ಕೊರೊನಾದ ಅಟ್ಟಹಾಸ…ಮುಂಬಯಿಯಲ್ಲಿ ಮತ್ತದೆ‌ ಮೌನ….

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ    

      ಇಡಿ ಜಗತ್ತನ್ನೆ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸಂಕಟಕ್ಕೆ‌ ಮಹಾರಾಷ್ಟ್ರ ಸ್ತಬ್ಧ. ವಾಣಿಜ್ಯ ನಗರಿ, ಕರ್ಮಭೂಮಿ ಎಂದೆಲ್ಲಾ ಕರಸಿಕೊಂಡ ಮಾಯನಗರಿಯ ಎಲ್ಲಾ ವಹಿವಾಟು ಸ್ತಬ್ಧ ಗೊಂಡು ಎಂದೂ ನಿದ್ರಿಸದ ನಗರದಲ್ಲಿ ನೀರವ ಆವರಿಸಿ ಮುಂಬಯಿಯಲ್ಲಿ  ಮತ್ತದೆ ಮೌನ. ಅಗತ್ಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್. ಕೊರೊನಾ 2 ನೇ ಅಲೆಯ ಮಿತಿ ಮಿರಿದ ಪರಿಸ್ಥಿತಿ ತೀರಾ ಹದಗೆಟ್ಟಿದ್ದ ಕಾರಣ ಸೋಂಕು ನಿಯಂತ್ರಣಕ್ಕೆ ತರಲು ಮಹಾರಾಷ್ಟ್ರದಲ್ಲಿ  15 ದಿನಗಳ ಲಾಕ್ ಡೌನ್ ಮಾದರಿಯ  ನಿರ್ಬಂಧ ಹೇರಲಾಗಿದೆ. ಕಠಿಣ ಕ್ರಮವಾಗಿ‌  ಒಂದು ಸ್ಥಳದಲ್ಲಿ 5 ಅಥವಾ 5 ಕ್ಕಿಂತ ‌ಹೆಚ್ಚು‌ ಜನರು ಸೇರುವಂತಿಲ್ಲ ಅಂದರೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಲ್ಲಿದೆ. ಎಪ್ರಿಲ್ 14 ರ ರಾತ್ರಿ 8 ರಿಂದ ಜಾರಿಗೊಂಡಿದ್ದು.

     ಮೇ ಒಂದರ ವರೆಗೆ ಎಲ್ಲಾ ಚಟುವಟಿಕೆಗಳಿಗೆ‌  ಕಡಿವಾಣ ಹೇರಲಾಗಿದೆ. ಮುಂಬಯಿಯಲ್ಲಿ  ಜನದಟ್ಟಣೆ ಇರುತ್ತಿದ್ದ ಪ್ರದೇಶಗಳು ಬಹುತೇಕ ಸ್ತಬ್ಧವಾಗಿ ರಸ್ತೆಗಳು ನಿರ್ಜನವಾಗಿದ್ದು ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮಕ್ಕೆ  ಸರ್ಕಾರ ಆದೇಶಿಸಿದೆ. ಯಾವುದೇ  ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಭೆಗೆ ಮೇ ಒಂದರವರೆಗೆ ‌ನಿರ್ಬಂಧ ಹೇರಲಾಗಿದೆ.  ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ, ಅಗತ್ಯ ಸೇವೆಗಳಿಗೆ ವಿನಾಯ್ತಿ . ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ ಈಗಾಗಲೇ ಹೊರಡಿಸಿದ ಕೋವಿಡ್ ಮಾರ್ಗ ಸೂಚನೆ ಕ್ರಮಗಳಿಗೆ ಮತ್ತಷ್ಟು ಸೇರ್ಪಡೆ ಮಾಡಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ.

       ಸಾರಿಗೆ ಬಸ್ ಗಳಲ್ಲಿ ಆಸನ ಸಾಮರ್ಥ್ಯವನ್ನು ಮೀರಿ ನಿಂತು‌ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ಹಾಲು, ಬೇಕರಿ,‌ಆಹಾರ‌ ಪಾರ್ಸೆಲ್ ಸೇವೆ, ಹೋಂಡೆಲಿವರಿ, ಪತ್ರಿಕಾ ಕಾರ್ಯಲಯ, ವೈದ್ಯಕೀಯ ಸೇವೆ,ಬ್ಯಾಂಕಿಗ್ ಸೇವೇ, , ಔಷಧಾಲಯ ತೆರೆದಿರುತ್ತದೆ.   ಈ‌ ಮೊದಲೆ ನಿರ್ಧರಿಸಿದ್ದ ಮದುವೆ ಗಳಿದ್ದರೆ 50 ಜನರ ಮಿತಿ, ಅಂತ್ಯ ಕ್ರಿಯೆಗೆ 20 ಜನರ ಮಿತಿ ,ಶಾಲೆ, ಕಾಲೇಜ್ ಸಲೂನ್, ಬೀಚ್, ಕ್ಲಬ್‌, ಈಜುಕೊಳ ,ಜೀಮ್, ನಾಟ್ಯಗೃಹ, ಸಿನಿಮಾ‌ಮಂದಿರ, ನಾಟಕ ಮಂಡಳಿ, ಸಭಾಮಂದಿರ,ಕ್ರೀಡಾ ಸಂಕೀರ್ಣ ಗಳನ್ನು ಮುಚ್ಚಲಾಗಿದೆ.


       ಮುಂಬಯಿಯಲ್ಲಿ  ಕೊರೊನಾ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು ಮಾಸ್ಕಧರಿಸುವುದು,ಸಾಮಾಜಿಕ ಅಂತರ‌ ಕಾಪಾಡಿ ಕೊಳ್ಳದಿರುವುದು‌ ಸೇರಿದಂತೆ ಕೊರೊನಾ ಮಾರ್ಗ ಸೂಚಿಗಳನ್ನು ‌ಉಲ್ಲಂಘಿಸುವವರ‌ ವಿರುದ್ಧ ವಿಧಿಸುತ್ತಿರುವ ದಂಡವಷ್ಟೆ ಅಲ್ಲದೆ ‌ನಿಯಮ ಮೀರುವವರ ವಿರುದ್ಧ ಸಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.


        ಕೊರೊನಾ ವೈರಾಣು ಸೊಂಕಿನ ಎರಡನೆ ಅಲೆ ಯಾರ ಹಿಡಿತಕ್ಕೂ ಸಿಗದಂತೆ‌ ವ್ಯಾಪಿಸತೊಡಗಿದ್ದು ಹಿಂದೆಂದಿಗಿಂತಲೂ ಅತೀ ವೇಗವಾಗಿ ಹಬ್ಬುತ್ತಲಿದೆ. ಮುಂಬಯಿಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ‌ಹೆಚ್ಚಾಗುತ್ತಿರುವ‌   ಬೆನ್ನಲೇ ಲಸಿಕೆ, ಆಮ್ಲ ಜನಕ ಸೇರಿದಂತೆ ಆಸ್ಪತ್ರೆಗಳಲ್ಲಿ‌ ಹಾಸಿಗೆಯ ಕೊರತೆಯು‌ ಕಂಡು‌ ಬಂದಿದೆ.ಕೊರೊನಾ‌ ಎರಡನೇ ಅಲೇ ದ್ವಿರೂಪಾಂತರ‌ ವೈರಾಣುವೇ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದು ಮಹಾರಾಷ್ಟ್ರದಲ್ಲಿ ಶೇಕಡಾ 60 ರಷ್ಟು ‌ಪ್ರಕರಣಗಳಲ್ಲಿ  ದ್ವಿರೂಪಾಂತರಿತ ತಳಿ ವೈರಾಣು‌ ಇರುವುದು‌ ಪತ್ತೆಯಾಗಿದ್ದು  ಕಳವಳಕ್ಕೆ ಕಾರಣವಾಗಿರುವ‌ ಹೊಸತಳಿ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಾಗ ತನ್ನ ಗುಣದಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಮಾಡಿಕೊಂಡಿರುತ್ತದೆ. ನಿತ್ಯ ಏರು ಮುಖವಾಗಿ ಸಾಗುತ್ತಿರುವ ಕೊರೊನಾ ಸೋಂಕು, ಆಸ್ಪತ್ರೆಗಳಲ್ಲಿ  ಲಸಿಕೆಯ ಅಭಾವ, ಚುಚ್ಚುಮದ್ದಿಗಾಗಿ ಹೆಚ್ಚಿದ ಪರದಾಟದ ಮದ್ಯ ಹೈರಾಣಾಗಿ ಭಯ ಬೀತರಾಗಿರುವ‌ ಸಾರ್ವಜನಿಕರ ಬದುಕು ಕೊರೊನಾ ‌ಸೃಷ್ಟಿಸಿದ ಕರುಣಾಜನಕ ಕಥೆಗಳು ಮುಂಬಯಿಯ  ಮನೆ ಮನೆ  ಬಿದಿ‌ ಬಿದಿಯಲ್ಲಿನ ಗೋಳು.  ಕೊರೊನಾ ಮಹಾಮಾರಿ ಯಿಂದ ಸಾವು,‌ನೋವು, ಕಷ್ಟ, ನಷ್ಟಗಳು ಅಪಾರ ಆಗಿದ್ದು‌ ನಿಜ .ಒಂದೆಡೆ ಆದಾಯವಿಲ್ಲದೆ ಬದುಕು ಸಾಗಿಸಬೇಕಾದ ಪರಿಸ್ಥಿತಿ ಒದಗಿ ಬಂದಿದ್ದು ಕೊರೊನಾ ಕರಿನೆರಳಿನ ಕಪಿಮುಷ್ಟಿಯಲ್ಲಿ ಜನಜೀವನ  ಚಿಂತಾಜನಕವಾಗಿ ಆರೋಗ್ಯ ಉಳಿಸಿ ಕೊಳ್ಳುವ ಚಿಂತೆ ಬಲವಾಗಿ‌ಕಾಡುತ್ತಿದೆ. 


     ಇದೇ ಎಪ್ರಿಲ್ 16 ರ ಕೊರೊನಾ ಪಿಡಿತರ  ಅಂಕಿ ಅಂಶಗಳ ಪ್ರಕಾರ ದೇಶದದಲ್ಲಿ 200739 ಹೊಸ ಪ್ರಕರಣ‌ ದಾಖಲು. 1038 ಜನರ ಸಾವು ಸಂಬವಿಸಿದೆ. ಮಹಾರಾಷ್ಟ್ರದಲ್ಲಿ 58952 ಸೊಂಕಿತರು ಪತ್ತೆಯಾಗಿದ್ದು ಘನಘೋರ ಪರಿಸ್ಥಿತಿ ಎದುರಾಗಿ ಇಡಿ ಮಾನವ‌ ಕುಲವನ್ನೆ ಆತಂಕಗೊಳಿಸಿದೆ.  ಮಹಾರಾಷ್ಟ್ರ ಸಿಎಂ ಉದ್ಭವ ಠಾಕ್ರೆ ‌ಪ್ರಧಾನಿ ಮೋದಿಗೆ‌ ನೇರವು ಕೋರಿ ಪತ್ರ ಬರೆದಿದ್ದು

  1. ಪ್ರತಿ ದಿನ 1200 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಬೇಡಿಕೆ ಇದ್ದು ಎಪ್ರಿಲ್ ಅಂತ್ಯದಲ್ಲಿ ಇದು 2000 ಮೆಟ್ರಿಕ್ ಟನ್ ಏರುವ ಸಾದ್ಯತೆ ಇದೆ.

  2.‌ಕೊರೊನಾ ಸಾಂಕ್ರಾಮಿಕವನ್ನು ನೈಸರ್ಗಿಕ ವಿಪತ್ತು  ಎಂಬುದಾಗಿ ಪರಿಗಣಿಸಿ ಪರಿಹಾರ ನೀಡಿಬೇಕು.


  3. ಪ್ರಶಕ್ತ ಹಣಕಾಸು ‌ವರ್ಷದ ಮೊದಲು ತ್ರೈಮಾಸಿಕದ ಅವಧಿಗೆ ಸಣ್ಣ ಮತ್ತು ಮಧ್ಯಮ ‌ಉದ್ದಿಮೆಗೆಗಳ ಸಾಲದ ಕಂತುಗಳ ಪಾವತಿ ಮುಂದೂಡುವಂತೆ ಕೇಂದ್ರ ಸರ್ಕಾರದ ಬ್ಯಾಂಕ್ ಗಳಿಗೆ ಸೂಚಿಸಬೇಕು ಎಂದು ಮನವಿ ಸಲ್ಲಿಸಿದ್ದರು.
  
  ಮುಂಬಯಿಯಲ್ಲಿ ಸೋಂಕಿನ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು ಕಳೆದ ವರ್ಷ ಪಾದಾರ್ಪಣೆ ಮಾಡಿದ ಕೊರೊನಾದ  2 ನೇ ಅಲೇ ಮೊದಲಿಗಿಂತಲೂ ಹೆಚ್ಚು ತೀವ್ರವಾಗಿದೆ. ಕ್ಷೀಪಗತಿಯಲ್ಲಿ ಹರಡುತ್ತಿರುವ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ‌ ಕಠಿಣ‌ ನಿರ್ಬಂಧ ‌ಹೇರಿರುವುದರ  ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ‌ವ್ಯಾಪಾರದ  ಮೇಲೆ ಪರಿಣಾಮ ಬೀರುವುದರಿಂದ ಆರ್ಥಿಕತೆ‌ ಮೇಲೇ ಬಾರಿ ಹೊಡೆತ ಬಿದ್ದಿದೆ.


   ರಾಜ್ಯದಲ್ಲಿ ಕೊರೊನಾ ಎರಡನೇ ‌ಅಲೇಯ ಅಬ್ಬರ ಹೆಚ್ಚಿರುವ ಬೆನ್ನಲ್ಲೇ ಕೊರೊನಾ ದಿಂದ ವೃತಪಟ್ಟವರ ಶವ ಸಂಸ್ಕಾರಕ್ಕೆ ಬಾರಿ ಹಣ ವಸೂಲು ಮಾಡುತ್ತಿದ್ದ ಕೆಲ‌ ಪ್ರಕರಣಗಳು‌ ಮುಂಬಯಿಯಲ್ಲಿ ಬೆಳಕಿಗೆ ಬಂದಿದ್ದು. ಕೊರೊನಾ ಪೀಡಿತರಾಗಿ‌ ಸಾವೀಗೀಡಾದವರ ಶವಸಂಸ್ಕಾರವನ್ನು ಸರ್ಕಾರದ ವತಿಯಿಂದಲೇ  ನೇರ ವೇರಿಸುವುದು ಕೊರೊನಾ ಮಾರ್ಗ ಸೂಚಿಯ ಒಂದು ಭಾಗ. ಸರ್ಕಾರದ ಕಡಿತಗಳ ಪ್ರಕಾರ ಸೊಂಕಿತರ ಶವ ಸಂಸ್ಕಾರ ಸರಕಾರ ನಡೆಸುತ್ತದೆ. ಆದರೆ ಶವ ಸಂಸ್ಕಾರದ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದ ವಿಡಿಯೋಗಳು ವೈರಲ್ಆಗುತ್ತಿದ್ದು ಸರಕಾರ ತಲೆ ತಗ್ಗಿಸುವ ಘಟನೆಗಳು ನಡೆಯುತ್ತಿದೆ‌.  ಕೊರೊನಾ ಸೋಂಕಿನಿಂದ ‌ವೃತ ಪಟ್ಟವರ ಶವ ಸಂಸ್ಕಾರಕ್ಕೆ ಯಾವುದೇ ಶುಲ್ಕ ನಿಗದಿ ಮಾಡಿಲ್ಲ ಎಂದು ಕೆಲ ಚಿತಾಗಾರ ಸ್ಪಷ್ಟಪಡಿಸಿದೆ. ಆದರೆ ಅಂಬುಲೆಸ್ಸ್ ಮತ್ತು ಚಿತಾಗಾರಗಳು ಮನಸೊ ಇಚ್ಚೆ ಹಣ ವಸುಲೂ ಮಾಡುತ್ತಿದೆ  ಎಂಬ ಆರೋಪ ಕೇಳಿ ಬಂದಿದೆ.


    ಮುಂಬಯಿಯಲ್ಲಿ ಲಾಕ್ ಡೌನ್ ಮಾದರಿಯ ಕಠಿಣ ನಿರ್ಬಂಧಿತ ದಾರಿಯಿಂದ ಉದ್ಯೋಗ ಕ್ಷೇತ್ರದ ಮೇಲೆ ಮತ್ತು ಕೋವಿಡ್ ಪರಿಣಾಮ ಬೀರಿದೆ. ಕೊರೊನಾ ಗೆದ್ದೆ ಬಟ್ಟೆವು ಎಂಬ ಆತ್ಮವಿಶ್ವಾಸದಿಂದ ಮುಂಬಯಿ ಆರ್ಥಿಕ ಮಾರುಕಟ್ಟೆ ಚೇತರಿಕೆಯ  ಹಾದಿಯಲ್ಲಿತ್ತು ಎಂದು ಜನರು ತಲೆ ಎತ್ತಲು ಪ್ರಯತ್ನಿಸಿರುವಾಗಲೆ 2 ನೆಯ ಅಲೆ ಸೋಂಕು ಉಲ್ಬಣಗೊಂಡು ಕೊರೊನಾ ವೃತ್ಯುಕೂಪ  ಮುಂಬಯಿಯಲ್ಲಿ ಅಟ್ಟಹಾಸ ಮೆರೆದಿದೆ. 2 ನೇ ಅಲೇ ಸಾವಿನ‌ ಪ್ರಮಾಣ ದಿನ ದಿನೇ ಹೆಚ್ಚುತ್ತಿದೆ. ನಿರೀಕ್ಷೆಗೂ ಮೀರಿ ಹೆಚ್ಚುತ್ತಿರುವ ಕೊರೊನಾ ಅಲೆಯ ನಿಯಂತ್ರಣಕ್ಕೆ ಲಾಕ್ ಡೌನ್ ‌ಮಾತ್ರ ಪರಿಹಾರವಲ್ಲ ಜನರೆ ಇದರ ಸ್ವಯಂ ನಿಯಂತ್ರಣ ಸಾಧಿಸಬೇಕು.

https://www.facebook.com/heggadde.studio2019


    ಮುಂಬಯಿ ಷೇರು ಪೇಟೆಗೆ ಅಪ್ಪಳಿಸಿದ 2 ನೇ ಅಲೇ ಸೆನೆಕ್ಸ್ ಅಂಕ ಪತನಗೊಂಡಿದೆ.  ಬಹುತೇಕ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ. ಮುಂಬಯಿಯವರು‌ ಕಳೆದ ವರ್ಷ ಕಂಡ ದುಸ್ವಪ್ನ‌ ಪುನಃ ಕಾಡುವ ಬೀತಿಯಲ್ಲಿದ್ದರೆ.  ಸೋಂಕು ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿದೆ. ನಿಯಂತ್ರಣ ಸಿಗದಿದ್ದರೆ ಕಠಿಣ ಕ್ರಮ ಕೈಗೊಳ್ಳವ ಸರಕಾರದ ನಿರ್ಧಾರ ಸೊಂಕಿತರ ಪ್ರಮಾಣ ಏರಿಕೆ ಕಂಡು ಬಂದಿದ್ದು ಜನತೆ ಬೆಚ್ಚಿ ಬೀಳುವಂತೆ ಆಗಿದೆ.  ಕೊರೊನಾ ಕಾಲ ಘಟ್ಟದಲ್ಲಿ ವಿದ್ಯಾರ್ಥಿಗಳಿಗೂ ಅಗ್ನಿ ಪರೀಕ್ಷೆ.


    ಹೆಚ್ಚಿನೆಲ್ಲಾ ವ್ಯಾಪಾರ ವ್ಯವಹಾರ ಸ್ತಬ್ದಗೊಂಡು  ಮುಂಬಯಿ ಲೋಕಲ್ ರೈಲು ಸಂಚರಿಸುತ್ತಿದ್ದರು ರೈಲು ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿದ್ದು  ಐಡಿ ತಪಾಸಣೆ ಪ್ರಾರಂಭಿಸಲಾಗಿದೆ.ಕೊರೊನಾ ಅಬ್ಬರಕ್ಕೆ ಪ್ರವಾಸೋದ್ಯಮವನ್ನು ನಂಬಿದವರು ಅಕ್ಷರಶಃ ಕಂಗಾಲಾಗಿದ್ದಾರೆ. ರೆಸಾರ್ಟ್ ಹೋಟೆಲ್ ಉದ್ಯಮ ಕರೊನಾದಿಂದ ಬಾರಿ ನಷ್ಟ ಅನುಭವಿಸಿದೆ.  ಸಂಕಷ್ಟ ದಲ್ಲಿದೆ ಹೋಟೆಲ್ ಉದ್ಯಮ .ಬೆಲೆ ಏರಿಕೆ ಫಜೀತಿ, ಕೊರೊನಾ ಅಲೆಯ ಭೀತಿಯಿಂದಾಗಿ ಸರಿಯಾಗಿ ವ್ಯಾಪಾರವು ಇಲ್ಲದೆ. ದಿನೇ ದಿನೇ ಗಗನಕ್ಕೇರುತ್ತಿರುವ  ಆಹಾರ ವಸ್ತುಗಳ ಬೆಲೆ, ಅಡುಗೆ ಅನಿಲ, ಖ್ಯಾದ್ಯತೈಲ ತರಕಾರಿ ಬೆಲೆಗಳಲ್ಲಿ ಗಣನೀಯ ಏರಿಕೆ ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ಹೋಟೆಲ್ ನಿರ್ವಹಣೆ, ಸಿಬ್ಬಂದಿ ವೇತನ ವಿದ್ಯುತ್ ಬಿಲ್, ತೆರಿಗೆ ತುಂಬದೆ ವಿಧಿ ಇಲ್ಲದೆ ಹೋಟೆಲ್ ಉದ್ಯಮಿಗಳು ಮಾಲೀಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.ಕೊರೊನಾ ಕಾಲಘಟ್ಟದಲ್ಲಿ ಜನರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕೂಲಿ‌ಕಾರ್ಮಿಕರು, ಕೊಳಗೇರಿ ನಿವಾಸಿಗಳು, ಅಸಾಯಕರ‌ ಪಾಲಿಗೆ ಅನ್ನದಾತರಾದ ಹೋಟೆಲ್ ಉದ್ಯಮಿಗಳು ಕಳೆದ ಬಾರಿಲಾಕ್ ಡೌನ್ ವೇಳೆಯಲ್ಲಿ ಉಚಿತ ಊಟದ ಸರಬರಾಜು ಮಾಡಿ ಮಾನವಿಯತೆ ಮೆರೆದ ಹೋಟೆಲ್ ಉದ್ಯಮ ಇಂದು ‌ನೆಲಕಚ್ಚಿರುವುದೊಂದು ದುರಂತ. ಕೊರೊನಾ ಸೆ ಡರ್ ನಹಿಲಗ್ತಾ ಹೈ…ಲೆಕಿನ್ ಲಾಕ್ ಡೌನ್ ಸೇ ಬಹುತ್ ಡರ್ ಲಗತ್ತಾ ಹೈ… ಎಂಬ‌ ಸಾಮಾನ್ಯ ಜನರ ಅಳಲು ಮನ ಕಲಕುವಂತಿದೆ.


    ಕೊವೀಡ್ ಕೈಮೀರಿದ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆಗೆ  ಸಿಲುಕಿದ  ಸೊಂಕಿತರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿರುವುದು ಪರಿಸ್ಥಿತಿಯನ್ನು  ದುರಂತದೆಡೆಗೆ ಕೊಂಡೊಯ್ಯತ್ತಿದೆ. ಮುಂಬಯಿಯ ಪರಿಸ್ಥಿತಿ ಘನಘೋರವಾಗಿದ್ದು ಪರಿಸ್ಥಿತಿ ಹದಗೆಡುತಿದೆ.  ರೋಗಿಗಳಿಗೆ ಸೂಕ್ತ ಚಿಕಿತ್ಸೆಯಾಗಲಿ, ಹಾಸಿಗೆಯಾಗಲಿ ಸಿಗದೆ ಪರದಾಡುತ್ತಿರುವ  ದೃಶ್ಯ ಸಾರ್ವಜನಿಕರ ಮನ ಕಲುಕುವಂತಿದೆ. ಮುಂಬಯಿಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ರಿಲಯಸ್ಸ್ ಇಂಡಸ್ಟ್ರಿ ನಿಂದ ‌ಮಾಹರಾಷ್ಟ್ರಕ್ಕೆ ಉಚಿತವಾಗಿ ಆಮ್ಲ ಜನಕ ಪೂರೈಕೆ ಮಾಡಿದ್ದರು. 10 ದಿನಗಳಲ್ಲಿ ಒಂದು ಲಕ್ಷ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಎರಿದೆ ಅಂದರೆ ಇದು ಚಿಂತಾಜನಕ ಸ್ಥಿತಿ.


    ಕೊರೊನಾ ನಿಯಂತ್ರಣಕ್ಕಾಗಿ ಡೊಡ್ಡ ಮಟ್ಟದಲ್ಲಿ ಲಸಿಕಾ ಅಭಿಯಾನ ನಡೆಸಲಾಗುತಿದೆ.  45 ವರ್ಷ ಮೇಲ್ಪಟ್ಟವರಿಗೆ  ಲಸಿಕೆ ಪ್ರಮಾಣ ಪತ್ರಸಲ್ಲಿಸುವುದು ಕಡ್ಡಾಯ. ಭಾರತದ ಸರ್ಕಾರದ ಲಸಿಕೆ ಅಭಿಯಾನ ಆರಂಭಿಸಿ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗಿದೆ.‌ಲಸಿಕೆ ಹಾಕಿಸಿ‌ಕೊಳ್ಳುವುದು ರಾಷ್ಟ್ರೀಯ ಜವಾಬ್ದಾರಿಯೆಂದರಿತು ಲಸಿಕಾ ಕಾರ್ಯ ಕ್ರಮ  ಯಶಸ್ವಿ ಗೊಳಿಸುವುದರ ಜೊತೆಗೆ ಕೋವಿಡ್ 19 ಮಾರ್ಗ ಸೂಚಿ ಪಾಲಿಸುವುದರಿಂದ ನಮ್ಮ ದೇಶ ಹಾಗೂ ಕುಟುಂಬದವರನ್ನು ರಕ್ಷಿಸಿದಂತಾಗುತ್ತದೆ ಕೊರೊನಾ ತಡಗೆ ಜನತೆಯ ಪಾತ್ರವೂ ಮಹತ್ವ ತಾನೆ. 


    ಮುಂಬಯಿಯಲ್ಲಿ ಕೊರೊನಾ ಎರಡನೆ ಅಲೇಯಿಂದಾಗಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ‌ಮತ್ತು ಮರಣ ಪ್ರಮಾಣವನ್ನು ನಿಯಂತ್ರಿಸುವ ಸವಾಲು ಸರ್ಕಾರದ ಮುಂದೆ ಇರುವಾಗ  ಕೊರೊನಾ ರೋಗಿಗಳ ಪ್ರಾಣ ಉಳಿಸಲು ಸೇವೆಯಲ್ಲಿ ತೊಡಗಿದ ವೈದ್ಯರು  ವೇತನ ಪರಿಷ್ಕರಿಸುವಂತೆ ಅಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವುದು ಸರಕಾರದ ಎದುರು ಇರುವ ಇನ್ನೊಂದು ಸಮಸ್ಯೆ.  ಒಟ್ಟಿನಲ್ಲಿ ಕೊರೊನಾದ ಅಟ್ಟಹಾಸ  ಮುಂಬಯಿಯಲ್ಲಿ ಮತ್ತದೆ ಮೌನ…. ಕೊರೊನಾ ಕರಿ ನರೆಳಿನ ಕಪಿ ಮುಷ್ಟಿಯಲ್ಲಿ ಜನ ಜೀವನ ಚಿಂತಾಜನಕ ವಾಗಿದೆ ಅಂದರೆ  ತಪ್ಪಾಗಲಾರದು.

Leave a Reply

Your email address will not be published. Required fields are marked *