Literature (ಸಾಹಿತ್ಯ)

ಕೌಟುಂಬಿಕ ಹಿಂಸೆಯ ನಾನಾ ಮುಖಗಳು : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

       ಕೌಟುಂಬಿಕ ಹಿಂಸೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ಅದರಲ್ಲೂ  ಶೇಕಡಾ 44 ರಷ್ಟು ಸ್ತ್ರೀ ಯರಿಗೆ  ಪತಿಯಿಂದಲೇ  ಹಿಂಸೆ ಎಂಬ ಮಾಹಿತಿಯನ್ನು ಕೆಲದಿನಗಳ ‌ಹಿಂದೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5 ನೇ ರಾಷ್ಟ್ರೀಯ ‌ಕುಟುಂಬ‌‌ ಆರೋಗ್ಯ ‌ಸಮೀಕ್ಷೆಯಲ್ಲಿ (15.12. 2020) ಈ ವಿಚಾರವಿದ್ದು. ದೇಶದ 20 ರಾಜ್ಯ ಗಳು ‌ಮತ್ತು ಕೇಂದ್ರ ಆಡಳಿತ ಪ್ರದೇಶಗಳಲ್ಲಿ  ಕರ್ನಾಟಕ ಮತ್ತು  5 ರಾಜ್ಯಗಳಲ್ಲಿ ಮಹಿಳೆಯರಿಗೆ ಪತಿಯಿಂದಲೇ ದೈಹಿಕ ‌ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ ಎಂದು ‌ಸಮೀಕ್ಷೆಯ ವರದಿ ಹೇಳಿದೆ. ಸರ್ಕಾರ, ಸಾಮಾಜಿಕ ಹೋರಾಟಗಾರರು, ಸರ್ಕಾರೇತರ ಸಂಘಟನೆಗಳು ‌ಜಂಟಿಯಾಗಿ ಈ ಅಧ್ಯಯನ ಕೈಗೊಂಡಿದೆ.
       ಮಹಿಳೆಯರು ಹೆಚ್ಚು ಹಿಂಸೆ ಅನುಭವಿಸುತ್ತಿರುವ ಟಾಪ್ 5 ರಾಜ್ಯಗಳೆಂದರೆ ಕರ್ನಾಟಕ, ಅಸ್ಸಾಂ, ಮಿಜೋರಂ,ತೆಲಂಗಾಣ ‌ಮತ್ತು ಬಿಹಾರ. 6 ಲಕ್ಷ ಕುಟುಂಬಗಳನ್ನು ಸಂದರ್ಶಿಸಿ ಜನರ ಆರೋಗ್ಯ,ಒಬ್ಬ ರಿಗೊಬ್ಬರು ನೀಡುವ ಸಹಕಾರ ,ಪ್ರೋತ್ಸಾಹ ಕುಟುಂಬಯೋಜನೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿ ಸಮೀಕ್ಷೆ ನಡೆಸಲಾಗಿದೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ   ಕೌಟುಂಬಿಕ ಹಿಂಸೆಯ ಪರಿಣಾಮ ಮತ್ತಷ್ಟು ತೀವ್ರವಾಗಿಯೂ ಕಾಡಲಿದೆ ಎನ್ನುವ ಆಘಾತಕಾರಿ ವಿಷಯವೂ‌ ಹೊರ ಬಿದ್ದಿದೆ.ಜೊತೆಯಾಗಿ ಜೀವನ ನಡೆಸಲಾಗದ ಸ್ಥಿತಿಗೆ  ಕುಟುಂಬಗಳು  ತಲುಪಿದೆ. ದೈಹಿಕ- ಮಾನಸಿಕ ಸ್ವಾಸ್ಥ್ಯ ದ ಮೇಲೆ ವ್ಯಾಪಕ ಪರಿಣಾಮ ಉಂಟಾಗುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ‌
       


        ಹಾಗೆ ಇನ್ನೊಂದು ಸಮೀಕ್ಷೆಯಲ್ಲಿ  ಹೊರಗೆ ಕೊರೊನಾ ಕಾಟ ಒಳಗೆ ಪತಿಯ ಕಾಟ ಎಂಬಂತೆ  ಲಾಕ್ ಡೌನ್ ದಿನಗಳಲ್ಲಿ ದೇಶವಾಸಿಗಳಲ್ಲಿ ಮನಶಾಂತಿ ಕದಡಿದ ಕರೊನಾ‌ ಪ್ರಕರಣಗಳಲ್ಲಿ ಸಾವಿರಾರು ಜನ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ ಎನ್ನುತ್ತಿದೆ‌ ವೈದ್ಯಕೀಯ ಲೋಕ.  ಹೆಚ್ಚಿನ ದೂರುಗಳು‌ ಲಾಕ್ ಡೌನ್ ಜಾರಿಗೊಂಡ ಬಳಿಕ‌ ಪತಿ ಪತ್ನಿ ಕಲಹ  ಪ್ರಕರಣಗಳು ಅಧಿಕ ಗೊಂಡಿದ್ದು  ಲೈಂಗಿಕ ಶೋಷಣೆ,  ಬಗೆ ಬಗೆಯ  ಅಡುಗೆಯ ಆಗ್ರಹ, ಹೆಂಡತಿಯ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ವಿವಿಧ ಪೀಡನೆ ಹೆಚ್ಚುತ್ತಿದ್ದು ನೂರಾರು ಕರೆಗಳು ಮಹಿಳಾ ಆಯೋಗಕ್ಕೆ ಬರುತ್ತಿರುವುದಲ್ಲದೆ.ಅನೇಕ ದೂರು ಮಹಿಳಾ ಆಯೋಗದ ಮೇಟ್ಟಿಲೇರಿದೆ.

         ಲಾಕ್ ಡೌನ್ ನಿಂದಾಗಿ 24 ಗಂಟೆಯೂ ಮನೆಯಲ್ಲಿರುವುದರಿಂದ ಪತಿಯ ದಿನಚರ್ಯೆಯಲ್ಲಿ ಎದುರಾದ ಹಠಾತ್ ಬದಲಾವಣೆ, ಆರ್ಥಿಕ ‌ಹೊಡೆತ ಮತ್ತು ‌ಕೆಲಸವಿಲ್ಲದೆ ಮನೆಯಲ್ಲಿ ಉಳಿದಿರುವ ಗಂಡ ಮಾನಸಿಕ ಖಿನ್ನತೆಗೆ ‌ಒಳಗಾಗಿ‌ ಪತ್ನಿಯ ಮೇಲೆ ‌ಸಖಾ‌ ಸುಮ್ಮನೆ ಹಲ್ಲೆ‌ನಡೆಸುತ್ತಿದ್ದಾರೆ. ಕೆಲವರು ಕೆಲಸ ಕಳೆದು ಕೊಂಡಿದ್ದಾರೆ, ವೇತನ ಕಡಿತವಾಗಿದೆ. ವರ್ಕಫಮ್ ಹೋಮ್,ಭವಿಷ್ಯದ ಬಗೆಯ ಆತಂಕ, ಮಾನಸಿಕ ಒತ್ತಡ  ಆರ್ಥಿಕ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಹೆಂಡತಿಯ ಮೇಲೆ ಹಲ್ಲೆ ನಡೆಸಿಲಾಗುತ್ತದೆ. ಗಂಡ ಹೆಂಡಿರ ಜಗಳ ಜೀವ ಹಿಂಸೆಗೆ ಮುಂದಾಗುವಷ್ಟು ಅಸಹನೆಯ ಕಟ್ಟೆ ಒಡೆದ ಪ್ರಕರಣಗಳು ದಾಖಲಾಗಿದೆ.
            


               ಕರೊನಾ ಮಹಾಮಾರಿ ಇಡಿ ಜಗತ್ತನ್ನೇ ಸ್ತಬ್ಧ ಗೊಳಿಸಿ‌ಬದುಕು ಹಲವು ರೀತಿಯಲ್ಲಿ ಬದಲಾಗಿಸಿದ್ದು ನಿಜ. ಜೀವನ ಶೈಲಿ ಬದಲಾಗುವ ಜೊತೆಯಲ್ಲಿ ಜನರ ಮನಸ್ಸಿನ ಮೇಲೂ‌ ಪರಿಣಾಮ‌ಬೀರಿದೆ.  ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರಿಗೂ ಮುಂದಿನ ಬದುಕಿನ ‌ಬಗ್ಗೆ ಗೊಂದಲ ಮೂಡಿದ್ದು ಅಕ್ಷರಶಃ ಸತ್ಯ. ಕೊರೊನಾ ಲಾಕ್ ಡೌನ್ ಅವದಿಯಲ್ಲಿ ‌ಕುಟುಂಬದ‌ ಸದಸ್ಯರೊಂದಿಗೆ‌ ಹೆಚ್ಚಿನ ಸಮಯ‌ಕಳೆಯಲು ಸಾಧ್ಯವಾಗುತ್ತದೆ ಪ್ರೀತಿ, ಬಾಂಧವ್ಯ ಗಟ್ಟಿಗೊಳ್ಳಲು ಸಾದ್ಯ ಎಂಬ ಅಪೇಕ್ಷೆ ಸಹಜವಾಗಿ ಇದ್ದ  ನಿರೀಕ್ಷೆ ಕೆಲವೆಡೆ ಸುಳ್ಳಾಯಿತು‌ ಅದರಲ್ಲೂ ‌ಮುಖ್ಯವಾಗಿ ದಾಂಪತ್ಯ ಕಲಹ ರೂಪ ತಳೆದು ಕೌಟುಂಬಿಕ ಸಮಸ್ಯೆ ಬಗೆಹರಿಸುವಲ್ಲಿ‌ ಸಕ್ರಿಯವಾಗಿರುವ‌ ವನಿತಾ‌ಸಹಾಯ‌ ವಾಣಿಗೆ  ಬರುವ ಕರೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ಬಹುತೇಕ ಪ್ರಕರಣಗಳು ತಜ್ಞರ ಪ್ರಕಾರ, ಖಿನ್ನತೆ, ಕಿರಿಕಿರಿ, ನಿದ್ರಾಹೀನತೆ, ಭಯ ಮತ್ತು ದಂಪತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

    ‌     ದಂಪತಿಗಳ ನಡುವೆ ವಿರಸಗಳು‌ ಹೆಚ್ಚಾಗಲು‌ ಸಾಧ್ಯವಾಗಿರ ಬಹುದಾದ ಕಾರಣಗಳು ಅನೇಕ. ತಮ್ಮ ವ್ಯವಹಾರ, ಉದ್ಯೋಗ ಗಳಿಕೆಯಲ್ಲಿನ ಅಸ್ಥಿರತೆ, ಉಳಿತಾಯದ ಕೊರತೆ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಮತ್ತು ದೈಹಿಕ ಆರೋಗ್ಯದ ಭಯ, ಆತಂಕ ದಿಂದ ಮಾನಸಿಕ ಒತ್ತಡಕ್ಕೊಳಗಾದವರ ಲ್ಲಿ‌ ಮನೆ‌ಜಗಳ  ಹೆಚ್ಚಾಗಿ ವಿರಸ ಅತೀ ರೇಕಕ್ಕೆ‌ ಹೋಗಿ ದ್ವೇಷವಾದಾಗ‌  ಯಾವುದೋ ಜನ್ಮದ ವೈರಿಗಳಂತೆ  ವರ್ತಿಸುವುದು‌ ದುರಂತ.


       ಸಂಪಾದನೆಯ‌  ಬಾಗಿಲು‌ ಮುಚ್ಚಿದ್ದು . ಕೌಟುಂಬಿಕ ಹಿಂಸೆಯು ಹೊಸ ರೂಪ ತಾಳಿ. ಕ್ಷಲಕ‌ ಕಾರಣಕ್ಕೆ‌ ಪ್ರಾರಂಭವಾಗಿ ಅದೇ ಡೊಡ್ಡದಾಗಿ ಮನೆ ರಣರಂಗ ವಾಗುತ್ತಿದ್ದ ಕಾರಣ ನಿರಂತರವಾದ.ಮಾನಸಿಕ ಒತ್ತಡ, ‌ಕೋಪ ಹತಾಶೆಯಿಂದ  ಕಲಹಕ್ಕೆ ಇಳಿಯುತ್ತಾರೆ . ಸಿಟ್ಟು ಬಂದಾಗ ತಕ್ಷಣ ಪ್ರತಿಕ್ರಿಯಿಸುವುದು ತೀಕ್ಷ್ಣ ‌ಮಾತಿನ ಬಾಣ ಯಾವುದೋ‌ ವಿಷಯದಲ್ಲಿ  ಭಿನ್ನಾಭಿಪ್ರಾಯ, ‌ಮನಸ್ಸಿನಲ್ಲಿ ತುಂಬಿಕೊಂಡಿರುವ ಪೂರ್ವಗ್ರಹಗಳು ಇನ್ನೂ ಅನೇಕ ಕಾರಣಗಳು ಅಸಹನೆಯ ಕೌಟುಂಬಿಕ ಚೌಕಟ್ಟಿನೊಳಗೆ ‌ಬಿರುಕು ಬಿಡಲು ಕಾರಣವಾಗುತ್ತದೆ.

      ಗಂಡ ಎನ್ನುವ ಮಾತ್ರಕ್ಕೆ ಹೆಂಡತಿಯ ಮೇಲೆ ‌ಹರಿಹಾಯುವುದು ಎಷ್ಟು ಮಾತ್ರಕ್ಕೂ ಸರಿ ಅಲ್ಲ. ಸಮಯ ಸರಿದಂತೆ ಪರಿಸ್ಥಿತಿ ಸರಿಯಾಗುತ್ತದೆ. ದೌರ್ಜನ್ಯ ಮುಗಿಯುತ್ತದೆ ‌ಎಂದು  ಭಾವಿಸದೆ‌ ಆರಂಭದಲ್ಲೆ ಸರಿಪಡಿಸಿ ‌ಕೊಳ್ಳುವುದು ಉತ್ತಮ .ಅದರಲ್ಲೂ ಹೊಡೆಯುವುದು, ‌ಬಡಿಯುವುದು, ಮಾತಿನಿಂದ ಹೃದಯ ಘಾಸಿಗೋಳಿಸುವ‌  ಖಿನ್ನತೆಗೆ ತಳ್ಳುವ ಮೂಕ ರೋದನೆಗೆ‌ ಕಾರಣವಾಗುವ ಸನ್ನಿವೇಶಗಳನ್ನು ಹುಟ್ಟು ಹಾಕುವುದು  ಸರಿಯಲ್ಲಾ. ವೈವಾಹಿಕ ಜೀವನದಲ್ಲಿ‌  ಮನಸ್ತಾಪಗಳಿಗೆ  ಬಹಳಷ್ಟು ಕಾರಣಗಳಿರುತ್ತವೆ. ಹಾಗೆ ವೈವಾಹಿಕ ವಿವಾದ ಹೊಸದೇನಲ್ಲ  ಇಬ್ಬರೂ ಸಮಾನ ಮನಸ್ಕರು ಆದರೂ ಯಾವಾಗಲೂ ಒಂದೇ ತರ ಯೋಚನೆ ‌ಮಾಡಲು‌ ಸಾಧ್ಯವಿಲ್ಲ. ಹತ್ತಿಕ್ಕಿಕೊಂಡಿದ್ದ ಹತಾಶೆ, ಅಸಮಾಧಾನಗಳನ್ನು ಒಬ್ಬರ ಮೇಲೊಬ್ಬರು ತಿರಿಸಿಕೊಳ್ಳುವುದು ಸರಿ ಅಲ್ಲ. ಯಾರು‌ ಸಿಗದಿದ್ದರೆ‌  ಹೆಂಡತಿಯನ್ನು ಒಂದು ಕೈ ನೋಡಿ ಕೊಳ್ಳುವ ಎಂಬ‌ ಮನ ಸ್ಥಿತಿಯಲ್ಲಿ ಕೆನ್ನೆಗೆ ಬಿಳುವಪೆಟ್ಟು , ಬೆನ್ನಿಗೊಂದು ಗುದ್ದು ತಲೆಯನ್ನು ‌ಹಿಡಿದು ಗೋಡೆಗೆ ಜಜ್ಜುವುದು‌ ಮುಂತಾದ ಕೌಟುಂಬಿಕ ಹಿಂಸೆಗಳನ್ನು ಗಂಡ ನೀಡಿದರೆ‌ ಒಂದೇ ಸೂರಿನಡಿ ಬದುಕುವುದೆಂತು  ಎಂಬ ದೂರುಗಳ ಸಂಖ್ಯೆ ಹೆಚ್ಚುತ್ತಿದೆ.

    ‌  ‌ ತಪ್ಪು ಮಾಡದೇ ತಪ್ಪಿತಸ್ಥಳಾಗಿದ್ದೆನೆ.ದಾಕ್ಷಣ್ಯಕ್ಕೊ, ಹೆಣ್ತನ ಕಂಜಿ ಹೆಣ್ಣು ಬದುಕುತ್ತಾಳೆ‌. ಹೆದರಿಸಿ, ಬಗ್ಗು ಬಡಿಯುವ‌ ಗಂಡಿನ‌ ನಿರಂತರ ಹುನ್ನಾರಕ್ಕೆ‌  ಹೆಂಡತಿ  ಬಲಿಪಶುವಾದ ಉದಾಹರಣೆಯು ದೊರೆತ್ತಿದೆ. ಹೊಡೆವ ಕೈಗಳಿಗೆ ಹೆದರಿ ಜೀವನ ಪರಿಯಂತ  ಹೊಂದಾಣಿಕೆ ಎಂಬ ಅಸ್ತ್ರದಲ್ಲಿ ಮುಳುಗಿರುವ ಹೆಂಡತಿ ‌ಗಂಡ ಎಷ್ಟೇ ಹೊಡೆದರು ಬಡಿದರೂ ಬಿಟ್ಟು ‌ಹೋಗುವುದಿಲ್ಲ ಎಂಬ ನಂಬಿಕೆಗೆ  ಹೊಡೆತ‌ ಬಿದ್ದಿದೆ. ಇಂಡಿಯನ್ ಸೈಕ್ರಯಾಟಿ ಸೊಸೈಟಿ ಇತ್ತೀಚೆಗೆ ನಡೆಸಿದ‌  ಸಮೀಕ್ಷೆಯಲ್ಲಿ ಮಾನಸಿಕ ಕಾಯಿಲೆಗಳನ್ನು ‌ಬಳಲುತ್ತಿರುವವರ‌ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಅದರಲ್ಲೂ ಭಾರತದಲ್ಲಿ ವಿವಿಧ ವಯೋಮಾನದ‌ ದಂಪತಿಗಳು ಅತೀಯಾದ ಒತ್ತಡ, ಆತಂಕ, ಭಿತಿ ಖಿನ್ನತೆಯನ್ನು ಎದುರಿಸುತ್ತಿರುವು ದು ವರದಿಯಾಗಿರುತ್ತದೆ.

     ನಾವು ವಿದ್ಯಾವಂತರು, ಬುದ್ದಿವಂತರು, ಸುಸಂಸ್ಕೃತ ರು ಎಂದು ಹೇಳಿಕೊಳ್ಳುತ್ತಿರುವ ಈ ಆಧುನಿಕ ಸಮಾಜದ ಲ್ಲಿ‌ ಕೌಟುಂಬಿಕ ಕಲಹಗಳು‌  ದಿನೆ ದಿನೆ‌‌  ಹೆಚ್ಚಾಗುತ್ತದೆ. ಎಲ್ಲಾ ಬಗೆಯ ಶಿಕ್ಷಣ ಇಂದು‌ ಹೆಣ್ಣು‌ಗಂಡುಗಳಿಗೆ‌ ಸಿಗುತ್ತಿದೆ. ಆದರೆ ಕುಟುಂಬ‌ ನಿರ್ವಹಣೆ, ದಾಂಪತ್ಯದಲ್ಲಿ ವಹಿಸಬೇಕಾದ‌ ಎಚ್ಚರಿಕೆಗಳು, ಬದುಕಿನ‌ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಪರಿಯನ್ನು ಕಲಿಸುವ ಅಗತ್ಯದ ಬಗ್ಗೆ ನಮ್ಮ ಸರಕಾರವಾಗಲಿ, ಮನೆಯ ಹಿರಿಯರು ಗಮನ ಹರಿಸುತ್ತಿಲ್ಲಾ ಆದ್ದರಿಂದ ಹಸೆಮಣೆ‌ ಎರುವ  ನವಪೀಳಿಗೆ  ಯಾವುದೇ ಮಾನಸಿಕ ತಯಾರಿಕೆ ಇಲ್ಲದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.  ಅದಕ್ಕಾಗಿಯೇ ದಾಂಪತ್ಯ ಕೆಲವರ ಪಾಲಿಗೆ ಅವೃತ ಇನ್ನೂ ಕೆಲವರಿಗೆ  ಬಿಸಿ ತುಪ್ಪ ಮತ್ತೆ‌ ಕೆಲವರಿಗಂತೂ ವಿಷ.   ಮದುವೆ ,ದಾಂಪತ್ಯದ ಬಗ್ಗೆ ಅತೀ ರಂಜಿತ ಮಧುರ‌ ಸ್ವಪ್ನ ಗಳೇ ಕಣ್ತುಂಬಿರುವ ಮುಗ್ಧ ಮನಸ್ಸಿಗೆ  ತನ್ನವರ ಕಲ್ಪನೆ  ತದ್ವಿರುದ್ದವಾದ ಘಟನೆಗಳು ಬದುಕಿನಲ್ಲಿ ನಿರಾಶೆ ‌ಮೂಡಿಸುತ್ತದೆ. ಇದ್ದ ಸರಿ ತಪ್ಪು, ಕಷ್ಟ ಸುಖಗಳ ಅರಿವಿಗೆ  ಮನವನ್ನು ತಯಾರಿಸಿಕೊಳ್ಳಲಾಗದೆ  ಕೋಪ ತಾಪದ ಮನಸ್ಥಿತಿಗಳಿಗೆ ಆಸ್ಪದ‌ಕೊಟ್ಟು  ವಿಚೇದನಕ್ಕೆ‌ ಮುಂದಾಗು ತ್ತಾರೆ.

         ‌ರಾಷ್ಟೀಯ ಕೌಟುಂಬಿಕ ಆರೋಗ್ಯ ‌ಸಮೀಕ್ಷೆಯಿಂದ ಒಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವಿವಿಧ ರಾಜ್ಯಾದಲ್ಲಿ ನಡೆಸಲಾಗಿದ್ದ  ಸಮೀಕ್ಷೆಯಲ್ಲಿ   4,658 ಮಹಿಳೆಯರು ಭಾಗವಹಿಸಿದ್ದು ಇದರಲ್ಲಿ  2,266 ಮಹಿಳೆಯರು ಪತಿಯ ಇಷ್ಟದಂತೆ  ನಡೆದುಕೊಳ್ಳದಿದ್ದರೆ  ಆತ  ದೌರ್ಜನ್ಯ ನೀಡುತ್ತಾನೆ  ಎಂದು ಇನ್ನೂ ಕೆಲ ಮಹಿಳೆಯರು  ಲೈಂಗಿಕ ಆಸಕ್ತಿಗೆ  ಸಹಕರಿಸದಿದ್ದರೆ ಏಟು  ಬೀಳುತ್ತದೆ ಎಂದು ಹೇಳಿದರೆ  ಶೇಕಡಾ 70 ರಷ್ಟು ‌ಮಹಿಳೆಯರು ಗಂಡ‌ ಮಧ್ಯಸೇವಿಸುತ್ತಾರೆ.‌ಮಧ್ಯದ  ಪ್ರಭಾವದಿಂದ‌ ಹೊಡೆಯುತ್ತಾರೆ  ಎಂದಿದ್ದಾರೆ. ಶೇಕಡಾ 16 ರಷ್ಟು ‌ಮಹಿಳೆಯರು ಗಂಡ‌ಮಧ್ಯ‌ಸೇವಿಸುವುದಿಲ್ಲ ಆದರೂ ‌ ನಮ್ಮ ‌ಮೇಲೆ ಕೈಮಾಡುತ್ತಾರೆ ಎಂದಿದ್ದಾರೆ ಕೌಟುಂಬಿಕ ಹಿಂಸೆಯಿಂದ ಹೆಂಗಸರನ್ನು ರಕ್ಷಿಸಲು ಸಾಕಷ್ಟು ಕಾಯಿದೆ, ಕಾನೂನು ಗಳಿವೆ ಆದರೆ ಅದರ ಅರಿವು ಮಹಿಳೆಯರಿಗೆ ಇಲ್ಲದಿರುವುದು  ವಿಪರ್ಯಾಸ. 

Leave a Reply

Your email address will not be published. Required fields are marked *