News (ಸುದ್ದಿ)

ಚಿರಂಜೀವಿ ಸರ್ಜಾ ಪುಣ್ಯ ಸ್ಮರಣೆ- ಅಭಿಮಾನಿಗಳಿಂದ ನಮನ: heggaddesamachar

Spread the love

ನಟ ಚಿರಂಜೀವಿ ಸರ್ಜಾ ನಿಧನ, ಪುಣ್ಯಸ್ಮರಣೆ ಯಂಗ್ ಟೈಗರ್ಸ್ ಹಾಗೂ ಮೊತ್ತ ಗ್ರಾಮದ ಚಿರು ಅಭಿಮಾನಿ ಬಳಗದಿಂದ ಕಾರ್ಯಕ್ರಮ.

ಕನ್ನಡದ ಯುವ ನಾಯಕ ನಟ ಚಿರಂಜೀವಿ ಸರ್ಜಾ ನಿಧನ ಹಿನ್ನಲೆ ಎಚ್,ಡಿ,ಕೋಟೆ ತಾಲೂಕಿನ ಯಂಗ್ ಟೈಗರ್ಸ್ ಸ್ನೇಹ ಬಳಗ ಹಾಗೂ ಚಿರು ಅಭಿಮಾನಿ ಬಳಗದ ವತಿಯಿಂದ 11ನೇ ದಿನದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಚ್,ಡಿ,ಕೋಟೆ ತಾಲೂಕಿನ ಮೊತ್ತ ಗ್ರಾಮದ ಕನಕ ಪುತ್ಥಳಿ ಮುಂಭಾಗ ಚಿರಂಂಜೀವಿ ಸರ್ಜಾ ರ ಭಾವಚಿತ್ರವಿರಿಸಿ ಪುಷ್ಪಾರ್ಚನೆಗೈಯುುವುದರ ಮೂಲಕ ನಮನ ಸಲ್ಲಿಸಿದರು. ಇದೇ ಸಂದರ್ಭ ಅಭಿಮಾನಿಗಳು ಮಾತನಾಡಿ ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದ ಉದೋನ್ಮುಖ ನಟರಾಗಿದ್ದು, 22 ಚಿತ್ರಗಳಲ್ಲಿ ನಟಿಸಿದ್ದರು. ಆದರೆ ದುರಾದೃಷ್ಟ ಹೃದಯಾಘಾತ ವಾಗಿ ಮೃತಪಟ್ಟಿದ್ದಾರೆ.

ಸಹೋದರ ದ್ರುವ ಸರ್ಜಾ ಹಾಗೂ ಪ್ರೀತಿಯ ಮಡದಿ 4 ತಿಂಗಳ ಗರ್ಭಿಣಿ ಮೇಘನಾ ರಾಜ್ ಸೇರಿದಂತೆ ಕುಟುಂಬ ಹಾಗೂ ಅಪಾರ ಅಭಿಮಾನಿಗಳನ್ನ ಅವರನ್ನು ಬಿಟ್ಟು ಅಗಲಿದ್ದಾರೆ.

ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.ಒಬ್ಬ ನಟನನ್ನು ಕಳೆದುಕೊಂಡ ನಾಡು ಬಡವಾಗಿದೆ. ಇಂತಹ ಒಬ್ಬ ನಟ ಮತ್ತೆ ಮೇಘನಾ ರಾಜ್ ಗರ್ಭದಲ್ಲಿ ಹುಟ್ಟಿ ಬರಲಿ. ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

Leave a Reply

Your email address will not be published. Required fields are marked *