News (ಸುದ್ದಿ)

ಚಿರು ಅಭಿಮಾನಿ ಬಳಗದ ವತಿಯಿಂದ ಪಿರಿಯಾಪಟ್ಟಣದ ಕನಕಭವನದಲ್ಲಿ ಶೃದ್ಧಾಂಜಲಿ: heggaddesamachar

Spread the love

ಕನ್ನಡದ ಯುವ ನಾಯಕ ನಟ ಚಿರಂಜೀವಿ ಸರ್ಜಾ ಇತ್ತೀಚೆಗೆ ಹೃದಯಾಘಾತ ದಿಂದ ಇಹಲೋಕ ತ್ಯಜಿಸಿದ್ದಾರೆ, ಅವರ ನೆನಪಿನಾರ್ಥವಾಗಿ ಇಂದು ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಹಾಗೂ ಚಿರು ಅಭಿಮಾನಿ ಬಳಗದ ವತಿಯಿಂದ ಪಿರಿಯಾಪಟ್ಟಣ ದ ಕನಕಭವನದಲ್ಲಿ ಶೃದ್ಧಾಂಜಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು,

ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದ ಉದೋನ್ಮುಖ ನಟರಾಗಿದ್ದು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು, ಆದರೆ ದುರಾದೃಷ್ಟ ವಶಾತ್ ಹೃದಯಾಘಾತ ವಾಗಿ ಮೃತಪಟ್ಟಿದ್ದು, ಸಹೋದರ ದ್ರುವ ಸರ್ಜಾ ಹಾಗೂ ಪ್ರೀತಿಯ ಮಡದಿ 4 ತಿಂಗಳ ಗರ್ಭಿಣಿ ಮೇಘನಾ ರಾಜ್ ಸೇರಿದಂತೆ ಕುಟುಂಬ ಹಾಗೂ ಅಪಾರ ಅಭಿಮಾನಿಗಳನ್ನ ಅವರನ್ನು ಬಿಟ್ಟು ಅಗಲಿದ್ದಾರೆ, ಈ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ , ಒಬ್ಬ ನಟನನ್ನು ಕಳೆದುಕೊಂಡ ನಾಡು ಬಡವಾಗಿದೆ, ಇಷ್ಟು , ದುಃಖದ ಸಂಗತಿ ಬೇರೆ ಯಾವ ನಟನಿಗೂ ಬಾರದಿರಲಿ,, ಇಂತಹ ಒಬ್ಬ ನಟ ಮತ್ತೆ ಮೇಘನಾ ರಾಜ್ ಗರ್ಭದಲ್ಲಿ ಹುಟ್ಟಿಬರಲಿ ಎಂದು ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಮೈಸೂರು ಜಿಲ್ಲಾ ಅಧ್ಯಕ್ಷ ನೇರಳಕುಪ್ಪೆ ನವೀನ್,ಕಂತೆ ಕೊಪ್ಪಲು ರಮೇಶ್, ಶಿವಪ್ಪ ಕೋಮಲಾಪುರ, ಕಲ್ಕೆರೆ ಮಾ ಕಲ್ಕೆರೆ ಮಹದೇವ್, ದೇಪೂರು ಕರಿಗೌಡ, ನೀಲಕಂಠ, ಸೀಗೆಕೋರೇ ಕರಿಗೌಡ, ತಾತನಹಳ್ಳಿ ಪದ್ಮನಾಭ, ಮಾಗೋಡು ಬಸವರಾಜು, ಅಲ್ಪನಾಯಕನಹಳ್ಳಿ ಮಹಾದೇವ, ಗಂಗನ ಕುಪ್ಪೆ ನಾಗರಾಜ, ಬೆಮ್ಮತ್ತಿ ರೇಣು, ಭಾರತಿನಗರ ಸುದೀಪ್, ವಕೀಲರಾದ ಮಠದಕೊಪ್ಪಲು ಚಂದ್ರೇಗೌಡ, ಕೋಟೆ ಪ್ರಕಾಶ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *