News (ಸುದ್ದಿ)

ಕ್ವಾರಂಟೈನ್ ನಡುವೆಯೇ ಮೈಸೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ: heggaddesamachar.com

Spread the love

ಎಸ್.ಎಫ್.ಸಿ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಚಾಲನೆಗಾಗಿ ಶಾಸಕರಾದ ಎಲ್. ನಾಗೇಂದ್ರರವರು ವಾರ್ಡ ನಂ-42 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು

25.00 ಲಕ್ಷ ರೂ ಮೊತ್ತದಲ್ಲಿ ವಾರ್ಡ್ ನಂ-42 ರ ಕೆ.ಜಿ.ಕೊಪ್ಪಲಿನ 1ನೇ 4ನೇ ಕ್ರಾಸ್ ರಸ್ತೆಗಳಿಗೆ ಕಾಂಕ್ರಿಟ್ ರಸ್ತೆ & ಆರ್.ಸಿ.ಸಿ ಡೆಕ್ ಸ್ಲ್ಯಾಬ್ ಕಾಮಗಾರಿಯ ಭೂಮಿ ಪೂಜೆ ಹಾಗೂ ನಂ-42 ರ ಕಾಂತರಾಜು ಅರಸು ರಸ್ತೆಯ ಅಗ್ನಿಶಾಮಕ ಕಟ್ಟಡದ ಮುಂಬಾಗ ಬಸ್ ನಿಲ್ದಾಣ ಮೊತ್ತ ರೂ 15.00 ಲಕ್ಷ ರೂ ಕಾಮಗಾರಿಗೆ ಶಾಸಕ ಎಲ್ ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವಕುಮಾರ್, ಶ್ರೀ ಬಲರಾಮ್, ದೇವರಾಜ್, ರವಿ, ಚಾಮರಾಜ ಕ್ಷೇತ್ರದ ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಪುನೀತ್, ರವಿಗೌಡ, ಬಸವಣ್ಣ, ಕೃಷ್ಣಪ್ಪ, ಚನ್ನಪ್ಪ, ಶಂಭಣ್ಣ, ಜ್ಯೋತಿ, ಕೆ.ಜಿ.ಕೊಪ್ಪಲು ಗ್ರಾಮಸ್ಥರು ಹಾಗೂ ಮಮತ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *