News (ಸುದ್ದಿ)

ಕೊರೋನಾ ಗಾಸಿಪ್ – ಹಾವಳಿ ನಿಯಾಮವಳಿ | heggaddesamachar.com

Spread the love

ಎಲ್ಲಾಕಡೆ ಸಾವುನೋವಿನ ಸುದ್ದಿ ಪ್ರತಿ ಮನೆ ಮನಗಳಲ್ಲೂ ಬದುಕಿನ ಗಂಭಿರತೆಯ ಇನ್ನೊಂದು ಮುಖವನ್ನು ತೆರೆದಿಟ್ಟಿದೆ.
ಯಾಕಂದ್ರೆ ಸಾಂಕ್ರಮಿಕ ರೋಗ ಬಂದು, ಎಲ್ಲರನ್ನೂ , ಎಲ್ಲವನ್ನೂ ಅಳಿವಿನಂಚಿಗೆ ತಳ್ಳುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳೊದು ಸರ್ವೇ ಸಾಮಾನ್ಯ…!!!
ಕೊರೋನಾ ಪದ ಕೇಳರಿಯದ ಮನುಜರಿಲ್ಲ.. ಹೌದು ನಿಜ ಪುಟ್ಟ ಪುಟ್ಟ ಮಕ್ಕಳಿಂದ ವಯಸ್ಸಾದ ಹಿರಿಯರಿಗೂ ಕೊರೊನಾ ಎಂಬುದು ಚಿರಪರಿಚಿತ…
ಅದರೆ ಭಯ ಬಿದ್ದು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವವರು ಅರ್ಥೈಸಿಕೊಳ್ಳಬೇಕಾಗಿದೆ, ಕೊರೋನಾ ನಿಜವಾಗಿ ಸಾಂಕ್ರಾಮಿಕ ರೋಗ ಹೌದಾ… ಅದು ಯಾವ ರೀತಿ ಬರುತ್ತದೆ ಹಾಗೂ ಇದಕ್ಕೆಲ್ಲ ಇಷ್ಟೆಲ್ಲ ಕ್ರಮಗಳು ಯಾಕೆ ತಗೊಂಡಿದ್ದಾರೆ,
ನಾವು ಮಾಡಬೇಕಾದ ನಮ್ಮ ಕರ್ತವ್ಯಗಳೇನು…
ಹೌದು ಇಂದು ಟಿವಿಗಳಲ್ಲಿ ಅಥವಾ ಯಾರೇ ಮಾತಾಡಿದರೂ ಕೇಳಿಬರುವುದು ಅಲ್ಲಿ ಲಾಠಿಚಾರ್ಜ್ ಮಾಡಿದರು,
ಇಲ್ಲಿಗೆ ಪೋಲಿಸ್ ಬಂದರು, ಅವರ ಅಂಗಡಿ ಮೇಲೆ ಪೋಲಿಸ್ ದಾಳಿ ಆಯ್ತು.
ಅಲ್ಲದೆ ತುಂಬಾ ಜನ ಕೊರೋನಾದಿಂದ ಸತ್ತು ಹೋಗ್ತಾ ಇದ್ದಾರೆ, ದುಪ್ಪಟ್ಟು ಮಂದಿ ಆಸ್ಪತ್ರೆ ಸೇರಿದ್ದಾರೆ, ದಿನ ದಿನಕ್ಕೆ ಸಾವಿನ ಸಂಖ್ಯೆಗಳು ಅದರಿಂದ ಬಳಲುವವರು ಹೆಚ್ಚುತ್ತಲೇ ಇದ್ದಾರೆ…
ಹಾಗಾದರೆ ನಮ್ಮನ್ನು ಕಾಯುತ್ತಿರುವ ಪೋಲೀಸ್ ಅವರಿಗೆ ಕೊರೋನಾ ಬರೋದಿಲ್ವಾ! ಅವರು ಎಲ್ಲಿ ಬೇಕಾದರೂ ಓಡಾಡಬಹುದು, ಟಿವಿ ಪರದೆಯ ಮುಂದೆ ಕುಳಿತ ಪತ್ರಕರ್ತರು ಪತ್ರಿಕೋದ್ಯಮದವರಿಗೆ ಕೊರೋನಾ ಬರುವುದಿಲ್ಲ ಅಂತನಾ..!!
ಎಷ್ಟು ಮಂದಿ ಆಸ್ಪತ್ರೆಯಲ್ಲಿ ಹಗಲು-ರಾತ್ರಿ ದುಡಿಯುವವರು ಇದ್ದಾರೆ ಅವರಿಗೆ ಬರಲು ಸಾಧ್ಯವಿಲ್ಲ ಅಂತ ಅರ್ಥನಾ.. ಜನಸಾಮಾನ್ಯರಾದ ನಮ್ಮನ್ನು ಮಾತ್ರ ಯಾಕೆ ಮನೆಯೊಳಗೆ ಕೂಡಿ ಹಾಕಿದ್ದಾರೆ..
ಅತಿ ಅಗತ್ಯತೆಗಳಿಗೂ ನಾವು ಓಡಾಡುವಂತೆ ಇಲ್ಲ! ಹಾಗಿದ್ದರೆ,
ಈಗ ನೋಡಿದಾಗ ಈ ಸಮಸ್ಯೆ ಮುಗಿಯುವ ಹಂತಕ್ಕೆ ತಲುಪುತ್ತಿಲ್ಲ ಎಂದು ಅನಿಸಿಬಿಟ್ಟಿದೆ…
ಪತ್ರಿಕೋದ್ಯಮ ಮಿತ್ರರು ಹಾಗೂ ಆಸ್ಪತ್ರೆಗಳಲ್ಲಿ ದುಡಿಯುವವರು ಓಡಾಡುತ್ತಿರಬೇಕಾದರೆ, ನಾವು!!! ಜನಸಾಮಾನ್ಯರಾದ ನಾವು ಯಾಕೆ ಓಡಾಡಬಾರದು ಎಂಬಂತೆ ಯೋಚಿಸಿ ತಮ್ಮ ಗಾಡಿಗಳನ್ನು ಹಿಡಿದುಕೊಂಡು ಪೇಟೆ ಸುತ್ತುವವರು ಅಥವಾ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿರುವವರು..
ನಾನು ನನ್ನ ಮನೆಯ ಪರಿಸರದಲ್ಲಿ ಸುತ್ತುವುದರಿಂದ ಪೇಟೆಯ ಕಡೆಗೆ ತಕ್ಷಣಕ್ಕೆ ಹೋಗಿ ಬರುವುದರಿಂದ ಕೊರೋನಾ ಬಂದು ಬಿಡುವುದಿಲ್ಲ ಎಂಬ ನಂಬಿಕೆ ನಿಮ್ಮದಾದರೆ…
ಸರತಿ ಸಾಲಲ್ಲಿ ನಿಂತ ಪ್ರಶ್ನಾವಳಿ ಹಾಗೂ ಚಿಂತನೆಯಲ್ಲಿ ಮೂಡುವ ಸಮಾಧಾನಕರ ಉತ್ತರವನ್ನು ನೋಡಬೇಕಾಗಿದೆ…

!?! ಏನಿದು ?!?
ಪ್ರಶ್ನೆಗಳ ನಿಯಾಮವಳಿ
ಉತ್ತರಗಳ ಖಾನಾವಳಿ

೧. ಕೊರೋನಾ ಏನು?
: ಕೋರೊನಾ ಸಾಂಕ್ರಾಮಿಕ ರೋಗ.

೨. ಕೊರೋನಾ ಬಂದರೆ ಸತ್ತು ಹೋಗುತ್ತೇವಾ?
:ದೇಹ ನಿಶಕ್ತಿಯಿಂದ ಬಳಲುವಾಗ ಕೊರೋನಾವೇ ಬರಬೇಕೆಂದಿಲ್ಲ. ಸಾಮಾನ್ಯ ಜ್ವರ ಬಂದರೂ ದೇಹ ಅದನ್ನು ತಡೆದುಕೊಳ್ಳದಿದ್ದಾಗ ಅಡ್ಡ ಪರಿಣಾಮಗಳು ಇಲ್ಲವೇ ಸಾವುಗಳು ಸಂಭವಿಸಬಹುದು.

೩. ಕೊರೇನಾ ಹಾಗಾದರೆ ಹೇಗೆ ಬಂತು? ಸಾಂಕ್ರಾಮಿಕ ರೋಗ ಅಂತ ಯಾಕೆ ಕರೆಯುತ್ತಾರೆ?
:ಒಬ್ಬರಿಂದ ಒಬ್ಬರಿಗೆ ವೈರಸ್ ರೀತಿಯಲ್ಲಿ ಎರಡನೇ ಯಾ ಮೂರನೇ ವ್ಯಕ್ತಿಗೆ, ಸ್ಪರ್ಶದ ಮೂಲಕ ಹರಡುವ ವೈರಸ್ ಇದು. ಈ ವೈರಸನ್ನು ಕೊರೋನಾ ಎಂದು ಹೆಸರಿಸಲಾಗಿದ್ದು, ಸೊಂಕಿತ ವ್ಯಕ್ತಿಯಿಂದ ಅಥವಾ ವೈರಸ್ ಸೊಂಕಿತ ವ್ಯಕ್ತಿ ಸ್ಪರ್ಶಿಸಲ್ಪಟ್ಟ ವಸ್ತುಗಳನ್ನು ಮೂರನೇಯವರಾಗಿ ಅಲ್ಪಸಮಯದೊಳಗೆ ಆ ವಸ್ತುವನ್ನು ನಾವು ಸ್ಪರ್ಶಿಸಿದರೆ ನಮ್ಮ ದೇಹದೊಳಗೆ ಸೊಂಕು ತಗಲುತ್ತದೆ.

೪. ಹಾಗಾದರೆ ಗಾಳಿಯ ಮೂಲಕ ಇದು ಹರಡಬಲ್ಲುದಾ?
:ಗಾಳಿಯ ಮೂಲಕ ಅಥವಾ ಬಿಸಿಲಿಗೆ ಒಗ್ಗಿಕೊಳ್ಳುವುದರಿಂದ ಕೊರೋನಾ ಬರುವುದಿಲ್ಲ..
ಗಾಳಿಯಲ್ಲಿ ಹರಡುತ್ತಿದ್ದರೆ ದೇಶದಲ್ಲಿ ಶೇಕಡಾ ಐವತ್ತರಷ್ಟು ಮಂದಿ ಸಾವಿಗೀಡಾಗಬೇಕಾಗಿತ್ತು.
ಕೊರೋನಾ ಸೊಂಕಿತ ಅಥವಾ ಸೊಂಕಿತರ ಸ್ಪರ್ಶ ಸಂಪರ್ಕಿತ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳದಿದ್ದರೆ ಮಾತ್ರ ಬರುವ ಸಾಧ್ಯತೆ ಇದೆ.

೫. ಕೊರೋನಾ ಆತಂಕಕ್ಕೆ ಇಷ್ಟು ಕಟ್ಟುನಿಟ್ಟಿನ ಕ್ರಮಗಳ ಅಗತ್ಯತೆ ಇತ್ತಾ?
:ಅಂತರ ಕಾಯ್ದುಕೊಳ್ಳುವುದರಿಂದ ಈ ವೈರಸ್ ಬರದಂತೆ ತಡೆಯಬಹುದು ಹಾಗಾಗಿ ಕೊರೋನಾ ವೈರಸನ್ನು ದೂರವಿರಿಸಬಹುದಾಗಿದೆ.
ಒಟ್ಟಾಗಿ ಪಯಣ ಬೆಳೆಸುವುದು, ಸಭೆ ಸಮಾರಂಭ, ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಕಾರಣ ಜನರು ಗುಂಪು ಕಟ್ಟಿ ಮಾತುಕತೆ ಇಳಿಯಲು ಅವಕಾಶ ಇರುವುದಿಲ್ಲ. ಇದರಿಂದ ಶೇಕಡವಾರು ಒಬ್ಬರಿಂದ ಒಬ್ಬರಿಗೆ ಹರಡುವ ಈ ವೈರಸನ್ನು ತಕ್ಕಮಟ್ಟಿಗೆ ಕಡಿತಗೊಳಿಸಬಹುದು.

೬. ಓಡಾಟ ನಿಷಿದ್ಧ ಸರಿಯೇ?
ಸೈನಿಕರು, ಪೊಲೀಸರು ಪತ್ರಿಕೋದ್ಯಮ, ವೈದ್ಯಕೀಯ ಇನ್ನಿತರ ಅಗತ್ಯತೆಗಳನ್ನು ಸಂಪರ್ಕಿಸುವ ಕರ್ತವ್ಯನಿರತರಿಗೆ ಈ ನಿಯಮ ಏಕಿಲ್ಲ ಅಂದರೆ, ಕಠಿಣಕ್ರಮಗಳ ಜಾರಿಯ ನಂತರವು ಏನೂ ಅಗಿಲ್ಲವೆಂಬಂತೆ ಓಡಾಟ ನಡೆಸುವ ನಿಮಗೆ ಇದರ ತೀರ್ವತೆ ಇನ್ನೂ ಅರ್ಥ ಆಗಿಲ್ಲವೆಂದರೆ ಇನ್ನು ಈ ಕರ್ತವ್ಯ ಪಾಲಕರ ಪಾಲಿಗೆ ಉಳಿದಿದ್ದು ಕಣ್ಣೀರು ಮಾತ್ರ.

ಪೂರ್ಣವಿರಾಮಕ್ಕೆ ಮೊದಲು, ಕರ್ತವ್ಯನಿರತ ತನ್ನ ಜೀವದ ಹಂಗು ತೊರೆದು ಪ್ರತಿ ಏರುಪೇರುಗಳ ಮಾಹಿತಿ ಹೊತ್ತು ತರುತ್ತಿರುವ ಮಾದ್ಯಮ, ಅಂತೆಯೇ ತನ್ನ ಕುಟುಂಬ ಸಂತಸವನ್ನು ಬದಿಗೊತ್ತಿ ನಟ್ಟನಡುವಿನ ಬಿಸಿಲಿಗೂ ಕಗ್ಗತ್ತಲ್ಲ ರಾತ್ರಿಯಲ್ಲೂ ಮನೆಯೊಳಗಿರಿ ಎಂದು ಗಂಟಲು ಬಿಗಿ ಹಿಡಿದು ಸಾದ್ಯವಾಗದಿದ್ದರೆ ಲಾಠಿಯ ಮೂಲಕ ಬುದ್ಧಿಹೇಳುತ್ತಿರುವ ಪೋಲಿಸ್, ಕ್ಷಣ ಮಾತ್ರದಲ್ಲಿ ತನ್ನ ಊಟ ನಿದ್ದೆಯ ಗೊಡವೆ ಬಿಟ್ಟು ಸಂಬಂಧಿಕರೂ ಅಲ್ಲದಿದ್ದರೂ ಆ ಜೀವದ ಹೊಣೆ ಹೊತ್ತು ಚಿಕಿತ್ಸೆ ನೀಡುವ ವೈದ್ಯರು ನಿಮಗೆ ಏನು ಹೇಳಲಿ ಪದಗಳಲ್ಲಿ ಬನ್ನಿಸಿದರು ಕಡಿಮೇನೇ.. ಹೃದಯಸ್ಪರ್ಶಿ ವಂದನೆಗಳು.

ಮೊಂಡುತನದಿಂದ ಅನಗತ್ಯವಾಗಿ ಹಾದಿ ಬೀದಿಗಳಲ್ಲಿ ಅಲೆದಾಡುವ ಅಲೆಮಾರಿಗಳು.
ಜಾಲತಾಣದಲ್ಲಿ ನಮ್ಮದು ಒಂದು ಇರಲಿ ಎಂದು ತಲೆ ಬುಡ ಕಿತ್ತೆಸೆದ ಅನಾಮಧೇಯ ಸಂದೇಶಗಳು.
ಭಯಭೀಕರತೆಯ ಅಳ ತಿಳಿಯದೇ
ಸುಳ್ಳುಸುದ್ದಿ ಹಬ್ಬಿಸುವವರು.
ಇಂಟರ್ನೆಟ್ ಬಂದ್ ಮಾಡುವವರು.
ಉಚಿತ ಇಂಟರ್ನೆಟ್ ಸೇವೆಯ ಜೊತೆಗೆ ರಿಚಾರ್ಜ್ ಭೂತ ಹಿಡಿದ ಪೆಡಂಭೂತಗಳು.
ಪೊಲೀಸ್ ಅವರಿಗೆ ಅವಮಾನ ಮಾಡುವುದು ಅಲ್ಲದೆ
ಘಂಟಾಘೋಷವಾಗಿ ಬೈಗುಳ ಸುರಿಸುವ ಬುಧ್ಧಿವಂತ ಮಂಧೆಗಳು.
ಸಣ್ಣಘಟಕಗಳಲ್ಲಿ ವೈದ್ಯಕೀಯ ಸೇವೆ ಅಲಭ್ಯವೆಂದು ಅಸ್ಪತ್ರೆಗಳ ಮುಚ್ಚಿದವರು.
ನಿಮ್ಮ ಈ ಅಶಿಸ್ತಿನ ಕ್ರಮಗಳಿಗೆ ಕ್ಷಮೆ ಕೋರಿದರು ಕಡಿಮೆನೇ… ಎಂದು ಹೇಳುತ್ತಾ, ಅದರೂ ಕ್ಷಮಿಸುವಿರಾದರೇ ಕ್ಷಮಿಸಿ!!!
ಕೊರೋನಾ ಕರುಣೆ ಇಲ್ಲದ ಬಾಗಿಲ ತೆರೆಯುವ ಮುನ್ನ, ನಮ್ಮ ಕರ್ತವ್ಯಪಾಲನೆಯಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಿದೆ.
ನೀವು ನಿಮ್ಮ ಮನೆಯಲ್ಲಿ ಸುಭದ್ರವಾಗಿ ಇದ್ದರೆ ಅದಕ್ಕಿಂತ ಅತ್ಯುತ್ತಮ ಚಿಕಿತ್ಸೆ ಬೇರೊಂದಿಲ್ಲ.
ಕೊರೋನಾ ಹರಡುವುದು ಬೇಡ
ಕೊರೋನಾದಿಂದ ನಮ್ಮವರ ಕೊಲೆಗೆ ನಾವೇ ಕಾರಣರಾಗದಿರೋಣ…!!!

✒️ಚೈತ್ರ ವರ್ಕಾಡಿ

Leave a Reply

Your email address will not be published. Required fields are marked *