News (ಸುದ್ದಿ)
ಗಾರ್ಮೆಂಟ್ಸ್ ಮತ್ತು ಕಾರ್ಖಾನೆಗಳಿಂದ ಲಾಕ್ ಡೌನ್ ಸಡಿಲಿಕೆಯ ದುರುಪಯೋಗ – ಸ್ಥಳೀಯರ ಆಕ್ರೋಶ : heggaddesamachar.com

ತಿ.ನರಸೀಪುರ : ಕೊರೊನ ಎಫೆಕ್ಟ್ ಹಿನ್ನಲೆ.
ದೇಶಾದ್ಯಂತ 3ನೇ ಹಂತದ ಲಾಕ್ ಡೌನ್. ಲಾಕ್ ಸಡಿಲಿಕೆ ದುರುಪಯೋಗ ಮಾಡಿಕೊಳ್ಳುತ್ತಿರುವ ಗಾರ್ಮೆಂಟ್ಸ್ ಕಾರ್ಖಾನೆಗಳು. ಶಾಹಿ ಗಾರ್ಮೆಂಟ್ಸ್ ಮೇಲೆ ಆರೋಪ ಮಾಡುತ್ತಿರುವ ಸ್ಥಳೀಯ ಗ್ರಾಮಸ್ಥರು. ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಗ್ರಾಮದ ಬಳಿ ಇರುವ ಶಾಹಿ ಗಾರ್ಮೆಂಟ್ಸ್. ಅತಿ ಹೆಚ್ಚು ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ.
ನೌಕರರನ್ನು ಕರೆ ತರುವಾಗ ಆಟೋ ಚಾಲಕರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಸಾಮಾಜಿಕ ಅಂತರ ಇಲ್ಲದೆ ನೌಕರರನ್ನು ಕರೆ ತರುತ್ತಿದ್ದ ಆಟೋ ಸೀಜ್ ಮಾಡಿದ ನರಸೀಪುರ ಪೊಲೀಸರು.ಶಾಹಿ ಗಾರ್ಮೆಂಟ್ಸ್ ಮಾಲೀಕರು ನೌಕರರ ಹಿತವನ್ನು ಕಾಪಾಡುತ್ತಿಲ್ಲ. ಸ್ಥಳೀಯ ಗ್ರಾಮಸ್ಥರ ಆರೋಪ.