News (ಸುದ್ದಿ)

ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಕೂಲಿ ಕಾರ್ಮಿಕರು, ಅತ್ಯಂತ ಕಡುಬಡತನ ಕುಟುಂಬಗಳಿಗೆ ಕಿಟ್ ವಿತರಣೆ: heggaddesamachar.com

Spread the love

ಮೈಸೂರು: ವಾರ್ಡ್ ನಂಬರ್ 07 ಕರಕುಶಲನಗರ, ಮೇಟಗಳ್ಳಿಯಲ್ಲಿರುವ 1000 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಮೇಟಿಗಳ್ಳಿ ಪೋಲಿಸ್ ಠಾಣೆಯ ಹಿಂಬಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಸ್ತುವಾರಿ ಸಚಿವರುಗಳಾದ
ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು,ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರರವರು ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಕೂಲಿ ಕಾರ್ಮಿಕರು, ಅತ್ಯಂತ ಕಡುಬಡತನದ ಕುಟುಂಬಗಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಚಿತವಾಗಿ 1000 ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಗಳನ್ನು ವಿತರಣೆ ಮಾಡಿದರು.

ಈ ಸಂಧರ್ಬದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಭಾ.ಜ.ಪ ಅಧ್ಯಕ್ಷ ಸೋಮಶೇಖರರಾಜು, ಮುಖಂಡರುಗಳಾದ ಮೈಸೂರು ಮಹಾನಗರ ಪಾಲಿಕೆ ಸದಸ್ಯ ರವೀಂದ್ರ, ಮಾಜಿ ಮಹಾನಗರ ಪಾಲಿಕೆ ಸದಸ್ಯ ದೇವರಾಜು, ಮೈಸೂರು ಭಾ.ಜ.ಪ ಯವಮೋರ್ಚಾ ಅಧ್ಯಕ್ಷ ಕಿರಣ್ ಗೌಡ, ಚಾಮರಾಜ ಪ್ರಧಾನ ಕಾರ್ಯದರ್ಶಿ ಪುನೀತ್, ಶ್ರೀ ಮೂರ್ತಿ, ನರಸಿಂಹಮೂರ್ತಿ, ರವೀಂದ್ರ, ಶಿವು, ದಾಸ್, ಪುಟ್ಟ, ನಾಗರತ್ನ, ಶೋಭ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *