ಚಾಮರಾಜನಗರದ ಹನೂರಿನಲ್ಲಿ ಕೊರೋನಾ ಮೌನ – ಯಾಕೆ ಗೊತ್ತಾ!? : heggaddesamachar.com

ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ಬೆಳತ್ತೂರು ಗ್ರಾಮದಲ್ಲಿ ನೀರವ ಮೌನ…
ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಗಿಸುತ್ತಿದ್ದ ಕೊರೋನಾ ಸೋಂಕಿತ ಪೇದೆಯೊಬ್ಬನ ವರದಿ ಇನ್ನೂ ದೃಢವಾಗದೇ ಇರುವುದ್ರಿಂದ ಹನೂರು ತಾಲ್ಲೂಕಿನಾದ್ಯಂತ ಜನರು ಭಯದ ವಾತಾವರಣದಿಂದ ಇರುವುದು ಕಂಡು ಬಂದಿದೆ….
ಅದರಲ್ಲೂ ಬೆಳತ್ತೂರು ಗ್ರಾಮವಂತೂ ಮೌನವೇ ಮೌನವಾಗಿದೆ….
ಗ್ರಾಮಕ್ಕೆ ಸೋಂಕಿತ ವ್ಯಕ್ತಿ ಬಂದು ಹೋದ ಎಂಬ ವಿಚಾರ ತಿಳಿಯುತ್ತಿದ್ದಂತೆ ಸೋಮುವಾರ ೧೮ ಜನರಿಗೆ ಕ್ವಾರೆಂಟೈನ್ಗೆ ಸೇರಿಸಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು ಎನ್ನಲಾದ ಇನ್ನೂ ೭ ಜನರನ್ನು ಕ್ವಾರೆಂಟೈನ್ ದಾಖಲಿಸಲಾಯ್ತು. ಸೋಂಕಿತ ವ್ಯಕ್ತಿ ಜಿಲ್ಲೆಯ ಗಡಿ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಮುಖಾಂತರ ಬಂದಾಗ ಆತನಿಗೆ ತಪಾಸಣೆ ನಡೆಸಿದ ೮ ಗ್ರಾಮ ಲೆಕ್ಕಿಗರು, ೫ ಜನ ಪೊಲೀಸರು ಹಾಗೂ ಇಬ್ಬರು ವಾಟರ್ ಮನ್ ರನ್ನೂ ಸಹಾ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ….
ಬೆಳತ್ತೂರು ಗ್ರಾಮದಲ್ಲಿ ಸ್ವಯಂಕೃತ ಬಂದ್ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮದ ಮುಖಂಡರು, ಯಜಮಾನರು ಹೊರಬಾರದಂತೆ ಕ್ರಮವಹಿಸಿರುವ ಹಿನ್ನಲೆಯಲ್ಲಿ ಪೊಲೀಸರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬಿಟ್ಟರೆ ಇನ್ಯಾರೂ ಇಲ್ಲದೇ ಇರುವುದ್ರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ….
