Cinema (ಸಿನಿಮಾ)
ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ: | heggaddesamachar.com

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. 54 ವರ್ಷದ ಇರ್ಫಾನ್ ಖಾನ್ ಅವರ ಆರೋಗ್ಯ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಚೇತರಿಸಿಕೊಂಡಿದ್ದು, ಭಾರತಕ್ಕೆ ಹಿಂದಿರುಗಿದ ನಂತರ ʼಇಂಗ್ಲೀಷ್ ಮೀಡಿಯಂʼ ಎಂಬ ಚಿತ್ರದಲ್ಲಿ ನಟಿಸಿದ್ದರು.
ಬಾಲಿವುಡ್ ನಲ್ಲಿ ಇವರ ಸಿನಿಮಾ ಎಂದರೆ ಅದೊಂದು ಹೊಸ ಬಗೆಯಲ್ಲಿ ಇರುತ್ತಿದ್ದು, ಅಂತಹ ಒಂದು ಹಳೆಯ ಕೊಂಡಿ ಇದೀಗ ಕಳಚಿದೆ…
ಇವರ ಸಾವಿಗೆ ಬಾಲಿವುಡ್ ಸಿನಿಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ…
