ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ಎಂಬ ಉತ್ಸಾಹಿ ಯುವಕರ ತಂಡ! : heggaddesamachar.com

ಇಂದು ನಮ್ಮ ಮಧ್ಯೆ ಸಮಾಜದಲ್ಲಿ ಹಲವಾರು ಸಾಮಾಜಿಕ ಕೆಲಸ ಮಾಡುವ ಸಂಸ್ಥೆಗಳು ಇದೆ. ಇದರ ಮಧ್ಯೆ ‘ಕ್ರೀಂ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್’ ಎಂಬ ಉತ್ಸಾಹಿ ಯುವಕರ ತಂಡ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಇತ್ತೀಚಿಗಷ್ಟೆ ದಕ್ಷ ಅಧಿಕಾರಿ, ಕರ್ನಾಟಕದ ಸಿಂಗಂ ಅಂತಲೇ ಖ್ಯಾತಿಯಾಗಿರುವ ರವಿ ಚೆನ್ನಣ್ಣನವರ್ ಈ ಸಂಸ್ಥೆಯ ಲೋಗೋವನ್ನು ಬಿಡುಗಡೆ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈ ತಂಡ ವರ್ಷಗಳ ಹಿಂದೆಯೆ ಕ್ರೀಂ ಬಿಸ್ಕೆಟ್ ಎಂಬ ವೆಬ್ ಸೀರೀಸ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಸಂಸ್ಥೆಯನ್ನು ಅಧಿಕೃತವಾಗಿ ನೊಂದಣಿ ಮಾಡಿಸಿ ವೆಬ್ ಸೀರೀಸ್, ಮಾಡೆಲಿಂಗ್ ಶೋ, ಆಲ್ಬಮ್ ಸಾಂಗ್, ಯ್ಯೂಟೂಬ್ ಕಂಟೆಂಟ್ ಹೀಗೆ ಹತ್ತು ಹಲವಾರು ಯೋಜನೆಗಳಿಗೆ ಚಾಲನೆ ಕೊಡುತ್ತಿದೆ.
ಈ ಸಾಲಿನಲ್ಲಿ ಮೊದಲು ಎಂಬಂತೆ ಮಾಡಿಲಿಂಗ್ ಶೋ ಒಂದನ್ನು ಆಯೋಜಿಸುತ್ತಿದ್ದಾರೆ. ಮಾಡೆಲಿಂಗ್ ಅಂದ್ರೆನೆ ಕೆಲವರು ಹಿಂಜರಿಯು ಕಾಲದಲ್ಲಿ ಹೀಗೂ ಮಾಡಬಹುದು ಎಂದು ತೋರಿಸಿಕೊಡುತ್ತಿದ್ದಾರೆ.
ಹೌದು!, ವೆಸ್ಟ್ರರ್ನ್ ಕಲ್ಚರನ್ನು ಪಕ್ಕಕ್ಕಿಟ್ಟು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಟ್ರೆಡಿಷನಲ್ ಶೋ ಒಂದನ್ನು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮದ ಆಡಿಷನ್ ಇದ್ದು 15 ನೇ ತಾರೀಖು ತ್ಯಾಗರಾಜನಗರದಲ್ಲಿ ಏರ್ಪಡಿಸಲಾಗಿದೆ.
ಹತ್ತು ಹಲವಾರು ಯೋಜನೆಗಳೊಂದಿಗೆ ಬರುತ್ತಿರುವ ಈ ಸಂಸ್ಥೆಗೆ ಶುಭ ಹಾರೈಸೋಣ. ಜೊತೆಗೆ ನೀವೂ ಈ ಕೆಲಸಗಳಲ್ಲಿ ಉತ್ಸುಕರಾಗಿದ್ದರೆ ಅವರ ಜೊತೆಗೂಡಿ, ಆಡಿಷನ್ ನಲ್ಲಿ ಪಾಲ್ಗೊಳ್ಳಿ ಮತ್ತು ಭಾಗವಹಿಸಿ…

ರೀ: ಹೆಗ್ಗದ್ದೆ ಸಮಾಚಾರ್
All the best team cream biscuit entertainment