ಗಡ್ಡಕ್ಕೂ ಆಭರಣದ ಸೊಬಗು

beard And jewelry
Spread the love

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿ ಯೊಳಗಿನ ಅಧಿಕಾರಿಯೊಬ್ಬರು ಗಡ್ಡದಲ್ಲಿ ಧರಿಸಿದ ಆಭರಣ ನೋಡಿದಾಗ ಅಬ್ಬಾ ಗಡ್ಡಕ್ಕೂ ಆಭರಣವೇ ಎಂದು ನನಗೆ ಆಶ್ಚರ್ಯ ಹಾಗೂ ನಗು ತಡೆಯಲಾಗ ಲಿಲ್ಲ. ಮಾರುಕಟ್ಟೆಯಲ್ಲಿನ‌ ಯಾವುದೋ ಆಭರಣ ಸಿಕ್ಕಿಸಿ ಕೊಂಡಿರಬೇಕು ಅಂದುಕೊಂಡೆ ಆದರೂ ಕುತೂಹಲ ತಡೆಯಲಾಗದೆ ಇದನ್ನು ಹೇಗೆ ಧರಿಸಿದ್ದಿರಿ ಪಿನ್ ಹಾಕಿಸಿಕ್ಕಿಸಿದ್ದ ಅಂತ ಕೇಳಿದ್ದಕ್ಕೆ ಅವರು ನೀಡಿದ ಉತ್ತರ ‌ಹೀಗಿತ್ತು ಕ್ರಾಟೋಮಿಲಾನೋ ಎಂಬ ಕಂಪನಿಯು ಬಿಯರ್ಡ ಜ್ಯುವೆಲರಿ ಹೆಸರಿನಲ್ಲಿ ಗಡ್ಡದ ಆಭರಣಗಳನ್ನು ತಯಾರಿ‌ ಮಾಡುತ್ತಾರೆ. ಕ್ರಾಟೋಮಿಲಾ ನೋ ಎಂಬ ಸಂಸ್ಥೆ ಬೆಳ್ಳಿ, ಚಿನ್ನ ಎರಡು ಶೇಡ್ ಗಳಲ್ಲಿ ಹಾಗೂ ಬಣ್ಣದ ಕಲ್ಲುಗಳ ಆಭರಣವನ್ನು ಗಡ್ಡದಲ್ಲಿ ಧರಿಸಲು ತಯಾರಿಸಿದೆ. ಗಿಡ್ಡ ಗಡ್ಡದವರಿಗೆ ಉದ್ದ ಗಡ್ಡದವರಿಗೆ ,ದಪ್ಪ ಹಾಗೂ ವಿರಳ ಗಡ್ಡದವರಿಗೆ ಆಗುವಂತ ಪ್ರತ್ಯೇಕ ಆಭರಣಗಳು ಸಿಗುತ್ತವೆ. ಗಡ್ಡದ ಒಳಗಡೆ ಆಭರಣ ಸರಿಯಾಗಿ ಕೂರುವಂತೆ ಕ್ಲಿಪ್ ಆಭರಣವನ್ನು ಸಿಕ್ಕಿಸಿ ಜಾರಿ ಹೋಗದಂತೆ ಸಹಕರಿಸುತ್ತದೆ ಎಂದು ಅವರು ಧರಿಸಿದ ಗಡ್ಡದ ಆಭರಣವನ್ನು ತೆಗೆದು ಪುನಃ ಸಿಕ್ಕಿಸಿ ತೋರಿಸಿದರು.

ಗಡ್ಡ ಪ್ರಬುದ್ಧತೆಯ ಸಂಕೇತ ಎನ್ನುತ್ತಾರೆ. ಗಡ್ಡ ಮೀಸೆಯನ್ನು ಪಣಕ್ಕೆ ಇಡುವುದನ್ನು ಕೇಳಿದ್ದೇವೆ ತಾನೆ. ಈ ವಿಚಾರದಲ್ಲಿ ಸೋತರೆ ಗಡ್ಡ ಮೀಸೆ ‌ಬೊಳಿಸುತ್ತೆನೆ ಎಂದು ಪಣತೊಡುವವರು ಇದ್ದಾರೆ. ಧಾರ್ಮಿಕ ಪ್ರವೃತ್ತಿ ಯವರು ಹರಕೆ ರೂಪದಲ್ಲಿ ಗಡ್ಡ ಬಿಡುತ್ತಾರೆ. ಸಾಮಾನ್ಯವಾಗಿ ಕಾಣುವ ಗಡ್ಡದಲ್ಲಿ ಅಸಾಮಾನ್ಯ ಅಂಶಗಳು ಅಡಕವಾಗಿದೆ ಅನ್ನಿಸುತ್ತದೆ. ಪ್ಯಾಷನ್ ‌ಜಗತ್ತಿನಲ್ಲಿ ಗಡ್ಡದ ವಿವಿಧ ಶೈಲಿಗೆ ಬಾರಿ ಮೆಚ್ಚುಗೆ ಹಾಗೂ ವಿಭಿನ್ನ ರೀತಿಯಲ್ಲಿ ಆಭರಣ ಧರಿಸಿ ಹೊಸ ಲುಕ್ ನೀಡುವರ ಸಂಖ್ಯೆ ಹೆಚ್ಚುತ್ತಿದೆ.

ಪ್ರಾಯಕ್ಕೆ ಬಂದಾಗ ಸಹಜವಾಗಿ ಮೊಗದಲ್ಲಿ ಹುಲುಸಾಗಿ ಬೆಳೆದ ಗಡ್ಡ ತೆಗೆಯದೆ ಗಂಡು ಮಕ್ಕಳು ಅಪ್ಪ- ಅಮ್ಮನಿಂದ ಬೈಸಿಕೊಳ್ಳುವುದು ಇರುತ್ತದೆ. ಕೆಲಮೊಮ್ಮೆ ಗಡ್ಡ ಚರ್ಚೆಯ ವಿಷಯವೇ ಆಗಿರುತ್ತದೆ.ಗಡ್ಡ ಬಿಟ್ಟವರಿಗೆ ನಾನಾ ಪ್ರಶ್ನೆಗಳು ಮೂಡಿಬರುವುದು ಉಂಟು. ಗಡ್ಡ ಬಿಟ್ಟಾಗ ದೇವದಾಸ ಅನ್ನುವವರು, ಹೆಂಡತಿ ಗರ್ಭಿಣಿಯೇ ಎಂದು ‌ಕೇಳುವವರು ಇದ್ದಾರೆ. ಮತ್ತೆ ಕೆಲವರು ಗಡ್ಡವನ್ನು ವೈರಾಗ್ಯದ ಸೂಚಕ. ಪ್ರೀತಿ, ಪ್ರೇಮದ ವೈಫಲ್ಯ, ಯಾರಾದರೂ ಕೈಕೊಟ್ಟ ಲಕ್ಷಣಗಳು ಎಂದು ನಿರ್ಣಯ‌ ನೀಡುವವರು ‌ಇದ್ದಾರೆ. ಕಾಲ ಬದಲಾದಂತೆ ಈಗ ಟ್ರೆಂಡ್ ಕೂಡ ಬದಲಾಗಿದೆ. ಗಡ್ಡ ಬೇಳೆಸಿದವರೆಲ್ಲ ವಿರಾಗಿಗಳು ಅಲ್ಲ ನೊಂದ ಜೀವವು ಅಲ್ಲ.ಆಭರಣ ಧಾರಣೆಗೆಂದೆ ಗಡ್ಡ ಬಿಡುವವರು ಇದ್ದಾರೆ.

ಜೀವನ ಪೂರ್ತಿ ಗಡ್ಡಧಾರಿಗಳಾಗಿರುವವರು ಇದ್ದಾರೆ. ಗಡ್ಡ ಮುಖದ ಚರ್ಮಕ್ಕೆ ರಕ್ಷಣೆ ನೀಡುವುದು ಅಲ್ಲದೆ ಸೂರ್ಯನ ಶಾಖದಿಂದ ಕಪ್ಪು ಕಲೆಯಾಗುವುದನ್ನು ತಡೆಯಲು ಗಡ್ಡ ಸಹಾಯಕ ವಾಗುತ್ತದೆ. ಚಲನಚಿತ್ರ ‌ನಟರ ಗಡ್ಡಗಳ‌ ಶೈಲಿಯನ್ನು ಯುವಕರು ಅನುಸರಿಸುವುದು‌ಉಂಟು.

ದಟ್ಟ ಗಡ್ಡ ಋಷಿ ಮುನಿಗಳ ತಪಸ್ಸಿನ ಹಾಗೂ ಯುವಕರ ವಿರಹದ ಸಂಕೇತವಾಗಿದ್ದ ಕಾಲವೊಂದಿತ್ತು . ಈಗ ಕಾಲ‌ಬದಲಾಗಿ ಗಡ್ಡ ಬೀಡೊದು ಪ್ಯಾಷನ್ ಎಂದು ಒಪ್ಪಿಕೊಳ್ಳುತ್ತಿದ್ದ ಈ ಕಾಲ ಘಟ್ಟದಲ್ಲಿ ಹರಕು ಮುರಕು ಗಡ್ಡವನ್ನು ಪ್ಯಾಷನ್ ಎಂದು ಕೊಳ್ಳುತ್ತಿದ್ದೆವೆ. ಆದಿಯಿಂದಲೂ ಸೌಂದರ್ಯ ಶಾಸ್ತ್ರ ಗಳಲ್ಲಿ ಗಡ್ಡಕ್ಕೆ ತನ್ನದೆ ಆದ ಮಹತ್ವದ ಸ್ಥಾನವಿತ್ತು. ಪೌರುಷದ ಸಂಕೇತವಾಗಿಯು , ಯಾರು ಗಡ್ಡ ತೆಗೆಯುತಾರೆ ಸಮಯ ವ್ಯರ್ಥ ಎಂಬ ಆಲಸ್ಯದಿಂದಲೊ ಗಡ್ಡ ಬೆಳೆಸುವ ಯುವಕರ ವರ್ಗದ ಸಂಖ್ಯೆ ಇತ್ತೀಚೆಗೆ ಬೆಳೆಯುತ್ತಿದ್ದು ಎಲ್ಲೆಡೆ ಗಡ್ಡ ಹೊತ್ತ ಗಂಡಸರು ರಾರಾಜಿಸುವುದು ಕಂಡುಬರುತ್ತಿದೆ. ಗಡ್ಡ ಮೀಸೆ ಗಂಡುತನದ ಸಂಕೇತವಾಗಿದ್ದು ಕಾಲ ‌ಬದಲಾಗಿ ಸೌಂದರ್ಯಕ್ಕೆ‌ ಪೂರಕವಾಗಿ ಬೆಳೆಸುವುದು ರೂಢಿಯಾಗುತ್ತಿದೆ. ಇಂದು ಪಾರ್ಲರ್ ಗಳಲ್ಲಿ ಗಡ್ಡ ವೈವಿಧ್ಯಮಯ ರೂಪತಳೆಯುತ್ತಿದೆ.

ಗಡ್ಡ ಬಿಡುವುದರಿಂದ ದುಡ್ಡು ಹಾಗೂ ಸಮಯ ಉಳಿಯುತ್ತದೆ ಅಂದುಕೊಂಡಿದ್ದೆ.ಆದರೆ ಗಡ್ಡ‌ನೀಟಾಗಿ ಇಟ್ಟುಕೊಳ್ಳಲು ಟ್ರಿಮ್ ಮಾಡಲು‌ ಸಮಯ ಹಾಗೂ ಹಣ ಎರಡು ಬೇಕಾಗುತ್ತದೆ. ಗಡ್ಡದಲ್ಲು ಹಲವು ವಿಧಗಳಿವೆ. ತೆಳುಗಡ್ಡ ,ದಟ್ಟಗಡ್ಡ, ಚೈನೀಸ್ ಸೈಲ್, ಫ್ರೆಂಚ್ ಕಟ್ ಅಂದರೆ ಮೀಸೆಯನ್ನು ಗಡ್ಡಕ್ಕೆ ಜೋಡಿಸುವ ಮೂಲಕ ಗಲ್ಲದ ಕೆಳಭಾಗದಲ್ಲಿ ಮಾತ್ರ ರಾರಾಜಿಸುವಂತೆ ಆಭರಣ ತೊಡಲಾಗುತ್ತದೆ.

ಗಡ್ಡ ಬೆಳೆಸುವುದು ಬೆಳೆಸದೆ ‌ಇರುವುದು‌ ವೈಯಕ್ತಿಕ ವಿಚಾರ ಮತ್ತು ಆಸಕ್ತಿ ಆದರೆ ಯಾವತ್ತೂ ಗಡ್ಡ ಬಿಡದವರು ಗಡ್ಡ ಬಿಟ್ಟರೆ ಎಲ್ಲರು ಕೇಳುವುದುಂಟು ಏನು ಗಡ್ಡ ಧಾರಣೆ ಯಾವ ಅವತಾರ ಎಂದು ಇನ್ನೂ ಕೆಲವರಿಗೆ ಗಡ್ಡದವರು ಎಂಬ ಉಪನಾಮ ಕೂಡ ಸೇರಿಸುತ್ತಾರೆ. ಬರೆ ಗಡ್ಡ ಬಿಟ್ಟರೆ ಸಾಲದು ಅದನ್ನು ಸ್ವಚ್ಛ ವಾಗಿರಿಸಿ ಕೊಂಡರೆ ಆಕರ್ಷಕವಾಗಿ ಕಾಣುತ್ತದೆ.ಕೆಲವರ ಕುರುಚಲು ಗಡ್ಡ ನಗುವನ್ನೆ ಮುಳುಗಿಸುತ್ತದೆ. ಗಡ್ಡ ಹೇಗೆ ಇರಲಿ ಅದಕ್ಕೂ ಒಂದು ಆಭರಣ ಇದೆಯಲ್ಲ ಅದೇ ನನಗೆ ಕಂಡ ವಿಶೇಷ.

  • ಲತಾ ಸಂತೋಷ ಶೆಟ್ಟಿ ಮುದ್ದುಮನೆ.

Leave a Reply

Your email address will not be published. Required fields are marked *