ಗಣರಾಜೋತ್ಸವದ ರಾಜಪಥದಲ್ಲಿ  ವಿಜಯನಗರದ ಕಲಾ ಸಾಂಸ್ಕೃತಿಕ ಶ್ರೀಮಂತಿಕೆ ನಳನಳಿಸಲಿದೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ಗಣರಾಜೋತ್ಸವದ ಪ್ರಯುಕ್ತ ಇದೆ ಜನವರಿ 26 ರಂದು ರಾಷ್ಟ್ರರಾಜಧಾನಿ ದೆಹಲಿಯ ರಾಜಪಥದಲ್ಲಿ ಅನಾವರಣಗೊಳ್ಳಲಿರುವ ಸ್ತಬ್ಧ ಚಿತ್ರ ಪಥಸಂಚಲನದ ಭವ್ಯ ಮೆರವಣಿಗೆಯಲ್ಲಿ ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಕಲೆ, ಸಾಂಸ್ಕೃತಿಕ  ಶ್ರೀಮಂತಿಕೆ ಅನಾವರಣಗೊಳ್ಳಲಿದೆ. ಕರ್ನಾಟಕ ರಾಜ್ಯವನ್ನು ವಿಜಯನಗರ( ಸಿಟಿ ಆಫ್ ವಿಕ್ಟರಿ )ಪ್ರತಿನಿಧಿಸಲಿದ್ದು ವಿಜಯನಗರದ ಸ್ತಬ್ಧ ಚಿತ್ರ ಪೆರೇಡ್ ಗೆ ಆಯ್ಕೆ ಮಾಡಿ ರುವುದನ್ನು ರಕ್ಷಣಾ ಸಚಿವಾಲಯವು ವಾರ್ತಾ ಇಲಾಖೆಗೆ ತಿಳಿಸಿದ್ದು ವಾರ್ತಾ ಇಲಾಖೆಯಿಂದ ಟ್ಯಾಬ್ಲೊ ತಯಾರಾಗಿದೆ.

    ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವ  ನಮ್ಮ ರಾಜ್ಯದ ಸ್ತಬ್ಧ ಚಿತ್ರ “ಹಂಪಿ -ವಿಜಯನಗರ” ಎಂಬ  ಥೀಮ್ ನಲ್ಲಿ  ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಹೆಗ್ಗುರುತಾದ ಗತ ವೈಭವಸಾರುವ ಶಿಲ್ಪ ಕಲೆಯ ತವರು ಹಂಪಿ, ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧದೊರೆ ಕೃಷ್ಣದೇವರಾಯರ ಪಟ್ಟಾಭಿಷೇಕದ ವೈಭವಕ್ಕೆ ಸಾಕ್ಷಿ ಯಾಗಿ  ಸಿಂಹಾಸನರೂಢರಾಗಿರುವ ಚಿತ್ರಣ, ಹಾಗೂ ಆಡಳಿತ ವೈಭವದೊಂದಿಗೆ ಹಂಪಿಯ ಶಿಲ್ಪ ವೈಭವ, ವಿಠ್ಠಲ ದೇಗುಲ, ಸ್ತಬ್ದ ಚಿತ್ರದ ಮುಂಬಾಗದಲ್ಲಿ ಉಗ್ರನರಸಿಂಹ ಮೂರ್ತಿ ಇದ್ದು ಹಿಂಭಾಗದಲ್ಲಿ ಅಂಜನೇಯ ಮೂರ್ತಿಯೊಂದಿಗೆ ಅಂಜನಾದ್ರಿ ಬೆಟ್ಟ ತೋರಿಸಲಾಗುತ್ತದೆ. ಉಬ್ಬುಶಿಲ್ಪದ ಸೊಬಗು ,  ಸಂಸ್ಕ್ರತಿ ಮತ್ತು  ಸಂಗೀತ , ಉಡುಗೆ – ತೊಡುಗೆಗಳು , ರಾಜ‌ಮಹಾ ರಾಜರ ಕಾಲದ ಆಭರಣಗಳನ್ನೊಳಗೊಂಡ ಅಲಂಕಾರ ವಸ್ತುಗಳು ಕಾಣಸಿಗುತ್ತವೆ.ಸ್ತಬ್ಧ ಚಿತ್ರದಲ್ಲಿ ಕತ್ತಿ ಗುರಾಣಿ ಹಿಡಿದ ಮಹಿಳಾಯೋದರು ಜತೆಗೆ ಚಾಮರ ಹಿಡಿದ ಪುರುಷರು ಕಾಣಲಿದ್ದಾರೆ ರಾಜಭಟ ಬೊಂಬೆಗಳಿಗೆ ಮಾನವ ಕಣ್ಣುಗಳನ್ನು ಹೊಲುವ ಕಣ್ಣುಗಳನ್ನು ಅಳವಡಿಸಲಾಗುತ್ತದೆ.  ಸ್ತಬ್ಧ ಚಿತ್ರದ ಪ್ರಮುಖ ಆಕರ್ಷಣೆಯಾಗಿ ವಿಜಯನಗರ ಸಾಮ್ರಾಜ್ಯ ಮತ್ತು ಪೋರ್ಚುಗೀಸ್ ರ ನಡುವೆ ವ್ಯಾಪಾರ ಸಂಬಂಧ ಬಿಂಬಿಸಲಾಗುವ ಚತ್ರವು ಗಮನಸೆಳೆಯಲಿದೆ ಎಂದು ವಾರ್ತಾಇಲಾಖೆ  ಪತ್ರಿಕೆ ಹೇಳಿಕೆ ನೀಡಿದೆ.ಸ್ತಬ್ಧ ಚಿತ್ರದಲ್ಲಿ ಭಾಗಿಯಾಗುವ ವಿಷಯಗಳ ಪಟ್ಟಿ, ರಚನೆ, ಸಮನ್ವಯ ನಿರ್ಮಾಣ ಹೊಣೆಯನ್ನು ರಾಜ್ಯ ವಾರ್ತಾ ಇಲಾಖೆ ವಹಿಸಲಿದೆ.  ಸ್ತಬ್ಧ ಚಿತ್ರ ನಿರ್ಮಾಣ ಚಟುವಟಿಕೆ ಮತ್ತು ಪಥಸಂಚಲನದ ತರಬೇತಿ ಕಾರ್ಯಕ್ರಮಗಳು ರಕ್ಷಣಾ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆದಿದೆ.   ಸ್ತಬ್ಧ ಚಿತ್ರ ನಿರ್ಮಾಣವನ್ನು ಖ್ಯಾತ ಕಲಾವಿನ್ಯಾಸಕಾರ ಶಶಿಧರ ಅಡಪ  ಹಾಗೂ ಹಲವು ಕಲಾವಿದರ ಕ್ಯೆಚಳಕದಿಂದ ಮೂಡಿಬರಲಿದ್ದು. ಹಿಮ್ಮೇಳದಲ್ಲಿ ಮೊಳಗುವ ಸಂಗೀತ ಪ್ರವೀಣ್ ರಾವ್ ನೀಡಲಿದ್ದಾರೆ.ಕರೊನಾ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಪಾಡಲು ರಕ್ಷಣಾ ಇಲಾಖೆಯು ಕಲಾವಿದರ ಸಂಖ್ಯೆಯಲ್ಲಿ ಇಳಿಕೆ ಮಾಡಿ 20 ರಿಂದ 30 ಮಂದಿಯ ಬದಲು 12 ಕಲಾವಿದರು ಸ್ತಬ್ಧ ಚಿತ್ರ ವಾಹನದಲ್ಲಿಇರಲಿದ್ದಾರೆ. ಶಿವಮೊಗ್ಗ ರಂಗಾಯಣದ 8 ಪುರುಷರು ಮತ್ತು 4 ಮಹಿಳಾ ವೃತ್ತಿಪರ ತಂಡದ ಸದಸ್ಯರು ಭಾಗವಹಿಸಲಿದ್ದಾರೆ.

        ನಮ್ಮ ದೇಶದ ಬೇರೆ ಬೇರೆ ರಾಜ್ಯದ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಗಣರಾಜೋತ್ಸವದ ಪರೇಡ್ ನಲ್ಲಿ ಸಾಗಲಿದ್ದು. ಗಣರಾಜೋತ್ಸವದ ಸಮಾರಂಭದಲ್ಲಿ ವಿದೇಶಿ ನಾಯಕರನ್ನು ಮುಖ್ಯ ಅತಿಥಿಯಾಗಿ ಆವ್ವಾನಿಸುವುದು ವಾಡಿಕೆ .55 ವರ್ಷಗಳಲ್ಲಿ ಇದೆ ಮೊದಲ ಬಾರಿ ವಿದೇಶಿ ಅಥಿತಿಗಳ ಆಗಮನವಿಲ್ಲ. ಮಂತ್ರಿಮಹೋದಯರು, ಆಹ್ವಾನಿತರು,ದೇಶದ ಮೂರು ಪಡೆಗಳ ದಂಡನಾ‌ಯಕ ರು ಯೋಧರ ಕವಾಯತಿನಲ್ಲಿ ಭಾಗಿಯಾಗುವರು. ಈ ಸಂದರ್ಭದಲ್ಲಿ ಆಯೋಜಿಸುವ ಪರೇಡ್ ನಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ದೇಶದ ಸೇನಾಪಡೆಗಳ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಲಾಗುತ್ತದೆ. ರಫೆಲ್‌ ಯುದ್ಧ ವಿಮಾನಗಳು ಇದೇ ಮೊದಲ ಬಾರಿಗೆ ಗಣರಾಜೋತ್ಸವ ಪರೇಡ್ ನಲ್ಲಿ ಪಾಲ್ಗೊಂಡು ತನ್ನ ಪರಕ್ರಮ ಪ್ರದರ್ಶಿಸಲಿದೆ.  ಕೇಂದ್ರಿಯ ಅರೆ ಸೇನಾಪಡೆಗಳ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ ಈ ಸಲ ಇಲ್ಲ. ಆದರೆ ಈ ಬಾರಿ ಗಣರಾಜೋತ್ಸವ ದಿನವನ್ನು ಕೋವಿಡ್ 19 ರ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೊರೊನಾ ಹರಡದಂತೆ ತಡೆಯಲು ಜನದಟ್ಟಣೆ ನಿಗ್ರಹಿಸುವ ಸಲುವಾಗಿ ಕೇಂದ್ರ ಸರಕಾರ ಗಣರಾಜೋತ್ಸವ ದಿನಾಚರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು  ಜನದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆರವಣಿಗೆಯ‌ ಪಥವನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ    ಇಂಡಿಯಾ ಗೇಟ್ ಬಳಿ ಇರುವ ನ್ಯಾಷನಲ್ ಸ್ಟೇಡಿಯಂ ವರೆಗೆ ಮಾತ್ರ ಪಥಸಂಚಲನ ನಡೆಯಲಿದ್ದು, ಕೆಂಪು ಕೋಟೆಯವರೆಗೆ ಮಾತ್ರ ಸ್ತಬ್ಧ ಚಿತ್ರ ಪಥಸಂಚಲನ ಸಾಗಲಿದೆ   25 ಸಾವಿರ ಮಂದಿಗೆ ಮಾತ್ರ ವಿಕ್ಷಣೆ ಹಾಗೂ 15 ವರ್ಷ ದೊಳಗಿನ ವರಿಗೆ ಅವಕಾಶ ವಿಲ್ಲ. ಸೀಮಿತ ವೀಕ್ಷಕರು ಹಾಗೂ ಕಾರ್ಯ ಕ್ರಮದ ಅವಧಿಯಲ್ಲಿ ‌ಗಂಭೀರ ಕಡಿತ .ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 400 ಕ್ಕೆ ಇಳಿಸಲಾಗುವುದು.


      ಇತಿಹಾಸದ ಗತವೈಭವ ಸಾರುವ  ನಾಡಿನ ಹೆಗ್ಗಳಿಕೆಯನ್ನು ಬಿಂಬಿಸುವ ಕಲಾಕೃತಿಯಲ್ಲಿ ವಿಜಯನ ಗರದ ವೈಭವವನ್ನು ಕಣ್ತುಂಬಿಕೊಳ್ಳಬಹುದು. ವಿಜಯ‌ನಗರ  ಸ್ಥಾಪಿಸಿದ ಸಂಗಮ ವಂಶದ ಹರಿಹರ ಬುಕ್ಕರಾಯರ ಕುರಿತು ಮಾಹಿತಿ ಸ್ತಬ್ದ ಚಿತ್ರದೊಂದಿಗೆ ಬಿತ್ತರವಾಗಲಿದೆ. ವಿಜಯನಗರ ತನ್ನ ಒಡಲಲ್ಲಿ ಅದೆಷ್ಟೋ ಅಚ್ಚರಿ ,ನಿಗೂಢ ಸಂಗತಿಗಳ ಜೊತೆಗೆ ವಾಸ್ತು ಶಿಲ್ಪದ ಡೊಡ್ಡ ಭಂಡಾರವನ್ನು ಹೊಂದಿದೆ. ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿಯಲ್ಲಿ  ವಿಜಯನಗರದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಮುತ್ತು ರತ್ನಗಳನ್ನು ಹಾದಿಬದಿಯಲ್ಲಿ ಮಾರುವಷ್ಟು     ಶ್ರೀಮಂತವಾಗಿತ್ತು ಎನ್ನಲಾಗುತ್ತದೆ ವಿಜಯನಗರ.
      
ವಿಜಯನಗರ: ಹಂಪಿಯ ಕುರಿತು ಒಂದಿಷ್ಟು

   ಇತಿಹಾಸಿಕ ಸ್ಮಾರಕಗಳ‌ನೆಲೆ‌ ಬೀಡು ,ಶಿಲ್ಪಕಲೆಯ ತವರು, ಶಿಲ್ಪಕಲಾ ಸಾಮ್ರಾಜ್ಯದ ಮುಕುಟ, ಹಕ್ಕ- ಬುಕ್ಕರು ವಿದ್ಯಾರಣ್ಯಗುರುಗಳ ಆರ್ಶಿವಾದದಿಂದ  ವಿಜಯನಗರವನ್ನು ಸ್ಥಾಪಿಸಿದ್ದರು. ಇಲ್ಲಿನ ಭವ್ಯಸ್ಮಾರಕ ಗಳು ಧಾರ್ಮಿಕ ಮಹತ್ವ ವಿಜಯನಗರವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿತಾಣವಾಗಿಸಿದೆ. ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನಕಂಬಗಳು ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವವಿ,ಸಾಸಿವೆಕಾಳು ಗಣಪ, ಉಗ್ರನರಸಿಂಹ, ಕಮಲಮಹಲ್, ಬಡವಿಲಿಂಗ, ಆನೆಲಾಯ, ಪ್ರಾಚ್ಯವಸ್ತು ಸಂಗ್ರಹಾಲಯ,  ಇತಿಹಾಸಿಕ ಅವಶೇಷಗಳು, ಪುರಾತನ ಶಿಲ್ಪ ದೇವಾಲಯ, ಗುಡಿಗೋ ಪುರಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ದೇಶ, ವಿದೇಶಿ ಪ್ರವಾಸಿಗರನ್ನು ಕೈ ಬೀಸಿಕರೆಯುತ್ತಿದೆ.

   ಶಿಲ್ಪ ಕಲಾಲೋಕದ ಅತ್ಯದ್ಬುತ ಕಲಾರತ್ನವಾಗಿ ಮೈದಳದ ಚಾರಿತ್ರಿಕ ಪುರಾವೆಗಳ ಊರು. ಇಲ್ಲಿನ  ವೈಶಿಷ್ಟ್ಯಗಳಲ್ಲಿ ಒಂದಾದ ಹಂಪಿಯ ಸಿರಿನೋಟಕ್ಕೆ ಸಾಕ್ಷಿ ಜಗದ್ವಿಖ್ಯಾತ ಶಿಲಾರಥ ಅಥವಾ ಕಲ್ಲಿನ ರಥ. ಈ ಶಿಲಾರ ಥದಲ್ಲಿ ಸೈನಿಕರು, ಬೇಟೆಗಾರರು, ಪೊರ್ಚಗಿಸರು, ಅರಬ ರು,ಪರ್ಷಿಯನ್ ರುಗಳ ಚಿತ್ರ ಬಿಡಿಸಲಾಗಿದೆ.ಇಂದಿಗೂ, ಎಂದೆಂದಿಗೂ ವಿಜಯನಗರದ ಶಿಲ್ಪ ಕಲಾವೈಭವಕ್ಕೆ ಸಾಂಕೇತವಾಗಿ ನಿಲ್ಲುವ ಕಲ್ಲಿನ ರಥ ಅದರ ಒಳಗಡೆ ಇರುವ ಗರುಡವಿಗ್ರಹ  ರಥದ ವಿನ್ಯಾಸವೇ ಅದ್ಬುತ. ಸುವರ್ಣಯುಗಕ್ಕೆ ಸಾಕ್ಷಿಯಾಗಿದ್ದ ಹಂಪಿ ಕಲ್ಲು ಧೂಳಿ ನಿಂದ ತುಂಬಿಕೊಂಡಿದ್ದು ಹಾಳಾದ  ಮೂರ್ತಿಗಳ ಬಂಡೆಕಲ್ಲಿನ ಕತ್ತನೆಗಳ ಚಿತ್ರಣ ಕಾಣಸಿಗುತ್ತದೆ ಅನಿಸಿದರು ಇಲ್ಲಿನ ಇಡಿ ಪ್ರದೇಶದಲ್ಲಿ ನಡೆದಾಡಿ ಸೂಕ್ಷ್ಮತೆಯಿಂದ ನೋಡಿದರೆ ತನ್ನ ಶ್ರೀಮಂತ ಸಾಂಸ್ಕೃತಿಕ ಕುರುಹುಗಳನ್ನು ಉಳಿಸಿಕೊಂಡು ಭಗ್ನಸ್ಥಿತಿಯಲ್ಲಿದ್ದ ಹಂಪಿ ವಿಜಯನಗರದ ಅರಸರ ಕಾಲದಲ್ಲಿ ಇದ್ದ ಆರ್ಕಷಕ ಕಟ್ಟಡಗಳು ದೇವಾಲಯಗಳ ಕುರೂಹುಗಳಷ್ಟೆ ಉಳಿದಿದೆ.

       ಹಂಪಿಯಲ್ಲಿ ಇಂದಿಗೂ ಪೂಜಿಸಲಾಗುತ್ತಿರುವ ಒಂದೇ ಒಂದು ದೇವಾಲಯವೆಂದರೆ ವಿರೂಪಾಕ್ಷ ದೇವಾಲಯ. ಒಂಬತ್ತು ಮಹಲಿನ ಗೋಪುರವಿರುವ  ಶಿವ ಮತ್ತು ಪಂಪಾದೇವಿಯ ದೇವಾಲಯ. ವಿರೂಪಾಕ್ಷ ವಿಜಯನಗರದ ಅರಸರ ಕುಲದೇವರು. ಸುವರ್ಣ ಯುಗಕ್ಕೆ ಸಾಕ್ಷಿಯಾದ ಹಂಪಿ ಕಲ್ಲುಧೂಳಿನಿಂದ ತುಂಬಿಕೊಂಡಿದ್ದು ಹಾಳಾದ ಒಡೆದ ಮೂರ್ತಿಗಳು ಬಂಡೆಕಲ್ಲಿನ‌ ಕೆತ್ತನೆಗಳ ಚಿತ್ರಣ ಕಾಣಸಿಗುತ್ತದೆ ಅನ್ನಿಸಿದ ರು. ಇಲ್ಲಿನ  ಇಡಿ ಪ್ರದೇಶದಲ್ಲಿ ನಡೆದಾಡಿ ಸೂಕ್ಷ್ಮ ತೆಯಿಂದ ಗಮನಿಸಿದರೆ ಅಲ್ಲಿನ ಒಂದೊಂದು ಬಂಡೆಗಳು ತನ್ನ ವೈಭವವನ್ನು ಸಾರುವುದು ನೋಡಬಹುದು. ಅಳಿದುಳಿದ ಶಿಲ್ಪಗಳು ಗತವೈಭವಸಾರುತ್ತದೆ. ಎಂಥವರು ಬೆರಗುಗೊಳ್ಳುವ ಪ್ರವಾಸಿಗರ ನೆಚ್ಚಿನ ತಾಣವಿದು.


        ಗಣರಾಜೋತ್ಸವದ ಪಥಸಂಚಲನದಲ್ಲಿ ವಿಜಯನಗರದ ದೇವಾಲಯಗಳ ವೈಭವವು ಕಣ್ಣ್ ಮನ ತಣಿಸಲಿದೆ.ವಿರೂಪಾಕ್ಷ ದೇವಾಲಯ, ಕಡಲೆ ಗಣಪ,ಸಾಸಿವೆ ಕಾಳು ಗಣಪ, ಬಡವಿಲಿಂಗ, ಮಹಾನವ ಮಿ ದಿಬ್ಬದಲ್ಲಿನ ಉಬ್ಬು ಶಿಲ್ಪ ಚಿತ್ರ ಕಲ್ಲಿನಲ್ಲಿ ಕೊರೆಯಲಾಗಿದೆ. ಆನೆಗಳ ಮೆರವಣಿಗೆ, ಕುದುರೆ, ಸೈನಿಕರು, ನೃತಕಲಾವಿದರು, ಸಂಗೀತಗಾರರ ಶಿಲ್ಪ ಕಲಾಕೃತಿಗಳು. ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಕಂಬಗಳು ಗಟ್ಟಿ ಶಿಲೆಯ ಕಲ್ಲುಗಳಾಗಿದ್ದು ಮಧ್ಯಭಾಗ ಕೈ ಬೆರಳಿನಿಂದ ಬಾರಿಸಿದಾಗ ಸಂಗೀತದ ಅಲೆ ಹೊರ ಹೊಮ್ಮುತ್ತದೆ. ಅಷ್ಟೇ ಅಲ್ಲದೆ ಕರಿಯ ಕಲ್ಲಿನಿಂದ ನಿರ್ಮಾಣವಾದ ಅತ್ಯಂತ ಸುಂದರ  ಶಿವಲಿಂಗವೊಂದು 3 ಅಡಿ ನೀರಿನಲ್ಲಿ ಮುಳಿಗಿದ್ದು ಹತ್ತಿರದಲ್ಲಿ ಉಗ್ರನರಸಿಂಹನ  ಬೃಹತ್ ಮೂರ್ತಿ ಇದ್ದು ದೊಡ್ಡ ಪ್ರಭಾವಳಿಯ ತಲೆಯ ಹಿಂದೆ ಹೆಡೆಬಿಚ್ಚಿದ ಪ್ರಭಾವಳಿಯ ಚಿತ್ರಣ ವಿಜಯನಗರ ದ  ಕಲಾ ಶ್ರೀಮಂತಿಕೆಯನ್ನು ಸಾರುತ್ತದೆ.  ಒಟ್ಟಿನಲ್ಲಿ ವಿಜಯನಗರದ ಗತವೈಭವದ ಅನಾವರಣ ಈ ಸಲದ ಗಣರಾಜೋತ್ಸವದ ಪರೇಡ್ ನಲ್ಲಿ ನಳನಳಿಸಲಿದೆ.

Leave a Reply

Your email address will not be published. Required fields are marked *