Cinema (ಸಿನಿಮಾ)

ಚಂದವನದಲ್ಲಿ ಮುಂಬೈ ಬೆಡಗಿ ಸುಮಿತ್ರ ಗೌಡ ಮಿಂಚು: heggaddesamchar.com

Spread the love

ಚಂದವನದಲ್ಲಿ ಮುಂಬೈ ಬೆಡಗಿ ಸುಮಿತ್ರ ಗೌಡ… ಸ್ಯಾಂಡಲ್ ವುಡ್ ನಲ್ಲಿ ಅನೇಕ ಯುವ ಪ್ರತಿಭೆಗಳು ತಮ್ಮ ಛಾಪು ಮೂಡಿಸಿ ಚಂದವನಕ್ಕೆ ಇನ್ನಷ್ಟು ಮೆರಗು ಕೊಡುತ್ತಿದ್ದಾರೆ..

ಸುಮಿತ್ರ ಗೌಡ ಚಂದನವನದಲ್ಲಿ ಜಿಷ್ಣು ಚಿತ್ರದಲ್ಲಿ ನಾಯಕಿಯಾಗುವ ಮುಖಾಂತರ ಚಂದವನದಲ್ಲಿ ಹೊಸ ಛಾಪು ಮೂಡಿಸಲು ಬರುತಿದ್ದಾರೆ. ಮೂಲತಃ ಕನ್ನಡತಿಯಾಗಿರುವ ಸುಮಿತ್ರ ಗೌಡ ಹುಟ್ಟಿದು ಕರ್ನಾಟಕದಲ್ಲಿ ಬೆಳೆದದ್ದು ಮುಂಬೈನಲ್ಲಿ,. ತನ್ನ ಪದವಿ ಮುಗಿಸಿ, ಸದ್ಯಕ್ಕೆ ಚಿತ್ರರಂಗದಲ್ಲಿ ಏನಾದರು ಸಾಧಿಸಲು ಪ್ರಯಾಣ ಬೆಳೆಸಿದ್ದಾರೆ.

ಸುಂದರವಾಗಿ ಕನ್ನಡ ಮಾತಾಡುವ ಈ ಬೆಡಗಿ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂಬುದೇ ನನ್ನ ಕನಸು ಹಾಗೂ ಈ ಕನಸಿಗೆ ಸಂಪೂರ್ಣ ಸಹಕಾರ ನೀಡುವ ತಂದೆ ತಾಯಿ ಸಹೋದರಿಯರ ಪ್ರೀತಿಯನ್ನು ಸ್ಮರಿಸುತ್ತಾರೆ.

ನಟನೆ ಮಾತ್ರ ಅಲ್ಲ, ಚಿತ್ರ ದ ಮೇಕಿಂಗ್ ನಲ್ಲೂ ಈ ಹುಡುಗಿ ಮಿಂಚಲಿರುವುದು ಈ ಚಿತ್ರದ ವಿಶೇಷ… ಹೌದು! ತನ್ನ ಪ್ರಥಮ ಚಿತ್ರದಲ್ಲೇ ಸುಮಿತ್ರಾ ಗೌಡ ನಾಯಕಿಯಾಗುವ ಜೊತೆಗೆ ಚಿತ್ರದಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಸಲಿದ್ದಾರೆ ಇದಕ್ಕೆ ಕಾರಣವಾದ ಚಿತ್ರ ನಿರ್ಮಾಪಕಿ ಕವಿತಾ ಕನಿಕ ಪೂಜಾರಿ ಇವರಿಗೆ ಧನ್ಯವಾದ ಅರ್ಪಿಸುವ ಸುಮಿತ್ರ ಗೌಡ ಅವರ ಸಿನಿಮಾ ಜರ್ನಿ ಶುಭಕರವಾಗಿ ಮುಂದುವರೆಯಲಿ ಎನ್ನುವುದು ನಮ್ಮ ಆಶಯ…

Leave a Reply

Your email address will not be published. Required fields are marked *