ಕೊರೊನಾ ಸೈನಿಕ ಸ್ವಯಂಸೇವಕರಿಂದ ಅರಿವು ಕಾರ್ಯಕ್ರಮ: heggaddesamachar.com

Spread the love
 ಮೈಸೂರು: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಕೈ ತೊಳೆಯುವ ಬಗ್ಗೆ ಕೊರೊನಾ ಸೈನಿಕ ಸ್ವಯಂಸೇವಕರು ವಾರ್ತ ಭವನದ ಆವರಣದಲ್ಲಿ ಸೋಮವಾರ ಪ್ರಾತ್ಯಕ್ಷಿಕೆ ನೀಡಿದರು.
 ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕೊರೊನಾ ಸೈನಿಕರು ಎಂಬ ಹೆಸರಿನಲ್ಲಿ ರಚಿಸಲಾಗಿರುವ ಸ್ವಯಂಸೇವಕ ತಂಡದವರು ಕೈತೊಳೆಯಲು ಪ್ರದರ್ಶಿಸಿದ ಟಿಪಿಟ್ಯಾಪ್ ಎನ್ನುವ ಮಾದರಿಯನ್ನು ವೈದ್ಯಕೀಯ ಶಿಕ್ಷಣಾಧಿಕಾರಿ ಪ್ರಕಾಶ್ ಅವರು ವೀಕ್ಷಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಗರದಲ್ಲಿ ಕಡಿಮೆಯಿದೆ ಎಂದು ಸಾರ್ವಜನಿಕರು ಕಡೆಗಣಿಸದೆ ಆಗಾಗ್ಗೆ ಕೈ ತೊಳೆಯಬೇಕು ಎಂದು ತಿಳಿಸಿದರು.
  ಕೊರೊನಾ ಸೈನಿಕರು ಸಿದ್ಧಪಡಿಸಿದ ಟಿಪಿಟ್ಯಾಪ್ ಮಾದರಿಯನ್ನು ಪ್ರಸಂಶಿಸಿದ ಅವರು, ಟಿಪಿಟ್ಯಾಪ್‍ನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶ, ಕಟ್ಟಡಗಳು ಹಾಗೂ ಅಗತ್ಯ ಪ್ರದೇಶಗಳಲ್ಲಿ ಬಳಕೆ ಮಾಡಬೇಕು. ಕೊರೊನಾ ಸೋಂಕು ಬಗ್ಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಹೇಳಿದರು.

ಕೊರೊನಾ ಸೋಂಕು ಉದ್ಭವಿಸಿದ ದಿನದಿಂದ ಇಂದಿನ ವರೆಗೂ ಮಾನವನಲ್ಲಿ ಸ್ವಚ್ಛತೆಯ ಬದಲಾವಣೆಯನ್ನು ಮೂಡಿಸಿದೆ. ದೇಶದಾದ್ಯಂತ ಕೊರೊನಾ ಸೋಂಕು ಪಸರಿಸುವಿಕೆಯನ್ನು ತಡೆಗಟ್ಟಲು ಲಾಕ್‍ಡೌನ್ 4 ಅಸ್ತಿತ್ವದಲ್ಲಿದೆ. ಈ ಸಂಬಂಧ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಹಾಗೂ ಕೈ ತೊಳೆಯುವ ಪ್ರಕ್ರಿಯೆ ಬಗ್ಗೆ ಬಹಳ ಸರಳವಾಗಿ ತಿಳಿಸಿದರು.
ಕೊರೊನಾ ಸೈನಿಕರು ಸಿದ್ಧಪಡಿಸಿದ ಟಿಪಿಟ್ಯಾಪ್ ಮಾದರಿಯ ಬಗ್ಗೆ ಲಕ್ಷ್ಮಿಕಾಂತ್ ಮತ್ತು ಕಿಶೋರ್ ತಂಡವು ಟಿಪಿಟ್ಯಾಪ್ ಅನ್ನು ಬಳಸುವುದು ಹೇಗೆ ಎಂಬುದನ್ನು ಪರಿಚಯಿಸಿಕೊಟ್ಟರು. ಟಿಪಿಟ್ಯಾಪ್ ಮಾದರಿಯನ್ನು ಬಹಳ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೇ ಸಿದ್ಧಪಡಿಸಿಕೊಂಡು ಕೊರೊನಾ ಸೋಂಕನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು.ಆರ್, ಸ್ವಯಂಸೇವಕರಾದ ಶ್ವೇತಾಶ್ರೀ, ಲಕ್ಷ್ಮಿಕಾಂತ್ ಎಂ.ಆರ್, ಕಿಶೋರ್ ಯಾದವ್, ಅದ್ವಿತ್.ಎಂ, ಇಸ್ರಾ ತನ್ವರ್, ಮೊಹಮದ್ ಸುಲೇಮಾನ್, ಕಲೀಲ್ ಉರ್ ರೆಹಮಾನ್, ಕಾವ್ಯಾ ಶ್ರೀ ಎಂ.ಎಸ್, ಶ್ರೀ ಗುರು ಎಂ.ಎಸ್, ಅಮ್‍ಜದ್‍ಖಾನ್, ಮನಿಕಂಠನ್.ಪಿ, ಆದರ್ಶ್.ಜಿ, ಅಭಿಲಾಷ್ ಜೈನ್, ಮಹಾದೇವ್ ಪ್ರಸಾದ್ ಎಸ್.ಎಸ್., ವಿರಾಜ್ ವಿಜಯ್ ಮನೆ, ಮೊಹಮದ್ ಅಜಾರ್ ಮತ್ತು ತಂಡ, ವಾರ್ತಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

One thought on “ಕೊರೊನಾ ಸೈನಿಕ ಸ್ವಯಂಸೇವಕರಿಂದ ಅರಿವು ಕಾರ್ಯಕ್ರಮ: heggaddesamachar.com”

Leave a Reply

Your email address will not be published. Required fields are marked *