News (ಸುದ್ದಿ)
ಕೊರೋನಾ ಬಗ್ಗೆ ಎಚ್ಚೆತ್ತುಕೊಳ್ಳಿ ಭಾರತೀಯರೇ ಎಂದ ಅಮೇರಿಕಾದ ಕನ್ನಡ ವೈದ್ಯ | heggaddesamachar.com

ಮಹಾಮಾರಿ ಕೊರೋನಾ ಬಗ್ಗೆ ಅಮೇರಿಕಾದಲ್ಲಿರುವ ಭಾರತೀಯ ವೈದ್ಯ, ವಿಜ್ಞಾನಿ ಹಾಗೂ ಪ್ರೊಪೆಸರ್ ಡಾ. ದಿನೇಶ್ ಶೆಟ್ಟಿ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದಲ್ಲಿ ಕೊರೋನಾ ತಡೆಗೆ ಏನ್ಮಾಡಬೇಕು, ಅದು ಎಷ್ಟು ಅಪಾಯಕಾರಿ, ಸೋಷಿಯಲ್ ಡಿಸ್ಟೆನ್ಸ್ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಸವಿವರವಾಗಿ ಅವರು ವಿವರಿಸಿದ್ದಾರೆ.
ಈ ಬಗ್ಗೆ ಡಾ. ದಿನೇಶ್ ಶೆಟ್ಟಿಯವರನ್ನ ಕೇಳಿದರೆ, ನನ್ನ ದೇಹ ಇಲ್ಲಿದೆ, ಆದರೆ ಮನಸ್ಸು ಪೂರ್ತಿ ಭಾರತ ಮತ್ತು ಭಾರತೀಯರ ಮೇಲಿದೆ ಎಂದು ತಾಯ್ನಾಡಿನ ಮೇಲೆ ಅವರಿಗಿರುವ ಮಮಕಾರವನ್ನ ವ್ಯಕ್ತ ಪಡಿಸುತ್ತಾರೆ.
(ಪೂರ್ಣ ವಿಡಿಯೋ ಗಾಗಿ ಕ್ಲಿಕ್ ಮಾಡಿ)
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾದ ಇವರು ಇಡೀ ಭಾರತ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬುದನ್ನ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ…
ರೀ: ಹೆಗ್ಗದ್ದೆ ಸಮಾಚಾರ್