವಿಗಳು, ಅದು ಯಾವೆಲ್ಲಾ ರೀತಿ ನೀತಿ ರುವಾಜುಗಳನ್ನು ಹೊಂದಿರುತ್ತದೆ, ಯೋಚಿಸಿದಿರೇ!!!
ಕಣ್ಣಿಗೆ ಕಾಣುವ ದಿನನಿತ್ಯ ಎದುರಾಗುವ ಕೆಲಸಗಳು ಒಂದೆಡೆ, ನಾವು ಆಶಕ್ತರಾಗಿ ಅನಾರೋಗ್ಯವಾದಾಗ ಎದುರಾಗುವ ವೈದ್ಯರು ನಮ್ಮ ನೋವ ನೀಗಿಸಿದರೆ, ದೇವರೆಂಬ ಪಟ್ಟದಲ್ಲಿಟ್ಟು, ದೇವರೆ ಕಾಪಾಡಿದಿರಿ ಎನ್ನುತ್ತಾ ಮನದಲ್ಲೇ ಪ್ರಾರ್ಥನೆ,
ಬೇಡುವ ನಾವುಗಳು ಭಕ್ತರಾಗಿ, ಭಗವಂತನ ಹುಡುಕುತ್ತಾ ಸಾಗುವ ಪಯಣ. ಈ ಪಯಣಕ್ಕೆ ಹೆಗಲಾಗುವ ಚಾಲಕರು! ಅವರ ದನಿವು ಹಸಿವನ್ನು ಬದಿಗಿಟ್ಟು… ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಚಾಲಕ. ಜೀವ ಇಲ್ಲದ ರಥಕ್ಕೆ ದ್ರವರೂಪದ ತೈಲದರ್ಪಣೆ ಮಾಡಿ, ಜೀವತುಂಬಿ ಚಾಲಕರು ನಿಯಂತ್ರಕರಾಗಿ, ಅದೆಷ್ಟು! ಏಳುಬೀಳು ತಿರುವುಗಳಲ್ಲಿಯೂ ನಮ್ಮನ್ನು ಜೋಪಾನವಾಗಿ ಕರೆದೊಯ್ಯುವ ಚಾಲಕರ ತಾಳ್ಮೆ ತ್ಯಾಗಮನೋಭಾವ ಹೇಳತಿರದು… ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕ್ಲೀನರ್ ಕಂಡೆಕ್ಟರ್ ಕಲೆಕ್ಟರ್ ಮೆಕ್ಯಾನಿಕ್ ಎಲ್ಲರ ಶ್ರಮದ ತೊಟ್ಟಿಲೆಂದರೆ ತಪ್ಪಾಗಲಾರದಲ್ವೇ!!!
ನಮಗೆ ಬೇಕಾದ ಪರಿಕರಗಳ ಲಭ್ಯತೆಗೆ ಸುಲಭವಾದ ಮಾರುಕಟ್ಟೆ ಒದಗಿಸುವ ವ್ಯಾಪಾರಸ್ಥರು ಅದು ಹಲವಾರು ಬಗೆಗಳ ತೋರಣ, ಹೂ ಹಣ್ಣು ತರಕಾರಿಯಿಂದ ಹಿಡಿದು ಟಿವಿ ಮೊಬೈಲ್ ಅಲ್ಲದೆ ಪತ್ರಿಕೆಗಳು, ವಾಹನಗಳು ಎಲ್ಲದರ ಹೂರಣ!!! ಮಾರುಕಟ್ಟೆಯೆಂಬ ನಾಮಕರಣ.
ಇವುಗಳ ನಿಯಂತ್ರಣಕ್ಕೆ, ಭ್ರಷ್ಟಚಾರ ನಿರ್ಮೂಲನೆಗೆ, ಅರಕ್ಷಕರ ನೇಮಕ. ಅದು ಕಳ್ಳ ಪೋಲಿಸ್ ಆಟ…
ಅವರ ಹಿತದೃಷ್ಟಿ ಕಾಪಾಡೋಕೆ ರಾಜರೋಷವಾಗಿ ರಿಮೋಟ್ ಕಂಟ್ರೋಲರ್ ಎಂಬುವಂತೆ ವರ್ತಿಸುವ ರಾಜಕೀಯ!!! ಇವರಿಗೆ ಆರಿವು ಮೂಡಿಸಲು ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಕ್ಷೇತ್ರಗಳ ನಿತ್ಯ ದಿಬ್ಬಣ…
ಶಿಕ್ಷಣವೆಂಬ ಆಲಯದಲ್ಲಿ ಸುಶಿಕ್ಷಣ ನೀಡುತ್ತಾ ವಿದ್ಯಾರ್ಜನೆ ಮಾಡುವ ಭೋಧಕರು…
ಇದು ಎಲ್ಲದಕ್ಕೂ ಮಿಗಿಲಾಗಿ ದೇಶವೆಂಬ ಬೆಸುಗೆಯನ್ನು ಸುರಕ್ಷಿತವಾಗಿ ಇಡಲು ಬಯಸುವ ಸೇನೆಗಳು, ಈ ಸೇನೆಗಳಿಗೆ ಹಾಗೂ ಇತರೆಲ್ಲಾ ಅಂತರಾಷ್ಟೀಯ ಮಟ್ಟದ ಆಗುಹೋಗುಗಳ ಪಯಣಕ್ಕೆ ವಾಯುನೆಲೆ, ಇತ್ತ ಕೆಳಗೆ ನೋಡಿದರೆ ಪೇಟ್ರೋಲಿಯಂ ಹಾಗೂ ಇನ್ನಿತರ ಸೇವೆಗಳ ಸುಲಭವಾಗುವಂತೆ ನೌಕಾನೆಲೆ ಇವುಗಳ ಕಾರ್ಯ ಸುಲಭಗೊಳಿಸುವುದಕ್ಕಾಗಿ ಅಧಿಕಾರದ ಹಸ್ತಾಂತರ… ರಾಷ್ಟ್ರಪತಿಯಿಂದ ಆರಂಭಗೊಂಡು ಗ್ರಾಮಲೆಕ್ಕಿಗರವರೆಗೆ…
ಇವುಗಳೆಲ್ಲದರ ಮೂಲ ಸ್ವರೂಪ ನಾವೇ ‘ಜನ ಸಾಮಾನ್ಯರು”
ನಾವಿಲ್ಲದಿದ್ದರೆ ಏನು ಇಲ್ಲ ಅಲ್ವಾ..
ಅದರೆ ನಾವು ನಮ್ಮ ಕರ್ತವ್ಯ ಕರ್ಮಗಳನ್ನು ನಿಷ್ಟೆಯಿಂದ ಮಾಡುತ್ತಿದ್ದೆವೇಯೋ ಖಂಡಿತ ಇಲ್ಲ.. ಅದೆಷ್ಟೋ ಮೂಖಪ್ರಾಣಿಗಳ ರೋಧನ… ನಮ್ಮ ಸುಲಭಕ್ಕಾಗಿ ಅವುಗಳನ್ನು ಬಲಿಪಶುವಾಗಿಸಿದ್ದೇವೆ, ಸ್ವತಂತ್ರವಾಗಿ ಹಾರಬೇಕಾಗಿದ್ದ ಹಕ್ಕಿಗಳೆಲ್ಲ ನಮ್ಮ ಖುಷಿಗಂತೆ… ಪಂಜರದೊಳಗೆ…!!! ಈ ಮನುಜ ಎಷ್ಟು ಸ್ವಾರ್ಥಿ ಹಾಗೂ ಕ್ರೂರಿ ಅಲ್ವಾ..!?!
ಕೊಲೆಗಡುಕ ಪ್ರೀತಿಯ ಬಲೆ ಹೆಣೆದರೆ ಸ್ವಾರ್ಥಿ, ಹೊಟ್ಟೆಗಾಗಿ ತಿಂದರೂ ಮುಗಿಯದ ಹಸಿವು, ಕರಗದ ದಾಹ… ಮುಗಿಯದ ವ್ಯಾಮೋಹ… ಲಿಂಗದ ನಡುವೆ ಜೊಲ್ಲು ಸುರಿಸುವ ಲೈಂಗಿಕತೆ, ಅನಾಚಾರದಿಂದ ಅತ್ಯಾಚಾರ ಮಾತೃಸಮಾನ ಮಕ್ಕಳಿಂದ ಮುತ್ತಜ್ಜಿವರೆಗೆ ಅತ್ಯಾಚಾರಿಯ ಭೋಗದವಳು!!! ಮರೆತಿರೆನೋ ಹೆಣ್ತನದಿಂದ ಜನಸಾಮಾನ್ಯನಾಗಿ ಜನ್ಮ ತಾಳಿರುವೆ ಎಂಬುವುದನ್ನು…
ಶಿಷ್ಟಚಾರಗಳ ತಿಳಿಯದ ಶಿಕ್ಷಣ ಪಡೆದರೇನು ಬಂತು;
ಎಲ್ಲವೂ ಅತೀ ಆಸೆಗಳ ದೆಸೆಯಲ್ಲಿ… ಏನ್ ಜನ್ಮ ಅಂತೀರಾ ನಮ್ಮಗಳದ್ದು.
ಅದು ಎಲ್ಲೊ ಓದಿದ ನೆನಪು ಮೂಕಪ್ರಾಣಿಗಳು ಮಾತಾಡುವಂತಿದ್ದರೆ… ನಾವುಗಳು ಮೂಕಪ್ರೇಕ್ಷಕರಾಗಿ ಇರಬೇಕಿತಂತೆ… ನಿಜ ಅಲ್ವಾ…!!!
ಯಾರಿಗೂ ಕೇಡು ಬಗೆಯದೇ…ಬೇಗೆಯ‌ ತಣಿಸುವವನಾಗೋ ಓ ಮನುಜ…
ಓ! ಜನ… ನೀ ಮನುಜ! ಏಳು ಬೀಳು ಸಹಜ!!! ಇರಲಿ ಒಂದು ಮಾನವೀಯ ಬೀಜ…!?!!

  • ಚೈತ್ರ ವರ್ಕಾಡಿ

One thought on “ಜನಜೀವನ : ಲಿಂಗದ ನಡುವೆ ಜೊಲ್ಲು ಸುರಿಸುವ ಲೈಂಗಿಕತೆ, ಅನಾಚಾರದಿಂದ ಅತ್ಯಾಚಾರ ಮಾತೃಸಮಾನ ಮಕ್ಕಳಿಂದ ಮುತ್ತಜ್ಜಿವರೆಗೆ ಅತ್ಯಾಚಾರಿಯ ಭೋಗದವಳು!!! -HeggaddeSamachar”

Leave a Reply

Your email address will not be published. Required fields are marked *