Review (ವಿಮರ್ಶೆ)

ಚಿತ್ರ ವಿಮರ್ಶೆ: ಮುಂದಿನ ನಿಲ್ದಾಣ ಸಿನಿಮಾ ವಿಮರ್ಶೆ. heggaddesamachar.com

Spread the love

•ಸಂದೀಪ್ ಶೆಟ್ಟಿ ಹೆಗ್ಗದ್ದೆ
ಮೋ: 9611976709

ಇಂದಿನ ಯುವಕ-ಯುವತಿಯರ ಆಲೋಚನೆಗಳೇನು, ಗೊಂದಲಗಳೇನು, ಆದ್ಯತೆಗಳೇನು ಇತ್ಯಾದಿಗಳೆಲ್ಲವುದರ ನಿಲ್ದಾಣವೇ ಮುಂದಿನ ನಿಲ್ದಾಣ.

ಇಂದು ಮದುವೆಯ ವ್ಯಾಖ್ಯಾನ ಬದಲಾಗುತ್ತಿದೆ. ಲಿವ್ ಇನ್ ಸಂಬAಧಗಳು ಬದುಕಿನ ಒಳಮನೆಯನ್ನು ಪ್ರವೇಶಿಸುತ್ತಿವೆ. ಇದರಿಂದಾಗಿ ಎಷ್ಟು ಸುಖ ಅನುಭವಿಸುತ್ತಾರೋ ಅಷ್ಟೇ ನೋವನ್ನು ಅನುಭವಿಸಿ, ಬದುಕನ್ನೇ ಗೊಂದಲದ ಗೂಡಾಗಿಸಿಕೊಂಡು ನರಳುತ್ತಾರೆ ಈ ರೀತಿಯ ಕಥೆಯ ಒಡಲಿರುವ ಚಿತ್ರವೇ ಮುಂದಿನ ನಿಲ್ದಾಣ.

ಯುವಕರಿಗಾಗಿ ನಮ್ಮಲ್ಲಿ ಅನೇಕ ಸಿನಿಮಾ ಬಂದಿರಬಹುದು ಆದರೆ ಹದಿಹರೆಯದವರಿಗಾಗಿ, ಅವರ ತುಡಿತ ಮತ್ತು ಅದರಿಂದಾಗುವ ಕಷ್ಟ, ಮನೋಸ್ಥೆöÊರ್ಯದ ಒಳಗುಟ್ಟಿನ ಅಂಶಗಳನ್ನಿಟ್ಟುಕೊ0ಡು ಬಂದಿರುವ ಸಿನಿಮಾ ಇದೆ ಎನ್ನುವುದಾದರೆ ಅದು ಇಂದು ಬಿಡುಗಡೆಯಾದ ಮುಂದಿನ ನಿಲ್ದಾಣ ಚಿತ್ರ ಎನ್ನಬಹುದು.

ವೆರಿ ಫಸ್ಟ್ ನನಗನಿಸಿದ್ದು, ಈ ಸಿನಿಮಾ ಸಖತ್ ಫ್ಯಾಷನೇಟಿಕ್ ಸಿನಿಮಾ ಆಗಿದೆ ಎನಿಸಿತು ಕಾರಣ, ಚಿತ್ರದ ಕಥೆಯಿಂದ ಹಿಡಿದು, ಪಾತ್ರವರ್ಗದವರೆಗೂ ನಿರ್ದೇಶಕ ವಿನಯ್ ಈ ಜನರೇಶನ್ ಗೆ ಬದಲಾಯಿಸಿಕೊಂಡು, ಸಿನಿಮಾ ನಿರ್ದೇಶಕನ ಮಾಧ್ಯಮ ಎಷ್ಟು ನಿಜವೋ, ಅಷ್ಟೇ ಕಲಾವಿದರು ಮತ್ತು ತಂತ್ರಜ್ಞರ ಕೆಲಸವೂ ಹೌದೆಂದು ಸಾಭೀತು ಪಡಿಸಿದ್ದಾರೆ.

ಮುಂದಿನ ನಿಲ್ದಾಣ ನಮ್ಮ ಆಡು ಭಾಷೆಯಲ್ಲಿ ಸಿಗುವ ಸರಳ ಪದ ಎಷ್ಟು ನಿಜವೋ ಚಿತ್ರವೂ ಕೂಡ ಅಷ್ಟೇ ಸರಳವಾಗಿದೆ. ಚಿತ್ರದ ಕಥೆಗಿಂತ ಸ್ಕಿçÃನ್ ಪ್ಲೇಗೆ ನಿರ್ದೇಶಕರು ಹೆಚ್ಚು ಕೆಲಸ ಮಾಡಿದಂತಿದೆ. ರೋಮ್ಯಾಂಟಿಕ್ ಲುಕ್ ನಲ್ಲಿ ಹೀರೋ ಹೀರೋಯಿನ್ ಕಾಣಿಸಿದರೂ ಈ ಚಿತ್ರದಲ್ಲಿ ಮಸಾಲೆಯಿಲ್ಲ ಬದಲಾಗಿ ವಿವೇಕ ಇದೆ ಎನ್ನಬಹುದು.

ಒಂದು ಸಂಬAಧ, ಮತ್ತೊಂದು ಸಂಬ0ಧ, ಇನ್ಯಾವುದೋ ಅನುಬಂಧ, ಕೊನೆಗೆ ಪಶ್ಚಾತ್ತಾಪ, ಬದುಕಿನ ಏರಿಳಿತ, ಕನ್ ಫ್ಯೂಷನ್ ಇವೆಲ್ಲವುದರಿಂದ ನೀವು ನಿಮ್ಮ ಬದುಕಲ್ಲೂ ಸಿಕ್ಕಿಕೊಂಡಿದ್ದರೆ ನಿಮಗೆ ಈ ಚಿತ್ರ ಪಕ್ಕಾ ಇಷ್ಟವಾಗುತ್ತೆ ಮತ್ತು ನೀವೇ ಆ ಪಾತ್ರಧಾರಿಗಳೇನೋ ಎಂಬ0ತೆ ಕಾಡುತ್ತೆ.

ಯಾವುದೂ ಕೊನೆಯಲ್ಲ, ಲವ್ ಬ್ರೇಕ್ ಅಪ್ ಆದ ತಕ್ಷಣ ಜೀವನ ಮುಗಿಯಲ್ಲ ಎನ್ನುವ ಭೋಧನೆ ಇಲ್ಲಿದೆ. ನಿರ್ದೇಶಕನ ಪಾತ್ರ ಈ ಚಿತ್ರದ ಗೆಲುವಿಗೆ ಎಷ್ಟು ಸಹಕಾರಿಯಾಗಿದೆಯೋ ಅಷ್ಟೇ ಸಹಕಾರ ಕ್ಯಾಮರಾಮೆನ್ ಕೈ ಚಳಕದಿಂದಲೂ ದೊರಕಿದೆ.
ಅಭಿನಯದ ವಿಭಾಗದಲ್ಲಿ ನೋಡುವುದಾದರೆ, ನಾಯಕನಾಗಿ ಪ್ರವೀಣ್ ತೇಜ್, ನಾಯಕಿಯರಾಗಿ ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಉಳಿದಂತೆ ಅಜಯ್, ದತ್ತಣ್ಣ ಎಲ್ಲರೂ ಸಖತ್ ವರ್ಕೌಟ್ ಮಾಡಿ ತೆರೆ ಮೇಲೆ ಮಿಂಚಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ಮುಂದಿನ ನಿಲ್ದಾಣ, ಪ್ರತಿ ಯುವಕ-ಯುವತಿರ ಹರೆಯದ ಜೀವನದಲ್ಲಿ ಸಂಭವಿಸಿದ ಮತ್ತು ಸಂಭವಿಸಬಹುದಾದ ಮಾದರಿ ಕಥೆಯನ್ನು ಹೊಂದಿದ್ದು, ಕನ್ನಡ ಚಿತ್ರ ನೋಡ್ತಿದ್ದೀವಾ ಇಲ್ಲ ಹಾಲಿವುಡ್ ಮಾದರಿಯ ಸಿನಿಮಾ ನೋಡ್ತಿದ್ದೀವಾ ಎನ್ನುವ ಫೀಲ್ ಗೆ ನಮ್ಮನ್ನು ಎಳೆದೊಯ್ಯುತ್ತದೆ. ಒಂದು ಸತ್ಯ ಹೇಳಲಾ!! ಇಲ್ಲಿಗಿಂತ ಅಲ್ಲೇ ಇಂತಹ ಚಿತ್ರ ಹೆಚ್ಚು ಗೆದ್ದಿದ್ದು..

Leave a Reply

Your email address will not be published. Required fields are marked *